Monday, June 24, 2024

ಪಂಪ್ವೆಲ್ ಮಸೀದಿಯ ಕೋಲು ಮತ್ತು ಕುಕ್ಕಿಲರ ಜಿಜ್ಞಾಸೆ

*ಪಂಪ್ವೆಲ್ ಮಸೀದಿಯ ಕೋಲು ಮತ್ತು ಕುಕ್ಕಿಲರ ಜಿಜ್ಞಾಸೆ*
😃😃😃

📝 ಮುನೀರ್ ಸಖಾಫಿ ಅಲ್ ಫುರ್ಖಾನೀ, ಸಾಲೆತ್ತೂರು
--------------------------------------------
ಏ.ಕೆ ಕುಕ್ಕಿಲ ಈದ್ ದಿನದಂದು ಪಂಪ್ವೆಲ್ ಮಸೀದಿಗೆ ಹೋಗಿದ್ದರಂತೆ.
ಅಲ್ಲಿನ ಖತೀಬರು ಕೈಯಲ್ಲಿ ಕೋಲು ಹಿಡಿದು ಖುತುಬ ಓದಿದ್ದರಂತೆ. ಅದನ್ನು ಕಂಡು ದಂಗಾದ ಕುಕ್ಕಿಲರಿಗೆ ಹಲವು ಜಿಜ್ಞಾಸೆ ಮೂಡಿದೆಯಂತೆ.
ಅದನ್ನು ಫೇಸ್ ಬುಕಲ್ಲಿ ಹರಿಯಬಿಟ್ಟಿದ್ದು ಅದು ವಾಟ್ಸಪ್ ಮೂಲಕ ನನಗೂ ಲಭಿಸಿದ್ದು ಅದಕ್ಕಾಗಿ ಇದನ್ನು ಇಲ್ಲಿ ಬರೆಯುತ್ತಿದ್ದೇನೆ.

4 ಮದ್ಸ್ ಹಬಿನ ಇಮಾಮರುಗಳು ಖುರ್'ಆನ್ ಮತ್ತು ಹದೀಸ್ ಮೂಲಕ  ಅವರ ಗ್ರಂಥಗಳಲ್ಲಿ ಉಲ್ಲೇಖಿಸಿದ ವಿಷಯಗಳನ್ನು ಸ್ವೀಕರಿಸದೆ ಸ್ವತಂತ್ರವಾಗಿ ಚಿಂತಿಸಲು ಹೊರಟರೆ(ದೀನಿನ ಬಗ್ಗೆ ಯಾವುದೇ ಜ್ಞಾನವಿಲ್ಲದೆ) ಈ ರೀತಿಯ ಜಿಜ್ಞಾಸೆ ಮತ್ತು ಪೊಟ್ಟತ್ತರದಲ್ಲಿ ಬೀಳುವುದಂತೂ ಸತ್ಯ.

ಇಲ್ಲಿ ಖುತುಬಾದ ಮುಂಚಿರುವ ಎರಡು ವಿಷಯಗಳನ್ನು ನಾನು ಉಲ್ಲೇಖಿಸುವೆ.

1 ಮಆಶಿರ ಹೇಳುವುದು.
2 ಕೈಯಲ್ಲಿ ಕೋಲು ಹಿಡಿಯುವುದು.

*ಖುತುಬಾದ "ಮಆಶಿರ ವಿಳಿ"*

ಖುತುಬಾಗೆ ನೇತೃತ್ವ ನೀಡುವ ಖತೀಬ್ ಮಿಂಬರ್ ಹತ್ತುವ ಮುಂಚೆ ಒಬ್ಬರು ಜನರನ್ನುದ್ದೇಶಿಸಿ ನೀವು ಎಲ್ಲರೂ ಮೌನವಾಗಿರಿ, ಖುತುಬವನ್ನು ಆಲಿಸಿರಿ ಎಂದು ಹೇಳುತ್ತಾರೆ. ಇದನ್ನು ಮಆಶಿರ ಕರೆಯುವುದು ಎಂದು ಹೇಳುವರು.
ಇದಕ್ಕೆ ಹದೀಸ್'ನಲ್ಲಿ ಪ್ರಮಾಣವಿದೆ.

