#ಝಿಯಾರತ್ತ್_ಕೇಂದ್ರ
🔖🔖 8️⃣4️⃣ 🔖🔖
➖➖➖➖➖➖➖
#ವಲಿಯುಲ್ಲಾಹಿ_ಶೈಖ್_ಮಖ್ದೂಮ್ #ಫರೀದ್_ಮಿಲಿಟರಿ_ಬಾಬ (ಖ:ಸಿ) #ಅರಿಕುಳಂ_ಕೊಯಿಲಾಂಡಿ_ಕಲ್ಲಿಕೋಟೆ_ಜಿಲ್ಲೆ.
➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
**********************
ಮರಣಕ್ಕಿಂತ ಮುಂಚೆ ಸೃಷ್ಟಿಕರ್ತನಾದ ಅಲ್ಲಾಹನ ಹಬೀಬಾದ ನಬಿ ﷺِರನ್ನು ಕನಸಿನಲ್ಲಾದರೂ ಒಮ್ಮೆ ಕಾಣಬೇಕೆಂದು ಬಯಸದ ಮುಅ್‌ಮಿನ್‌ಗಳೇ ಇಲ್ಲ. ಆದರೆ ಕನಸಿನಲ್ಲಿ ಮಾತ್ರವಲ್ಲದೆ ನನಸಿನಲ್ಲೇ ಆ ಹಬೀಬ್ ﷺِ ರನ್ನು ಕಾಣುವ ಭಾಗ್ಯ ದೊರೆತರೆ ಅದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿದೆ?
ಹಾಗೆ ಅಲ್ಲಾಹನ ಹಬೀಬ್ ﷺِ ರನ್ನು ಕನಸಿನಲ್ಲಿ ಮಾತ್ರವಲ್ಲದೆ ನನಸಿನಲ್ಲೂ ಕಂಡ ಅನೇಕ ಮಹಾತ್ಮರ ಬಗ್ಗೆ ನಾವು ಕೇಳಿದ್ದೇವೆ. ಅಂತಹ ಮಹಾತ್ಮರ ಪೈಕಿ ಕಲ್ಲಿಕೋಟೆಯ ಕೊಯಿಲಾಂಡಿ ಸಮೀಪದ ಅರಿಕುಳಂ ಎಂಬಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ವಲಿಯುಲ್ಲಾಹಿ ಶೈಖ್ ಮಖ್ದೂಂ ಫರೀದ್ ಮಿಲಿಟರಿ ಬಾಬಾ (ಖ.ಸಿ) ಸಹ ಒಬ್ಬರು.
ಕೇರಳದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಒರುಮನಯೂರ್ ನಿವಾಸಿಯಾದ ಕುಂಞುಮೋನ್ ಹಾಜಿಯವರು, "ಮಖ್ದೂಮ್ ಮಿಲಿಟರಿ ಮಾಲ" ಎಂಬ ಸಣ್ಣ ಕೃತಿಯಲ್ಲಿ ಈ ಮಹಾನರನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.
ಮಹಾನರ ಜನನ ತಾಯಿ ತಂದೆಯರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೃತಿಯಲ್ಲಿ ಇಲ್ಲ. ಪೊನ್ನಾನಿ ಅಲ್ಲಾಮಾ ಮುಹಮ್ಮದ್ ಮುಸ್ಲಿಯಾರ್ (ಖ.ಸಿ)ರಿಂದ ಪೊನ್ನಾನಿ ದರ್ಸ್‌ನಲ್ಲಿ ತಫ್ಸೀರ್, ಫಿಖ್ಹ್ ಮತ್ತು ಹದೀಸ್‌ಗಳ ಅಧ್ಯಯನ ಮಾಡಿದರಲ್ಲದೆ ಪೊನ್ನಾನಿ ಮಕ್ಕಿ ಪಳ್ಳಿ ವಾಇಳ್ ಅಬ್ದುಲ್ಲಾ ಮುಸ್ಲಿಯಾರ್ (ಖ.ಸಿ) ಮತ್ತು ಅಬ್ದುಲ್ಲಾ ಯಮಾನಿಲ್(ಖ.ಸಿ)ರಿಂದ ಉರ್ದು, ಪಾರ್ಸಿ ಇತ್ಯಾದಿ ಭಾಷೆಗಳಲ್ಲೂ ಜ್ಞಾನಾರ್ಜನೆ ಮಾಡಿದರು.
ಇಹಲೋಕದಲ್ಲಿ ಈಗಲೂ ಜೀವಿಸಿರುವ ಖಿಳ್‌ರ್ ನಬಿ(ಅ)ರು ಆಗಾಗ ಅಲ್ಲಾಹನ ಔಲಿಯಾಗಳನ್ನು ಬೇಟಿ ಮಾಡುತ್ತಾ ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತಿರುವ ಬಗ್ಗೆ ಔಲಿಯಾಗಳ ಚರಿತ್ರೆಯಿಂದ ತಿಳಿಯುತ್ತದೆ.
ಆ ಖಿಳ್‌ರ್ ನಬಿ (ಅ)ರನ್ನೂ ಕಂಡ ಮಹಾನರಲ್ಲೊಬ್ಬರಾಗಿದ್ದಾರೆ ವಲಿಯುಲ್ಲಾಹಿ ಶೈಖ್ ಮಖ್ದೂಂ ಫರೀದ್ ಮಿಲಿಟರಿ ಬಾಬಾ (ಖ.ಸಿ)ರವರು.
ಒಮ್ಮೆ ಮುಂಬೈನ ಸಮುದ್ರ ತೀರದ ಬಂಡೆ ಕಲ್ಲೊಂದರ ಮೇಲೆ ಇಬಾದತ್'ನಲ್ಲಿ ತಲ್ಲೀನರಾಗಿದ್ದಾಗ ಅಲ್ಲಿಗೆ ಆಗಮಿಸಿದ ಖಿಳ್‌ರ್ ನಬಿ (ಅ)ರು, ಮಹಾನರಿಗೆ ಆಹಾರವನ್ನು ತಂದು ಕೊಟ್ಟರಲ್ಲದೆ ಒಂದು ಕೋಲನ್ನು ಅವರ ಕೈಗಿಟ್ಟು, ಮಿಲಿಟರಿ ಸಮವಸ್ತ್ರ ಧರಿಸಿಕೊಂಡು ಸೇನಾಧಿಕಾರಿಗಳು ಮತ್ತು ಸೈನಿಕರ ಬಳಿ ತೆರಳಿ ಅವರಿಗೆ ಇಲ್ಮ್ ಮತ್ತು ತೌಹೀದನ್ನು ಕಲಿಸಲು ಸೂಚಿಸಿದರು.
ಹಾಗೆ ಮಿಲಿಟರಿ ಕ್ಯಾಂಪಿಗೆ ಹೇೂಗಿ ಸೈನಿಕರಿಗೆ ಇಲ್ಮ್ ಕಲಿಸಲಾರಂಭಿಸಿದ ನಂತರ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದವರಲ್ಲಿ ಅನೇಕರು ಮಹಾನರ ಶಿಷ್ಯತ್ವ ಸ್ವೀಕರಿಸಿದರಲ್ಲದೆ ಮಹಾನರನ್ನು ಮಿಲಿಟರಿ ಬಾಬಾ ಎಂದೇ ಕರೆಯಲಾರಂಭಿಸಿದರು.
ನಂತರ ಸದಾ ಜನಜಂಗುಳಿಯಿಂದ ಗಿಜಿಗಿಡುತ್ತಾ ಪೊಲೀಸರಿಂದಲೂ ನಿಯಂತ್ರಿಸಲಾಗದ ಮುಂಬೈನ ಬೀದಿಗಳಲ್ಲಿ ಸಂಚರಿಸುತ್ತಾ ಖಿಳ್‌ರ್ ನಬಿ(ಅ)ರು ಕೊಟ್ಟ ಕೋಲನ್ನು ಹಿಡಿದು ಜನಜಂಗುಳಿಯನ್ನು ನಿಯಂತ್ರಣಕ್ಕೆ ತರುತ್ತಾ ಪೊಲೀಸರಿಗೆ ನೆರವಾಗುತ್ತಿದ್ದರು.
ಬರ್ಮಾ, ಚೀನಾ, ಸಿಲೋನ್, ಬಗ್ದಾದ್, ಮಕ್ಕಾ, ಮದೀನಾ ಹೀಗೆ ಪ್ರಪಂಚದ ನಾನಾ ಕಡೆ ಸಂಚರಿಸಿದ ಮಹಾನರು ಅಲ್ಲಾಹನ ರಸುಲರಾದ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರನ್ನು ನನಸಿನಲ್ಲೇ ಕಂಡ ಮಹಾನರಾಗಿದ್ದಾರೆ.
ಹಿಜರಿ 1411ರ ರಬೀವುಲ್ ಅವ್ವಲ್ 23ರ ರವಿವಾರದಂದು ಮಗರಿಬ್‌ಗೆ ಅಲ್ಪ ಮುಂಚೆ ವಫಾತಾದ ಮಹಾನರು ತಮ್ಮ ಸ್ವಗೃಹದ ಮುಂಬಾಗದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
ಈ ಮಹಾನರ ಜೀವಿತ ಕಾಲದಲ್ಲಿ ಅವರ ಕರಾಮತ್ತುಗಳನ್ನು ಕಣ್ಣಾರೆ ಕಂಡವರು ಹಾಗೂ ಅವರಿಂದ ಕೇಳಿ ತಿಳಿದವರು ಮುಂಬೈಯ ವಿವಿಧ ಭಾಗಗಳಿಂದ ಜನರು ಝಿಯಾರತ್‌ಗಾಗಿ ಈ ಮಹಾನರ ಮಖಾಮಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇಂದಿಗೂ ಆಗಮಿಸುತ್ತಿದ್ದಾರೆ.
ದಾರಿ: ಕೊಯಿಲಂಡಿ ಅರಿಕುಳಂ.
💢💢💢💢💢💢💢💢
No comments:
Post a Comment