*ಹೊಸ ಚಿಗುರು ಹಳೆ ಬೇರು*
ಅಬೂಶಝ (ಅನುಭವ)
ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷದ ಮೊದಲು ಅದೊಂದು ದಿನ ಪಾಣೆಮಂಗಳೂರಿನ ಲಯನ್ಸ್ ಕ್ಲಬ್ ಹಾಲ್'ಗೆ ಸಂಪ್ಯ ಬಿ.ಕೆ ರಶೀದ್ ನನ್ನನ್ನು ಕರಕೊಂಡು ಹೋದ.ನೋಡುವಾಗ ಶ್ವೇತ ವಸ್ತ್ರದಾರಿಗಳಾದ ಜನರಿಂದ ಆ ಸಣ್ಣ ಹಾಲ್ ತುಂಬಿತ್ತು.ಅದರಲ್ಲಿ ಅಧಿಕವೂ ಮುತಅಲ್ಲಿಂಗಳಾಗಿದ್ದರು.10 ರೂಪಾಯಿ ಫೀಸ್ ಕೊಟ್ಟು ಹಾಲ್'ನ ಒಳಗೆ ಪ್ರವೇಶಿಸಿದೆ.ನೋಡಿದಾಗ ಅದು ಎಸ್ಸೆಸ್ಸೆಫ್ ನ ಪ್ರೋಗ್ರಾಂ ಎಂದು ತಿಳಿಯಿತು.ಅದು ನನ್ನ ಪ್ರಪ್ರಥಮ ಎಂಟ್ರಿಯಾಗಿತ್ತು.
ವೇದಿಕೆಯಲ್ಲಿ ಜಿಂ ಉಸ್ತಾದ್,ಎಸ್ಪಿ ಉಸ್ತಾದೆಲ್ಲರೂ ಇದ್ದರೆಂಬುದು ನನ್ನ ನೆನಪು.ಝೈನಿ ಉಸ್ತಾದರಂತು ಇದ್ದರು. ಕಾರಣ ಮಂಗಳೂರು ಭಾಗದ ಊರೊಂದರಲ್ಲಿ (ಹೆಸರು ಗೌಪ್ಯವಾಗಿಡುತ್ತೇನೆ) ಎಸ್ಸೆಸ್ಸೆಫ್ ನ ಕಾರ್ಯಕ್ರಮ ಇಟ್ಟುಕೊಂಡಾಗ ಅಲ್ಲಿ ಸೇರಿದ ಜನರಿಗೆ ವಿತರಿಸಲು ಫುಡ್ ತಯಾರಿ ಮಾಡುವಾಗ ಆ ಊರಿನ ಗಣ್ಯವ್ಯಕ್ತಿಗಳು ಬಂದು ಆಹಾರ ಬೇಯುತ್ತಿರುವ ಹಂಡೆಯನ್ನೆ ಎತ್ತಿ ಬಿಸಾಕಿ ಕೊನೆಗೆ ಹಂಡೆ ಸಹಿತ ಅಲ್ಲಿಂದ ಕಾಲ್ಕಿತ್ತು ಬಚಾವಾದ ಅನುಭವ ಝೈನಿ ಉಸ್ತಾದ್ ವಿವರಿಸಿ ಅಂತಹ ಸ್ಥಳಗಳಲ್ಲಿ ಯಾವ ರೀತಿ ಸಂಘಟನೆ ಬೆಳೆಸಬಹುದೆಂಬ ಚರ್ಚೆಗೆ ಕಿಡಿ ಹೊತ್ತಿಸಿದ್ದು ನೆನಪುಂಟು.
ನಂತರ ಪುತ್ತೂರಿನಲ್ಲಿ ಎಸ್ಸೆಸ್ಸೆಫ್ ಗಾಗಿ ದುಡಿಯುವವರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೆ.ಆ ಮದ್ಯೆ ಉಪ್ಪಿನಂಗಡಿ ಭಾಗದ ಒಳ ಊರೊಂದರಲ್ಲಿ ಎಸ್ಸೆಸ್ಸೆಫ್ ನ ತರಗತಿ ನಡೆಸಲು ಹೋದ ಕಾರ್ಯಕರ್ತರಿಗೆ ಹಲ್ಲೆ ನಡೆಸಲು ಕೆಲವರು ಕಾದುಕುಳಿತಿದ್ದಾರೆಂಬ ಮಾಹಿತಿ ಸಿಕ್ಕಿದಾಗ ತರಗತಿ ಮುಗಿದ ನಂತರವೂ ಅಲ್ಲೆ ತಂಗಿ, ಹಲ್ಲೆ ಮಾಡಲು ಕಾದುನಿಂತವರು ಇದೀಗ ಮಲಗಿರಬಹುದೆಂದು ಭಾವಿಸಿ ಬೆಳಗಿನ ಜಾವ 3 ಗಂಟೆಗೆ ಹೊರಟಾಗ ಹಲ್ಲೆಕೋರರು ಆ ನಡುರಾತ್ರಿ ಯಲ್ಲೂ ಕಾದುನಿಂತಿದ್ದರು!