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹಜ್ಜತುಲ್ ವದಾಹ್'ಗೆ ಮಕ್ಕಾಗೆ ಬಂದಾಗ ಮಿನಾದಲ್ಲಿ ಖುತುಬ ನಿರ್ವಹಿಸುವ ಮುಂಚೆ ಜರೀರ್ (ರ)ರಲ್ಲಿ ಜನರೊಂದಿಗೆ ಮೌನವಹಿಸುವಂತೆಯೂ ನಂತರದ ಖುತುಬಾವನ್ನು ಗಮನಕೊಟ್ಟು ಆಲಿಸುವಂತೆ ಹೇಳಲು  ಆದೇಶಿಸಿದರು.(ವರದಿ, ಬುಖಾರಿ121, ಮುಸ್ಲಿಮ್ 65ನೇ ನಂಬ್ರ)

ಈ ಹದೀಸ್'ನ ಆಧಾರದಲ್ಲಿ ಮಆಶಿರ ಹೇಳುವುದು ಸುನ್ನತ್ ಆಗಿದೆಯೆಂದು ಇಮಾಮ್ ಇಬ್ನ್ ಹಜರುಲ್ ಹೈತಮೀ (ರ)ರು ತನ್ನ ತುಹ್ಫತುಲ್ ಮುಹ್ತಾಜ್'ನ 2/461ರಲ್ಲಿ ಹೇಳಿದ್ದಾರೆ.

ಖುತುಬಾದ ಮುಂಚೆ ಜನರು ಖುರ್'ಆನ್ ಪಾರಾಯಣ, ದ್ಸಿಕ್ರ್ ಮತ್ತು ದುಆಗಳಲ್ಲಿ ತಲ್ಲೀನರಾಗುತ್ತಾರೆ. ಅದನ್ನೆಲ್ಲಾ ನಿಲ್ಲಿಸಿ ಖುತುಬಾವನ್ನು ಆಲಿಸುವಂತೆ ಈ ಮೂಲಕ ಮಆಶಿರ ಹೇಳಿ ಜನರ ಗಮನವನ್ನು ಖತೀಬರ ಕಡೆಗೆ ಸೆಳೆಯುತ್ತಾರೆ.
ಇದು ಸುನ್ನತ್ ಆಗಿದೆಯೆಂದು ಎಲ್ಲಾ ಗ್ರಂಥಗಳಲ್ಲಿ ವಿವರಿಸಲಾಗಿದೆ.
ವಹ್ಹಾಬಿಸಮ್ ಮತ್ತು ಮೌದೂದಿಸಮ್ ತಲೆಗೆ ಹತ್ತಿದ ಕೆಲವು ಮಸೀದಿಗಳಲ್ಲಿ ಇದನ್ನು ನಿಲ್ಲಿಸಲಾಗಿದೆ ಹೊರತು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಅಂಗೀಕರಿಸುವ ಎಲ್ಲಾ ಮಸೀದಿಗಳಲ್ಲಿ ಇದು ಜಾರಿಯಲ್ಲಿರುವುದು ಕಾಣಬಹುದಾಗಿದೆ.

