Sunday, September 20, 2020

ಅಹ್ಲು ಸ್ಸುನ್ನ = 02

*ಅಹ್ಲು ಸ್ಸುನ್ನ - 2* 
                   @ ಅಬೂ ರಾಝೀ
➖➖➖➖➖➖➖➖
*ಅವರಿಗೆ ಅಧಿಕಾರ ಬೇಕಿತ್ತು.ಅದಕ್ಕಾಗಿ ವಹಾಬಿಸಂ ಸ್ಥಾಪಿಸಿದರು*

ಮುಹಮ್ಮದ್ ಬಿನ್ ಅಬ್ದುಲ್ ವಹಾಬ್ ವಹಾಬಿ ಪಂಥದ ಸ್ಥಾಪಕ (ಕ್ರಿ.ಶ 1703 - 1792 ). 
ಈತ ಜನಿಸಿದ್ದು ನಜ್‌ದ್‌ನ ಉಯಯ್ಯ್‌ನಲ್ಲಿ.
ಇಬ್ನು ಅಬ್ದುಲ್ ವಹಾಬ್ ಚಿಕ್ಕಂದಿನಲ್ಲಿಯೇ ಹಾದಿ ತಪ್ಪಿದ್ದ. ಜನರು ಕೇಳದ, ಕಾಣದ,  ಆಶಯ ಪ್ರಚಾರ ಮಾಡತೊಡಗಿದ. ಈತನ ವಿಚಿತ್ರಕಾರಿ ಆದರ್ಶದ ವಿರುದ್ಧ ಸ್ವತಃ ತಂದೆ ಅಬ್ದುಲ್ ವಹಾಬ್ ಮತ್ತು ಅಣ್ಣ ಸುಲೈಮಾನ್‌ರವರು ಜನರನ್ನು ಎಚ್ಚರಿಸಿದ್ದರು.
ಕಲಿಯುತ್ತಲೇ ಇಬ್ನು ತೀಮಿಯ್ಯ ಸಿದ್ಧಾಂತಕ್ಕೆ ಮಾರು ಹೋದ. ಈ ಸಿದ್ಧಾಂತದ ಹೆಸರಲ್ಲಿ ವಹಾಬಿಸಂ ಸ್ಥಾಪನಕ್ಕೆ ಮುಂದಾದ. ಆದರೆ ಉದ್ದೇಶ ಬೇರೆಯೇ ಆಗಿತ್ತು. ಜನರ ಹೊಗಳಿಕೆ, ಕೀರ್ತಿ, ಸ್ಥಾನಮಾನ, ನಾಯಕತ್ವ, ಅಧಿಕಾರ ಕಬಳಿಕೆಯೇ  ವಹಾಬಿಸಂನ ಸ್ಥಾಪನೆಗೆ ಕಾರಣ. 

*ಆಶಯ ಪ್ರಚಾರಕ್ಕಾಗಿ ಇಬ್ನು ಅಬ್ದುಲ್ ವಹಾಬ್ ನಜ್‌ದ್‌ನ ದರ್‌ಇಯ್ಯಾಗೆ ಬಂದ.  ಅಲ್ಲಿನ ಆಡಳಿತಾಧಿಕಾರಿ ಆಲ್ ಸಹೂದ್‌ರನ್ನು ಸಂಪರ್ಕಿಸಿದ. ಜನವಿರೋಧದಿಂದ ಆಡಳಿತ ಕೈ ತಪ್ಪುವ ಭೀತಿಯಲ್ಲಿದ್ದ ಸಹೂದ್‌ರಿಗೆ ವಹಾಬ್‌ನ ಸಹಾಯ ಬೇಕಾಗಿತ್ತು. ಜನರಿಗೆ ಧರ್ಮದ ಅಮಲೇರಿಸಿ ಅಧಿಕಾರವನ್ನು ಶಾಶ್ವತವಾಗಿ ಮುಂದುವರಿಸುವ ದುರಾಲೋಚನೆ ಸಹೂದ್‌ರಿಗೆ ಬಂತು. ಹೀಗೆ ಇವರಿಬ್ಬರ ನಡುವೆ ಒಪ್ಪಂದ ನಡೆಯಿತು*.

ತನ್ನ ಸಿದ್ಧಾಂತದ ಪ್ರಚಾರಕ್ಕೆ ಸಹಾಯ ಮಾಡಿದರೆ , ಆಡಳಿತದ ಭದ್ರತೆ ಮತ್ತು ವಿಸ್ತಾರಕ್ಕೆ ಸಹಾಯ ಮಾಡುವುದಾಗಿ ಇಬ್ನು ಅಬ್ದುಲ್ ವಹಾಬ್ ಆಲ್ ಸಹೂದ್‌ರಿಗೆ ಭರವಸೆ ನೀಡಿದ. ದೇಶದ ಆಡಳಿತ ಅಲ್‌ಸಹೂದ್ ಕುಟುಂಬಕ್ಕೂ, ಧರ್ಮ ಕಾರ್ಯ ವಹಾಬ್‌ನ ಕುಟುಂಬಕ್ಕೂ ನೀಡುವುದಾಗಿದ್ದ ಒಪ್ಪಂದದ ಮುಖ್ಯ ಅಂಶ.
ವಿಚಿತ್ರವೆಂದರೆ ತಾನು  ಪ್ರವಾದಿಯೆಂದು ಪ್ರಚಾರ ಮಾಡಿದ ಮುಸೈಲಿಮತುಲ್ ಕದ್ಸಾಬ್ ನ ಊರಾದ ದರ್‌ಇಯ್ಯಾದಲ್ಲಿ ಈ ಒಪ್ಪಂದ ನಡೆಯಿತು. ಮಾತ್ರವಲ್ಲ ಆಡಳಿತಾಧಿಕಾರಿ ಅಲ್ ಸಹೂದ್ ಮುಸೈಲಿಮತುಲ್ ಕದ್ಸಾಬ್‌ನ ಕುಟುಂಬವಾದ ಬನೂ ಹನೀಫಾ ಗೋತ್ರಾದ ವ್ಯಕ್ತಿಯಾಗಿದ್ದರು.
 *ಒಟ್ಟಿನಲ್ಲಿ. ದ್ಸುಲ್ ಖುವೈಸಿರತ್ತಿನ ಪರಂಪರೆಯ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್* 
*ಮುಸೈಲಿಮತ್ ಕದ್ಸಾಬ್‌ನ ಪರಂಪರೆಯ ಮುಹಮ್ಮದ್ ಸಹೂದ್  ಹೊಸ ಪಂಥವನ್ನು  ಸೌದಿ ಅರೇಬಿಯಾದಲ್ಲಿ ಸ್ಥಾಪಿಸಿದರು*. 

ಇದು ಒಂಥರ ಭಾರತದ ಇಂದಿನ ರಾಜಕೀಯದಂತಿದೆ. ಇಲ್ಲಿ ಅಧಿಕಾರ ಶಾಶ್ವತವಾಗಿರಿಸಲು ಉಗ್ರ ಹಿಂದುತ್ವ ಸೃಷ್ಟಿಸಿದಂತೆ,  
ಅರೇಬಿಯಾದಲ್ಲೂ ಅಧಿಕಾರ ಶಾಶ್ವತವಾಗಿ ನೆಲೆ ನಿಲ್ಲಿಸಲು ವಹಾಬಿಸಂ ಸೃಷ್ಟಿಸಲಾಯಿತು. 
ಅಧಿಕಾರಕ್ಕಾಗಿ ವಹಾಬಿಸಂ ಸ್ಥಾಪಿಸಿದ್ದರೂ ನಂತರ ಬಂದ ಅವನ ಅನುಯಾಯಿಗಳು ಅದನ್ನೇ ನೈಜ ಇಸ್ಲಾಮೆಂದು ಪ್ರಚಾರ ಮಾಡಿದರು. 

*ಆಶ್ಚರ್ಯಕರವೆಂದರೆ ಇವರಿಬ್ಬರ ಪೂರ್ವಜರು ಪ್ರವಾದಿ  ﷺ ರವರ ಕಠಿಣ ವಿರೋಧಿಗಳಾಗಿದ್ದರು.* 
*ಅದರ ಪರಿಣಾಮವೆಂಬಂತೆ ಇಂದಿಗೂ ಇವರ ಅನುಯಾಯಿಗಳಲ್ಲಿ ಪ್ರವಾದಿ - ಸ್ವಹಾಬಿ - ಇಮಾಮರುಗಳ ಬಗ್ಗೆ ಅಸಹನೆ, ಜಿಗುಪ್ಸೆ, ಅಪನಂಬಿಕೆ ಕಾಣಬಹುದು* .

ಎಷ್ಟೊಂದು ಸಾಮ್ಯತೆ ನೋಡಿ.
ಪ್ರವಾದಿ ﷺ ರವರನ್ನು ಸ್ವಹಾಬಿಗಳನ್ನು  ಜೀವಂತದಲ್ಲಿ ಕಾಡಿದ ದ್ಸುಲ್ ಖುವೈಸಿರತ್, ಮರಣ ನಂತರ ಕಾಡಿದ  ಮುಸೈಲಿಮತುಲ್ ಕದ್ಸಾಬ್ ಇವರಿಬ್ಬರ ಪರಂಪರೆಯ ವ್ಯಕ್ತಿಗಳು ಇಡೀ ಇಸ್ಲಾಮಿನ ಪರಂಪರೆಯನ್ನೇ ಬದಲಾಯಿಸಲು ಹೊರಟದ್ದು ಮುಸ್ಲಿಮರ ದುರಂತ  

 ಮಾತ್ರವಲ್ಲ ವಹಾಬ್‌ನ ಮಗಳನ್ನು ಆಡಳಿತಾಧಿಕಾರಿ ಮುಹಮ್ಮದ್ ಬಿನ್ ಸಹೂದ್ ಮದುವೆಯಾಗುವುದರೊಂದಿಗೆ ಈ ಸಂಬಂಧ ಮತ್ತಷ್ಟು ಬಲವಾಯಿತು. ಇದನ್ನು ಪ್ರಮುಖ ಚರಿತ್ರೆಗಾರ ಫಿಲಿಫ್‌ರೇ,ರವರು ಧರ್ಮ ಮತ್ತು ಖಡ್ಗದ ನಡುವಿನ ದಾಂಪತ್ಯವೆಂದು ವಿಶ್ಲೇಷಿಸಿದರು. (ಹಿಸ್ಟರಿ ಆಫ್ ಅರಬ್ 2001 ಪುಟ 740)

No comments:

Post a Comment