ಅದರಲ್ಲಿದ್ದ ಒಬ್ಬ ಉಸ್ತಾದರ ಸಹಿತ ಎಲ್ಲರಿಗೂ ಅವರು ಹಲ್ಲೆ ಮಾಡಿ ತಮ್ಮ ಕ್ರೂರತೆ ಮೆರೆದಿದ್ದರು.
ಸಣ್ಣದ್ದಾಗಿ SSF ಸ್ಟಿಕ್ಕರ್ ಅಂಟಿಸಿದ್ದ ಕಾರ್ಯಕರ್ತರ ಒಮ್ನಿ ಕಾರನ್ನು ತಡೆದು ಅದೇ ಸ್ಟಿಕ್ಕರನ್ನು ಎಳೆದು ಕಾರಿನೊಳಗಿದ್ದ ಮುಸ್ಲಿಯಾರರೊಬ್ಬರ ಕಪಾಳಕ್ಕೆ ಅಂಟಿಸಿ ಜೊತೆಗೆ ನಾಲ್ಕು ಬಾರಿಸಿ ಒಮ್ನಿಯನ್ನು ವಾಪಸ್ ಪುತ್ತೂರು ಕಡೆ ಮರಳಿಸಿ ದಾದಗಿರಿ ತೋರಿಸಿದ್ದರು.
ಇಂತಹ ಹಲ್ಲೆಗಳು ನಿರಂತರವಾಗಿ ನಡೆಯುತ್ತಿದ್ದರೂ ಕಾರ್ಯಕರ್ತರು ತಮ್ಮ ಚಟುವಟಿಕೆಯನ್ನು ನಿಲ್ಲಿಸದೆ ಮತ್ತಷ್ಟು ಎನರ್ಜಿಯೊಂದಿಗೆ ಕಾರ್ಯಚರಣೆಗೆ ದುಮುಕುತ್ತಿದ್ದರು.ಪೆಟ್ಟುಬಿದ್ದು ಬಚಾವಾಗಿ ಬಂದು ಒಂದಡೆ ಸೇರಿ ಪರಸ್ಪರ ಮುಖನೋಡಿ ಬಿದ್ದು ಬಿದ್ದು ನಕ್ಕಿದ್ದು ಉಂಟು.
ಅಂದರೆ ವಿರೋದಿಗಳ ಬೈಗುಳ,ಪೆಟ್ಟು,ಹಲ್ಲೆ ಯಾವುದೂ ಕಾರ್ಯಕರ್ತರ ಹುಮ್ಮಸ್ಸನ್ನು ಕಡಿಮೆ ಮಾಡಿರಲಿಲ್ಲ.ಅದೆಲ್ಲವನ್ನು ಅವರು ತ್ಯಾಗವೆಂದೇ ಗಣಿಸಿ ಮತ್ತಷ್ಟು ಆವೇಶದಿಂದ ಕಾರ್ಯಚರಿಸುತ್ತಿದ್ದರು.
ಪೆಟ್ಟು ಬೀಳುತ್ತದೆಯೆಂದು ಖಾತರಿಯಾದ ಕಡೆ ತರಗತಿ ನಡೆಸಲು ಹೋಗುವಾಗ ಹಲ್ಲೆಯ ನೋವು ಹಗುರವಾಗಿಸಲು ದಪ್ಪದ ಎರಡೆರಡು ಶರ್ಟ್ ಪ್ಯಾಂಟ್ ಹಾಕಿ ಹೋದ ಕಾರ್ಯಕರ್ತರಿದ್ದರು.! ಆವಾಗ ಒಬ್ಬ ಕಾರ್ಯಕರ್ತ ನಗುತ್ತಾ ಎಲ್ಲಿ ಬೇಕಾದರೂ ಹೊಡದರೆ ಸಹಿಸಬಹುದು ಕಪಾಳಕ್ಕೆ ಬೀಳುವ ಹೊಡೆತ ತುಂಬಾ ನೋವು ತರುತ್ತದೆಯೆಂದು ಹೇಳಿದ ನೆನಪುಂಟು.
