ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Thursday, August 17, 2023
*ಪ್ರಥಮ ಬಹುಮಾನ ಕಾರು*🚘🚘🚘*ವ್ಯಾಪಕವಾಗುತ್ತಿರುವ ಸ್ಕೀಮ್ ಜಾಲ*---------------------------------------------✒️T.M ಮುಹ್ಯುದ್ದಿನ್ ಕಾಮಿಲ್ ಸಖಾಫಿ ತೋಕೆಇತ್ತೀಚಿನ ದಿನಗಳಲ್ಲಿ ಪೀಠೋಪಕರಣಗಳ ಅಂಗಡಿಯವರು ಹಾಗೂ ಇನ್ನಿತರರು ಹಲವು ತರಹದ ಸ್ಕೀಮ್ ಗಳು ನಡೆಸುವುದು ಕಂಡು ಬರುತ್ತಿದೆ.ಪ್ರತಿಯೊಬ್ಬರೂ ತಾವು ನಡೆಸುವ ಸ್ಕೀಮ್ ಗಳ ಬಗ್ಗೆ ಅದರಲ್ಲಿ ಧಾರ್ಮಿಕವಾದ ಯಾವುದೇ ಲೋಪದೋಷಗಳಿಲ್ಲವೆಂದು ಸಮರ್ಥಿಸುವುದರಿಂದ ಅದರ ಸತ್ಯಾಸತ್ಯತೆಗಳ ಬಗ್ಗೆ ತಿಳುವಳಿಕೆ ಇಲ್ಲದ ಹಲವು ಮುಗ್ಧರು ಅದರಲ್ಲಿ ಸದಸ್ಯರಾಗಿದ್ದಾರೆ.ಈ ಕುರಿತು ಲೇಖಕನಿಗೆ ಬಂದ ಹಲವಾರು ದೂರವಾಣಿಗಳ ಕಾರಣದಿಂದ ಅದರ ಬಗ್ಗೆ ಸಂಕ್ಷಿಪ್ತವಾದ ವಿವರಣೆಯೊಂದನ್ನು ಇಲ್ಲಿ ನೀಡುತ್ತಿದ್ದೇನೆ.ಇಂದು ನಡೆಯುತ್ತಿರುವ ಸ್ಕೀಮ್ ಗಳ ಕೆಲವು ರೂಪಗಳು ಈ ಕೆಳಗಿನಂತಿವೆ...1.ಒಟ್ಟು 20 ಕಂತುಗಳ(ಉದಾಹರಣೆಗೆ)ಸ್ಕೀಮ್.ಪ್ರತೀ ವಾರವೂ ಚೀಟಿ ಎತ್ತುವುದರ ಮೂಲಕ ಆಯ್ಕೆಯಾದ ಸದಸ್ಯನು ನಂತರ ಹಣ ಕಟ್ಟಬೇಕೆಂದಿಲ್ಲ.ಆಯ್ಕೆಯಾದವರಿಗೆ ಚೀಟಿಯಲ್ಲಿ ಬಂದ ಸಾಮಾಗ್ರಿಗಳನ್ನು ನೀಡಲಾಗುವುದು.(ಉದಾ: ಕಾರು,ಬೈಕು,ಫ್ರಿಜ್,ವಾಶಿಂಗ್ ಮೆಷಿನ್ ಇತ್ಯಾದಿ)ಚೀಟಿ ಎತ್ತುವಿಕೆಯಲ್ಲಿ ಆಯ್ಕೆಯಾಗದ ಸದಸ್ಯರಿಗೆ ನಿಗದಿತ 20 ಕಂತುಗಳ ಬಳಿಕ ಅವರು ಕಟ್ಟಿದ ಒಟ್ಟು ಹಣದ ಮೌಲ್ಯವಿರುವ ಯಾವುದಾದರೊಂದು ವಸ್ತುವನ್ನು ನೀಡಲಾಗುವುದು.ಉದಾ:ಪ್ರತೀ ವಾರ 100 ರೂಪಾಯಿಯಂತೆ 20 ವಾರ ಕಟ್ಟಬೇಕು.ಸ್ಕೀಮ್ ಮುಗಿಯುವುದಕ್ಕಿಂತ ಮುಂಚೆ ಸಾಪ್ತಾಹಿಕವಾಗಿ ನಡೆಯುವ ಚೀಟಿ ಎತ್ತುವಿಕೆಯಲ್ಲಿ ಆಯ್ಕೆಯಾದರೆ ನಂತರ ಹಣ ಕಟ್ಟುವ ಅಗತ್ಯವಿಲ್ಲ.20 ವಾರಗಳ ತನಕ ಈತನ ಹೆಸರು ಆಯ್ಕೆಯಾಗದಿದ್ದರೆ ಕೊನೆಗೆ 2000 ರೂಪಾಯಿ ಮೌಲ್ಯದ ಟೇಬಲ್ ಫ್ಯಾನನ್ನು ನೀಡಲಾಗುವುದು.ಈ ಸ್ಕೀಮ್'ಗಾರರು ಹೇಳುವ ಸಮರ್ಥನೆ ಏನೆಂದರೆ ಇಲ್ಲಿ ಹಣ ಕಟ್ಟುವ ಪ್ರತಿಯೊಬ್ಬರಿಗೂ ಅವರು ಕಟ್ಟಿದ ಒಟ್ಟು ನಿಶ್ಚಿತವಾದ್ದರಿಂದ ಯಾರಿಗೂ ನಷ್ಟವಾಗುವ ಪ್ರಮೇಯವೇ ಇಲ್ಲ.ಆದ್ದರಿಂದ ಇದರಲ್ಲಿ ಧಾರ್ಮಿಕವಾಗಿ ಯಾವುದೇ ಕೇಡುಗಳು ಕಂಡು ಬರುವುದಿಲ್ಲ.ರೂಪ 2.ನಿಗದಿತ ಕಂತುಗಳ (ಉದಾ:20 ಕಂತುಗಳ ) ಸ್ಕೀಮ್ ಆಗಿದ್ದು ಪ್ರತೀ ವಾರವು ಚೀಟಿ ಎತ್ತಲಾಗುವುದು.ಅದರಲ್ಲಿ ಆಯ್ಕೆಯಾದವನಿಗೆ ಕಾರು,ಬೈಕು,ಫ್ರಿಜ್ ,ವಾಶಿಂಗ್ ಮೆಷಿನ್ ಮುಂತಾದ ವಸ್ತುವನ್ನು ನೀಡಲಾಗುವುದು.ಆದರೆ ಈ ಸಾಮಾಗ್ರಿಗಳು ದೊರೆತ ಬಳಿಕವೂ ನಿಗದಿತ ಕಂತುಗಳು ಮುಗಿಯುವ ತನಕ ಹಣ ಕಟ್ಟಬೇಕಾಗುತ್ತದೆ.ಆಯ್ಕೆ ಆಗದವರಿಗೆ ಸ್ಕೀಮ್ ನ ಕೊನೆಯಲ್ಲಿ ಕಟ್ಟಿದ ಹಣದ ಮೌಲ್ಯದಲ್ಲಿ ವಸ್ತುವೊಂದನ್ನು ನೀಡಲಾಗುವುದು.ರೂಪ 3.ನಿಗದಿತ ಕಂತುಗಳ ಸ್ಕೀಮ್ ಆಗಿದ್ದು ಎಲ್ಲರೂ ಕಂತು ಮುಗಿಯುವ ತನಕ ನಿಗದಿತ ಹಣ ಕಟ್ಟಬೇಕು.ಸ್ಕೀಮ್ ನ ಕೊನೆಯಲ್ಲಿ ಚೀಟಿ ಎತ್ತಿ ಐದು ಅಥವಾ ಪ್ರಾಯೋಜಕರು ನಿಗದಿಪಡಿಸಿದಷ್ಟು ಮಂದಿಗಳಿಗೆ ಹೆಚ್ಚಿನ ಮೌಲ್ಯದ ವಸ್ತುಗಳನ್ನು ನೀಡಲಾಗುವುದು.ಉಳಿದವರಿಗೆ ಕಟ್ಟಿದ ಹಣದ ಒಟ್ಟು ಮೌಲ್ಯವಿರುವ ವಸ್ತುವೊಂದನ್ನು ನೀಡಲಾಗುವುದು.ಈ ಮೇಲೆ ತಿಳಿಸಲಾದ ಮೂರು ರೀತಿಯ ಸ್ಕೀಮ್ ಗಳ ಶರೀಅತ್ ವಿಧಿಯ ಬಗ್ಗೆ ಹೇಳುವ ಮುಂಚೆ ವ್ಯಾಪಾರದ ನಿಬಂಧನೆಗಳ ಬಗ್ಗೆ ಸ್ವಲ್ಪ ಅವಲೋಕನ ನಡೆಸಬೇಕಾಗಿದೆ.ಈ ಅವಲೋಕನದಿಂದಲೇ ಪ್ರಸ್ತುತ ಸ್ಕೀಮ್ ಗಳು ಧಾರ್ಮಿಕವಾಗಿ ಸಮ್ಮತಾರ್ಹವೇ ?ಅಲ್ಲವೇ ? ಎಂಬುವುದನ್ನು ತಿಳಿಯಬಹುದಾಗಿದೆ.ವ್ಯಾಪಾರವನ್ನು ಇಸ್ಲಾಮ್ 3 ರೀತಿಯಾಗಿ ವಿಂಗಡಿಸಿದೆ.1.بيع عين مشاهدة للمتبائعين ಕೊಡುವವನು ಮತ್ತು ಕೊಳ್ಳುವವನು ಇಬ್ಬರೂ ದರ್ಶಿಸಿದ ವಸ್ತುವೊಂದನ್ನು ಮಾರಾಟ ಮಾಡುವುದು2.بيع شيئ موصوف في الذمة ವಿಶೇಷಣಗಳು ಹೇಳಲ್ಪಟ್ಟ ವಸ್ತುವೊಂದನ್ನು ದ್ಸಿಮ್ಮತ್ ನಲ್ಲಿ (ವಸ್ತುವನ್ನು ಪ್ರತ್ಯೇಕವಾಗಿ ತೋರಿಸಿ ನಿಗದಿ ಪಡಿಸದೆ)ಮಾರಾಟ ಮಾಡುವುದು.3.بيع عين غائبة ಅನುಪಸ್ಥಿತಿಯಲ್ಲಿರುವ ವಸ್ತುವೊಂದನ್ನು ಮಾರುವುದು.ಈ ಮೂರು ವ್ಯಾಪಾರಗಳಲ್ಲಿ ಮೊದಲೆರಡು ವ್ಯಾಪಾರವು ಕೆಲವೊಂದು ನಿಬಂಧನೆಗಳ ಪ್ರಕಾರ ಸಿಂಧುವಾಗಿರುತ್ತದೆ.ಮೂರನೇಯ ವ್ಯಾಪಾರವು ಅಸಿಂಧುವಗಿದೆ.(ಬುಜೈರಿಮಿ ಅಲಲ್ ಇಖ್'ನಾಹ್ ಪುಟ 45 ಭಾಗ 3)ಮೂರನೇಯ ವ್ಯಾಪಾರವು ಅಸಿಂಧುವಾಗಲು ಕಾರಣ ಮಾರಾಟದ ವಸ್ತು ಕೊಡು-ಕೊಳ್ಳುವವನಿಗೆ ಅಗೋಚರವಾಗಿದೆ ಮತ್ತು ಅಸ್ಪಷ್ಟವಾಗಿದೆ ಎಂಬುವುದಾಗಿದೆ.*ವ್ಯಾಪಾರದ ಕಡ್ಡಾಯ ಘಟಕಗಳು ಆರು.*1.بائع ಮಾರಾಟ ಮಾಡುವವ2.مشتريಕೊಳ್ಳುವವ3.ثمنಕ್ರಯ4. مثمن ಮಾರಾಟ ವಸ್ತು5.ايجاب ಮಾರಾಟದ ಮೇಲೆ ತಿಳಿಸುವ ಮಾತು6 .قبول ಕೊಳ್ಳುವಿಕೆಯ ಮೇಲೆ ತಿಳಿಸುವ ಮಾತು ಇವುಗಳಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕವಾದ ನಿಬಂಧನೆಗಳಿವೆ.ಇದರಲ್ಲಿ ಮೂರು ಮತ್ತು ನಾಲ್ಕನೇ ಘಟಕವಾದ ಕ್ರಯ (ಬೆಲೆ) ಮತ್ತು ಮಾರಾಟ ವಸ್ತುವಿನ ನಿಬಂಧನೆಗಳ ಬಗ್ಗೆ ಚುಟುಕಾಗಿ ತಿಳಿದುಕೊಳ್ಳೋಣ.1.ಕೊಳ್ಳುವವನಿಗೆ ಮತ್ತು ಕೊಡುವವನಿಗೆ ಒಡೆತನವಿರಬೇಕು.ಅಂದರೆ ಯಾವುದಾದರೊಂದು ವಸ್ತುವನ್ನು ಮಾರುವಾಗ ಅಥವಾ ಬೆಲೆಯಾಗಿ ನೀಡುವಾಗ ಆ ವಸ್ತು ಆತನ ಒಡೆತನಕ್ಕೆ ಸೇರಿದ್ದಾಗಿರಬೇಕು.2.ಶುದ್ಧಿಯಿರುವ ಅಥವಾ ಶುದ್ಧಿ ಮಾಡಲು ಸಾಧ್ಯವಿರುವ ವಸ್ತುವಾಗಿರಬೇಕು.ಇದರ ಪ್ರಕಾರ ಮಲಿನ ವಸ್ತುಗಳಾದ ಮದ್ಯ,ಮಲ,ರಕ್ತ,ನಾಯಿ,ಹಂದಿ ಮುಂತಾದವುಗಳನ್ನು ಮಾರಾಟ ಮಾಡಬಾರದು ಹಾಗೂ ಬೆಲೆಯಾಗಿ ನೀಡಬಾರದು.ರಾಫಿಹ್ ಬಿನ್ ಖದೀಜ್ (ರ)ರಿಂದ ವರದಿ,ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ,ثمن الكلب خبيث "ನಾಯಿ ಮಾರಾಟ ಮಾಡಿ ದೊರಕುವ ಹಣವು ಮಲಿನವಾಗಿದೆ"(ಮುಸ್ಲಿಮ್)ಅಬೂ ಮಸ್'ಊದ್ (ರ)ರಿಂದ ವರದಿ,ಅವರು ಹೇಳುತ್ತಾರೆ,ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಾಯಿ ಮಾರಾಟ ಮಾಡಿ ದೊರಕುವ ಹಣವನ್ನು ವಿರೋಧಿಸಿದ್ದಾರೆ.(ಬುಖಾರಿ,ಮುಸ್ಲಿಮ್)ಜಾಬಿರ್( ರ) ವರದಿ,ان الله ورسوله حرم بيع الخمر والميتة والخنزير والاصنام (بخاري ،مسلم)"ಖಂಡಿತವಾಗಿಯೂ ಅಲ್ಲಾಹನು ಮತ್ತು ಅವನ ರಸೂಲರು ಮದ್ಯ,ಶವ,ಹಂದಿ ಹಾಗೂ ವಿಗ್ರಹಗಳನ್ನು ನಿಷೇಧಿಸಿದ್ದಾರೆ."(ಬುಖಾರಿ,ಮುಸ್ಲಿಮ್)ಈ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲು ಕಾರಣ ಈ ವಸ್ತುಗಳು ಮಲಿನ (ನಜಸ್)ವಾಗಿದೆ ಎಂಬುವುದಾಗಿದೆ.ಆದ್ದರಿಂದಲೇ ಇತರ ಎಲ್ಲಾ ಮಲಿನ ವಸ್ತುಗಳನ್ನು ಇವುಗಳೊಂದಿಗೆ ತುಲನೆ ಮಾಡಿ ಅವುಗಳ ಮಾರಾಟವು ನಿಷಿದ್ಧವೆಂದು ಕರ್ಮ ಶಾಸ್ತ್ರ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ.3.ಮಾರಾಟ ವಸುವನ್ನು ಕಾಣುವುದು.ಮಾರಾಟ ವಸ್ತು ಅವರಿಬ್ಬರ ಸಮ್ಮುಖದಲ್ಲಿದ್ದರೆ ಅದನ್ನು ಕಾಣಬೇಕು.ಸಮ್ಮುಖದಲ್ಲಿಲ್ಲದಿದ್ದರೆ ಆ ವಸ್ತು ಮತ್ತು ಅದರ ಎಲ್ಲಾ ವಿಶೇಷಣಗಳನ್ನು ಹೇಳಬೇಕು.4.ವಸ್ತುವನ್ನು ಹಸ್ತಾಂತರಿಸಲು ಸಾಧ್ಯವಿರಬೇಕು.ಇದರ ಪ್ರಕಾರ ನೀರಿನಲ್ಲಿರುವ ಮೀನು,ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿ ಮುಂತಾದವುಗಳನ್ನು ಮಾರಾಟ ಮಾಡಬಾರದು.ಹಾಗೂ ಬೆಲೆಯಾಗಿ ನೀಡಬಾರದು.ಇಮಾಮ್ ಝಕರಿಯ್ಯಲ್ ಅನ್ಸಾರೀ ಹೇಳುತ್ತಾರೆ,وهي ثلاثة اذا العين اما حاضرة او غائبة او في الذمة فالحاضرة وهي المرئية الرؤية المعتبرة في صحة البيع يصح بيعها بشرطه الآتي "ವಸ್ತುಗಳ ಮಾರಟವು ಮೂರು ವಿಧದಲ್ಲಿದೆ.ಏಕೆಂದರೆ ಮಾರಾಟ ವಸ್ತು ಒಂದೋ ಸಮ್ಮುಖದಲ್ಲಿರಬಹುದು ಅಥವಾ ಅನುಪಸ್ಥಿತಿಯಲ್ಲಿರಬಹುದು ಅಥವಾ ಕೇವಲ ಕರಾರು ಪ್ರಕಾರವಾಗಿರಬಹುದು.ಸಮ್ಮುಖದಲ್ಲಿರುವ ವಸ್ತುವಾಗಿದ್ದರೆ ನಿಬಂಧನೆ ಪ್ರಕಾರ ಅದರ ಮಾರಾಟ ಸಿಂಧುವಾಗಿದೆ.(ತುಹ್'ಫತುತ್ತುಲ್ಲಾಬ್ ಭಾಗ 3, ಪುಟ 31)ಆ ನಿಬಂಧನೆಗಳ ಬಗ್ಗೆ ಅವರು ಹೀಗೆ ಸ್ಪಷ್ಟಪಡಿಸುತ್ತಾರೆ."ಮಾರಟ ವಸ್ತುವಿನ ಒಡೆತನವಿರಬೇಕು,ಶುದ್ಧಿಯಿರಬೇಕು,ಇಬ್ಬರಿಗೂ ತಿಳಿಯಲ್ಪಟ್ಟದ್ದಾಗಿರಬೇಕು.(ತುಹ್'ಫತುತ್ತುಲ್ಲಾಬ್ 3/42)ಪುನಃ ಅವರು ಹೇಳುತ್ತಾರೆ,"ಅಗೋಚರವಾದ ವಸ್ತುವನ್ನು ಅವರಿಬ್ಬರೋ ಅಥವಾ ಒಬ್ಬರೋ ವ್ಯವಹಾರ ಪ್ರಕ್ರಿಯೆಗಿಂತ ಮುಂಚೆ ಕಾಣದಿದ್ದರೆ ಆ ವ್ಯಾಪಾರವು ಸಿಂದುವಾಗಲಾರದು.(ತುಹ್'ಫತುತ್ತುಲ್ಲಾಬ್ 3/32)ಪುನಃ ಅವರು ಹೇಳುತ್ತಾರೆ,ಕರಾರು ಪ್ರಕಾರವಿರುವ ವ್ಯಾಪಾರದಲ್ಲಿ ಮಾರಾಟ ವಸ್ತುವಿನ ಬಗ್ಗೆ ಮತ್ತು ಅದರ ವಿಶೇಷಣವನ್ನು ಹೇಳಿದರೆ ಅದರ ಮಾರಾಟವು ಸಿಂಧುವಾಗಲಾರದು.(ತುಹಫತುತ್ತುಲ್ಲಾಬ್ 3/38)ಒಟ್ಟಿನಲ್ಲಿ ವಸ್ತುಗಳನ್ನು ಮಾರಾಟ ಮಾಡುವಾಗ ಆ ವಸ್ತುಗಳ ಬಗ್ಗೆ ಮಾರುವವನಿಗೂ ಪಡೆದುಕೊಳ್ಳುವವನಿಗೂ ಸ್ಪಷ್ಟವಾದ ಅರಿವಿರಬೇಕು.ವಸ್ತು ಸಮ್ಮುಖದಲ್ಲಿದ್ದರೆ ಅವರಿಬ್ಬರೂ ನೋಡಿ ಖಾತರಿ ಪಡಿಸಬೇಕು.ಇನ್ನು ವ್ಯಾಪಾರ ಕರಾರು ಪ್ರಕಾರವಾಗಿದ್ದರೆ ಆ ವಸ್ತುವಿನ ಎಲ್ಲಾ ವಿಷೇಷಣಗಳನ್ನು ಹೇಳಿ ಅದನ್ನು ನಿಗದಿಪಡಿಸಬೇಕು.ಆದ್ದರಿಂದ ಮಜ್'ಹೂಲ್ ಅಥವಾ ತಿಳಿಯದ ವಸ್ತುವನ್ನು ಮಾರಾಟ ಮಾಡುವುದು ನಿಷಿದ್ಧವೂ ಅಸಿಂಧುವಾಗಿದೆ.ಶರಹುಲ್ ಮುಹದ್ದಬ್ ನಲ್ಲಿ ಈ ರಿತಿ ಇದೆ."ಗೊತ್ತಿಲ್ಲದ ವಸ್ತುವನ್ನು ಮಾರುವುದು ಅಸಿಂಧುವಾಗಿದೆ".(ಶರಹುಲ್ ಮುಹದ್ದಬ್ 11/335)ಇಮಾಮ್ ಮಾವರ್ದಿ ಹೇಳುತ್ತಾರೆ,ಬೆಲೆ ಎಷ್ಟೆಂದು ಗೊತ್ತಿಲ್ಲದ ವ್ಯಾಪಾರ ಸಿಂಧುವಾಗಲಾರದು.(ಹಾವಿಲ್ ಕಬೀರ್ 5/763)ಒಟ್ಟಿನಲ್ಲಿ ವ್ಯಾಪಾರ ಮಾಡುವಾಗ ವ್ಯಾಪಾರದ ವಸ್ತು ಹಾಗೂ ಅದರ ಬೆಲೆ ನಿಖರವಾಗಿ ತಿಳಿದಿರಬೇಕು.ಇನ್ನು ನಮ್ಮ ಸ್ಕೀಮಿನ ವಿಚಾರಕ್ಕೆ ಬರೋಣ.ಒಂದನೇ ರೂಪದಲ್ಲಿಅಡಕ ಗೊಂಡಿರುವ ಕೆಲವು ಅಂಶಗಳನ್ನು ಗಮನಿಸಿ. ಇಲ್ಲಿ ಚೀಟಿ ಎತ್ತುವುದರ ಮೂಲಕ ವಸ್ತುವನ್ನು ಆಯ್ಕೆ ಮಾಡುವುದಾದರೆ ದೊರಕುವ ವಸ್ತು ಯಾವುದು ಎಂದು ಸ್ಪಷ್ಟವಲ್ಲ. ಏಕೆಂದರೆ ಚೀಟಿ ಎತ್ತುವಿಕೆಯಲ್ಲಿ ಯಾವ ವಸ್ತು ಬರಬಹುದೆಂದು ಯಾರಿಗೂ ಗೊತ್ತಿಲ್ಲ ತಾನೇ?ಆದ್ದರಿಂದ ಇಲ್ಲಿ ಮಬೀಅ ಅಥವಾ ಮಾರಾಟ ವಸ್ತುವಿನಲ್ಲಿ ನಿಗೂಢತೆ ಹಾಗೂ ಅಸ್ಪಷ್ಟತೆ ಇದೆ. ಎರಡನೆಯದಾಗಿ ಸಾಪ್ತಾಹಿಕವಾಗಿ ವಸ್ತುವನ್ನು ಚೀಟಿ ಎತ್ತುವಿಕೆಯ ಮೂಲಕ ನಿರ್ಣಯಿಸುವಾಗ ಸದಸ್ಯರಾದ ಪ್ರತಿಯೊಬ್ಬರಿಗೂ ಯಾವುದೇ ವಾರ ಯಾವುದೇ ವಸ್ತು ಬರಲು ಸಾಧ್ಯವಿದೆ .ಆಗ ಎಷ್ಟರ ತನಕ ಹಣ ಕಟ್ಟಬೇಕೆಂದು ಪ್ರತಿಯೊಬ್ಬರಿಗೂ ಸ್ವಷ್ಠವಲ್ಲ ಆದ್ದರಿಂದ ಇಲ್ಲಿ ಸಮನ್ ಅಥವಾ ಬೆಲೆಯಲ್ಲೂ ನಿಗೂಢತೆ ಇದೆ ಕೆಲವೊಮ್ಮೆ ಅದು ನೂರು ರೂಪಾಯಿ ಆಗಿರಬಹುದು ಅಥವಾ ಇನ್ನೂರಾಗಿರಬಹುದು ಅಥವಾ ಅದಕ್ಕಿಂತ ಮೇಲೆ ಆಗಿರಬಹುದು. ಇನ್ನು ಒಂದೊಂದು ವಾರದಲ್ಲಿ ಒಂದೊಂದು ವಸ್ತುವನ್ನು ನಿಗದಿಪಡಿಸಿ ಪಡೆಯುವವನನ್ನು ಚೀಟಿ ಎತ್ತಿ ನಿರ್ಣಯಿಸುವುದಾದರೆ ಆಗಲು ಪಡೆಯುವವನಲ್ಲೂ ನಿಗೂಢತೆ ಇದೆ .ಅದೇ ರೀತಿ ಬೆಲೆಯು ಸ್ಪಷ್ಟವಲ್ಲ.ಎರಡನೇ ರೂಪದಲ್ಲಿ ಬೆಲೆ ನಿಶ್ಚಿತವಾಗಿದ್ದರೂ ಲಭಿಸುವ ವಸ್ತು ಸ್ಪಷ್ಟವಲ್ಲ ಏಕೆಂದರೆ ಈ ವಸ್ತು ಅದರಲ್ಲಿ ಸದಸ್ಯರಾದ ಪ್ರತಿಯೊಬ್ಬರಿಗೂ ಲಭಿಸಲು ಸಾಧ್ಯತೆ ಇದೆ. ಪ್ರತಿಯೊಬ್ಬರೂ ಅದು ತನಗೆ ಲಭಿಸಬಹುದು ತನಗೆ ಲಭಿಸಬಹುದು ಎಂದು ಕಾತರದಿಂದಿರುತ್ತಾರೆ. ಆದ್ದರಿಂದ ಇಲ್ಲೂ ಮಾರಾಟ ವಸ್ತುವಿನಲ್ಲಿ ನಿಗೂಢತಯಿದೆ. ಮೂರನೇ ರೂಪದ ಅವಸ್ಥೆಯು ಇದೇ ರೀತಿಯಾಗಿದೆ.ಇನ್ನು ಇದರ ಬಗ್ಗೆ ಹದೀಸ್ ಮತ್ತು ಇಮಾಮಗಳ ಉಲ್ಲೇಖಗಳು ಏನೆನ್ನುತ್ತದೆ ಎಂಬುವುದನ್ನು ನೋಡೋಣ ಅಬೂಹುರೈರ (ರ.ಅ) ವರದಿ, ಅವರು ಹೇಳುತ್ತಾರೆ "ಪ್ರವಾದಿ ಸ್ವಲ್ಲಲ್ಲಾಹು ಅಲಯಿಹಿವಸಲ್ಲಮರವರು ಹಸ್ವಾತ್ ವ್ಯಾಪಾರ ಮತ್ತು ವಂಚನೆಗೆ ಸಾಧ್ಯತೆ ಇರುವ ವ್ಯಾಪಾರವನ್ನು ವಿರೋಧಿಸಿರುವವರು" (ಮುಸ್ಲಿಂ , ಮಿಶ್ಕಾತ್ ಹದೀಸ್ 2854)ಹದೀಸ್ ನಲ್ಲಿ ಹೇಳಿದ ಹಸ್ವಾತ್ ವ್ಯಾಪಾರವೇನೆಂಬುವುದನ್ನು ನೋಡೋಣ..ಇಮಾಂ ಮಾವರ್ದಿರವರು ಹೇಳುತ್ತಾರೆ, ಇದರಲ್ಲಿ ಮೂರು ತಾತ್ಪರ್ಯಗಳಿವೆ1.ಒಬ್ಬನು ಕೈಯಲ್ಲಿ ಚಿಕ್ಕ ಕಲ್ಲುಗಳನ್ನು ಹಿಡಿದು ಬಟ್ಟೆ ವ್ಯಾಪಾರಿಯ ಬಳಿ ಬರುತ್ತಾನೆ.ಬಟ್ಟೆ ವ್ಯಾಪಾರಿ ತನ್ನ ಬಟ್ಟೆಗಳನ್ನು ಒಂದೆಡೆ ರಾಶಿ ಹಾಕಿರುತ್ತಾನೆ. ಗ್ರಾಹಕ ತನ್ನ ಕೈಯಲ್ಲಿರುವ ಕಲ್ಲನ್ನು ಆ ರಾಶಿಯ ಮೇಲೆ ಬಿಸಾಡುತ್ತಾನೆ.ಆಗ ಕಲ್ಲು ಯಾವ ಬಟ್ಟೆಯ ಮೇಲೆ ಬೀಳುತ್ತದೋ ಆ ಬಟ್ಟೆ ಆತನಿಗಾಗಿದೆ. ಈ ವ್ಯಾಪಾರವು ಬಾತಿಲ್ ಅಥವಾ ಅಸಿಂಧು ವಾಗಿದೆ. ಏಕೆಂದರೆ ಯಾವ ವಸ್ತು ದೊರಕುತ್ತದೆ ಎಂಬುದು ಇಲ್ಲಿ ಸ್ಪಷ್ಟವಲ್ಲ.2. ಆತ ಒಂದು ವಸ್ತುವನ್ನು ನಿಗದಿ ಪಡಿಸಿ ಖರೀದಿಸುತ್ತಾನೆ. ಆದರೆ ಆ ಕಲ್ಲು ಆ ವಸ್ತುವಿನ ಮೇಲೆ ಬೀಳುವ ತನಕ ಬೆಲೆಯಲ್ಲಿ ಅವಧಿ ನಿಗದಿ ಪಡಿಸುತ್ತಾನೆ.ಇದು ಕೂಡ ಅಸಿಂಧುವಾಗಿದೆ ಏಕೆಂದರೆ ಇಲ್ಲಿ ಅವಧಿಯ ಸಮಯವೆಷ್ಟು ಎಂದು ಸ್ವಷ್ಟ ಅಲ್ಲ.3. ಜಾಗ ಖರೀದಿಸುವಾಗ ಆ ಕಲ್ಲನ್ನು ಬಿಸಾಡಿ ಅದು ಎಲ್ಲಿ ಬಿತ್ತೋ ಅಲ್ಲಿಯ ತನಕವಿರುವ ಜಾಗವನ್ನು ಖರೀದಿಸುವುದು.ಇದು ಕೂಡ ಅಸಿಂಧುವಾಗಿದೆ.ಏಕೆಂದರೆ ಇಲ್ಲಿ ಖರೀದಿಸುವ ಜಾಗದ ವಿಸ್ತೀರ್ಣ ಎಷ್ಟೆಂದು ಸ್ಪಷ್ಟವಲ್ಲ .(ಅಲ್ ಹಾವಿಲ್ ಕಬೀರ್ ಕಾಂಡ 5 ಪುಟ 752)ಇಮಾಮ್ ಮಾವರ್ದಿರವರ (ರ.ಅ)ರವರ ಈ ವಿವರಣೆಯಿಂದ ಒಂದು ಕಾರ್ಯ ಸ್ಪಷ್ಟವಾಗುತ್ತದೆ.ಬಟ್ಟೆಗಳ ರಾಶಿಗೆ ಕಲ್ಲು ಹಾಕಿ ಅದರಿಂದ ಆಯ್ಕೆ ಯಾಗುವ ವಸ್ತುವಿನ ಮಾರಾಟವು ಸಿಂಧು ಅಲ್ಲ. ಏಕೆಂದರೆ ಅಲ್ಲಿ ಮಾರಾಟ ವಸ್ತುವಿನಲ್ಲಿ ನಿಗೂಢತೆ ಉಂಟಾಗುತ್ತದೆ. ಇಲ್ಲಿ ಪ್ರಸ್ತಾಪಿತವಾದ ಸ್ಕೀಮ್ ನ ಅವಸ್ಥೆಯೂ ಇದೇ ರೀತಿಯಾಗಿದೆ. ಏಕೆಂದರೆ ಜಾಹಿಲಿಯಾ ಕಾಲದಲ್ಲಿ ಕಲ್ಲೆಸೆದು ಸಾಮಗ್ರಿಗಳನ್ನು ಆಯ್ಕೆ ಮಾಡುತ್ತಿದ್ದರೆ ಇಂದು ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡುತ್ತಾರೆ ಅಷ್ಟೇ. ಎರಡು ರೂಪದಲ್ಲೂ ಮಾರಾಟ ವಸ್ತು ಸ್ಪಷ್ಟವಲ್ಲ.ಇದೇ ಕಾರ್ಯವನ್ನು ಇಮಾಂ ಶಾಫಿ( ರ.ಅ) ರವರು ಹೇಳುವುದನ್ನು ನೋಡಿ,"ಬೈಉಲ್ ಹಸ್ವಾತ್ ಎಂಬುದಕ್ಕೆ ಹಲವು ವ್ಯಾಖ್ಯಾನಗಳಿವೆ. ಗ್ರಾಹಕನೊಂದಿಗೆ ಮಾರುವವನು ಈ ಬಟ್ಟೆಗಳ ಪೈಕಿ ಒಂದನ್ನು ನಿನಗೆ ನಾನು ಮಾರಿರುವೆ ನಿನ್ನ ಕೈಯಲ್ಲಿರುವ ಕಲ್ಲನ್ನು ಆ ಬಟ್ಟೆಗಳಿಗೆ ಬಿಸಾಡು ಅದು ಯಾವುದರ ಮೇಲೆ ಬಿತ್ತೋ ಅದು ಮಾರಲ್ಪಟ್ಟ ಬಟ್ಟೆಯಾಗಿದೆ ಎಂದು ಹೇಳುವುದಾಗಿದೆ ಅಥವಾ ಈ ಕಲ್ಲನ್ನು ಬಿಸಾಡು. ಅದು ಎಲ್ಲಿಗೆ ಬಿತ್ತೋ ಅಲ್ಲಿಯ ತನಕದ ಜಾಗ ನಿನಗೆ ಮಾರಲ್ಪಟ್ಟಿದ್ದಾಗಿದೆ ಎಂದು ಹೇಳುವುದಾಗಿದೆ".(ಶರಹುಲ್ ಕಬೀರ್, ಭಾಗ 8, ಪುಟ 194)ಇನ್ನೊಂದು ರೀತಿಯನ್ನು ಬಹು ಅಬೂ ಸುಲೈಮಾನ್ ಅಹಮದ್ ಬಿನು ಮಹಮ್ಮದ್ ಖತ್ತಾಬಿ( ರ .ಅ) ರವರು ತಿಳಿಸುವುದನ್ನು ನೋಡಿ, ಇನ್ನೊಂದು ವಿಧವೇನೆಂದರೆ ಆಡನ್ನು ಸಾಕುವ ವ್ಯಕ್ತಿ ಒಬ್ಬ ತನ್ನ ಆಡಿನ ಗುಂಪನ್ನು ತೋರಿಸಿ ಈ ಗುಂಪಿನಲ್ಲಿ ಯಾವುದಕ್ಕೆ ನಿನ್ನ ಕಲ್ಲು ಬಿತ್ತೋ ಅದು ಮಾರಾಟಗೊಂಡ ಆಡೆಂದು ಹೇಳುವುದು. ಇದು ಪ್ರವಾದಿ ವಿರೋಧಿಸಿದ ವ್ಯಾಪಾರವಾಗಿದೆ".ಇಮಾಂ ಇಬ್ನ್ ಹಜರಿಲ್ ಅಸ್ಕಲಾನಿ (ರ.ಅ)ರವರು ಹೇಳುತ್ತಾರೆ,ನೀವು ನೀರಿನಲ್ಲಿರುವ ಮೀನನ್ನು ಖರೀದಿಸಬೇಡಿ. ಏಕೆಂದರೆ ಅದು ನಷ್ಟಕ್ಕೆ ಸಾದ್ಯತೆ ಇರುವಂತಹ ದ್ದಾಗಿದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಹದೀಸನ್ನು ಅಬುಹುರೈರ (ರ)ರಿಂದ ಇಮಾಮ್ ಅಹಮದ್( ರ.ಅ)ರವರು ಉಲ್ಲೇಖಿಸಿದ್ದಾರೆ. ನೀರಿನಲ್ಲಿರುವ ಮೀನನ್ನು ಖರೀದಿಸುವುದು ನಷ್ಟ ಮತ್ತು ವಂಚನೆಯ ವಿಧಗಳ ಪೈಕಿ ಒಂದಾಗಿದೆ. ಇದರೊಂದಿಗೆ ಆಕಾಶದಲ್ಲಿ ಹಾರುವ ಹಕ್ಕಿ, ಇಲ್ಲದ ವಸ್ತು, ತಿಳಿಯದ ವಸ್ತು, ಓಡಿ ಹೋದದ್ದು ಮುಂತಾದವುಗಳನ್ನು ಮಾರಾಟ ಮಾಡುವುದನ್ನು ತುಲನೆಗೊಳಿಸಲಾಗಿದೆ.(ಫತುಹುಲ್ ಬಾರಿ, ಕಾಂಡ 4 ಪುಟ 357)ಉಮ್ದತುಲ್ ಖಾರಿಯಲ್ಲಿ ಹೀಗೆ ಕಾಣಬಹುದು,"ಪ್ರವಾದಿ ಸ.ಅ ರವರು ವಿರೋಧಿಸಿದ ಬೈಉಲ್ ಗರರ್ ಎಂದರೆ ಅಪಾಯವಿರುವ ಮಾರಾಟವಾಗಿದೆ. ಅದೆಂದರೆ ಬೆಲೆ ,ಮಾರಾಟ ವಸ್ತು ,ಮತ್ತು ಅದು ನ್ಯೂನೆತೆಗಳಿಂದ ಮುಕ್ತಿ ಹೊಂದಿರುವುದು ಹಾಗೂ ಅವಧಿಯ ಬಗ್ಗೆ ಸ್ಪಷ್ಟ ಇಲ್ಲದ ವ್ಯಾಪಾರವಾಗಿದೆ .(ಉಮ್ದತುಲ್ ಖಾರಿ ಭಾಗ 17 ಪುಟ 471).ಇಮಾಮ್ ನವವಿ( ರ.ಅ )ರವರು ಹೇಳುತ್ತಾರೆ, ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಿರೋಧಿಸಿದ ಬೈವುಲ್ ಹಸ್ವಾತ್ ಎಂಬುದರಲ್ಲಿ ಮೂರು ವ್ಯಾಖ್ಯಾನಗಳಿವೆ ಒಂದು ಕಲ್ಲು ಬಿದ್ದ ಬಟ್ಟೆಯನ್ನು ನಿನಗೆ ನಾನು ಮಾರಿದೆ ಎಂದು ಹೇಳುವುದಾಗಿದೆ.(ಶರಹು ಮಸ್ಲಿಂ ಭಾಗ ಹತ್ತು ಪುಟ 150).ಇಮಾಮ್ ಕತ್ತಾಬೀ (ರ.ಅ)ರವರು ಹೇಳುತ್ತಾರೆ, "ಉದ್ದೇಶಿಸಲ್ಪಟ್ಟ ವಸ್ತು ಅಸ್ಪಷ್ಟವಾದ ,ಹಸ್ತಾಂತರಿಸಲು ಸಾಧ್ಯವಿಲ್ಲದ ಎಲ್ಲಾ ವ್ಯಾಪಾರವೂ ವಿರೋಧಿಸಲ್ಪಟ್ಟ ಗರರ್ ವ್ಯಾಪಾರಕ್ಕೆ ಒಳಪಟ್ಟದ್ದಾಗಿದೆ.(ಮಆಲಿಮುಸ್ಸುನನ್ ಭಾಗ 3 ಪುಟ 88)ವ್ಯಾಪಾರದಲ್ಲಿ ಸಮಯ ನಿಗದಿಪಡಿಸದಿರುವುದು ಮತ್ತು ಇತರ ಯಾವುದಾದರೂ ಒಂದು ಕಾರ್ಯದ ಮೇಲೆ ವ್ಯಾಪಾರವನ್ನು ಸಂಯೋಜನೆಗೊಳಿಸದಿರುವುದು ವ್ಯಾಪಾರ ಸಿಂಧುವಾಗಲು ನಿಬಂಧನೆಯಾಗಿದೆ. ಇಮಾಂ ಖತೀಬ್ ಶಿರ್ಬೀನಿ (ರ.ಅ) ರವರು ಹೇಳುತ್ತಾರೆ, ವ್ಯಾಪಾರದಲ್ಲಿ ಇತರ ಕಾರ್ಯದ ಮೇಲೆ ಸಂಯೋಜನೆಗೊಳಿಸದಿರುವುದು ಹಾಗೂ ಸಮಯ ನಿಗದಿಪಡಿಸದಿರುವುದು ನಿಬಂಧನೆ ಆಗಿದೆ.ಆದ್ದರಿಂದ ಒಬ್ಬನು "ನನ್ನ ತಂದೆ ತೀರಿದರೆ ಇದನ್ನು ನಿನಗೆ ನಾನು ಇಷ್ಟು ರೂಪಾಯಿಗೆ ಮಾರಿದೆನು" ಅಥವಾ" ಒಂದು ತಿಂಗಳಿಗೆ ಇದನ್ನು ನಾನು ನಿನಗೆ ಮಾರಿದೆನು"ಎಂದು ಹೇಳಿದರೆ ಆ ವ್ಯಾಪಾರವು ಸಿಂಧುವಾಗಲಾರದು. ( ಇಖ್ನಾಅ ಭಾಗ-3 ಪುಟ 13)ಪ್ರಸ್ತುತ ಸ್ಕೀಮ್ ಗಳಲ್ಲಿ ಒಂದು ರೀತಿಯ ತಅಲೀಕ್ ಅಥವಾ ಸಂಯೋಜನೆಯನ್ನು ನಮಗೆ ಕಾಣಬಹುದು. ಅದೇನಂದರೆ "ಸಾಪ್ತಾಹಿಕವಾಗಿ ಅಥವಾ ಕೊನೆಯಲ್ಲಿ ಹಾಕುವ ಚೀಟಿ ಎತ್ತುವಿಕೆಯಲ್ಲಿ ನೀನು ಆಯ್ಕೆಯಾದರೆ ಆ ವಸ್ತು ನಿನಗೆ" ಎಂಬ ಸಂಯೋಜನೆಯು ಇಲ್ಲಿದೆ.ಆದ್ದರಿಂದ ಇದು ಕೂಡ ಒಂದು ಅಡಚಣೆಯಾಗಿದೆ.ಮಾತ್ರವಲ್ಲ ಒಂದನೇ ರೀತಿಯಲ್ಲಿ ಚೀಟಿ ಎತ್ತುವಿಕೆಯಲ್ಲಿ ಆಯ್ಕೆಯಾದವರು ನಂತರ ಹಣ ಕಟ್ಟ ಬೇಕಾಗಿಲ್ಲ ಎಂಬುದು ಒಂದು ಬಗೆಯ ಮೈಸಿರ್ ಅಥವಾ ಜೂಜಿಗೆ ಒಳಪಟ್ಟದ್ದಾಗಿದೆ.ಒಟ್ಟಿನಲ್ಲಿ ಇಂದು ನಡೆಸುವ ಸ್ಕೀಮ್ ಗಳಲ್ಲಿ ಬಹುಮಾನಗಳೆಂದು ಅವರು ಕರೆಯುವ ವಸ್ತುಗಳು ಯಾರಿಗೆ ದೊರಕುತ್ತಿದೆ ಎಂದು ಹೇಳಲು ಸಾಧ್ಯವಿಲ್ಲದಿರುವುದರಿಂದ ಅಲ್ಲಿ ನಿಗೂಢತೆ ತಲೆದೋರುತ್ತದೆ ಅದೇ ರೀತಿ ವಿಜಯಿಯಾದ ಬಳಿಕ ಹಣ ಕಟ್ಟಬೇಕಾದ ಅಗತ್ಯವಿಲ್ಲವೆಂಬ ವ್ಯವಸ್ಥೆ ಇದ್ದರೂ ಬೆಲೆಯಲ್ಲಿ ನಿಗೂಢತೆ ಉಂಟಾಗುತ್ತದೆ. ಆದ್ದರಿಂದ ಈ ರೀತಿಯ ಸ್ಕೀಮ್ ಗಳು ಸಮತರ್ಹವಲ್ಲವೆಂದು ತಿಳಿದುಕೊಳ್ಳಬಹುದು.ಎಲ್ಲರೂ ನಿಗದಿತ ಹಣವನ್ನು ಕಟ್ಟಬೇಕೆಂದು ಅವರೆಲ್ಲರಿಗೂ ಅಷ್ಟು ಮೌಲ್ಯದ ನಿಗದಿತ ವಸ್ತುವನ್ನು ನೀಡಲಾಗುವುದೆಂದು (ಆ ವಸ್ತುವನ್ನು ಸ್ಪಷ್ಟವಾಗಿ ಮಾಡಲು ನಿಶ್ಚಯ ಗೊಳಿಸಬೇಕು) ವ್ಯವಸ್ಥೆಗೊಳಿಸಿ ಅದನ್ನು ನೀಡಿದ ಬಳಿಕ ಪ್ರಾಯೋಜಕರು ತಮಗೆ ದೊರೆತ ಲಾಭದಿಂದ ಯಾವುದಾದರೂ ಕೆಲವು ವಸ್ತುಗಳನ್ನು ಚೀಟಿ ಹಾಕಿ ಸದಸ್ಯರಲ್ಲಿ ಯಾರಿಗಾದರೂ ಬಹುಮಾನವಾಗಿ ನೀಡುವುದಾದರೆ ತೊಂದರೆ ಇಲ್ಲ. ಆದರೆ ಇದು ವ್ಯಾಪಾರದ ಭಾಗವಾಗಿರಬಾರದು.ಕೇವಲ ಅವರ ವತಿಯಿಂದ ಸೌಜನ್ಯವಾಗಿ ನೀಡುವಂತದ್ದು ಆಗಿರಬೇಕು.ಇದಲ್ಲದೆ ಮೇಲೆ ತಿಳಿಸಲಾದ ರೀತಿಯಲ್ಲಿ ಸ್ಕೀಮ್ ನಡೆಸುವುದು ಅನಿಸ್ಲಾಮಿಕವೆಂದು ತಿಳಿದುಕೊಳ್ಳಬೇಕಾಗಿದೆ.the end
Wednesday, March 15, 2023
ಮಸೀದಿಯ ಸಾರ್ವಜನಿಕ ದರ್ಶನ ಇಸ್ಲಾಮಿನ ನಿಲುವೇನು?
*ಮಸೀದಿಯ ಸಾರ್ವಜನಿಕ ದರ್ಶನ ಇಸ್ಲಾಮಿನ ನಿಲುವೇನು?*
____________________________
✍️ ಮುನೀರ್ ಸಖಾಫಿ ಸಾಲೆತ್ತೂರು
( *ಇದು ಯಾವ ಧರ್ಮವನ್ನು ಅಥವಾ ಪುರುಷರನ್ನೋ* *ಮಹಿಳೆಯರನ್ನೋ ಗೇಲಿ ಮಾಡಲು ಬರೆದ ಬರಹವಲ್ಲ.*
*ಇಸ್ಲಾಮಿನ ನಿಯಮಗಳನ್ನು ವಿವರಿಸಿ ಹೇಳಿದ್ದೇನೆ ಅಷ್ಟೇ.*)
ಹಳೇ ಕಾಲದಲ್ಲಿದ್ದ ಮಸೀದಿಗಳನ್ನು ಈಗೀಗ ಪುನರ್ ರ್ನಿಮಾಣ
ಮಾಡಲಾಗುತ್ತಿದೆ.
ಉದ್ಘಾಟನೆಯ ಮೊದಲು ಅಥವಾ ಅದನ್ನು ಸಾರ್ವಜನಿಕ ದರ್ಶನಕ್ಕಿಡಲಾಗುತ್ತದೆ. ಮಸೀದಿಯಲ್ಲಿ ಆರಾದನೆಗಳಿಲ್ಲದ ಮಹಿಳೆಯರು,
ಮುಸ್ಲಿಮೇತರರೂ ದರ್ಶಿಸುತ್ತಾರೆ. ಇದರ ಕುರಿತು ಇಸ್ಲಾಮಿನ ನಿಲುವೇನೆಂದು ಹಲವರು ಕೇಳಿದ್ದರಿಂದ ಇದರ ಬಗ್ಗೆ ಬರೆಯುತ್ತಿದ್ದೇನೆ.
ಆರಾದನಾಲಯಗಳು ಪವಿತ್ರವಾಗಿದೆ.ದೇವಸ್ಥಾನ ಹಿಂದೂ ಬಾಂಧವರಿಗೆ ಪವಿತ್ರವಾದಂತೆ ಚರ್ಚ್ ಗಳು ಕ್ರೈಸ್ತ ಸಹೋದರರಿಗೂ ಮಸೀದಿಗಳು ಮುಸ್ಲಿಮರಿಗೂ ಪವಿತ್ರವಾಗಿದೆ.
ಆರಾದನಾ ಕೇಂದ್ರಗಳು ಯಾವಾಗಲೂ ಮಲಿನವಾಗಬಾರದು. ಆರಾದಾನಲಯಗಳ ಪಾವಿತ್ರತೆಯನ್ನು ಎಲ್ಲರೂ ಕಾಪಾಡಬೇಕಾಗಿದೆ. ಅವರವರ ಧರ್ಮದ ನಿಲುವನುಸರಿಸಿ ಸ್ವಛ್ಛತೆಯಿಂದ ಅದನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ.
ಮಸೀದಿಯ ಆರಾಧನೆಗಳು ಮುಸ್ಲಿಮ್ ಪುರುಷರಿಗೆ ಮಾತ್ರ ಸೀಮಿತವಾಗಿದೆ.
ತಮ್ಮೊಂದಿಗೆ ಮಸೀದಿಯಲ್ಲಿ ನಮಾಝ್ ಮಾಡಲು ಅನುಮತಿ ನೀಡುವಿರಾ ಎಂದು ಪೈಗಂಬರ್ ﷺِರವರಲ್ಲಿ ಅನುಮತಿ ಕೇಳಿದ ಉಮ್ಮು ಉಮೈದುಸ್ಸಾಇದೀ ಎಂಬ ಮಹಿಳೆಯೊಂದಿಗೆ ನೀನು ಮನೆಯೊಳಗಿನ ಕೋಣೆಯಲ್ಲಿ ನಿರ್ವಹಿಸುವ ನಮಾಝಾಗಿದೆ ಉತ್ತಮ ನಮಾಝ್ ಎಂದು ಹೇಳಿ ಅವರನ್ನು ಮನೆಗೆ ಕಳುಹಿಸಿದ ಹದೀಸ್ ಗ್ರಂಥಗಳಲ್ಲಿ ದಾಖಲಾಗಿದೆ.
(ಹದೀಸ್ ವರದಿ ಇಮಾಮ್ ಅಹ್ಮದ್
ಭಾಗ 6 ಪುಟ 371)
ಆರಾಧನೆಯಲ್ಲದ ಇನ್ನಿತರ ಅಗತ್ಯಕ್ಕಾಗಿ ಮಹಿಳೆ ಮಸೀದಿಯೊಳಗೆ ಹೋಗುವುದಕ್ಕೆ ವಿರೋಧವಿಲ್ಲ. ಉದಾಹರಣೆಗೆ ಖಾಝಿಯ ಬಳಿ ಹೋಗುವ ಅನಿವಾರ್ಯತೆ ಬಂದರೆ ಖಾಝಿ ಮಸೀದಿಯಲ್ಲಿದ್ದರೆ ಫತ್ವ ಕೇಳಲು ಮಸೀದಿಗೆ ಹೋಗಬಹುದಾಗಿದೆ.
*ಮುಸ್ಲಿಮೇತರರು ಮಸೀದಿಗೆ ಪ್ರವೇಶಿಸಬಹುದೇ?*
ಅಮುಸ್ಲಿಮರು ಮಸೀದಿ ಪ್ರವೇಶಿಸುವ ಬಗ್ಗೆ ಇಮಾಮರುಗಳು ಅವರ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
ಇಮಾಮ್ ಅಬ್ದುಲ್ ಹಮೀದುಶ್ಶರ್ವಾನೀ (ರ) ಬರೆಯುತ್ತಾರೆ,
ಮುಸ್ಲಿಮ್ ಆದ ವ್ಯಕ್ತಿ ಅನುಮತಿ ನೀಡಿದ್ದಲ್ಲಿ ಮುಸ್ಲಿಮೇತರರು ಮಸೀದಿಗೆ ಪ್ರವೇಶಿಸಬಹುದಾಗಿದೆ.
ಅವರಿಗೆ ಸ್ನಾನ ಕಡ್ಡಾಯವಾಗಿದ್ದರೂ ಸರಿ.
ಹೈಲ್ ಆದ ಮಹಿಳೆಗೂ ಇದೇ ನಿಯಮ ಆಗಿರುತ್ತದೆ.
(ಹಾಶಿಯತು ತುಹ್ಫಾ 2/168)
ಮಸೀದಿಯ ಕೆಲಸಕ್ಕೆ ಮುಸ್ಲಿಮೇತರರಿಗೂ ಪ್ರವೇಶನ ನೀಡಬಹುದಾಗಿದೆ ಎಂದು ಇಮಾಮ್ ಜಮಾಲುದ್ದೀನ್ ಮುಹಮ್ಮದ್ ಅಲ್ ಅಹ್ದಲ್ (ರ) ತನ್ನ ಉಮ್ದತುಲ್ ಮುಫ್ತಿಯಲ್ಲಿ ವಿವರಿಸಿದ್ದಾರೆ.
ಒಂದು ವೇಳೆ ಅಮುಸ್ಲಿಮರ ಪ್ರವೇಶದಿಂದ ಮಸೀದಿ ಕೊಳಕಾಗುವುದಾದರೆ ಅವರಿಗೆ ಅನುಮತಿ ನೀಡುವುದು ಹರಾಮ್ ಆಗಿರುತ್ತದೆ (ಅದು ಮುಸ್ಲಿಮ್ ಮಹಿಳೆಗಾದರೂ)
ಎಂದು
ಇಮಾಮ್ ಮುಹಮ್ಮದುರ್ರಂಲೀ (ರ) ತನ್ನ ನಿಹಾತುಲ್ ಮುಹ್ತಾಜ್'ನ 1/219ರಲ್ಲಿ ವಿವರಿಸಿದ್ದಾರೆ
ಕೊಳಕಾಗದಿದ್ದರೆ ಕರಾಹತ್ ಆಗಿರುತ್ತದೆ.
ಕುರ್'ಆನ್ ಅಥವಾ ಇನ್ನಿತರ ಇಸ್ಲಾಮಿನ ಬಗ್ಗೆ ಕಲಿಯಲು ಬೇಕಾಗಿ ಮಸೀದಿಗೆ ಅನುಮತಿ ನೀಡುವುದು ಸುನ್ನತ್ ಆಗಿದೆ.
(ಹಾಶಿಯತು ತುಹ್ಫ 2/168)
ಒಟ್ಟಿನಲ್ಲಿ ಅಮುಸ್ಲಿಮರು ಮಸೀದಿ ಪ್ರವೇಶಿಸಬೇಕಾದರೆ 3 ನಿಬಂಧನೆಗಳಿವೆ.
1. ಮುಸ್ಲಿಮ್ ಅನುಮತಿ ನೀಡಬೇಕು.
2. ಮಸೀದಿ ಕೊಳಕಾಗಬಾರದು.
3. ಅಗತ್ಯಕ್ಕಾಗಿ ಪ್ರವೇಶಿಸಬೇಕು. ಅಗತ್ಯವಿಲ್ಲದಿದ್ದಲ್ಲಿ ಹರಾಮ್ ಆಗಿರುತ್ತದೆ.
ಈ 3 ನಿಬಂಧನೆ ಪಾಲಿಸದಿದ್ದರೆ ಹರಾಮ್ ಆಗಿರುತ್ತದೆ.
ಋತುಸ್ರಾವವಿರುವ ಮುಸ್ಲಿಮ್ ಮಹಿಳೆ ಮಸೀದಿ ಪ್ರವೇಶಿದಾಗ (ರಕ್ತಗಳಿಂದ) ಕೊಳಕಾದರೆ ಹರಾಮ್ ಆಗಿರುತ್ತದೆ.
ಅಮೂಲ್ಯ ಸಲಹೆಗೆ ವಾಟ್ಸಪ್ ( ಮಾತ್ರ ) ಮಾಡಿ
🤝🤝🤝🤝
+919902623313
ಈ ಬಿರುದುದಾರಿಗಳಿಗೆ ಕಡಿವಾಣ ಹಾಕುವವರಾರು?
*ಈ ಬಿರುದುಗಳಿಗೆ ಕಡಿವಾಣ ಹಾಕುವವರು ಯಾರು?*
------------------------------------------------
✍️ ಮುನೀರ್ ಸಖಾಫಿ ಸಾಲೆತ್ತೂರು
ಹಳೇ ಕಾಲದ ಉಸ್ತಾದರುಗಳು ಹತ್ತಿಪ್ಪತ್ತು ವರ್ಷ ಕಲಿತು ಉನ್ನತ ವಿಧ್ಯಭ್ಯಾಸಕ್ಕಾಗಿ ಅರೆಬಿಕ್ ಕಾಲೇಜಿಗೆ ತೆರಳುತ್ತಿದ್ದರು.
ವೆಲ್ಲೂರು ಬಾಖಿಯ್ಯಾತ್ ಹಾಗೂ ಉತ್ತರ ಭಾರತದ ದಯೂಬಂದ್ ಗೆ ಅವರು ತೆರಳುತ್ತಿದ್ದರು.
ನಂತರ ನಮ್ಮ ನೆರೆಯ ಕೇರಳದಲ್ಲೇ ಪಟ್ಟಿಕ್ಕಾಡ್ ಕಾಲೇಜ್, ನಂದಿ ದಾರುಸ್ಸಲಾಮ್ ಕಾಲೇಜು, ಎ.ಪಿ. ಉಸ್ತಾದರ ಮರ್ಕಝ್, ಜಾಮಿಅ ಸಅದಿಯಾ, ಉಳ್ಳಾಲದ ಮದನೀ ಕಾಲೇಜ್, ಅಹ್ಸನೀ ಕಾಲೇಜ್ ಮುಂತಾದ ಉನ್ನತ ವಿಧ್ಯಾಭ್ಯಾಸದ ಕಾಲೇಜ್'ಗಳು ಅಸ್ತಿತ್ವಕ್ಕೆ ಬಂತು.
ಕನಿಷ್ಟ 8 ವರ್ಷ ದರ್ಸ್ ಕಲಿತು 2 ವರ್ಷ ಅಥವಾ 3 ವರ್ಷ ಕಾಲೇಜುಗಳಲ್ಲಿ ಕಲಿತವರೇ ಉಸ್ತಾದರುಗಳಲ್ಲಿ ಅಧಿಕ ಮಂದಿ ನಂತರ 2 ವರ್ಷದ ಮುತವ್ವಲ್ ಕೋರ್ಸನ್ನು 1 ವರ್ಷದ ಮುಖ್ತಸರ್ ಕೋರ್ಸ್ ಆಗಿ ಪರಿವರ್ತನೆ ಮಾಡಿದಾಗಲೂ ಉನ್ನತ ವಿಧ್ಯೆ ಲಭಿಸುತ್ತಿತ್ತು.
ಈಗೀಗ ಏನಾಗಿದೆ ಅಂದರೆ ಎಲ್ಲೂ ದರ್ಸ್ ಕಲಿಯದ ಕೆಲವು ಜಾಹಿಲ್'ಗಳನ್ನು ಸೇರಿಸಿ ಆನ್ಲೈನ್ ಕೋರ್ಸ್ ಎಂಬ ಹೆಸರಲ್ಲಿ 3 ತಿಂಗಳ ಕೋರ್ಸ್'ಗೆ ಸೇರಿಸಿ ಅವರಿಗೆ ವಾಟ್ಸಪ್'ನ ನಾಲ್ಕು ಕ್ಲಿಪ್'ಗಳನ್ನು ಕಳುಹಿಸಿ ಅವರಿಗೆ ಬಿರುದು ನೀಡಲಾಗುತ್ತಿದೆ.
ಮುಂದೆ ಅವರು ಬಂದು ನಾವು ಕೂಡಾ ಸನದ್ ಪಡೆದ ಆಲಿಮ್'ಗಳು ಎಂಬ ರೂಪದಲ್ಲಿ ವರ್ತಿಸುತ್ತಿರುವುದನ್ನು ಕಾಣುವಾಗ ಹಳೇ ಕಾಲದಲ್ಲಿ ಕಷ್ಟ ಪಟ್ಟು ಕಲಿತ ಉಸ್ತಾದರುಗಳ ಬಗ್ಗೆ ಸಾಮಾನ್ಯ ಜನರೆಡೆಯಲ್ಲಿ ಇವರು ಕೂಡಾ ವಾಟ್ಸಪ್ ಆಲಿಂಗಳೇ ಆಗಿರಬಹುದು ಎಂದು ಭಾವಿಸಿದರೆ ಅದಕ್ಕೆ ಹೊಣೆ ಯಾರು?
ಅನ್ಲೈನಲ್ಲಿ ಇಲ್ಮ್ ಕಲಿಯುವುದಕ್ಕೆ ನಾನಿಲ್ಲಿ ವಿರೋಧ ಮಾಡುತ್ತಿಲ್ಲ.
ಸೌಕರ್ಯವಾದಂತೆ ಇಲ್ಮ್ ಕಲಿಯಬಹುದು.
ಆದರೆ 3 ತಿಂಗಳ ಕೋರ್ಸ್ ಕಲಿತವರಿಗೆ ಈ ಬಿರುದು ಬೇಕೆ?
ನನಗೂ ಕೂಡಾ ಶಿಷ್ಯ ವೃಂದವಿದೆ ಎಂದು ಜನರೆಡೆಯಲ್ಲಿ ಹೆಸರಿಗಾಗಿ ಮಾಡುತ್ತಿದ್ದಾರೆಯೇ ಅಲ್ಲಾಹನೇ ಬಲ್ಲ. 🤷♂️🤷♂️
ಮೊನ್ನೆ ಒಂದು ಮೆಸೇಜ್ ನೋಡಿದೆ.
ಒಂದುವರೇ ತಿಂಗಳಲ್ಲಿ ಮುಗಿಯುವ ಕೋರ್ಸ್ ಅಂತೆ. ಕೊನೆಗೆ ಸನದ್ ಇದೆಯಂತೆ.
ನೋಡಿದಾಗ ನಾಚಿಕೆ ಮತ್ತು ಬೇಸರವೂ ಆಯಿತು.
ಇದಕ್ಕೆಲ್ಲಾ ಕಡಿವಾಣ ಹಾಕುವವರು ಯಾರು?
ಇದೀಗ ಗಂಡಸರಿಗಿಂತ ಹೆಣ್ಮಕ್ಕಳ ಅನ್ಲೈನ್ ಕೋರ್ಸೇ ಅಧಿಕ.
ಅದರ ಬಗ್ಗೆ ಹೇಳದಿರುವುದೇ ಒಳಿತು.
ಮದುವೆ ಪತ್ರಿಕೆಯಲ್ಲಿ ಮಧುಮಗಳ ಹೆಸರಿನೊಂದಿಗೆ ನಾಲ್ಕೈದು ಬಿರುದುಗಳು.
3 ತಿಂಗಳಲ್ಲಿ ಕಲಿತು ಹೆಣ್ಣು ಆಲಿಮತ್ ಅಂತೆ.
ತನ್ನನ್ನು ತಾನೇ ನಾನು ಆಲಿಮತ್ ಎಂದು ಕೊಚ್ವಿಕೊಳ್ಳುವ ಮಟ್ಟಕ್ಕೆ ಈ ಆಲಿಮತ್'ಗಳು ಇಳಿದಿದ್ದಾರೆ.
ಈಗೀಗ ಆ ಆಲಿಮತ್'ಗಳು ಯಾವ ಆಲಿಮ್ ಮಸ್'ಅಲ ಹೇಳಿದರೂ ಕೇಳಲು ತಯಾರಾಗುತ್ತಿಲ್ಲ. ಕಾರಣ ಅವರೂ ಕೂಡಾ ಆಲಿಮತ್'ಗಳು. 😃
ಇಲ್ಮ್ ಎಲ್ಲರೂ ಕಲಿಯಬೇಕು. ಅದಕ್ಕಿರುವ ಎಲ್ಲಾ ಒಳ್ಳೆಯ ಮಾರ್ಗವನ್ನು ಅನುಸರಿಸಬೇಕು.
ಆದರೆ ಪೂರ್ವೀಕ ಉಸ್ತಾದರಗಳು ಕಷ್ಟಪಟ್ಟು ಕಲಿತು ಬಿರುದು ಪಡೆದದ್ದನ್ನು ಹಿಯಾಳಿಸುವ ಹಂತಕ್ಕೆ ಇಂದು ಬಿರುದು ನೀಡುವವರು ಇಳಿದಿದ್ದಾರೆ ಎನ್ನುವಾಗ ತುಂಬಾ ಬೇಸರವಾಗುತ್ತಿದೆ.
😰😰😰
ಆಲಿಂಗಳಿಗೆ ಸಮೂಹದಲ್ಲಿ ಉನ್ನತ ಸ್ಥಾನಗಳಿವೆ.
ಪ್ರಾಯ ಎಷ್ಟೇ ಕಡಿಮೆಯಾದರೂ ಆಲಿಂಗಳು ಹಿರಿಯರು.
ಜಾಹಿಲ್'ಗಳು ಪ್ರಾಯದಲ್ಲಿ ಎಷ್ಟೇ ದೊಡ್ಡವರದರೂ ಕಿರಿಯರು ಎಂದು ಇಮಾಮ್ ಶಾಫಿಈ (ರ) ಹೇಳಿದ್ದೂ ಬಹಳ ಸತ್ಯದ ಮಾತು.
ವಾಟ್ಸಪಲ್ಲಿ ನಾಲ್ಕು ಕ್ಲಿಪ್ ಬಿಟ್ಟು ಬಿರುದು ನೀಡಲ್ಪಟ್ಟವರು ಇಂದು ಉಲಮಾಗಳಂತೆ ಪೋಸ್ ಕೊಡುತ್ತಿದ್ದಾರೆ.
ಹೊಟ್ಟೆಪಾಡಿಗಾಗಿ ಬೇರೆ ಏನೆಲ್ಲಾ ದುಡಿಮೆಗಳಿವೆ.
ಹಲಾಲಾದ ಇನ್ನಿತರ ಕಸುಬು ನಡೆಸಬಹುದು.
ತನ್ನ ಸಂಸ್ಥೆಯಲ್ಲಿ ಮುತಲ್ಲಿಮರು ಕಲಿಯುತ್ತಿದ್ದಾರೆ ಎಂದು ಸುಳ್ಳು ಹೇಳಿ ಹಣ ಕಲೆಕ್ಷನ್ ಮಾಡಿ ಅದನ್ನು ಗುಳುಮ್ ಮಾಡಿ ಸಂಸ್ಥೆಯ ವಾರ್ಷಿಕದಂದು ಸನದ್ ನೀಡಲು ರೆಡಿಮೆಡ್ ಬಿರುದುದಾರಿಗಳನ್ನು ನಿರ್ಮಿಸಲು ಆನ್ಲೈನ್ ಕೋರ್ಸ್ ನಡೆಸಿದರೆ
ಅಲ್ಲಾಹನ ಬಳಿ ಅದರ ಲೆಕ್ಕ ಕೊಡಬೇಡವೇ?
ಜಾಹಿಲ್'ಗಳು ಆಲಿಮರಂತೆ ವರ್ತಿಸುವುದು ಮಹಾ ಪಾಪಗಳಲ್ಲೊಂದು ಎಂದು ಹೇಳಿದ ಇಮಾಮರುಗಳಿಲ್ಲವೇ?
ಅಂತ್ಯ ದಿನದಲ್ಲಿ ಹೆಸರಿಗಾಗಿ ಇಲ್ಮ್ ಕಲಿಯುವ ಒಂದು ವಿಭಾಗ ಬರಲಿದ್ದಾರೆ.
ಅವರು ಇಲ್ಮ್ ಇಲ್ಲದೆ ಜನರಿಗೆ ಫತ್ವ ಕೊಡುವ ಮೂಲಕ ಅವರು ಮತ್ತು ಫತ್ವ ಕೇಳಿದವರೂ ದಾರಿ ತಪ್ಪಿದವರು ಎಂದು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದು ಎಷ್ಟು ಸರಿಯಾದ ಮಾತಾಗಿದೆ.
ಇದಕ್ಕೆ ಉಲಮಾಗಳು ಕಡಿವಾಣ ಹಾಕಲೇಬೇಕಾಗಿದೆ.
✍️. ಮುನೀರ್ ಸಖಾಫಿ ಸಾಲೆತ್ತೂರು
ಮಕ್ಕಳನ್ನು ಬೆಳೆಸುವುದು ಈ ರೀತಿಯಾಗಿರಲಿ
*ಮಕ್ಕಳನ್ನು ಬೆಳೆಸುವುದು ಈ ರೀತಿ ಆಗಿರಲಿ*
📝 ಮುನೀರ್ ಸಖಾಫಿ ಸಾಲೆತ್ತೂರು
---------------------------------------------
ಮಕ್ಕಳು ಅಲ್ಲಾಹನು ನಮಗೆ ಕರುಣಿಸಿದ ಅನುಗ್ರಹವಾಗಿದೆ.ಅದನ್ನು ಬೇಕಾದ ರೀತಿಯಲ್ಲಿ ಬೆಳೆಸುವುದು ಎಲ್ಲಾ ತಂದೆ ತಾಯಿಯರ ಕರ್ತವ್ಯವಾಗಿದೆ.
ನಿಮ್ಮ ಮಕ್ಕಳು ನಿಮ್ಮ ಮಕ್ಕಳಾಗಿಯೇ ಉಳಿಯಬೇಕಾದಲ್ಲಿ ಈ ಕೆಳಗಿನ 100 ಉಪದೇಶಗಳನ್ನು ಓದಿ ,ಪ್ರಯೋಗಿಸಿ ನೋಡಿ.
--------------------------------------------
1.ಮಗುವಿಗೆ ಇಹ ಮತ್ತು ಪರ ದಲ್ಲಿ ಪ್ರಯೋಜನವಾಗುವ ಉಪದೇಶಗಳನ್ನು ನೀಡಿ
2.ಅಲ್ಲಾಹನಿಗೆ ಮತ್ತು ಮಾತಾ ಪಿತರಿಗೆ ಕೃತಞ್ಞತೆ ಖಡ್ಡಾಯವೆಂದು ಕಲಿಸಿ ಕೊಡಿ.
3.ಸತ್ಯ ವಿಶ್ವಾಸಿಗಳ ಮಾರ್ಗ ಅವಲಂಬನೆಗೆ ಪ್ರಚೋದನೆ ನೀಡಿ.
4.ನೂತನ ವಾದಿಗಳ ಮಾರ್ಗ ಅನುಸರಿಸದಂತೆ ಜಾಗ್ರತೆ ವಹಿಸಿ.
5.ಬಾಹ್ಯ ಮತ್ತು ಗೌಪ್ಯತೆ ಅಲ್ಲಾಹನ ನಿರೀಕ್ಷಣೆಯಲ್ಲಿ ಎಂಬ ನೆನಪು ಮಾಡಿಕೊಡಿ.
6.ಅತೀ ಪುಟ್ಟ ಒಳಿತಾದರೂ ಕೆಡುಕಾದರೂ ಅದರ ಬಗ್ಗೆ ವಿವರಿಸಿ ಕೊಡಿ.
7.ನಮಾಝ್ ನ ಶರ್ತ್, ಫರ್ಲ್ , ಸುನ್ನತ್ , ಕರಾಹತ್ ಗಳ ಬಗ್ಗೆ ಮನದಟ್ಟು ಮಾಡಿಕೊಡಿ.
8.ಒಳಿತನ್ನು ಬೋಧಿಸುವುದು ಮತ್ತು ಕೇಡುಕನ್ನು ವಿರೋಧಿಸಿ.
9.ಕಷ್ಟ ಸಂದರ್ಭಗಳಲ್ಲಿ ಸಹನೆ ಕಳೆದು ಕೊಳ್ಳದೆ ಸಹನೆಯಿಂದಿರಲು ಉಪದೇಶಿಸಿ.
10.ನಡತೆಯಲ್ಲಿ ಅಹಂಕಾರ ಪ್ರದರ್ಶಿಸದಿರಲಿ ಹೇಳಿ.
11.ನಡೆಯುವಾಗ ಸಮಾದಾನದಿಂದ ನಡೆಯುವಂತೆ ಕಲಿಸಿ ಕೊಡಿ.
12.ಅಗತ್ಯ ಕ್ಕಿಂತ ಹೆಚ್ಚು ಶಬ್ಧದಲ್ಲಿ ಮಾತನಾಡುವುದನ್ನು ವಿರೋಧಿಸಿ.
13.ಎಲ್ಲಾ ಕೆಲಸಗಳಲ್ಲಿ ಪೂರ್ಣತೆ ಆಗುವಂತೆ ನೋಡಿಕೊಳ್ಳಿ.
14.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲಿನ ಪ್ರೀತಿ ಕಲಿಸಿ ಕೊಡಿ.
15.ಆರೋಗ್ಯ ಸಂದರ್ಭದಲ್ಲಿ ಅಲ್ಲಾಹನನ್ನು ಅನುಸರಿಸಿದರೆ ಅನಾರೋಗ್ಯ ವೇಳೆ ಅಲ್ಲಾಹನು ಕಾಪಾಡುವನು ಎಂದು ಹೇಳಿಕೊಡಿ.
16.ಯಾವಾಗಲೂ ಚಿಂತಿತರಾಗದೇ ಸಂತೋಷದಿಂದಿರಲು ಕಲಿಸಿ ಕೊಡಿ.
17.ಒಂದು ದುಖಃ ಉಂಟಾದಲ್ಲಿ ಅದರ ಬೆನ್ನಿಗೇ ಸುಖಃವು ಲಬಿಸುವುದೆಂಬ ಪ್ರವಾದಿ ವಚನ ಹೇಳಿ ಕೊಡಿ.
18.ಎಲ್ಲರಿಗೂ ಒಂದೊಂದು ರೀತಿಯಲ್ಲಿ ಜವಬ್ದಾರಿಯಿದೆ ಎಂಬುವುದನ್ನು ಮನವರಿಕೆ ಮಾಡಿ ಕೊಡಿ.
19.ಎಲ್ಲಾ ಮಕ್ಕಳನ್ನು ಒಂದೇ ರೀತಿಯಲ್ಲಿ ಪ್ರೀತಿಸಿ.
20.ಮಕ್ಕಳಿಗೆ ಎಳೆಯ ಪ್ರಾಯದಲ್ಲೇ "ಲಾಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್" ಎಂಬುವುದನ್ನು ಕಲಿಸಿ ಕೊಡಿ.
21.ಇಸ್ಲಾಮ್ ನಿಂದ ಹೊರ ಹೋಗುವುದರ ಕುರಿತು ಮತ್ತು ಅದರಿಂದುಂಟಾಗುವ ವಿಪತ್ತುಗಳ ಬಗ್ಗೆ ವಿವರಿಸಿ ಕೊಡಿ.
22.ಮದ್ಯಪಾನ ಮತ್ತು ಲಹರಿ ಇಸ್ಪೀಟ್ ಗಳ ಬಗ್ಗೆ ಎಚ್ಚರವಹಿಸಿ.
23.ಅದರ ಭವಿಷ್ಯತ್ ಗಳ ಬಗ್ಗೆ ಖುರ್ ಆನ್ , ಹದೀಸ್ ವಚನ ವಿವರಿಸಿ.
24.ನಗ್ನ ಚಿತ್ರ ಗಳ ವಿಕ್ಷಣೆಯ ಬಗ್ಗೆ ಜಾಗ್ರತೆ ವಹಿಸಿ.
25.ಬೀಡಿ ಸಿಗರೇಟ್ ಗಳ ಸೇವನೆಯ ಜಾಗ್ರತೆ ವಹಿಸಿ.
26.ಸತ್ಯ ಮಾತ್ರ ಹೇಳುವುದನ್ನು ಕಲಿಸಿ ಕೊಡಿ.
27.ಅನ್ಯರ ಸೊತ್ತು ತಿನ್ನುವುದನ್ನು ತಡೆಯಿರಿ.
28.ಮಕ್ಕಳಿಗೆ ನಾಶ ಬರುವಂತೆ ಪ್ರಾರ್ಥಿಸದಿರಿ.
29.7 ನೇ ಪ್ರಾಯದಲ್ಲಿ ನಮಾಝ್ ಮತ್ತು ಅದಕ್ಕೆ ಸಂಬಂದಪಟ್ಟ ವಿಷಯಗಳನ್ನು ಕಲಿಸಿ.
30.10 ನೇ ಪ್ರಾಯವಾದಲ್ಲಿ ನಮಾಝ್ ತ್ಯಜಿಸಿದರೆ ಸಣ್ಣ ಪ್ರಮಾಣದಲ್ಲಿ ಶಿಕ್ಷಿ ನೀಡಿ.
31.10 ನೇ ವಯಸ್ಸಿನಲ್ಲಿ ತಾಯಿ,ಸಹೋದರಿ ಮತ್ತಿತರ ಸ್ತ್ರೀಯರೊಂದಿಗೆ ಮಲಗದಂತೆ ಎಚ್ಚರವಹಿಸಿ.
32.ಸಣ್ಣ ವಯಸ್ಸಿನಲ್ಲೇ ಚಿಕ್ಕ ಪುಟ್ಟ ಖುರ್ ಆನ್ ಸೂರತ್ ಗಳನ್ನು ಕಲಿಸಿ ಕೊಡಿ.
33.ಜುಮುಅ , ಜಮಾಅತ್ ನಮಾಝ್ ನ ಮಹತ್ವ ಹೇಳಿ ಕೊಡಿ.
34.ಉಪವಾಸ ಹಿಡಿಯುವಂತೆ ನೋಡಿ ಕೊಳ್ಳಿ.
35.ಹೆಣ್ಣು ಮಕ್ಕಳು ಸಂಪೂರ್ಣ ಶರೀರ ಮುಚ್ಚುವಂತೆ ನೋಡಿ ಕೊಳ್ಳಿ.
36.ಗಂಡು ಮಕ್ಕಳಿಗೆ ಅವರ ವಸ್ತ್ರವೂ, ಹೆಣ್ಣು ಮಕ್ಕಳಿಗೆ ಹೆಣ್ಣು ಮಕ್ಕಳ ವಸ್ತ್ರ ದರಿಸುವಂತೆ ನೋಡಿ ಕೊಳ್ಳಿ.
37. 7 ನೇ ವಯಸ್ಸಾದ ಹೆಣ್ಣು ಮಗು ತಲೆ ಮುಚ್ಚುವಂತೆ ಆಜ್ಞ್ಞಾಪಿಸಿ.
38.ತಿನ್ನುವಾಗ , ಕುಡಿಯುವಾಗ, ಕೊಡುವಾಗ , ಪಡೆಯುವಾಗ ಬಲಕೈ ಉಪಯೊಗಿಸುವಂತೆಯೂ ಬಿಸ್ಮಿ , ಹಂದ್ ಹೇಳುವಂತೆಯೂ ಹೇಳಿ ಕೊಡಿ.
39.ಶರೀರ , ವಸ್ತ್ರ , ಸ್ಥಳ ಶುದ್ಧೀಕರಿಸುವಂತೆ ನೋಡಿ ಕೊಳ್ಳಿ.
40.ಎಲ್ಲಾ ಶುಕ್ರವಾರ ಉಗುರು ಕತ್ತರಿಸುವಂತೆ ಹೇಳಿ ಕೊಡಿ.
41.ಆಹಾರದ ಮುಂಚೆ ಹಾಗೂ ನಂತರ ಕೈ ತೊಳೆಯುವಂತೆ ನೋಡಿ ಕೊಳ್ಳಿ.
42.ತಪ್ಪು ಕಂಡು ಬಂದಲ್ಲಿ ಅಶ್ಲೀಲ ಮಾತುಗಳಿಂದ ಬಯ್ಯದೆ ಬಹಳ ಪ್ರೀತಿಯ ಮೂಲಕ ಹೇಳಿ ಸರಿ ಪಡಿಸಿ.
43.ಅಝಾನ್ ನ ವೇಳೆ ಮಾತಾಡುವುದನ್ನು ವಿರೊಧಿಸಿ.
44.ಅಝಾನ್ ಗೆ ಉತ್ತರಿಸುವುದನ್ನು ಮತ್ತು ನಂತರವಿರುವ ಪ್ರಾರ್ಥನೆಯನ್ನು ಕಲಿಸಿ ಕೊಡಿ.
45.ಸಾಧ್ಯವಾದರೆ ಎಲ್ಲಾ ಮಕ್ಕಳನ್ನೂ ಬೇರೆ ಬೇರೆ ಹಾಸಿಗೆಯಲ್ಲಿ ಮಲಗಿಸಿ.
46.ಅದು ಅಸಾದ್ಯವಾದಲ್ಲಿ ಗಂಡು ಮಕ್ಕಳನ್ನು ಒಂದು ರೂಮಿನಲ್ಲೂ ಹೆಣ್ಣು ಮಕ್ಕಳನ್ನು ಇನ್ನೊಂದು ರೂಮಿನಲ್ಲೂ ಮಲಗಿಸಿ.
47.ದಾರಿ ಮಧ್ಯೆ ಕಸ ಕಡ್ಡಿಗಳನ್ನು ಎಸೆಯದಂತೆ ಎಚ್ಚರವಹಿಸಿ.
48.ದಾರಿ , ಮಾರ್ಗ ಗಳಲ್ಲಿರುವ ಅಡೆ ತಡೆಗಳನ್ನು ನಿವಾರಿಸಲು ಹೇಳಿ ಕೊಡಿ.
49.ಅಂಗಡಿಗಳ ಬಳಿ, ಬಸ್ ಸ್ಟ್ಯಾಂಡ್ ಗಳಲ್ಲಿ ಅನಗತ್ಯ ನಿಲ್ಲದಂತೆ ನೋಡಿಕೊಳ್ಳಿ.
50.ಇಡೀ ಸಮಯ ಆಟ ಆಡದಂತೆ ನೋಡಿಕೊಳ್ಳಿ.
51.ಸಮಯವು ಅಮೂಲ್ಯವಾಗಿದೆ ಎಂದೂ ಅದನ್ನು ಅನಗತ್ಯ ಖರ್ಚು ಮಾಡದಂತೆ ಉಪದೇಶಿಸಿ.
52.ಸುನ್ನೀ ಮುಸಲ್ಮಾನರನ್ನು ಕಂಡರೆ ಸಲಾಂ ಹೇಳಬೇಕೆಂದು ಹೇಳಿಕೊಡಿ.
53.ನೆರೆಕರೆಯವರಿಗೆ, ಗೆಳೆಯರಿಗೆ , ಕುಟುಂಬಕ್ಕೆ ಉಪಕಾರ ಮಾಡುವ ಮನುಷ್ಯನಾಗಬೇಕೆಂದು ಹೇಳಿ ಕೊಡಿ.
54.ಅತಿಥಿ ಗಳನ್ನು ಗೌರವಿಸುವುದು, ಅವರನ್ನು ಸತ್ಕರಿಸುವುದರ ಬಗ್ಗೆ ಹೇಳಿಕೊಡಿ.
55.ಒಳ್ಳೆಯ ಕಾರ್ಯಗಳಲ್ಲಿ ಮಕ್ಕಳಿಗೆ ಧೈರ್ಯ ತುಂಬಿ ಕೊಡಿ.
56.ಖುರ್ ಆನ್ , ಹದೀಸ್ , ಇಮಾಮರುಗಳ ಗ್ರಂಥಗಳಲ್ಲಿ ಇರುವ ಸಜ್ಜನರ ಚರಿತ್ರೆ ಹೇಳಿ ಕೊಡಿ.
57.ಮಕ್ಕಳಿಗೆ ಹಣ ಹಾಗೂ ಇನ್ನಿತರ ಸೊತ್ತುಗಳು ನೀಡುವಾಗ ಎಲ್ಲರಿಗೂ ಒಂದೇ ರೀತಿಯಲ್ಲಿ ನೀಡಿ.
58.ಇಸ್ಲಾಮಿಕ್ ಪುಸ್ತಕ ಓದುವುದನ್ನು ರೂಡಿ ಮಾಡಿಸಿ.
59.ನೂತನವಾದಿಗಳ ಆಶಯಗಳನ್ನೂ ಅವರ ಗೆಳೆತನದಿಂದಲೂ ದೂರ ಸರಿಯುವಂತೆ ನೋಡಿಕೊಳ್ಳಿ.
60.ಹಣದೊಂದಿಗೆ ಪ್ರೀತಿ ಬರದಂತೆ ನೋಡಿಕೊಳ್ಳಿ.
61.ಮಕ್ಕಳು ವಿವಾಹ ಪ್ರಾಯ ತಲುಪಿದ್ದಲ್ಲಿ ಒಳ್ಳೆಯ ನೆಂಟಸ್ಥಿಕೆ ನೋಡಿ ವಿವಾಹ ಮಾಡಿ ಕೊಡಿ.
62.ಅನ್ಯ ಸ್ತ್ರೀ ಪುರುಷರು ಮಾತ್ರ ಇರುವ ಸಂದರ್ಭವನ್ನು ಇಲ್ಲವಾಗಿಸಿ.
63.ಭ್ರೂಣ ಹತ್ಯೆ, ಗರ್ಭ ಶಸ್ತ್ರ ಚಿಕಿತ್ಸೆ ಮಾಡುವುದನ್ನು ವಿರೋಧಿಸಿ.
64.ಮಣಿ ಗಂಟಿನ ಕೆಳಗೆ ವಸ್ತ್ರ ಇಳಿಯದಂತೆ ಗಂಡು ಮಕ್ಕಳನ್ನು ನೋಡಿಕೊಳ್ಳಿ.
65. ಸಂಪ್ರದಾಯವನ್ನು ತ್ಯಜಿಸದಂತೆ ನೋಡಿಕೊಳ್ಳಿ.
66.ರಾತ್ರಿ ಬೇಗ ಮಲಗುವಂತೆ ಹಾಗೂ ಬೆಳಿಗ್ಗೆ ಬೇಗನೆ ಎದ್ದು ಸುಬಹ್ ನಮಾಝ್ ಮಾಡುವಂತೆ ನೋಡಿಕೊಳ್ಳಿ.
67.ರಾತ್ರಿ ಮಲಗುವಾಗ ಖುರ್ ಆನಿನ ಕೆಲವು ಭಾಗಗಳು ಮತ್ತು ದ್ಸಿಕ್ರ್ , ತಸ್ಬೀಹ್, ಸ್ವಲಾತ್ ಹೇಳಿ ಮಲಗುವಂತೆ ಉಪದೇಶಿಸಿ.
68.ಹಿರಿಯರ ಮುಂದೆ ಕುಳಿತು ಕೊಳ್ಳಬಾರದೆಂದು ಅವರನ್ನು ಗೌರವಿಸುವಂತೆ ಕಲಿಸಿ ಕೊಡಿ.
69.ಹಿರಿಯ ಮಗ ತಂದೆಯ ಸ್ಥಾನದಲ್ಲಿ ಎಂದು ಹೇಳಿ ಕೊಡಿ.
70.ಬಿಳಿ ವಸ್ತ್ರದೊಂದಿಗೆ ಹೆಚ್ಚು ಪ್ರೀತಿ ಉಂಟು ಮಾಡಿ ಕೊಡಿ.
71.ಪೆರ್ನಾಳ್ ಗಳ ದಿವಸ ಗೆಳೆಯರೊಡನೆ ಸೇರಿ ಅಲ್ಲಾಹನು ಇಷ್ಟಪಡದಂತಹ ಸ್ಥಳಗಳಿಗೆ ಹೋಗುವುದರ ಬದಲಾಗಿ ಕುಟುಂಬಸ್ಥರ ಮನೆಗೆ ಹೋಗುವಂತೆ ನೋಡಿಕೊಳ್ಳಿ.
72.ಪ್ರವಾದಿ ಕುಟುಂಬವಾದ ಅಹ್ಲ್ ಬೈತ್ ನ ಬಗ್ಗೆ ವಿಶೇಷವಾಗಿ ಕಲಿಸಿಕೊಡಿ.
73.ತಲೆಕೂದಲು, ಗಡ್ಡ , ಮೀಸೆ ಸರಿಯಾಗಿ ಇಸ್ಲಾಮಿನ ಚೌಕಟ್ಟಿನೊಳಗಿರುವಂತೆ ನೋಡಿಕೊಳ್ಳಿ.
74.ದುಡುಕು ಮಾಡಬಾರದೆಂದು ಹೇಳುತ್ತಿರಿ.
75.ಯಾರೊಂದಿಗೂ ತರ್ಕ, ವಾದ ಮಾಡಬಾರದಾಗಿ ಹೇಳುತ್ತಿರಿ.
76.ತಂದೆ ತಾಯಿಯನ್ನು ಕಾಣುವಾಗ ಎದ್ದು ನಿಲ್ಲಲು ಕಲಿಸಿ.
77.ತಂದೆ ತಾಯಿ ಅನುಮತಿ ನೀಡದಿದ್ದಲ್ಲಿ ಯಾತ್ರೆ ಹೋಗದಂತೆ ಉಪದೇಶಿಸಿ.
78.ಅವರಲ್ಲಿ ಸುಳ್ಳು ಹೇಳದಂತೆ ಉಪದೇಶಿಸಿ.
79.ತಂದೆ ತಾಯಿಗಿಂತ ಪತ್ನಿ ಮಕ್ಕಳಿಗೆ ಬೆಲೆಕೊಡದಂತೆ ಉಪದೇಶಿಸಿ.
80.ತಂದೆ ತಾಯಿ ಕುಳಿತ ಸ್ಥಳಕ್ಕಿಂತ ಎತ್ತರದ ಸ್ಥಳದಲ್ಲಿ ಕುಳಿತುಕೊಳ್ಳದಂತೆ ನೋಡಿಕೊಳ್ಳಿ.
81.ವಿದ್ಯೆ ಕಲಿಸುವ ಉಸ್ತಾದ್ / ಗುರುಗಳ ಕೊರತೆ ಮಕ್ಕಳ ಎದುರಲ್ಲಿ ಹೇಳದಂತೆ ಎಚ್ಚರವಹಿ.
82.ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡರೆ ಬಯ್ಯದೆ , ಹೊಡೆಯದೆ ಇನ್ನೊಮ್ಮೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂಬ ಬುದ್ಧಿವಾದ ಹೇಳಿ.
83.ಪತ್ನಿ ಮಕ್ಕಳಿಗೆ ಧರಿಸಲು ವಸ್ತ್ರ ಕೊಳ್ಳುವಾಗ ತಂದೆ ತಾಯಿಯನ್ನು ಅವಗಣಿಸದಂತೆ ಹೇಳಿ.
84.ತಂದೆ ತಾಯಿಯರ ಶಾಪ ಲಭಿಸಿದ್ದಲ್ಲಿ ಉಂಟಾಗುವ ಭವಿಷ್ಯತನ್ನು ವಿವರಿಸಿ ಕೊಡಿ.
85.ಪತ್ನಿ ಮಕ್ಕಳಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುವಂತೆ ಹೇಳುತ್ತಿರಿ.
86.ನಮಾಝ್ ಯಾ ಇನ್ನಿತರ ವೇಳೆಗಳಲ್ಲಿ ತಂದೆ ತಾಯಿಯರಿಗೆ ಪ್ರಾರ್ಥಿಸಲು ಮರೆಯದಂತೆ ಹೇಳುತ್ತಿರಿ.
87.ಜೀವಿಸಿದ್ದರೂ ಮರಣ ಹೊಂದಿದರೂ ತಂದೆ ತಾಯಿಯನ್ನು ಸಂದರ್ಶಿಸುವಂತೆ ಹೇಳುತ್ತಿರಿ.
88.ತಂದೆ ತಾಯಿ ರೋಗಿಯಾದಲ್ಲಿ ಅವರಿಗೆ ಪ್ರತ್ಯೇಕ ಪರಿಗಣನೆ ಕೊಡಬೇಕಾಗಿ ಹೇಳುತ್ತಿರಿ.
89.ಅಲ್ಲಾಹನ ಪರೀಕ್ಷೆಗೆ ವಿದೇಯನಾದ ಒಬ್ಬ ವ್ಯಕ್ತಿಯನ್ನು ಕಂಡರೆ "ಅಲ್ ಹಂದುಲಿಲ್ಲಾಹ್ " ಎಂದು ಹೇಳಲು ಕಲಿಸಿ ಕೊಡಿ.
90.ಆಪತ್ತು ಬಂದಲ್ಲಿ" ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್" ಎಂದು ಹೇಳಲು ಕಲಿಸಿ.
91."ಮಕ್ಕಳಾದ ನೀವು ಮಾತ್ರ ನಮ್ಮ ಆಸರೆ" ಎಂದು ಮಕ್ಕಳಲ್ಲೇ ಹೇಳುತ್ತಿರಿ.
92.ಮಕ್ಕಳ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಿ.
93.ಮಗಳ ಮಕ್ಕಳಿಗೆ ವಿಶೇಷ ಗೌರವ ಕೊಟ್ಟು ಮಗನ ಮಕ್ಕಳಿಗೆ ಬೇಲೆ ನೀಡದಂತವರಾಗಬೇಡಿ.
94.ಮಕ್ಕಳು ವಿದೇಶದಲ್ಲಾದರೆ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಹೋಗುವಾಗ ಸೊಸೆಯರನ್ನು ಜತೆಗೆ ಕರೆದೊಕೊಂಡು ಹೋಗಿ.
95.ಸೊಸೆಯರ ನಡುವೆ ಯಾವ ಕಾರಣಕ್ಕೂ ಹೆಚ್ಚು ಕಡಿಮೆ ಮಾಡುವವರಾಗಬೇಡಿ.
96.ಮಕ್ಕಳ ಒಳಿತಿಗಾಗಿ ಸದಾ ಸಮಯ ಪ್ರಾರ್ಥಿಸುತ್ತಿರಿ.
97.ಸೊಸೆಯ ಮನೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದಲ್ಲಿ ಆಹ್ವಾನವಿದ್ದರೆ ಹೋಗಿ ಸಂತೋಷಪಡಿಸಿ.
98.ನಿನ್ನ ಸ್ವಂತ ತಂದೆ ತಾಯಿಯಂತೆ ನಾವು ಕೂಡಾ ನಿನ್ನ ತಂದೆ ತಾಯಿಯವರೇ ಎಂದು ಸೊಸೆಯಲ್ಲಿ ನಿಮ್ಮ ಸ್ನೇಹ ಪ್ರಕಟಿಸುತ್ತಿರಿ.
99.ಸ್ವಂತ ಹೆಣ್ಣು ಮಕ್ಕಳು ನಿಮ್ಮಲ್ಲಿ ಸೊಸೆಯರ ಬಗ್ಗೆ ಚಾಡಿ ಹೇಳಿದ್ದಲ್ಲಿ ಅದನ್ನು ಕೇಳಿ ಸೊಸೆಯರೊಂದಿಗೆ ವಾಗ್ವಾದಕ್ಕಿಳಿಯುವವರಾಗಬೇಡಿ.
100.ಇಂತಹ ಉಪದೇಶ ನೀಡದೆ ನಿಮ್ಮ ಮಕ್ಕಳು ದುನ್ಯಾ ಮತ್ತು ಪರಲೋಕದಲ್ಲಿ ನಿಮಗೆ ಉಪಕರಿಸುವರು ಎಂದು ಭಾವಿಸುವವರಾಗಬೇಡಿ.
🌷🌷🌷🌷🌷🌷🌷🌷🌷🌷🌷🌷
Wednesday, February 1, 2023
40 ಗಂಟೆಗಳ ವಾದ-ಪ್ರತಿವಾದ
*40 ಗಂಟೆಗಳ ವಾದ-ಪ್ರತಿವಾದಕ್ಕೆ ವೇದಿಕೆಯಾದ KT ಮಾನು ಮುಸ್ಲಿಯಾರ್ (ನ:ಮ)ರವರ ಪಂಥಾಹ್ವಾನ!*
🔹🔹🔹🔹🔹🔹
ಮೊನ್ನೆ ಮರಣ ಹೊಂದಿದ ವೈಲತ್ತರ ಮುಹಮ್ಮದ್ ಕುಂಞ್ಞಿ ಮೌಲವಿ ಉಸ್ತಾದರ ಅನುಸ್ಮರಣೆ ಪ್ರಯುಕ್ತ ಸುಲ್ತಾನುಲ್ ಉಲಮಾ AP ಉಸ್ತಾದ್ ಬರೆದ ಲೇಖನ.
✍️ ಕನ್ನಡಕ್ಕೆ:
ಅಬೂಶಝ ಪುತ್ತೂರು
〰️〰️〰️〰️〰️〰️〰️
ಇಸವಿ 1965-68 ಮಂಙ್ಙಾಟ್ಟ್ ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕಾಲ. ಆ ಕಾಲಘಟ್ಟದ ಪ್ರಮುಖ ವಾಗ್ಮಿಯಾಗಿದ್ದರು ವೈಲತ್ತರ ಮುಹಮ್ಮದ್ ಕುಂಞಿ ಮೌಲವಿ. ಅವರು ಆಲಪ್ಪುಝ ಪ್ರದೇಶದವರಾಗಿದ್ದರೂ, ಅವರ ಹೆಚ್ಚಿನ ಪ್ರಭಾಷಣಗಳು ಮಲಬಾರ್‌ನಲ್ಲಾಗಿತ್ತು. ಅವರ ಪ್ರತಿ ಕಾರ್ಯಕ್ರಮಕ್ಕೂ ಸಾವಿರಾರು ಮಂದಿ ಕೇಳುಗರಾಗಿ ಸೇರುತ್ತಿದ್ದರು. ಮಲಬಾರಿನ ಜನರಿಗೆ ಹೆಚ್ಚು ಪರಿಚಿತವಲ್ಲದ ಭಾಷಾ ಶೈಲಿಯನ್ನು ಅವರು ಉಪಯೋಗಿಸುತ್ತಿದ್ದರು. ಉಪನ್ಯಾಸದ ಮಧ್ಯದಲ್ಲಿ ಅನೇಕ ಮಲಯಾಳಂ ಕವಿತೆಗಳನ್ನು ಉಲ್ಲೇಖಿಸಿ ಭಾಷಣ ಮಾಡುವ ಶೈಲಿ ವೈಲತರವರ ಭಾಷಣದ ವೈಶಿಷ್ಟ್ಯವಾಗಿತ್ತು.
ಅವರು ಒಮ್ಮೆ ಪೂನೂರು ಸಮೀಪದ ತಚ್ಚಂಪೋಯಿಲ್‌ಗೆ ಬಂದರು. ವಾಸ ಪಿ.ಸಿ. ಅಹಮದ್ ಹಾಜಿಯವರ ಮನೆಯಲ್ಲಾಗಿತ್ತು. ಕರುವಾಂಪೊಯಿಲ್ ಮೊಹಲ್ಲಾದ ಜನತೆಗೆ ಅವರಿಂದ ಪ್ರಭಾಷಣ ಮಾಡಿಸುವ ಆಗ್ರಹ. ಅಂದು ಅವರ ಭಾಷಣ ಆಯಂಜೇರಿಯಲ್ಲಿ ಆಗಿತ್ತು. ಕಾರ್ಯಕ್ರಮದ ಸಂಘಾಟಕರು ಆಯಂಚೇರಿ ಅಧಿಕಾರಿ ಕಾರ್ಯಾಟ್ಟ್ ಕುಂಞ್ಞಹ್ಮದ್ ಹಾಜಿಯಾಗಿದ್ದರು. ವೈಲತ್ತರ ರೊಂದಿಗೆ ನನಗೆ ಉತ್ತಮ ಸಂಬಂಧವಿತ್ತು. ಅಂದಿನ ದಿನಗಳಲ್ಲಿ, ಒಂದು ತಿಂಗಳ ಕಾಲ ಫ್ರಭಾಷಣ ಪರಂಪರೆ ನಡೆಯುತ್ತಿತ್ತು. ಅಂತಹ ಕೆಲವು ಕಾರ್ಯಕ್ರಮಗಳಲ್ಲಿ ನಾನು ಮತ್ತು ವೈಲತ್ತರ ಭಾಷಣಕಾರರಾಗಿ ಭಾಗವಹಿಸುತ್ತಿದ್ದೆವು.
ನನ್ನ ಬದಲಿಗೆ 'ಎಪಿ' ಆಯಂಜೇರಿಗೆ ಹೋಗುವುದಾದರೆ ನಾನು ಕರುವಂಪೋಯಿಲ್‌ಗೆ ಬರುತ್ತೇನೆ. ಇದು ಸ್ವೀಕಾರಾರ್ಹವೇ ಎಂದು ತನ್ನ ಬಳಿಗೆ ಬಂದ ಆ ಊರಿನ ಜನರೊಂದಿಗೆ ವೈಲತ್ತರ ಕೇಳಿದರು. ವೈಲಿತ್ತರವರ ಬದಲಿಯಾಗಿ ಹೋಗುವುದು ನನಗೆ ಸಂತೋಷದ ವಿಷಯವಾಗಿತ್ತು. ಜತೆಗೆ ಅರಂಭ ಕಾಲದ ನನ್ನ ಪ್ರಭಾಷಣಕ್ಕೆ ಅದೊಂದು ಅಂಗೀಕಾರವಾಗಿ ನಾನು ತಿಳಿದು ಕೊಂಡಿದೆ. ಕರುವಾಂಪೋಯಿಲ್ ಮೊಹಲ್ಲಾದ ಪ್ರತಿನಿಧಿಗಳು ಆಯಂಜೇರಿಗೆ ಹೋಗಿ ಕುಂಞ್ಞಹ್ಮದ್ ಹಾಜಿಯವರ ಬಳಿ ವಿಷಯ ಹೇಳಿದರು. "ವೈಲತ್ತರ ನಿರ್ದೇಶಿಸಿದ ಭಾಷಣಕಾರನಾದರೆ ತೊಂದರೆ ಇಲ್ಲ ಎಪಿಯವರೊಂದಿಗೆ ಅವರು ಹೇಳಲಿ" ಎಂದಾಗಿತ್ತು ಹಾಜಿಯವರ ಉತ್ತರ. ಕಾರ್ಯಟ್ಟ್ ಕುಂಞ್ಞಹ್ಮದ್ ಹಾಜಿಯವರನ್ನು ಅಂದು ಖುದ್ದು ಪರಿಚಯ ಇರಲಿಲ್ಲ.
ಆಯಂಜೇರಿಯಲ್ಲಿನ ಪ್ರಭಾಷಣವು, ನಂತರದ ಕಾಲದಲ್ಕಿ ಹಲವು ಕಾರಣಗಳಿಂದ ನನಗೆ ಪ್ರಾಮುಖ್ಯವಾಯಿತು. ಅದಾದ ನಂತರ ವೈಲತರ ಮತ್ತು ನನ್ನ ನಡುವಿನ ಸಂಬಂಧ ಇನ್ನಷ್ಟು ಗಾಢವಾಯಿತು. ಅವರು ತನ್ನ ಪ್ರಭಾಷಣ ವೇದಿಕೆಗಳಲ್ಲಿ ನನಗಾಗಿ ಪ್ರಾರ್ಥಿಸುವುದು ಮತ್ತು ಇತರರಿಂದ ನನಗಾಗಿ ಪ್ರಾರ್ಥಿಸಲು ಹೇಳುವುದು ಅವರ ವಾಡಿಕೆಯಾಗಿತ್ತು. ನಾವು ಪರಸ್ಪರ ಪತ್ರಗಳನ್ನು ಬರೆಯುತ್ತಿದ್ದೆವು. ಸಂವಹನ ವ್ಯವಸ್ಥೆಗಳು ಸಾಕಷ್ಟು ವಿಸ್ತರಿಸಿದ್ದರೂ, ನಾನು ವೈಲತರ ಜೊತೆ ಸಂವಹನ ನಡೆಸಲು ಪತ್ರಗಳನ್ನು ಬರೆಯುತ್ತೇನೆ. ಆಗಾಗ ಮರ್ಕಝ್‌ನಿಂದ ಅಲಪ್ಪುಝಕ್ಕೆ ಹೋಗುವ ವಿದ್ಯಾರ್ಥಿಗಳ ಕೈಗಳಲ್ಲಿ ಏನಾದರೂ ಬರೆದು ಕೊಡುತ್ತಿದ್ದೆ. ನಾನು ಅಲ್ಲಿಗೆ ಹೋದಾಗ ಅವರನ್ನು ಭೇಟಿ ಮಾಡುತ್ತಿದ್ದೆ. ಕಳೆದ ಡಿಸೆಂಬರ್‌ನಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಮೊದಲ ಪತ್ರ ಬರೆದದ್ದು ಕೂಡ ವೈಲತ್ತರ ಮೌಲವಿಗೆ ಆಗಿತ್ತು. ಕಾರ್ಯಾಟ್ಟ್ ಕುಂಞ್ಞಹಮ್ಮದ್ ಹಾಜಿಯವರೊಂದಿಗೆ ಪ್ರಾರಂಭವಾದ ಸಂಬಂಧವು ಕೂಡ ಅವರ ಮರಣದವರೆಗೂ ಮುಂದುವರೆಯಿತು. ಆರಂಭದಲ್ಲಿ, ಅವರು ಮರ್ಕಝ್‌ನ ಉತ್ತಮ ಸಹಾಯಕರಾಗಿದ್ದರು ಅಲ್ಲದೆ ಮರ್ಕಝ್ ಸಮಿತಿಯ ಸದಸ್ಯರಾಗಿದ್ದರು. ಎಷ್ಟೇ ಸುಸ್ತಾದರೂ ಮರ್ಕಝ್‌ನಲ್ಲಿ ನಡೆಯುವ ಸಮ್ಮೇಳನ, ಸಭೆಗಳಿಗೆ ಅವರು ಹಾಜರಾಗುತ್ತಿದ್ದರು. ಮರಣ ಹೊಂದುವಾಗ ಅವರು ಮರ್ಕಝ್‌ನ ಖಜಾಂಚಿಯಾಗಿದ್ದರು. ಅವರ ಕುಟುಂಬದವರೊಂದಿಗೆ ಉತ್ತಮ ಸಂಬಂಧ ಈಗಲೂ ಮುಂದುವರಿಯುತ್ತಿದೆ.
ಆ ಸಂಬಂಧಕ್ಕೆ ವೈಲಿತರ ಮೌಲವಿ ಕಾರಣಕರ್ತರಾಗಿದ್ದಾರೆ.
ವರ್ಷಗಳ ನಂತರ, ವೈಲತ್ತರ ನನ್ನ ಪ್ರಭಾಷಣಕ್ಕೆ ಬದಲಿಗಾರನಾಗಿ ಪ್ರಭಾಷಣ ಮಾಡಿದ ಸಂದರ್ಭ ಬಂದಿತ್ತು.
1977ರಲ್ಲಿ ಕುಮರಂ ಪುತ್ತೂರು ಅಲಿ ಮುಸ್ಲಿಯಾರ್‌ರವರು ಮನ್ನಾರ್ಕಾಡ್ ಬಳಿಯ ಚಂತಪ್ಪಡಿಯಲ್ಲಿ ವಹ್ಹಾಬಿಗಳ ವಿರುದ್ದ ಮೂರು ದಿನಗಳ ಖಂಡನಾ ಭಾಷಣವನ್ನು ಆಯೋಜಿಸಿದರು. ಇ.ಕೆ. ಹಸನ್ ಮುಸ್ಲಿಯಾರ್ (ಖ:ಸಿ) ವೈಲತ್ತರ ಮುಹಮ್ಮದ್ ಕುಂಞಿ ಮೌಲವಿ (ಖ:ಸಿ) ಮತ್ತು ನಾನು ಭಾಷಣಕಾರರಾಗಿದ್ದೆವು. ಒಂದು ದಿನ ಮುಂಚೆ ವಹ್ಹಾಬಿ ಮೌಲವಿ ರಂಡತ್ತಾಣಿ ಸೈದ್ ಎಂಬವರು ಮಾಡಿದ ಭಾಷಣಗಳಿಗೆ ಪ್ರತ್ಯುತ್ತರವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎರಡನೇ ದಿನದಂದು ವೈಲತ್ತರ ಮೌಲವಿಯ ಭಾಷಣ ನಿಗದಿಯಾಗಿತ್ತು. ಆದರೆ ನನ್ನ ಭಾಷಣ ಕೇಳುವ ಆಸೆಯನ್ನು ವ್ಯಕ್ತಪಡಿಸಿದ ವೈಲತ್ತರ ಮೌಲವಿ, ಮೊದಲ ದಿನವೇ ಬಂದು ವೇದಿಕೆಯಲ್ಲಿ ಕುಳಿತರು. ನಾನು ಭಾಷಣ ಮಾಡುತ್ತಿದ್ದ ಮದ್ಯೆ ವೆಳ್ಳಿಂಯಜೇರಿ ಪ್ರದೇಶದಿಂದ ಕಾರ್ಯಕರ್ತರ ತಂಡವೊಂದು ಬಂದಿತ್ತು. ವೆಳ್ಳಿಯಂಜೇರಿಯಲ್ಲಿ ಕೆ.ಟಿ. ಮಾನು ಮುಸ್ಲಿಯಾರ್ (ಖ:ಸಿ)ರವರ ಪ್ರಭಾಷಣ ಇತ್ತು. ಭಾಷಣದ ಮಧ್ಯದಲ್ಲಿ ಮಾನು ಮುಸ್ಲಿಯಾರ್ ವಹ್ಹಾಬಿಗಳಿಗೆ ಸವಾಲೆಸೆದರು. ಮರುದಿನ, ವಹ್ಹಾಬಿಗಳು ಮಾನು ಮುಸ್ಲಿಯಾರರ ವೇದಿಕೆಯ ಪಕ್ಕದಲ್ಲಿ ಮತ್ತೊಂದು ವೇದಿಕೆಯನ್ನು ನಿರ್ಮಿಸಿ ವಾದಕ್ಕೆ ಸಿದ್ಧರಾದರು. ಆದರೆ ಕಾರಣಾಂತರಗಳಿಂದ ಕೆ.ಟಿ. ಮಾನು ಮುಸ್ಲಿಯಾರ್‌ಗೆ ಆ ದಿನ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ವೆಳ್ಳಿಯಂಜೇರಿಯ ಜನ ನನ್ನನ್ನು ಹುಡುಕಿಕೊಂಡು ಮಣ್ಣಾರ್ಕಾಡ್‌ಗೆ ಬಂದಿದ್ದರು. ನಾನು ಈ ವಿಷಯವನ್ನು ಆ ವೇದಿಕೆಯ ಸಂಘಟಕ ಕುಮರಂಪುತ್ತೂರು ಅಲಿ ಮುಸ್ಲಿಯಾರ್‌ಗೆ ತಿಳಿಸಿ, ಇನ್ನುಳಿದ ಭಾಷಣವನ್ನು ವೈಲತ್ತರ ಮೌಲವಿಗೆ ಬಿಟ್ಟು ಆ ರಾತ್ರಿ ವೆಳ್ಳಿಯಂಜೇರಿಗೆ ಹೊರಟೆ.
ನಾನು ಅಲ್ಲಿಗೆ ತಲುಪಿದಾಗ, ಸಿ ಪಿ. ಉಮರ್ ಸುಲ್ಲಮಿ ನೇತೃತ್ವದಲ್ಲಿ ಮೌಲವಿಗಳ ಗುಂಪು ಕಿತಾಬುಗಳನ್ನು ತಂದು ಮೈಕ್ ಕಟ್ಟಿ ವೇದಿಕೆಯ ಮೇಲೆ ಕುಳಿತ್ತಿದ್ದರು. ಎ.ಪಿ. ಅಬ್ದುಲ್ ಖಾದಿರ್ ಮೌಲವಿ, ಅಲಿ ಅಬ್ದುರ್ರಝಾಖ್ ಮೌಲವಿ, ಐದೀದ್ ತಂಙಳ್ ಆಸೀನರಾಗಿದ್ದರು. ವೇದಿಕೆ ಏರಿದ ಕೂಡಲೇ ಪ್ರಶ್ನೋತ್ತರ ಕಾರ್ಯಕ್ರಮ ಆರಂಭವಾಯಿತು. ವಿಷಯ ಇಸ್ತಿಗಾಸ ಮತ್ತು ಖಬರ್ ಝಿಯಾರತ್ ಆಗಿದ್ದವು. ಬೆಳಿಗ್ಗೆ ತನಕ ವಾದಪ್ರತಿವಾದ ಮುಂದುವರೆಯಿತು. ಸುಬಹಿ ಅಝಾನ್ ಕರೆದಾಗ ಪಕ್ಕದ ಮನೆಗೆ ಹೋಗಿ ನಮಾಜು ಮಾಡಿದೆ. ಕಾರ್ಯಕ್ರಮವನ್ನು ಮತ್ತೆ ಮುಂದುವರಿಸಲು ನಿರ್ಧರಿಸಲಾಯಿತು. ಅಂದು ರಾತ್ರಿ ಮನ್ನಾರ್ಕ್ಕಾಡ್‌ನಲ್ಲಿ ವೈಲತ್ತರವರ ವಯಳ್ ಮುಗಿದು ಹೋದ ಅಲ್ಲಿನ ಸ್ಥಳೀಯರಿಗೆ ಈ ವಿಷಯ ಗೊತ್ತಿರಲಿಲ್ಲ.
ಮರುದಿನವೂ ವಾದಪ್ರತಿವಾದ ಕಾರ್ಯಕ್ರಮ ಮುಂದುವರಿಯಲಿದೆ ಎಂದು ತಿಳಿದು ಸಹಸ್ರಾರು ಜನರು ವೆಳ್ಳಿಯಂಜೇರಿಗೆ ಬರಲು ಆರಂಭಿಸಿದರು. ಸುದ್ದಿ ತಿಳಿದ ಇ.ಕೆ. ಹಸನ್ ಮುಸ್ಲಿಯಾರ್ (ಖ:ಸಿ) ಕೂಡ ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಆಗಮಿಸಿದರು. ನಮಾಜಿಗಾಗಿ ವಿರಾಮಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ಸಮಯದಲ್ಲೂ ಪ್ರಶ್ನೋತ್ತರ ಕಾರ್ಯಕ್ರಮ ಮುಂದುವರೆಯಿತು. ಚಂತಪ್ಪಡಿಯಲ್ಲಿ ನಿಗದಿಯಾದಂತೆ ಎರಡನೇ ದಿನ ವೈಲಿತ್ತರವರ ಭಾಷಣ ಆರಂಭವಾದ ಕೂಡಲೇ ವೈಲತ್ತರ ಸಭಿಕರಲ್ಲಿ ಹೇಳಿದರು," 'ಎಪಿ' ಮತ್ತು ಸಂಗಡಿಗರು ವಹ್ಹಾಬಿಗಳೊಂದಿಗೆ 24 ಗಂಟೆಗಳಿಗೂ ಹೆಚ್ಚು ಕಾಲ ವಾದಪ್ರತಿವಾದ ನಡೆಸುತ್ತಾ ಇದ್ದಾರೆ. ಆದ್ದರಿಂದ ನಾವೆಲ್ಲ ಅಲ್ಲಿಗೆ ಹೋಗುತ್ತಿದ್ದೇವೆ" ಎಂದಾಗ ಅನೇಕ ವಾಹನಗಳಲ್ಲಾಗಿ ಎಲ್ಲರೂ ವಾದಪ್ರತಿವಾದ ನಡೆಯುವ ಪ್ರದೇಶಕ್ಕೆ ಆಗಮಿಸಿದರು. ವೈಲತ್ತರ ಅಲ್ಲಿಗೆ ತಲುಪಿದಾಗ, ಇ.ಕೆ. ಹಸನ್ ಮುಸ್ಲಿಯಾರ್ ಮತ್ತು ನಾನು ಸುನ್ನಿ ಭಾಗದ ಭಾಷಣಕಾರರಾಗಿ ವೇದಿಕೆಯಲ್ಲಿದ್ದೆವು. ಇದೀಗ ವೈಲತ್ತರ ನಮ್ಮೊಂದಿಗೆ ಸೇರಿದರು ಅಂದು ವೆಳ್ಳಿಯಂಜೇರಿ ಪ್ರದೇಶದಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ಕೊನೆಗೆ ವೈಲಿತ್ತರ ತನ್ನ ಬೆರಳನ್ನು ತೋರಿಸುತ್ತಾ ವಹ್ಹಾಬಿ ಕಡೆಯವರಲ್ಲಿ ಕೇಳಿದರು. "ಅಲ್ಲಾಹನು ನನಗೆ ಈ ಬೆರಳನ್ನು ಅಲುಗಾಡಿಸುವ ಸಾಮರ್ಥ್ಯವನ್ನು ಮುಂಚಿತವಾಗಿ ನೀಡಿದ್ದಾನೆಯೇ ಅಥವಾ ಅದನ್ನು ಅಲುಗಾಡಿಸುವ ಸಮಯದಲ್ಲಿ ಮಾತ್ರ ನೀಡುತ್ತಾನೆಯೇ?"... ಎಂದು ಮೂರು ಬಾರಿ ಈ ಪ್ರಶ್ನೆ ಕೇಳಿದರೂ ಸಳಪಿಗಳು ಉತ್ತರ ನೀಡಲಾಗದೆ ಚಡಪಡಿಸುತ್ತಿದ್ದರು. ಏನೇ ಉತ್ತರ ಕೊಟ್ಟರೂ ವಹಾಬಿಗಳು ಸಿಕ್ಕು ಹಾಕಿಕೊಳ್ಳುತ್ತಾರೆ. ಇನ್ನೂ ಕೊನೆಯದಾಗಿ ಐದು ನಿಮಿಷಗಳ ಕಾಲಾವಕಾಶ ನೀಡುತ್ತೇನೆ. ಆಗಲೂ ಉತ್ತರ ಸಿಗದಿದ್ದರೆ ನೀವು ಪರಾಜಿತರೆಂದು ಘೋಷಿಸಲಾಗುವುದು’ ಎಂದು ವೈಲತ್ತರ ಹೇಳಿದರು. ಕೊನೆಯ ಐದು ನಿಮಿಷಗಳ ನಂತರವೂ ವಹಾಬಿಗಳ ವೇದಿಕೆಯಲ್ಲಿ ನೀರವ ಮೌನ ಮಾತ್ರವಾಗಿತ್ತು ಉತ್ತರ. ಅದಾಗಲೇ ಜನರು ತಕ್ಬೀರ್ ಕೂಗಿದರು. ಅದು ತುರ್ತು ಪರಿಸ್ಥಿತಿಯ ನಂತರದ ಮೊದಲ ಚುನಾವಣೆಯನ್ನು ಘೋಷಿಸಿದ ಸಮಯವಾಗಿತ್ತು. ಸುತ್ತಲೂ ದೊಡ್ಡ ಪೊಲೀಸ್ ಬಂದೋಬಸ್ತ್ ಇತ್ತು. ಆದ್ದರಿಂದ, ವಹಾಬಿಗಳಿಗೆ ಎಂದಿನಂತೆ ಕೂಗಾಡಲು ಸಾಧ್ಯವಾಗಲಿಲ್ಲ. ವೈಲಿತರವರ ತೀಕ್ಷ್ಣ ಪ್ರಶ್ನೆಯೊಂದಿಗೆ ಧೀರ್ಘವಾದ 40 ಗಂಟೆಗಳ ಕಾಲ ನಡೆದ ವಾದ-ಪ್ರತಿವಾದವು ಕೊನೆಗೊಂಡಿತು.
ಅಲ್ಲಾಹು ಅವರ ಖಬರ್ ಜೀವನ ಸಂತೋಷಗೊಳಿಸಲಿ ಆಮೀನ್.
Wednesday, January 25, 2023
ಲಿಂಗ ಬದಲಾವಣೆ
*ಲಿಂಗ ಬದಲಾವಣೆ ಇಸ್ಲಾಮಿನ ದೃಷ್ಠಿಕೋನದಲ್ಲಿ*
_____________________________
📝 ಮುನೀರ್ ಸಖಾಫಿ ಸಾಲೆತ್ತೂರು
ಮನುಷ್ಯ ವರ್ಗವನ್ನು ಅಲ್ಲಾಹನು 2 ವಿಭಾಗವಾಗಿ ಸೃಷ್ಟಿಸಿದ್ದಾನೆ.ಗಂಡು ಮತ್ತು ಹೆಣ್ಣು.
ಈ ಎರಡು ವಿಭಾಗವಲ್ಲದೆ 3 ನೇ ಒಂದು ವಿಭಾಗವನ್ನು ಅಲ್ಲಾಹನು ಸೃಷ್ಟಿಸಿಲ್ಲ.
ಅಲ್ಲಾಹನು ಹೇಳುತ್ತಾನೆ,
ಅವನೇ ಗಂಡು ಮತ್ತು ಹೆಣ್ಣಿನ ಜೋಡಿಯನ್ನು ಸೃಷ್ಟಿ ಮಾಡಿದ್ದಾನೆ.
ಒಂದು ಬಿಂದು ವೀರ್ಯವನ್ನು ಗರ್ಭಾಶಯಕ್ಕೆ ಸುರಿಸಲ್ಪಡುವ ಮೂಲಕ.
(ಸೂರಾ ಆನ್ನಜ್ಮ್ 45,46)
ಈ ಸೂಕ್ತದ ವ್ಯಾಖ್ಯಾನದಲ್ಲಿ ಇಮಾಮ್ ಅಬೂಬಕರ್ ಅಲ್ ಜಸ್ಸಾಸ್ (ರ) ಹೇಳುತ್ತಾರೆ,
ಗಂಡು ಮತ್ತು ಹೆಣ್ಣು ಎಂಬ ಅಲ್ಲಾಹನ ಮಾತಿನಲ್ಲಿ ಎಲ್ಲಾ ಮನುಷ್ಯರನ್ನು ಒಳಪಡಿಸಿದ್ದಾನೆ. ಯಾವುದೇ ಮನುಷ್ಯನು ಗಂಡು ಅಥವಾ ಹೆಣ್ಣು ಆಗಿರುತ್ತದೆ. ಮಂಗಳಮುಖಿ ಎಂಬ ವಿಭಾಗವು ಅದು ಗಂಡೋ ಅಥವಾ ಹೆಣ್ಣೊ ಎಂಬ ಅಸ್ಪಷ್ಟತೆ ನಮಗಿದ್ದರೂ ಅಲ್ಲಾಹನ ಮೇಲೆ ಯಾವುದೇ ಅಸ್ಪಷ್ಟತೆ ಇಲ್ಲ. ಚಿಕ್ಕಂದಿನಲ್ಲಿ ಮಂಗಳ ಮುಖಿ ಪುರುಷನಾಗಿದ್ದನೆಯೇ ಅಥವಾ ಮಹಿಳೆಯೇ ಎಂದು ಅಸ್ಪಷ್ಟತೆ ಇದ್ದರೂ ಪ್ರಾಯ ಪೂರ್ತಿ ಆಗುವ ವೇಳೆ ಅವರು ಯಾವ ವಿಭಾಗಕ್ಕೆ ಸೇರಿದವರು ಎಂದು ತಿಳಿಯಲು ಮಾನದಂಡಗಳಿವೆ.
(ಅಹ್'ಕಾಮುಲ್ ಖುರ್'ಆನ್ 3/551)
*ಮಂಗಳ ಮುಖಿ*
ಇಮಾಮ್ ನವವಿ (ರ) ಹೇಳುತ್ತಾರೆ.
ಮಂಗಳ ಮುಖಿಯರು 2 ವಿಧದಲ್ಲಿದ್ದಾರೆ.
1. ಪುರುಷರ ಲಿಂಗ ಮತ್ತು ಮಹಿಳೆಯ ಯೋನಿ ಇರುವವರು.
2. ಲಿಂಗವೂ ಇಲ್ಲ, ಯೋನಿಯೂ ಇಲ್ಲ. ಮೂತ್ರ ಧ್ವಾರದ ಬಳಿಯಿರುವ ಒಂದು ಧ್ವಾರದ ಮೂಲಕ ಮೂತ್ರ ವಿಸರ್ಜನೆ ಮಾಡುವವರು.
ಇದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ. ಹಸುವಲ್ಲೂ ಇದು ಕಂಡು ಬಂದಿದೆ.
ಹಿಜರಿ 674ರ ಅರಫಾ ದಿನದಂದು ವಿಶ್ವಾಸ ಯೋಗ್ಯರಾದ ಕೆಲವು ಮಂದಿ ನನ್ನ ಬಳಿ ಬಂದು ಒಂದು ಪ್ರಶ್ನೆ ಕೇಳಿದರು. ನಮ್ಮ ಬಳಿ ಗಂಡು ಮತ್ತು ಹೆಣ್ಣು ಅಲ್ಲದ ಒಂದು ಹಸು ಇದೆ. ಅದಕ್ಕೆ ಲಿಂಗವೂ ಇಲ್ಲ. ಯೋನಿಯೂ ಇಲ್ಲ. ಅದರ ಮೊಲೆಯ ಬಳಿ
ಒಂದು ಧ್ವಾರವಿದೆ. ಆ ಮೂಲಕ ಮೂತ್ರ ವಿಸರ್ಜನೆ ಮಾಡುತ್ತದೆ.ಆ ಹಸುವನ್ನು ಖುರ್ಬಾನೀ ನೀಡಬಹುದೇ?
ಅದನ್ನು ಖುರ್ಬಾನಿ ನೀಡಬಹುದೆಂದು ನಾನು ಅವರಿಗೆ ಉತ್ತರಿಸಿದೆ.(ತಹ್'ದೀಬುಲ್ ಅಸ್ಮಾಇ ವಲ್ಲುಗಾತ್ 2/350)
*ಮಂಗಳ ಮುಖಿಯ ವರ್ಗ ತಿಳಿಯುವುದು ಹೇಗೆ?*
ಮಂಗಳ ಮುಖಿಯಾದಲ್ಲಿ ಪುರುಷ ವರ್ಗಕ್ಕೆ ಸೇರಿದವನೋ ಅಲ್ಲವೇ ಎಂದು ತೀರ್ಮಾನಿಸಬಹುದಾದ ಹಲವು ಲಕ್ಷಣಗಳು ಇಮಾಮರು ವಿವರಿಸಿದ್ದಾರೆ.
ಇಮಾಮ್ ನವವೀ (ರ) ಬರೆಯುವುದು ನೋಡಿ,
1. ಮೂತ್ರ ವಿಸರ್ಜನೆ ಮೂಲಕ
ಮಂಗಳ ಮುಖಿಯ ಲಿಂಗದ ಮೂಲಕ ಮೂತ್ರ ಹೊರ ಹೋಗುವುದಾದರೆ ಆತ ಪುರುಷನಾಗಿದ್ದಾನೆ. ಯೋನಿಯ ಮೂಲಕ ಮೂತ್ರ ಹೋಗುವುದಾರೆ ಅವಳು ಮಹಿಳೆಯಾಗಿದ್ದಾಳೆ.
ಎರಡರಲ್ಲೂ ಮೂತ್ರ ಹೋಗುವುದಾದರೆ ಮೊದಲು ಯಾವ ಧ್ವಾರದಲ್ಲಿ ಮೂತ್ರ ಹೋಗಿದೆ ಎಂದು ನೋಡಿ ಅದರಂತೆ ತೀರ್ಮಾನಿಸಬಹುದು. ಎರಡರಲ್ಲೂ ಒಂದೇ ವೇಳೆ ಮೂತ್ರ ಹೋದಲ್ಲಿ ಹೆಚ್ಚು ಮೂತ್ರ ಯಾವ ಧ್ವಾರದಲ್ಲಿ ಹೋಗಿದೆ ಎಂದು ನೋಡಿ ಅದರಂತೆ ತೀರ್ಮಾನಿಸಬಹುದು. ಎರಡಲೂ ಒಂದೇ ಅಳತೆಯಲ್ಲಿ ಮೂತ್ರ ವಿಸರ್ಜನೆ ಆಗಿದ್ದಲ್ಲಿ ಅತೀ ಹೆಚ್ಚು ಶಕ್ತಿಯೊಂದಿಗೆ ಮೂತ್ರ ಯಾವ ಧ್ವಾರದಲ್ಲಿ ಹೊರ ಹೋಗುತ್ತದೆ ಎಂದು ನೋಡಿ ಅದರಂತೆ ತೀರ್ಮಾನಿಸಬಹುದು.
2. ವೀರ್ಯದ ಮೂಲಕ
ಪುರುಷ ಲಿಂಗದ ಮೂಲಕ ವೀರ್ಯ ಹೊರ ಬಂದಲ್ಲಿ ಆತ ಪುರುಷನೆಂದೂ ಯೋನಿಯ ಮೂಲಕ ವೀರ್ಯ ಹೊರ ಬಂದಲ್ಲಿ ಮಹಿಳೆಯಾದವಳು ಎಂದೂ
ರ್ತೀರ್ಮಾನಿಸಬಹುದು.
ಎರಡರಲ್ಲೂ ವೀರ್ಯ ಹೊರ ಬಂದಲ್ಲಿ ಪುರುಷರ ವೀರ್ಯದೊಂದಿಗೆ ಹೋಲಿಕೆ ಇದ್ದಲ್ಲಿ ಪುರುಷನೆಂದೂ ಮಹಿಳೆಯ ವೀರ್ಯದೊಂದಿಗೆ ಹೋಲಿಕೆ ಇದ್ದಲ್ಲಿ ಮಹಿಳೆಯೆಂದೂ ತೀರ್ಮಾನಿಸಬಹುದಾಗಿದೆ.
3. ಪ್ರಸವದ ಮೂಲಕ
ಮಂಗಳ ಮುಖಿ ಮಗುವನ್ನು ಹೆತ್ತರೆ ಅವಳು ಮಹಿಳೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.
4. ರಕ್ತ ಸ್ರಾವ ಮೂಲಕ
ಮಹಿಳೆಯ ಯೋನಿ ಮೂಲಕ ಮಂಗಳ ಮುಖಿಗೆ ತಿಂಗಳ ಋತು ಸ್ರಾವವಾದಲ್ಲಿ ಮಹಿಳೆ ಎಂದು ತೀರ್ಮಾನಿಸಬಹುದು.
5. ಗಡ್ಡ ಮತ್ತು ಸ್ತನ ಬೆಳೆಯುವ ಮೂಲಕ
ಪ್ರಬಲ ಅಭಿಪ್ರಾಯ ಪ್ರಕಾರ ಗಡ್ಡ ಅಥವಾ ಸ್ತನ ಬೆಳೆದಲ್ಲಿ ಅದು ವರ್ಗ ನಿರ್ಣಯದ ಲಕ್ಷಣವಲ್ಲದಿದ್ದರೂ ಎರಡನೇ ಅಭಿಪ್ರಾಯ ಪ್ರಕಾರ ವರ್ಗ ನಿರ್ಣಯಿಸಬಹುದಾಗಿದೆ.
6. ಒಲವು
ಮಂಗಳ ಮುಖಿಗೆ ಪುರುಷನೊಂದಿಗೆ ಅತೀ ಒಲವು ಇದ್ದರೆ ಅವಳು ಮಹಿಳೆಯೆಂದೂ ಮಹಿಳೆಯೊಂದಿಗೆ ಅತೀ ಒಲವು ಇದ್ದಲ್ಲಿ ಪುರುಷನೆಂದೂ ನಿರ್ಣಯಿಸಬಹುದಾಗಿದೆ.(ಇದು ಪ್ರಾಯ ಪೂರ್ತಿಯ ಬಳಿಕ ನಿರ್ಣಯ ಮಾಡಬಹುದಾದ ಲಕ್ಷಣವಾಗಿದೆ.)
ರೌಳ 1/78)
ಮಂಗಳ ಮುಖಿಯ ವರ್ಗ ನಿರ್ಣಯ ಹೇಗೆ ಎಂಬುವುದರ ಲಕ್ಷಣಗಳನ್ನಾಗಿದೆ ಇಮಾಮ್ ನವವಿ ವಿವರಿಸಿದ್ದನ್ನು ನಾವು ಓದಿದ್ದು
*ಲಿಂಗ ಬದಲಾವಣೆ*
ಪುರುಷನಾದವನು ತನ್ನ ಲಿಂಗವನ್ನು ಹಾಗೂ ಮಹಿಳೆಯಾದವಳು ಯೋನಿಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಬದಲಾವಣೆ ಮಾಡುವುದಕ್ಕೆ ಲಿಂಗ ಬದವಲಾವಣೆ ಎನ್ನುತ್ತಾರೆ.
ಲಿಂಗ ಬದಲಾವಣೆ ನಿಷಿದ್ಧವಾಗಿದೆ. ಎಂದು ಖುರ್'ಆನ್, ಹದೀಸ್ ಹಾಗೂ ಇಮಾಮರುಗಳ ಮಾತಿನಿಂದ ಸ್ಪಷ್ಟ.
ಅಲ್ಲಾಹನು ಹೇಳುತ್ತಾನೆ,
ಅಲ್ಲಾಹನ ಸೃಷ್ಟಿಗಳಲ್ಲಿ ನೀವು ಬದಲಾವಣೆ ಮಾಡದಿರಿ.(ಸೂರತುರ್ರೂಮ್ 30)
ಪ್ರಸ್ತುತ ಸೂಕ್ತಕ್ಕೆ ಪ್ರಖ್ಯಾತ ವ್ಯಾಖ್ಯಾನಗಾರರಾದ ಇಖ್ರಿಮ (ರ) ಹೇಳಿದ ತಫ್ಸೀರ್ ಈ ರೀತಿ ಓದಬಹುದು.
ವೃಷಣ ಛೇಧಿಸುವುದು, ಕಿವಿ ತುಂಡರಿಸುವುದು ಮುಂತಾದ ಕಾರ್ಯಗಳ ಮೂಲಕ ಸೃಷ್ಟಿಗಳಲ್ಲಿ ನೀವು ಬದಲಾವಣೆ ಮಾಡದಿರಿ. ಅದು ನಿಷಿದ್ಧವಾಗಿದೆ.
(ಮಆಲಿಮುತ್ತಂಝೀಲ್ 2/289)
ಇದೇ ರೀತಿ ಇಮಾಮ್ ತ್ವಬ್'ರೀ ತಫ್ಸೀರ್'ನ 9/216 ರಲ್ಲೂ ಹೇಳಿದ್ದಾರೆ.
ವೃಷಣವು (ಬೀಜ) ಮಾನವ ಸೇರಿದಂತೆ ಎಲ್ಲ ಪ್ರಾಣಿಗಳಲ್ಲಿನ ಗಂಡು ಸಂತಾನೋತ್ಪತ್ತಿ ಗ್ರಂಥಿಯಾಗಿದೆ. ಇದು ಹೆಣ್ಣಿನ ಅಂಡಾಶಯಕ್ಕೆ ಸಮಾನ ರೂಪಿಯಾಗಿದೆ. ವೃಷಣಗಳ ಕ್ರಿಯೆಗಳೆಂದರೆ ವೀರ್ಯಾಣು ಮತ್ತು ಪುಂಜನಕಗಳು (ಟೆಸ್ಟೊಸ್ಟರೋನ್) ಎರಡನ್ನೂ ಉತ್ಪತ್ತಿ ಮಾಡುವುದು.
ವೃಷಣಗಳು ಟ್ಯುನಿಕಾ ಆಲ್ಬುಜಿನಿಯಾ ಎಂದು ಕರೆಯಲ್ಪಡುವ ಗಟ್ಟಿಯಾದ ಪೊರೆಯಂಥ ಕವಚದಿಂದ ಆವೃತವಾಗಿರುತ್ತವೆ. ವೃಷಣಗಳ ಒಳಗೆ ವೀರ್ಯವಾಹಕ ನಳಿಕೆಗಳು ಎಂದು ಕರೆಯಲ್ಪಡುವ ಬಹಳ ನಯವಾದ ಸುರುಳಿ ಸುತ್ತಿಕೊಂಡಿರುವ ನಳಿಕೆಗಳಿವೆ. ಈ ನಳಿಕೆಗಳು ಜೀವಕೋಶಗಳ (ಜಂಪತಿಗಳು) ಪದರವನ್ನು ಹೊಂದಿರುತ್ತವೆ. ಇವು ಪ್ರೌಢಾವಸ್ಥೆಯಿಂದ ವೃದ್ಧಾಪ್ಯದವರೆಗೆ ವೀರ್ಯಾಣು ಕೋಶಗಳಾಗಿ ವಿಕಸನಗೊಳ್ಳುತ್ತವೆ.
ವೃಷಣ ಒಡೆಯುವುದರಿಂದ ಲೈಂಗಿಕ ಆಸಕ್ತಿ ಕುಗ್ಗುವುದರಿಂದ ಅದನ್ನು ನಿಷಿದ್ಧ ಮಾಡಲಾಗಿದೆ.
ಇರುವ ಲೈಂಗಿಕ ಆಸಕ್ತಿಯನ್ನು ಶಾಸ್ವತವಾಗಿ ಕುಗ್ಗಿಸುವುದಕ್ಕೆ ಇಸ್ಲಾಮ್ ಅನುಮತಿ ನೀಡುವುದಿಲ್ಲ.
ಪುರುಷನಾದವನು ಲಿಂಗ ಬದಲಾವಣೆ ವೇಳೆ ವೃಷಣವನ್ನೂ ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಬಿಡುತ್ತಾನೆ.
ಆದುದರಿಂದಲೇ ಅದು ನಿಷಿಧ್ಧವಾಗಿದೆ.
ಇದು ಅಲ್ಲಾಹನ ಸೃಷ್ಟಿಯನ್ನು ಬದಲಾವಣೆ ಮಾಡುವುದಾಗಿದೆ.
*ಹದೀಸ್*
ಅಬೂ ಉಮಾಮ (ರ) ಹೇಳುತ್ತಾರೆ,
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ,
4 ವಿಭಾಗವನ್ನು ಶಪಿಸಲ್ಪಡಲಾಗಿದೆ. ಅದಕ್ಕೆ ಮಲಕುಗಳು ಆಮೀನ್ ಹೇಳಿದರು.
1. ಪುರುಷನಾಗಿ ಮಹಿಳೆಯೊಂದಿಗೆ ಸಾದೃಶ್ಯವಾಗುವವನು.
2. ಮಹಿಳೆಯಾಗಿ ಪುರುಷನೊಂದಿಗೆ ಸಾದೃಶ್ಯವಾಗುವವನು.
3. ಕುರುಡರ ದಾರಿ ತಪ್ಪಿಸುವವನು.
4. ವಿವಾಹವಾಗದೆ ಬ್ರಹ್ಮ ಚರ್ಯೆಯನ್ನು ಇಷ್ಟಪಡುವವರು.
(ಮುಹ್'ಜಮುಲ್ ಕಬೀರ್7827)
ಪುರುಷನು ಮಹಿಳೆಯಂತೆ ಹಾಗೂ ಮಹಿಳೆ ಪುರುಷರಂತೆ ವರ್ತಿಸುವುದನ್ನೇ ನಿಷಿದ್ಧ ಮಾಡಿರುವಾಗ ಲಿಂಗ ಬದಲಾವಣೆ ನಿಷಿಧ್ಧ ಎಂಬುವುದಕ್ಕೆ ಬೇರೆ ಪುರಾವೆ ಬೇಕೇ?
ಸೌಂಧರ್ಯಕ್ಕಾಗಿ ಹಲ್ಲನ್ನು ಬೇರ್ಪಡಿಸುವುದನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಿರೋಧಿಸಿದ್ದಾರೆ ಎನ್ನುವ ಹದೀಸ್ ಇಮಾಮ್ ಬುಖಾರಿ ವರದಿ ಮಾಡಿದ್ದಾರೆ.
(ಓರೆ ಕೋರೆಯಾಗಿರುವ ಹಲ್ಲನ್ನು ತೆಗೆದು ಹಲ್ಲನ್ನು ಸರಿಪಡಿಸುವುದು ಹದೀಸಿನ ವ್ಯಾಪ್ತಿಗೆ ಬರಲಾರದು.)
ಹಲ್ಲುಗಳಲ್ಲಿ ಬದಲಾವಣೆ ಮಾಡಬಾರದು ಎಂದು ಹೇಳುವಾಗ ಲಿಂಗ ಬದಲಾವಣೆ ನಿಷಿದ್ಧವೆಂಬುವುದು ಪ್ರತ್ಯೇಕ ಹೇಳಬೇಕೆ?
ಅಬೂ ಹುರೈರ (ರ) ವರದಿ,
ಪುರುಷರು ಮಹಿಳೆಯ ಉಡುಪನ್ನು ಹಾಗೂ ಮಹಿಳೆಯರು ಪುರುಷರ ಉಡುಪನ್ನು ಧರಿಸುವವರನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಶಪಿಸಿದ್ದಾರೆ.(ಅಬೂ ದಾವೂದ್)
ಇಬ್ನ್ ಅಬ್ಬಾಸ್ (ರ) ವರದಿ,
ಪುರುಷರು ಮಹಿಳೆಯರೊಂದಿಗೆ ಸಾದೃಶ್ಯವಾಗುವುದನ್ನು ಹಾಗೂ ಮಹಿಳೆಯರು ಪುರುಷರೊಂದಿಗೆ ಸಾದೃಶ್ಯವಾಗುವುದನ್ನೂ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಶಪಿಸಿದರು. ಅವರನ್ನು ನೀವು ಮನೆಯಿಂದ ಹೊರಗಟ್ಟಿರಿ.
(ಬುಖಾರಿ 5886)
*ಲಿಂಗ ಬದಲಾಯಿಸಿದರೂ ವರ್ಗ ಬದಲಾವಣೆ ಇಲ್ಲ*
ಒಬ್ಬ ಪುರುಷ ತನ್ನ ಲಿಂಗವನ್ನು ಅಥವಾ ಮಹಿಳೆ ತನ್ನ ಯೋನಿಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಬದಲಾಯಿಸಿದರೂ ಆತನ/ಅವಳ ವರ್ಗ ಬದಲಾವಣೆ ಆಗುವುದಿಲ್ಲ.
ಬದಲಾಯಿಸುವ ಮುಂಚೆ ಯಾವ ವರ್ಗಕ್ಕೆ ಸೇರಿದ್ದನೋ/ಸೇರಿದ್ದಳೋ ಅದೇ ವರ್ಗದಲ್ಲಿ ಅವರು ಮುಂದುವರಿಯುವರು. ಕಾರಣ ಶಾರೀರಿಕವಾಗಿ ಅವರಿಗೆ ಬದಲಾವಣೆ ಆಗಿರುವುದಿಲ್ಲ. ಆದುದರಿಂದಲೇ ಆತನ ಶರೀಆತ್ತಿನ ನಿಯಮವನ್ನು ಇಮಾಮರುಗಳು ನೂರಾರು ವರ್ಷಗಳ ಮುಂಚೆಯೇ ವಿವರಿಸಿದ್ದಾರೆ.
ಇಮಾಮ್ ಖತೀಬುಶ್ಶಿರ್ಬೀನಿಯ ಮಾತು ನೋಡಿ,
ಲಿಂಗ ಛೇಧಿಸಲ್ಪಟ್ಟವನಲ್ಲಿ ಯಾವುದೇ ಕಾಮಾಸಕ್ತಿ ಇಲ್ಲದಿದ್ದಲ್ಲಿ ಆತ ಅನ್ಯ ಮಹಿಳೆಯ ಹೊಕ್ಕುಳು ಮತ್ತು ಮಂಡಿಯ ನಡುವೆ ಅಲ್ಲದ ಸ್ಥಳವನ್ನು ನೋಡುವುದು ಅನುವದನೀಯವಾಗಿದೆ.(ಇಖ್'ನಾಹ್ 3/326)
ಕಾಮಾ ಸಕ್ತಿ ಇಲ್ಲದಿರುವುದರಿಂದಲೇ ಮಹಿಳೆಯು ಆತನನ್ನೂ ನೋಡ ಬಹುದಾಗಿದೆ.
ವಿವಾಹವಾದ ಪುರುಷ ತನ್ನ ಲಿಂಗ ಬದಲಾಯಿಸಿದ್ದಲ್ಲಿ/ವೃಷಣ ಛೇಧಿಸಿದ್ದಲ್ಲಿ ಆತ ಲೈಂಗಿಕಾಸಕ್ತಿ ಇಲ್ಲದವನು ಎಂಬ ನೆಲೆಯಲ್ಲಿ ಆತನ ಪತ್ನಿಗೆ ಆತನನ್ನು ಫಸ್ಖ್ ಮಾಡುಲು ಅವಕಾಶವಿದೆಯೆಂದು ಇಮಾಮ್ ಇಬ್ನ್ ಹಜರ್ (ರ) ತನ್ನ ತುಹ್ಫತುಲ್ ಮುಹ್ತಾಜ್ ನ 7/346ರಲ್ಲಿ ವಿವರಿಸಿದ್ದಾರೆ.
*ಬದಲಾವಣೆಗೊಂಡವರ ವಾದ*
ಲಿಂಗ ಬದಲಾಯಿಸಿದವರು ಹೇಳುವ ಒಂದು ವಾದವಾಗಿದೆ "ನಾವು ಪುರುಷರಾಗಿದ್ದರೂ ಮಹಿಳೆಯ ಎಲ್ಲಾ ಗುಣಗಳು ನಮ್ಮಲ್ಲಿದ್ದವು. ಆದುದರಿಂದಲೇ ಪುರುಷರ ಮಧ್ಯೆ ಬೆರೆಯುವಿಕೆ ನಮಗೆ ಸಂಕೋಚವಾಗುತ್ತಿತ್ತು. ಆದುದರಿಂದ ನಾವು ಲಿಂಗ ಬದಲಾಯಿಸಿದ್ದೇವೆ"
ಈ ಒಂದು ಮನಸ್ಥಿತಿಗೆ ಚಿಕಿತ್ಸೆ ಮಾಡಬೇಕೆ ಹೊರತು ಲಿಂಗ ಬದಲಾಯಿಸುವಿಕೆ ಇದಕ್ಕೆ ಪರಿಹಾರವಲ್ಲ.
ಒಬ್ಬನಿಗೆ ನಾಯಿಯಂತೆ ಭಾಸವಾದರೆ ಆತ ಮಲ ತಿನ್ನಲು ತಯಾರಾಗುವನೇ?
ಹಸುವಿನಂತೆ ಭಾಸವಾದರೆ ಹುಲ್ಲು ತಿನ್ನುವನೇ?
ಆ ರೀತಿಯ ಮನಸ್ಥಿತಿಯ ಬದಲಾಯಿಸುವಿಕೆಗೆ ತಜ್ಞ ವೈಧ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಮಾಡಬೇಕು.
*ಮಂಗಳ ಮುಖಿಯರ ಸ್ಥಾನ ಇಸ್ಲಾಮಿನಲ್ಲಿ*
ಮಂಗಳ ಮುಖಿಯರು ಮನುಷ್ಯರು ತಾನೇ?ಆದುದರಿಂದ ಅವರಿಗೆ ಎಲ್ಲರಂತೆಯೇ ಸಮೂಹದ ನಡುವೆ ಸ್ಥಾನವಿದೆ. ಅವರನ್ನು ಹಿಯಾಳಿಸುವುದು ಸಲ್ಲದು.
ಕೆಲವೊಂದು ವಿಷಯದಲ್ಲಿ ಅವರಿಗೆ ಪುರುಷರಿಗೆ ಮತ್ತು ಮಹಿಳೆಯರಿಗಿಲ್ಲದ ನಿಯಮ ಇಸ್ಲಾಮ್ ಕಲ್ಪಿಸಿದೆ ಅಷ್ಟೇ.
(ಮಂಗಳ ಮುಖಿ ಎನ್ನುವುದು ಲಿಂಗ ಬದಲಾಯಿಸಿದವರ ಕುರಿತು ಹೇಳುವುದಲ್ಲ ಎಂದು ಮೇಲೆ ಹೇಳಿದ ವಿವರಣೆಯಿಂದ ತಿಳಿದು ಕೊಳ್ಳಬಹುದು)
ಒಟ್ಟಿನಲ್ಲಿ ಅಲ್ಲಾಹನು ಪುರುಷನಾಗಿ ಅಥವಾ ಮಹಿಳೆಯಾಗಿ ಸೃಷ್ಟಿಸಿರುವಾಗ ಅದನ್ನು ಬದಲಾಯಿಸುವುದು ತಪ್ಪಾಗಿದೆ. ಜನರು ತಮ್ಮ ಇಛ್ಛೆಯಂತೆ ಲಿಂಗ ಬದಲಾಯಿಸಲು ಹೊರಟರೆ ಈ ಪ್ರಪಂಚದ ನೆಲೆ ನಿಲ್ಲುವಿಕೆಯನ್ನೇ ಅದು ಬುಡಮೇಲು ಮಾಡೀತು. ಅದು ಪಿಶಾಚಿಯ ಕೃತ್ಯವೆಂದು ಖುರ್'ಆನ್ ಪ್ರತಿಪಾದಿಸಿದೆ. ಅವರಿಗೆ ಶಾಪವಿದೆಯೆಂದು ಈಗಾಗಲೇ ಹಲವಾರು ಹದೀಸಿನಲ್ಲಿ ನೀವು ಓದಿದ್ದೀರಿ.
Subscribe to:
Comments (Atom)