#ಝಿಯಾರತ್ತ್_ಕೇಂದ್ರ
==================
👉 👉 9️⃣2️⃣ 👈👈
🕌🕌🕌🕌🕌🕌🕌
✍️ ಗಫೂರ್ ಬಾಯಾರ್
➖➖➖➖➖➖➖
*ಸಯ್ಯಿದ್ ಯಾಸಿನ್ ಮುತ್ತು ಕೋಯ ತಂಗಳ್ ರಾಮಂತಲಿ (ನಮ), ಏಝುಮಲ, ಪಯ್ಯನ್ನೂರ್,*
*ಕಣ್ಣೂರು ಜಿಲ್ಲೆ.*
♦️♦️♦️♦️♦️♦️♦️
ಹತ್ತೊಂಬತ್ತನೆ ಶತಮಾನದಲ್ಲಿ ಇಲಾಹೀ ಸ್ಮರಣೆಯ ಮೂಲಕ ಅಲ್ಲಾಹನ ಇಷ್ಟದಸರಾಗಿ ದೀನೀ ಸೇವೆಗೆ ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟಿದ್ದ ಮಹತ್ಮರಾಗಿದ್ದಾರೆ ರಾಮಂತಲಿ ಸಯ್ಯಿದ್ ಯಾಸೀನ್ ಮುತ್ತು ಕೋಯ ತಂಙಳ್ (ಖ.ಸಿ)
ಹೆಸರಾಂತ ವಿದ್ವಾಂಸರೂ ಪ್ರಮುಖ ಸೂಫಿ ವರ್ಯರೂ ಆಗಿದ್ದ ಎಝಿಮಲೆ ತಂಙಳ್ ಎಂದೇ ಅರಿಯಲ್ಪಡುತ್ತಿದ್ದ ರಾಮಂತಲಿ ಸಯ್ಯಿದ್ ಹಾಮಿದ್ ಕೋಯಮ್ಮ ತಂಙಳ್ (ಖ:ಸಿ) ಹಾಗೂ ಸಯ್ಯಿದತ್ ಹವ್ವಾ ಬೀವಿ (ರ) ಎಂಬ ದಂಪತಿಗಳ ಪುತ್ರನಾಗಿ 1921ರಲ್ಲಿ ಜನಿಸಿದರು.
ಅದ್ಯಾಪಕರೂ, ಖಾದಿರಿಯ್ಯಾ ತ್ವರೀಖತ್ತಿನ ಶೈಖ್ ಸಹ ಆಗಿದ್ದ ಸಯ್ಯಿದರ ತಂದೆಯಾದ ಸಯ್ಯಿದ್ ಹಾಮಿದ್ ಕೋಯಮ್ಮ ತಂಙಳ (ಖ:ಸಿ)ರಿಗೆ, ಶಿಷ್ಯಂದಿರಾಗಿ ಮನುಷ್ಯ ವರ್ಗದಲ್ಲಿ ಮಾತ್ರವಲ್ಲದೆ ಜಿನ್ನ್ ವರ್ಗದಲ್ಲೂ ಶಿಷ್ಯಂದಿರಿದ್ದರು. ಅಂದರೆ ಮಹಾನರ ತಂದೆಯವರು ಜಿನ್ನ್‌ಗಳಿಗೂ ತರಗತಿ ನಡೆಸುತ್ತಿದ್ದರು.
ಮಹಾನರ ತಾಯಿಯಾದ ಹವ್ವಾ ಬೀವಿ (ಖ.ಸಿ)ರವರು ಕೋಯಪ್ಪಾಪ ಎಂದು ಕರೆಯಲ್ಪಡುತ್ತಿದ್ದ ಕಡಲುಂಡಿ ಸಯ್ಯಿದ್ ಅಹ್ಮದ್ ಬುಖಾರಿ ತಂಙಳ (ಖ:ಸಿ)ರ ಪುತ್ರಿಯಾಗಿದ್ದು, ಬಹುದೊಡ್ಡ ಆಬಿದತ್ ಆಗಿದ್ದರು. ಶೈಖುನಾ ಕಿಯನ ಓರ್ (ನ.ಮ) ಎಂಬ ಮಹಾನರೊಮ್ಮೆ ಹವ್ವಾ ಬೀವಿ (ರ) ಯವರು ರಾಬಿಯತುಲ್ ಮಿಸ್ರೀಯ್ಯ (ರ) ಮತ್ತು ಬೀವಿ ನಫೀಸತುಲ್ ಮಿಸ್ರೀಯ್ಯಾ (ರ)ರಂತಹ ವನಿತೆಯರ ಸ್ಥಾನಕ್ಕೇರಿದವರಾಗಿದ್ದಾರೆ ಎಂದು ಬಣ್ಣಿಸಿದ್ದರು.