ವಿರೋದಿಗಳ ಪ್ರತಿಯೊಂದು ಹೊಡೆತ ಹಲ್ಲೆಗಳು ಕಾರ್ಯಕರ್ತರಲ್ಲಿ ಅಚಲವಾದ ಶಕ್ತಿಯನ್ನುಂಟು ಮಾಡುತ್ತಿದ್ದದ್ದು ಸಂಘಟನೆಯ ಬರಕತ್ ಆಗಿದೆಯೆಂಬ ವಿಶ್ವಾಸ ನನಗಿದೆ.
ಪುತ್ತೂರಿನ ರಾಜಬೀದಿಗಳಲ್ಲಿ ಎಸ್ಸೆಸ್ಸೆಫ್ ಪೋಸ್ಟರ್ ಅಂಟಿಸಲು ರಾತ್ರಿ ಮೂರುಗಂಟೆಯವರೆಗೆ ಕಾಯುತ್ತಿದ್ದರು.ಅಂಟಿಸುವಾಗ ಯಾವುದಾದರು ವಾಹನದ ಲೈಟ್ ಗೋಚರಿಸಿದರೆ ಕೂಡಲೇ ಗೋಡೆ ಅಥವಾ ಎಲೆಕ್ಟ್ರಿಕ್ ಪೊಸ್ಟ್'ಗಳ ಹಿಂದೆ ಅಡಗಿ ವಾಹನ ಹೋದ ನಂತರ ಲಗುಬಗೆಯಿಂದ ಪೋಸ್ಟರ್ ಅಂಟಿಸುತ್ತಿದ್ದ ಕಾಲವೊಂದಿತ್ತು.
ಎಸ್ಸೆಸ್ಸೆಫ್ ಕರ್ನಾಟಕದ ಮಣ್ಣಲ್ಲಿ ಕಾಲೂರಿ ಹತ್ತು ವರ್ಷವಾದಾಗ ಅದರ ಭಾಗವಾಗಿ 1999 ಡಿಸೆಂಬರ್ 5 ರಂದು ಕುಂದಾಪುರದಲ್ಲಿ ದಶಮಾನೋತ್ಸವ ಸಮ್ಮೇಳನ ಚರಿತ್ರೆಯಲ್ಲಿ ಮರೆಯಲಸಾಧ್ಯ.
1999 ಜನುವರಿಯಿಂದ ಡಿಸೆಂಬರ್ ತನಕ ಒಂದು ವರ್ಷದ ಪ್ರಚಾರ ಸಂಧರ್ಭದಲ್ಲಿ ಕಾರ್ಯಕರ್ತರು ಅನುಭವಿಸಿದ ನೋವಿಗೆ ಲೆಕ್ಕವಿಲ್ಲ.
ಕಟ್ಟಿದ ಬ್ಯಾನರ್ ಮಾರನೆ ದಿನ ಮಂಗಮಾಯ!
Wallposter ಹರಿದು ಚಿಂದಿಮಾಡುತ್ತಿದ್ದರು!
ಗೋಡೆ ಬರಹಕ್ಕೆ ಕಪ್ಪು ವಾಯಿಲ್ ಹಾಕಿ ದಾದಗಿರಿ ಮೆರೆಯುತ್ತಿದ್ದರು!
ಸಮ್ಮೇಳನಕ್ಕೆ ಬುಕ್ ಮಾಡಿದ ಹಲವು ಬಸ್ಸುಗಳ ಮಾಲಕರಿಗೆ ಕರೆಮಾಡಿ ಧಮ್ಕಿ ಹಾಕುತ್ತಿದ್ದರು!
ಎಸ್ಸೆಸ್ಸೆಫ್ ನ ವತಿಯಿಂದ ನಡೆಸಿದ ರಬೀವುಲ್ ಅವ್ವಲ್ ಜಾಥಕ್ಕೂ ಕೂಡಾ ಅಡ್ಡಿ ತಂದಿದ್ದರು! ಕೊನೆಗೆ ಮೌನ ಜಾಥ ಹೋಗಬೇಕಾಗಿ ಬಂತು!
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ದಶಮಾನೋತ್ಸವದ ದಿನ ಬಂದೇ ಬಿಟ್ಟಿತು.
