#ಝಿಯಾರತ್ತ್_ಕೇಂದ್ರ
🔖🔖 8️⃣9️⃣ 🔖🔖
➖➖➖➖➖➖➖
#ಹಯಾತ್ತುಲ್ ಮುಅ್‌ಮಿನೀನ್ (ಖ.ಸಿ) ಕಣ್ಣೂರು ಸಿಟಿ ಮಖಾಂ, ಕಣ್ಣೂರು ಜಿಲ್ಲೆ.*
➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
*********************
ಕಣ್ಣೂರು ಸಿಟಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಮೌಲಲ್ ಬುಖಾರಿ ತಂಙಳ್ (ರ) ಇಚ್ಚ ಮಸ್ತಾನ್ (ರ) ಮತ್ತು ಇಬ್ರಾಹಿಂ ಸಕ್ರಾನ್ (ರ) ಎಂಬ ಸೂಫಿವರ್ಯರ ಮಖಾಮಿನ ವೈಶಿಷ್ಟ್ಯಗಳ ಬಗ್ಗೆ ಹಿಂದೆ ನಾನು ಬರೆದಿದ್ದೆ. ಆ ಮಹಾನರುಗಳ ಮಖ್ಬರದ ಸನಿಹದಲ್ಲೇ ಅಂತ್ಯ ವಿಶ್ರಮ ಪಡೆಯುತ್ತಿರುವ ಮತ್ತೋರ್ವ ಸೂಫಿವರ್ಯರಾಗಿದ್ದಾರೆ ಹಯಾತುಲ್ ಮುಅ್‌ಮಿನೀನ್ (ಖ.ಸಿ).
ಅಸಾಮಾನ್ಯ ವಿದ್ವಾಂಸರೂ ಪ್ರಮುಖ ಸೂಫಿವರ್ಯರೂ ಅಲ್ಲಾಹನ ಇಷ್ಟದಾಸರೂ ಆಗಿದ್ದ ಹಯಾತುಲ್ ಮುಅ್‌ಮಿನೀನ್ (ಖ.ಸಿ)ರವರು ನೊಂದ ಜನಸಾಮಾನ್ಯರಿಗೆ ಸಾಂತ್ವಾನ ನೀಡುವ ಸಂಜೀವಿನಿ ಎನಿಸಿದ್ದರಲ್ಲದೆ ತಮ್ಮ ಜೀವಿತ ಕಾಲದಲ್ಲೇ ಅಸಾಮಾನ್ಯವಾದ ಕರಾಮತ್ತೊಂದನ್ನು ಕಾಣಿಸಿ ವಿಸ್ಮಯ ಮೂಡಿಸಿದವರು.
ಮಹಾನರು ಒಮ್ಮೆ ತಮ್ಮ ಶಿಷ್ಯರೊಂದಿಗೆ, ಈ ಜನಜಂಗುಳಿಯ ನಡುವೆ ಇಲಾಹಿ ಸ್ಮರಣೆಗೆ ಭಂಗವುಂಟಾಗುತ್ತಿದೆ ಹಾಗಾಗಿ ನಾನು ಖಬರಿನೊಳಗೆ ಹೋಗುತ್ತೇನೆ. ನಲವತ್ತನೇ ದಿನ ನನ್ನ ಖಬರನ್ನು ತೆರೆಯಿರಿ ಎಂದು ಹೇಳಿ ಖುರ್ಆನನ್ನು ಹಿಡಿದುಕೊಂಡು ಮೊದಲೇ ಅಗೆದಿಟ್ಟಿದ್ದ ಖಬರಿನೊಳಗೆ ಇಳಿದು ಶಿಷ್ಯರೊಂದಿಗೆ ಖಬರನ್ನು ಮುಚ್ಚಿಸಿದರು.
ಮಹಾನರು ಹೇಳಿದಂತೆ ನಲವತ್ತನೇ ದಿನ ಶಿಷ್ಯರು ತಮ್ಮ ಉಸ್ತಾದರ ಖಬರನ್ನು ತೆರೆದು ನೋಡಿದಾಗ ಆಶ್ಚರ್ಯಚಕಿತರಾಗಿದ್ದರು. ಕಾರಣ ಖಬರಿನೊಳಗೆ ಮಹಾನರು ಖುರ್ಆನ್ ಓದುತ್ತಿದ್ದರು.
ಹಾಗೆ ಶಿಷ್ಯರು ಖಬರನ್ನು ತೆರೆದಾಗ ಖಬರಿನೊಳಗಿನಿಂದಲೇ, "ನಾನಿನ್ನು ಇಹಲೋಕಕ್ಕೆ ಬರಲಾರೆ ಹಾಗಾಗಿ ಖಬರನ್ನು ಮುಚ್ಚಿಬಿಡಿ" ಎಂದರು. ಉಸ್ತಾದರ ಮಾತಿನಂತೆ ಶಿಷ್ಯರು ಖಬರನ್ನು ಶಾಶ್ವತವಾಗಿ ಮುಚ್ಚಿ ಬಿಟ್ಟರು. ಈ ಕಾರಣದಿಂದ ಈ ಮಹಾನರಿಗೆ ಹಯಾತುಲ್ ಮುಅ್‌ಮಿನೀನ್ ಎಂಬ ಹೆಸರು ಬಂತು.
ಮಹಾನರ ಕರಾಮತ್ತಿನ ಅರಿವಿರುವ ಜನಸಾಮಾನ್ಯರು ಜಾತಿ ಮತಬೇಧವಿಲ್ಲದೆ ಇಲ್ಲಿಗೆ ಝಿಯಾರತ್ತಿಗಾಗಿ ಆಗಮಿಸುತ್ತಾರೆ.
No comments:
Post a Comment