ಇಂತಹ ಆದರ್ಶ ದಂಪತಿಗಳ ಪುತ್ರನಾಗಿ ಜನಿಸಿದ್ದ ಸಯ್ಯಿದ್ ಯಾಸೀನ್ ಮುತ್ತು ಕೋಯ ತಂಙಳ (ಖ:ಸಿ)ರು ಸಹಜವಾಗಿಯೇ ಹೆಸರಾಂತ ವಿದ್ವಾಂಸರ ಒಡನಾಟದೊಂದಿಗೆ ಬೆಳೆದರು.
ಶೈಖುನಾ ಶಂಸುಲ್ ಉಲಮಾ ಕಿಯನ ಓರ್ (ಖ:ಸಿ), ಮೌಲಾನಾ ಕೈಪಟ್ಟ ಬಿರಾನ್ ಕುಟ್ಟಿ ಮುಸ್ಲಿಯಾರ್ (ಖ:ಸಿ), ಮೌಲಾನಾ ಕಣ್ಣಿಯತ್ತ್ ಉಸ್ತಾದ್( ಖ:ಸಿ), ತನ್ನ ಮಾವ ಸಯ್ಯಿದ್ ಶಾಹುಲ್ ಹಮೀದ್ ತಂಙಳ್, ತೃಕರಿಪ್ಪುರ್ (ಖ:ಸಿ), ಅಯನಿಕಾಡ್ ಇಬ್ರಾಹಿಂ ಮುಸ್ಲಿಯಾರ್ (ಖ:ಸಿ), ಫಖಿಹ್ ಮುಸ್ಲಿಯಾರ್ (ಖ:ಸಿ) ಮುಂತಾದ ಹೆಸರಾಂತ ವಿದ್ವಾಸರು ಮತ್ತು ಸೂಫಿವರ್ಯರಿಂದ ಜ್ಞಾನಾರ್ಜನೆ ಮಾಡಿದ ಅವರು ತಂದೆ ಎಝಿಮಲ ತಂಙಳ (ಖ:ಸಿ)ರಿಂದಲೂ, ಪಾನಾಯಿಕುಳಂ ಪುತಿಯಾಪ್ಪಳ ಅಬ್ದುರಹ್ಮಾನ್ ಮುಸ್ಲಿಯಾರ್ (ನ.ಮ)ರಿಂದಲೂ ತ್ವರೀಖತ್ತಿನ ಅನುಮತಿಯನ್ನೂ ಪಡೆದಿದ್ದರು.
ತದನಂತರ ಅಧ್ಯಾಪಕ ವೃತ್ತಿಯನ್ನು ಕೈಗೆತ್ತಿಕೊಂಡು ಮಟ್ಟನ್ನೂರಿನಲ್ಲಿ ಹತ್ತು ವರ್ಷ, ಕಳಂತೋಡಿನಲ್ಲಿ ಎಂಟು ವರ್ಷ, ಪಕರ ಎಂಬಲ್ಲಿ ಆರು ವರ್ಷ, ಮಟ್ಟೂಲ್ ತೆಕುಂಪಾಡ್‌ನಲ್ಲಿ ಎರಡು ವರ್ಷ, ಮಾವಿಲಾ ಕಡಪ್ಪುರಂನಲ್ಲಿ ಮೂರು ವರ್ಷ ಹೀಗೆ ಮೂರು ದಶಕ ಕಾಲ ಹಲವು ಮಹಲ್ಲುಗಳಲ್ಲಿ ದರ್ಸ್ ನಡೆಸಿದರು.
ಖುತ್ತುಬಿ (ಖ:ಸಿ), ಪುದಿಯಾಪ್ಪಳ ಅಬ್ದುರಹ್ಮಾನ್ ಮುಸ್ಲಿಯಾರ್ (ಖ:ಸಿ) ಎಂಬ ಮಹತ್ಮರೊಂದಿಗೆ ಹತ್ತಿರದ ಬಾಂಧವ್ಯವನ್ನು ಹೊಂದಿದ್ದ ಅವರು, ಸಮಸ್ತದ ಏಳಿಗೆಗಾಗಿ ಅಹೋರಾತ್ರಿ ಸೇವೆ ಸಲ್ಲಿಸುತ್ತಿದ್ದರಲ್ಲದೆ ಸಂಸ್ಥಾನ ರೂಪಿಕರಣದ ನಂತರ ಅದಕ್ಕಾಗಿಯೂ ಬಹಳಷ್ಟು ಸೇವೆ ಸಲ್ಲಿಸಿದರು.
1950ರಲ್ಲಿ ಸಮಸ್ತ ಜಂಇಯತ್ತುಲ್ ಉಲಮಾದ ಮುಶಾವರ ಸದಸ್ಯರಾಗಿ ನೇಮಕಗೊಂಡಿದ್ದ ಅವರು, ಸಮಸ್ತದ ಕಷ್ಟಕಾಲದಲ್ಲಿ ಅದರ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದ್ದರು.
1967ರಲ್ಲಿ "ಸ್ಪೀಕರ್ ಖುತುಬ" ಅನುವದನಿಯ ಎಂಬ ಫತ್ವಾದಿಂದಾಗಿ ಉಂಟಾದ ಭಿನ್ನಾಭಿಪ್ರಾಯದ ಕಾರಣದಿಂದಾಗಿ ತಂಙಳರು ಸಮಸ್ತದಿಂದ ವಿಮುಖವಾಗಿದ್ದರು. ಕೇವಲ ಹದಿನಾಲ್ಕು ಸದಸ್ಯರು ಬಾಗವಹಿಸಿದ್ದ ಆ ಮುಶಾವರದ ಸಭೆಯಿಂದ ಮಹಾತ್ಮರುಗಳಾದ ಎ.ಕೆ. ಕುಂಜಾರಮುಟ್ಟಿ ಮುಸ್ಲಿಯಾರ್ (ಖಸಿ) ಮತ್ತು ಬೆಪ್ಪೂರ್ ಖಾಝಿ ಎಂಬುವವರು ಹೊರಡಿಸಿದ ಫತ್ವಾವನ್ನು ವಿರೋಧಿಸಿದವರಲ್ಲಿ ಮುತ್ತು ತಂಗಳರೂ ಒಬ್ಬರಾಗಿದ್ದರು.
ತದನಂತರ "ಕೇರಳ ಸಂಸ್ಥಾನ ಜಂಇಯ್ಯತ್ತುಲ್ ಉಲಮಾ" ರೂಪೀಕರಣವಾದಾಗ ಅದರ ಖಚಾಂಚಿಯಾಗಿ ನೇಮಕವಾದ ತಂಙಳರು ಅನಾರೋಗ್ಯದಿಂದ ಹಾಸಿಗೆ ಹಿಡಿಯುವ ತನಕ ಸಂಘಟನೆಯ ಸೇವೆಯಲ್ಲಿ ನಿರತರಾಗಿದ್ದರು.
ಪಯ್ಯನ್ನೂರ್ ಕೊಟ್ಟಿಯಿಲ್ ರೈಲು ನಿಲ್ದಾಣದ ಸಮೀಪದ ಸ್ವಗೃಹದಲ್ಲಿ ವಾಸವಾಗಿದ್ದ ಅವರನ್ನು ಸಂದರ್ಶಿಸಲು ದಿನನಿತ್ಯ ಅಸಂಖ್ಯ ಶಿಷ್ಯಂದಿರು, ಇಜಾಝತ್ತ್ ಸ್ವೀಕರಿಸಿದವರು, ಮತ್ತು ಜನಸಾಮಾನ್ಯರು ಆಗಮಿಸುತ್ತಿದ್ದರು.
ಮಾಟ್ಟುಲ್ ನಾಲುಪುರಪ್ಪಾಟ್ಟಿಲ್ ಆಟ್ಟಕೋಯ ತಂಙಳರ ಪುತ್ರಿಯಾದ ಸಯ್ಯಿದತ್ ಕುಂಞಿಬೀವಿ ಮಹಾನರ ಸಹಧರ್ಮಿಣಿಯಾಗಿದ್ದರು. ಬಹುಮಾನ್ಯರಾದ ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ಈ ದಂಪತಿಗಳ ಏಕಮಾತ್ರ ಪುತ್ರರಾಗಿದ್ದಾರೆ.
ಸಂಸ್ಥಾನ ಜಂಇಯ್ಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಮರ್ಹೂಂ ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ರಾಮಂತಳಿ (ಖ:ಸಿ)ಯವರು ಮಹಾನರ ಕಿರಿಯ ಸಹೋದರರಾಗಿದ್ದರೆ.
ಸಯ್ಯಿದ್ ಝೈನಬು ತಂಙಳ್ ಕಾಸರಗೋಡು, ಸಯ್ಯಿದ್ ತ್ವಾಹಾ ತಂಙಳ್ ವೆಳಿಯಂಬ್ರ, ಸಯ್ಯಿದ್ ಇಬ್ರಾಹಿಂ ತಂಙಳ್ ಆಲುವ, ಸಯ್ಯಿದ್ ಆಟ್ಟಕೋಯ ತಂಙಳ್ ತಾಯಿನೆರಿ, ಸಯ್ಯಿದ್ ಫಖ್ರುದ್ದೀನ್ ತಂಙಳ್ ದುಗ್ಲಡ್ಕ, ಸಯ್ಯಿದ್ ಕುಂಜಿಕೋಯ ತಂಙಳ್ ಮಾಟ್ಟೂಲ್, ಸಯ್ಯಿದತ್ತ್ ಕುಂಙಿ ಬೀವಿ, ಸಯ್ಯಿದತ್ತ್ ಬಿಚ್ಚಿ ಬೀವಿ ಇವರೆಲ್ಲರೂ ಸಯ್ಯಿದರ ಸಹೋದರ, ಸಹೋದರಿಯರರಾಗಿದ್ದಾರೆ.
ತಾಜುಲ್ ಉಲಮಾ ಉಳ್ಳಾಲ ತಂಙಳ್ ಖ:ಸಿ), ಸಯ್ಯಿದ್ ಉಮರ್ ಮುಹ್‌ಳರ್ ಚೆರಿಯ ಕೋಯ ತಂಙಳ್ ಪಾಪ್ಪಿನಿಶ್ಶೇರಿ (ಖ:ಸಿ)ಯವರು ಮಹಾನರ ಭಾವಂದಿರು ಅಂದರೆ ಸಹೋದರಿಯರ ಪತಿಯಂದಿರಾಗಿದ್ದಾರೆ.
ಇಂತಹ ಸಂತೃಪ್ತ ಕುಟುಂಬದ ಅವಿಭಾಜ್ಯ ಅಂಗವಾಗಿ ದೀನೀ ಸೇವೆಯಲ್ಲಿ ನಿರತರಾಗಿದ್ದ ಮಹಾನರು ಹಿಜರಿ 1413 ಮುಹರ್ರಂ ಒಂದರಂದು ಅಂದರೆ 1992 ಜೂಲೈ ಮೂರರ ಶುಕ್ರವಾರದಂದು ವಫಾತಾದರು. ಎಝಿಮಲ ನಾವಿಕ ಅಕಾಡಮಿಯ ಹತ್ತಿರದ ರಾಮಂತಲಿ 17 ಶುಹದಾಗಳ ಮಖಾಂ ಇರುವ ವಡಕುಬಾಡ್ ಮಸೀದಿಯ ಸಮೀಪದಲ್ಲಿ ಮಾತಾಪಿತರ ಮಖಾಮಿನ ಸನಿಹವೇ ಮಹಾನರ ಮಖ್ಬರವಿದೆ. ಪಕ್ಕದಲ್ಲಿ ಸಹೋದರ ಮುಹಮ್ಮದ್ ಕೋಯ ತಂಙಳ (ಖ:ಸಿ)ರ ಮಖ್ಬರವೂ ಇದೆ. ಝಿಯಾರತ್‌ಗೆ ತೆರಳುವ ವಿಶ್ವಾಸಿಗಳಿಗೆ ಈ ಎಲ್ಲ ಮಹಾತ್ಮರ ಮಖಾಮಿನ ಜೊತೆಗೆ ರಾಮಂತಲಿ ಶುಹದಾಗಳ ಮಖಾಮನ್ನೂ ಸಂದರ್ಶಿಸಬಹುದಾಗಿದೆ.
🔰🔰🔰🔰🔰🔰🔰
No comments:
Post a Comment