ಅದೇ ನಾನು ಆಗ ಹೇಳಿದಂತೆ ಸಂಘಟನೆಯ ಬರಕತ್ ಎಂದೇ ಹೇಳಬೇಕು,ವಿರೋದಿಗಳು ಅವರಿಂದ ಸಾದ್ಯವಾಗುವಷ್ಟು ಬ್ರಹತ್ತಾದ ತಡೆ ತಂದು ಸಮ್ಮೇಳನದ ಪರಾಜಯಕ್ಕಾಗಿ ಪಣತೊಟ್ಟು ಕಾರ್ಯಚರಿಸಿದ ಹೊರತಾಗಿಯೂ,ಕುಂದಾಪುರದ ಸಮ್ಮೇಳನ ನಗರಿಗೆ ತಡೆರಹಿತವಾಗಿ ಜನಸಾಗರ ಹರಿದು ಬಂತು!
ಆವಾಗ ಝೈನಿ ಉಸ್ತಾದ್ ಆವೇಶಭರಿತರಾಗಿ ಅಷ್ಟೇ ಗದ್ಗಗತರಾಗಿ ತನ್ನ ಸ್ವತಸಿಧ್ಧ ಶೈಲಿಯ ಕನ್ನಡ ಭಾಷೆಯಲ್ಲಿ ಮಾಡಿದ ಸ್ವಾಗತ ಭಾಷಣ ನೆರೆದಿರುವ ಕಾರ್ಯಕರ್ತರಲ್ಲಿ ಎಷ್ಟೊಂದು ಆವೇಶ ತಂದಿತ್ತೆಂದರೆ ಎಡೆಬಿಡದೆ ಗಂಟಾಘೋಷವಾಗಿ ತಕ್ಬೀರ್ ಮೊಳಗುವುದರೊಂದಿಗೆ ಕೆಲವೊಂದು ಕಾರ್ಯಕರ್ತರು ಕೂತಲ್ಲಿ ಕೂರಲಾಗದೆ ಅಷ್ಟೂ ಎತ್ತರಕ್ಕೆ ಜಿಗಿಯುತ್ತಿದ್ದರು!
ಸಮ್ಮೇಳನ ಮುಗಿದು ನನಗೆ ಕಾಂಞಂಗಾಡ್ ಪಳ್ಳಿಪ್ಪುಝ ದರ್ಸಿಗೆ ಹೋಗಬೇಕಿತ್ತು.ದರ್ಸ್ ಬದುಕಿಗೆ ವಿದಾಯ ಹೇಳಿ ಉತ್ತರ ಪ್ರದೇಶದ ದಯೂಬಂದ್
ಕಾಲೇಜಿಗೆ ಹೋಗಿ ಅಲ್ಲಿನ ಸೆಲೆಕ್ಷನ್ ಪಾಸಾಗಲು ಬೇಕಾಗಿ ಹಲವಾರು ಕಿತಾಬ್ ರೆಫರ್ ಮಾಡಬೇಕಾಗಿತ್ತು.ಆದರೆ ಡಿಸೆಂಬರ್ 6 ಆದುದರಿಂದ ತಲಪಾಡಿಯವರೆಗೆ ಬಸ್ಸು ಸಿಕ್ಕಿತು. ನಂತರ ಕಾಂಞಂಗಾಡ್ ತಲುಪಲು ಸಾದ್ಯವೇ ಇಲ್ಲವೆಂದು ಮನಗಂಡಾಗ ಕೊನೆಗೆ ಪೊಯ್ಯತಬೈಲ್ ಮಣವಾಟಿ ಬೀವಿ ದರ್ಗಾ ಇರುವ ಮಸೀದಿಗೆ ನಡೆದುಕೊಂಡೇ ಹೋಗಿ ಅಲ್ಲಿ ತಂಗಿದೆವು!
ಅದಾದ ನಂತರ ಸಂಘಟನೆ ಎಲ್ಲಾ ಕಡೆ ಸಕ್ರಿಯವಾಯಿತು.ತದನಂತರ ನಾಯಕರು,ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಸೀಮಿತವಾಗಿದ್ದ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಉತ್ತರಕರ್ನಾಟಕಕ್ಕೆ ವ್ಯಾಪಿಸಿದರು.ಇದೀಗ ಅಲ್ಲಿ ಸಂಘಟನೆ ಬಲಿಷ್ಠವಾಗಿದೆ. ಅದರ ಕಾರ್ಯಚರಣೆ,ಬದಲಾವಣೆ ಇತಿಹಾಸವಾಗಿದೆ ಇನ್ಶಾಅಲ್ಲಾ ಅದರ ಬಗ್ಗೆ ಸ್ವಲ್ಪ ಮಾಹಿತಿ ನಾಳೆ ಬರೆಯುತ್ತೇನೆ.
ಸೆಪ್ಟೆಂಬರ್19 ಎಸ್ಸೆಸ್ಸೆಫ್ ಧ್ವಜದಿನದ ಶುಭಾಶಯಗಳು
ಅಬೂಶಝ.
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment