Friday, May 28, 2021

"ಪಳ್ಳಿಪ್ರಂ ಓರ್" ಎಂಬ ಮೌಲಾನಾ ಅಬ್ದುಲ್ ಖಾದಿರ್ ಮುಸ್ಲಿಯಾರ್ ಖ:ಸಿ ಪಳ್ಳಿಪ್ರಂ, ಕಕ್ಕಾಡ್, ಕಣ್ಣೂರು ಜಿಲ್ಲೆ

#ಝಿಯಾರತ್_ಕೇಂದ್ರ
🕌🕌 9️⃣3️⃣ 🕌🕌
➖➖➖➖➖➖➖

*"ಪಳ್ಳಿಪ್ರಂ ಓರ್" ಎಂಬ ಮೌಲಾನಾ ಅಬ್ದುಲ್ ಖಾದಿರ್ ಮುಸ್ಲಿಯಾರ್ ಖ:ಸಿ 
ಪಳ್ಳಿಪ್ರಂ, ಕಕ್ಕಾಡ್, ಕಣ್ಣೂರು ಜಿಲ್ಲೆ*
=================

✍️ ಗಫೂರ್ ಬಾಯಾರ್
➖➖☪️☪️☪️➖➖

ಸೂಫಿಸಂನಿಂದ ಆಕರ್ಷಿತರಾಗಿ, ಕಠಿಣ ಪರಿಶ್ರಮದಿಂದ ಇಲಾಹಿ ಸ್ಮರಣೆಯನ್ನು ಮೈಗೂಡಿಸಿಕೊಂಡು ಅಲ್ಲಾಹನ ಸಂಪ್ರೀತಿಗೆ ಪಾತ್ರರಾದ ಮಹಾನರಾಗಿದ್ದಾರೆ ಮೌಲಾನಾ ಅಬ್ದುಲ್ ಖಾದಿರ್ ಮುಸ್ಲಿಯಾರ್ (ಖ.ಸಿ)

ಕೇರಳದ ತಿರುವಂತಪುರಂ ಜಿಲ್ಲೆಯ ವರ್ಕಲಾ ನಡೆಯರದ ನಿವಾಸಿ ಅಬ್ದುಲ್ ಅಝೀಝ್ ಮುಸ್ಲಿಯಾರ್ (ನ:ಮ) ಮತ್ತು ಝೈನಬ (ರ) ಎಂಬ ದಂಪತಿಗಳ ಪುತ್ರನಾಗಿ ಮಹಾನರು ಜನಿಸಿದರು.

ತಮಿಳುನಾಡಿನ ತಿರುನಲ್ವೇಲಿಯಲ್ಲಿರುವ "ರಿಯಾಳುಲ್ ಜಿನಾನ್" ಅರಬಿಕ್ ಕಾಲೇಜಿನಿಂದ ತಹ್‌ಸೀಲ್ ರಿಯಾಳಿ ಎಂಬ ಪದವಿ ಪಡೆದ ಅವರು, ಕೀಳಕರ ಅಲ್ ಮದ್ರಸತುಲ್ ಆರೂಸಿಯ್ಯದ ಪೆರಿಯ ಶೈಖ್ ನಾಯಕಂ ಶಂಸುಲ್ ಉಲಮಾ ತೈಕಾ ಆಹ್ಮದ್ ಅಬ್ದುಲ್ ಖಾದಿರ್ ಖ:ಸಿ ರವರ ಶಿಷ್ಯತ್ವ ಸ್ವೀಕರಿಸಿ ಅವರಿಂದ ಖಾದಿರಿಯ್ಯಾ ತ್ವರೀಖತ್ತಿನ ಇಜಾಝತ್ ಸ್ವೀಕರಿಸಿದ ಮಹಾನರಿಗೆ ಙಂಡಾಡಿ ಅಬೂಬಕ್ಕರ್ ಖ.ಸಿ, ಕಣಿಯಾಪುರಂ ಅಬ್ದುರ್ರಝಾಕ್ ಮಸ್ತಾನ್ ಖ.ಸಿ, ಚಾಪನಂಙಾಡಿ ಬಾಪು ಮುಸ್ಲಿಯಾರ್ ಖ.ಸಿ ಮುಂತಾದ ಸೂಫಿವರ್ಯರು ಮಾರ್ಗದರ್ಶಿಗಳಾಗಿದ್ದರು.

ಅಂತೆಯೇ ಓಚ್ಚಿರ ಉಸ್ತಾದ್ ಖ.ಸಿ, ಸಮಸ್ತದ ಪ್ರಥಮ ಮುಫ್ತಿಯಾಗಿದ್ದ ಕಣ್ಣೂರು ಕೋಯಪ್ಪ ಕುಂಙಾಯಿನ್ ಮುಸ್ಲಿಯಾರ್ ಖ.ಸಿ, ಓಮಚ್ಚಪುಝ ಅಬೂಬಕರ್ ಮುಸ್ಲಿಯಾರ್ ಖ.ಸಿ ಮುಂತಾದವರು ಮಹಾನರ ಗುರುಗಳಾಗಿದ್ದರು.

ಈಜಿಪ್ಟಿಗೆ ತೆರಳಿದ್ದ ಮಹಾನರು ಈಜಿಪ್ಟ್‌ನಿಂದ ಶಾದುಲಿ ತ್ವರೀಖತ್‌ನ ಇಜಾಝತ್ ಪಡೆದಿದ್ದರಲ್ಲದೆ ಮುಹಮ್ಮದ್ ಮಾಲಿಕಿ ಖ:ಸಿಯವರ ಪುತ್ರರರಾದ
ಸೈಯ್ಯಿದ್ ಅಲವಿ ಮಾಲಿಕಿ  ಮಕ್ಕಾ ಖ:ಸಿ ಎಂಬ ಸೂಫಿವರ್ಯರ ದರ್ಸ್‌ನಲ್ಲಿ ಭಾಗವಹಿಸಿ ಅವರಿಂದ ತ್ವರೀಖತ್ತಿನ ಇಜಾಝತ್ತನ್ನೂ ಪಡೆದಿದ್ದರು. ಮಾತ್ರವಲ್ಲ ದೊಡ್ಡ ಮಶಾಯಿಖರುಗಳಿಂದ ರಿಫಾಯಿ ತ್ವರೀಖತ್ತಿನ ಇಜಾಝತ್ತನ್ನೂ ಸ್ವೀಕರಿಸಿದ್ದರು. 

ದರ್ಸ್ ಪಠಣಕ್ಕಾಗಿ ಕಣ್ಣೂರು ಜಿಲ್ಲೆಗೆ ಆಗಮಿಸಿದ್ದಾಗ ಸಮಸ್ತ ಮುಶಾವರ ಸದಸ್ಯರೂ ಸುನ್ನತ್ ಜಮಾಅತಿನ ವಿದ್ವಾಂಸರೂ ಆಗಿದ್ದ ಮರ್ಹೂಂ‌ ಪಾಲೋಟ್ಟ್ ಮೂಸಾ ಕುಟ್ಟಿ ಹಾಜಿ ನ:ಮ ರವರ ಪುತ್ರಿ ಝೈನಬ್ ಎಂಬವವರನ್ನು ವಿವಾಹವಾಗಿ ಪಳ್ಳಿಪ್ರತ್ ಎಂಬಲ್ಲಿ ವಾಸವಾಗಿದ್ದರು.

ಹಲವಾರು ಕಶ್ಫ್‌ ಕರಾಮತ್ತುಗಳನ್ನು ಕಾಣಿಸಿದ್ದ ಮಹಾನರು ಹಿಜರಿ 1413 ದುಲ್‌ಖಹದ್ 20ರಂದು ಅಂದರೆ 1993ರ ಮೇ 13ರ ಗುರುವಾರದಂದು ಚೆನ್ನೈನಲ್ಲಿ ವಫಾತಾದರು. ಅಲ್ಲಿಂದ ಮಹಾನರ ಜನಾಝವನ್ನು ತಂದು ಕಣ್ಣೂರಿನ ಪಳ್ಳಿಪ್ರಂ ಜುಮಾ ಮಸೀದಿಯ ಅಂಗಣದಲ್ಲಿ ದಫನ ಮಾಡಲಾಯಿತು. ಮಹಾನರಂತೆ ಅವರ ಸಹೋದರರೂ ಸಹ ಸೂಫಿವರ್ಯರಾಗಿದ್ದರು.
♻️♻️♻️♻️♻️♻️♻️

No comments:

Post a Comment