*2.ಕೈಯಲ್ಲಿ ಕೋಲು*

ಖುತುಬಾ ಪಾರಾಯಣಕ್ಕೆ ಮಿಂಬರ್ ಹತ್ತಿ ಖತೀಬರ ಕೈಯಲ್ಲಿ ಖಡ್ಗ ಅಥವಾ ಕೋಲನ್ನು ಮಆಶಿರ ಕರೆಯುವವರು ನೀಡುತ್ತಾರೆ.
ಈ ಕೋಲು ಕೊಟ್ಟು ಮಿಂಬರ್'ಗೆ ಹತ್ತಿಸುವ/ಮಆಶಿರ ಕರೆಯುವ ವ್ಯಕ್ತಿಗೆ ಮುರಖ್ಖಿ ಎಂದು ಅರೆಬಿಕ್ ನಲ್ಲಿ ಹೇಳಲಾಗುತ್ತದೆ.(ಮುರಖ್ಖಿ ಅಂದರೆ ಹತ್ತಿಸುವವ ಎಂದರ್ಥ)
ಮುರಖ್ಖಿಯ ಕೈಯಿಂದ ಕೋಲು ಪಡೆದು ಮಿಂಬರ್'ಗೆ ಹತ್ತುವುದರಿಂದ ಆ ಹೆಸರು ರೂಢಿಯಲ್ಲಿದೆ.
ಮುರಖ್ಖಿಯ ಕೈಯಿಂದ ಕೋಲು ಪಡೆದು ಅದನ್ನು ಎಡಗೆಯಲ್ಲಿ ಹಿಡಿದು ಖುತುಬಾ ನಿರ್ವಹಿಸುವುದು ಸುನ್ನತ್ ಆಗಿದೆಯೆಂದು ಎಲ್ಲಾ ಗ್ರಂಥಗಳಲ್ಲಿ ಕಾಣಬಹುದಾಗಿದೆ.
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಖುತುಬಾದ ವೇಳೆ ಕೈಯಲ್ಲಿ ಖಡ್ಗ ಅಥವಾ ಕೋಲನ್ನು ಹಿಡಿಯುತ್ತಿದ್ದರು ಎಂದು ಇಮಾಮ್ ಅಬೂದಾವೂದ್ (ರ) ವರದಿ ಮಾಡಿದ ಹದೀಸಿನಲ್ಲಿ ವರದಿಯಾಗಿದೆ.* 
(ಅಬೂ ದಾವೂದ್ 1096)

ಈ ಹದೀಸಿನ ಆಧಾರದಲ್ಲಿ ಕೈಯಲ್ಲಿ ಕೋಲು ಹಿಡಿದು ಖುತುಬಾ ಪಾರಾಯಣ ಮಾಡುವುದು ಸುನ್ನತ್ ಎಂದು ಹೇಳಿದ ಕೆಲವೊಂದು ಕಿತಾಬ್ ಮತ್ತು ಅದರ ಪುಟಗಳನ್ನು ಇಲ್ಲಿ ನೀಡುತ್ತಿದ್ದೇನೆ.
1 ಅತ್ತಂಬೀಹ್ ಫೀ ಫಿಖಿಹಿಶಾಫಿಯೀ 1/44
2 ಅಲ್ ಬಯಾನ್ ಫೀ ಮದ್ಸ್ ಹಬಿಶ್ಶಾಫಿಈ 3/577
3 ಶರಹುಲ್ ಮುಹದ್ದಬ್ 1/528
4 ರೌಳತುತ್ತಾಲಿಬೀನ್ 2/32 
5 ಮಿನ್'ಹಾಜುತ್ತಾಲಿಬೀನ್ ವ ಉಮ್ದತುಲ್ ಮುಫ್ತೀನ್ 1/48
6 ಉಮ್ದತುಸ್ಸಾಲಿಕ್ 1/83
7 ಅಸ್ನಲ್ ಮತಾಲಿಬ್ 1/260
8 ಅಲ್ ಗುರರುಲ್ ಬಹಿಯ್ಯ 2/31
9 ಫತ್'ಹುಲ್ ವಹ್ಹಾಬ್ 1/89
10 ಮನ್ಹಜುತ್ತುಲ್ಲಾಬ್ 1/24
11 ಅಲ್ ಮಿನ್ಹಾಜುಲ್ ಖವೀಮ್ 1/179
12 ತುಹ್ಫತುಲ್ ಮುಹ್ತಾಜ್ 2/462
13 ಅಲ್ ಇಖ್'ನಾಹ್ 1/183
14 ಮುಗ್ನಿಲ್ ಮುಹ್ತಾಜ್ 1/557
15 ನಿಹಾಯತುಲ್ ಮುಹ್ತಾಜ್ 2/326
16 ಮಹಲ್ಲಿ 1/327
17 ಹಾಶಿಯತುಲ್ ಜಮಲ್ 2/36
18 ಶರಹುಲ್ ಮುಖದ್ದಿಮತಿಲ್ ಹಲ್ರಮಿಯ್ಯ1/397
19 ಹಾಶಿಯತುಲ್ ಬುಜೈರಿಮಿ 1/393
20 ನಿಹಾಯತು ಝ್ಝೈನ್ 142
21 ಅಸ್ಸಿರಜುಲ್ ವಹ್ಹಾಜ್ 1/88
ಇನ್ನೂ ಅನೇಕ ಕಿತಾಬ್'ಗಳಲ್ಲೂ ಇದನ್ನು ಕಾಣಬಹುದು

*ಕೈಯಲ್ಲಿ ಖಡ್ಗ/ಕೋಲು ಯಾಕೆ?*

ಕುಕ್ಕಿಲರವರು ಪಂಪ್ವೇಲ್ ಖತೀಬರ ಕೈಯಲ್ಲಿ ಕೋಲು ಕಂಡಾಗ ಅದನ್ನೇ ಚಿಂತಿಸುತ್ತಾ ಕುಳಿತರಂತೆ.ಈ ಕೋಲು ಯಾಕೆ ಕೈಯಲ್ಲಿ ಹಿಡಿಯಬೇಕು?
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹಿಡಿಯುತ್ತಿದ್ದರೇ?
ಹಿಡಿದಿದ್ದರೆ ಎಲ್ಲಾ ಖುತುಬಾಗಳಲ್ಲಿ ಹಿಡಿಯುತ್ತಿದ್ದರೇ?
ಹಿಡಿದಿದ್ದಾದರೂ ಯಾಕಾಗಿ?

ಖುರ್'ಆನ್ ಮತ್ತು ಹದೀಸ್ ವ್ಯಾಖ್ಯಾನ ಗ್ರಂಥಗಳಾದ ಫಿಖ್ಹೀ ಗ್ರಂಥಗಳು ಅಧ್ಯಯನ ಮಾಡುತ್ತಿದ್ದರೆ ಈ ಜಿಜ್ಞಾಸೆ ಅವರಿಗೆ ಹುಟ್ಟುತ್ತಿರಲಿಲ್ಲ.
ಚಿಂತಿಸಿ ಕುಳಿತಿರುವಾಗ ಕುಕ್ಕಿಲರಿಗೆ ಒಂದು ಉತ್ತರ ಕೂಡಾ ದೊರಕಿತು.
ಮಾತ್ರ ಅದನ್ನು ಪುಟ್ಟ ಮಕ್ಕಳೊಂದಿಗೂ ಹೇಳುವಂತಿಲ್ಲ.
ಅದೇನೆಂದರೆ ಮಕ್ಕಾ ಮತ್ತು ಮದೀನದ ಶತ್ರುಗಳ ವೈರತ್ವ ಶಕ್ತಿಯಾಗಿದ್ದರಿಂದ ಆತ್ಮ ಸಂರಕ್ಷಣೆಗಾಗಿ ಕೈಯಲ್ಲಿ ಕೋಳು ಹಿಡಿದಿದ್ದಾಗಿರಬಹುದು.
😃😃😃

ಶತ್ರುಗಳನ್ನು ಹೆದರಿ ಖುತುಬಾ ಪಾರಾಯಣ ವೇಳೆ ಖಡ್ಗ ಹಿಡಿದಿದ್ದರೆ ಖುತುಬಾ ಆಲಿಸುವ ಸ್ವಹಾಬಿಗಳೂ ಕೂಡಾ ಖಡ್ಗ ಹಿಡಿಯಬೇಡವೇ?
ಸ್ವಹಾಬಿಗಳು ಖಡ್ಗ ಹಿಡಿದು ಜುಮಾಗೆ ಹೋದದ್ದಾಗಿ ಎಲ್ಲಿಯಾದರೂ ಕುಕ್ಕಿಲ ತಿಳಿದಿದ್ದಾರೆಯೇ?
ನೆರೆದ ಸಭಿಕರು ಕೈಯಲ್ಲಿ ಖಡ್ಗ ಅಥವಾ ಕೋಲು ಹಿಡಿಯಿವುದು ಸುನ್ನತ್ ಎಂದು ಯಾರಾದರೂ ಹೇಳಿದ್ದಾರೆಯೇ?


ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಖುತುಬಾದ ವೇಳೆ ಖಡ್ಗ ಹಿಡಿದ ಕಾರಣವೇನು?
ಇಮಾಮರುಗಳು ಅವರ ಗ್ರಂಥಗಳಲ್ಲಿ ಅದನ್ನು ಉಲ್ಲೇಖಿಸಿದ್ದಾರೆ
والحكمة في ذلك الاشارة الي ان هذا الدين قام بالسلاح(محلي 1/327) 
ಶತ್ರುಗಳಿಂದ ಖಡ್ಗಗಳ ದಾಳಿಯನ್ನು ಸಹಿಸಿ ಈ ದೀನ್ ನೆಲೆ ನಿಂತಿದೆ ಎಂಬ ಸೂಚನೆಗಾಗಿ ಖಡ್ಗವನ್ನು ಹಿಡಿಯಲಾಗುತ್ತದೆ.(ಮಹಲ್ಲಿ 1/327)
ಖಡ್ಗ ಹಿಡಿಯಿವುದರ ಉದ್ದೇಶ ಸ್ಪಷ್ಟವಾಗಿ ಇಮಾಮರುಗಳು ವಿವರಿಸಿದ್ದಾರೆ.
ಇಸ್ಲಾಮಿನ ಕುರಿತು ಆಳವಾಗಿ ಅಧ್ಯಯನ ನಡೆಸಿದರೆ ಯಾರಿಗೂ ಯಾವುದರಲ್ಲೂ ಜಿಜ್ಞಾಸೆ ಹುಟ್ಟಲಾರದು.

ರಿಫಾಯೀ ಶೈಖ್ ರನ್ನು ಕಅಬಾ ತವಾಫ್ ಮಾಡಿತೇ?

*ರಿಫಾಯೀ ಶೈಖ್ ರನ್ನು ಕಅಬಾ ತವಾಫ್ ಮಾಡಿತೇ?*
--------------------------------------------
📝 ಮುನೀರ್ ಸಖಾಫಿ,ಅಲ್ ಫುರ್ಖಾನೀ ಸಾಲೆತ್ತೂರು
____________________________
ರಿಫಾಈ ಶೈಖ್ ರವರು ದಫ್ ಬಾರಿಸುತ್ತಾ ಕಅಬಾ ತವಾಫ್ ಮಾಡುತ್ತಿರುವಾಗ ಮಕ್ಕಾದ ಜನರು ಅದನ್ನು ವಿರೋಧಿಸಿದರು.ಆಗ ರಿಫಾಈ ಶೈಖ್ ರವರು ತನ್ನ ಕೈಯಲ್ಲಿದ್ದ ದಫ್ಫನ್ನು ಕಅಬಾದ ಗೋಡೆಗೆ ಸಿಲುಕಿಸಿದರು.ಆಗ ಕಅಬಾ ಅವರನ್ನು ಸುತ್ತು ಬರಲಾರಂಭಿಸಿತು.ಆಗ ಅಲ್ಲಾಹನು ರಿಫಾಯೀ ಶೈಖ್ ರವರನ್ನು ಕರೆದು ಸಾಕು ಎಂದು ಹೇಳಿದನು.
(ಇದು ರಿಫಾಯೀ ಮಾಲೆಯ 3 ಗೆರೆಗಳ ಸಾರಾಂಶ)

ರಿಫಾಯೀ ಶೈಖ್ ರವರನ್ನು ಕಅಬಾ ತವಾಫ್ ಮಾಡಿದ್ದು ಸರಿಯೇ?
ಇದು ಅಂಗೀಕರಿಸಬಹುದೇ?
ಇದಕ್ಕೆ ಪುರಾವೆಯಿದೆಯೇ?

ಈ ಎಲ್ಲಾ ಸಂಶಯಗಳಿಗೆ ಉತ್ತರವನ್ನು ನೋಡೋಣ.

ಕಅಬಾ ಎಂದುವುದು ಅಲ್ಲಾಹನ ಸೃಷ್ಠಿಯಾಗಿದೆ.
ಅಲ್ಲಾಹನ ಸೃಷ್ಟಿಗಳನ್ನು ಒಂದು ಸ್ತಳದಿಂದ ಇನ್ನೊಂದು ಸ್ಥಳಕ್ಕೆ ಚಲಾಯಿಸಲು ಅಲ್ಲಾಹನಿಗೆ ಸಾಧ್ಯವಿದೆ ಎಂಬುವುದರಲ್ಲಿ ಯಾರಿಗೂ ಸಂಶಯವಿರಲಾರದು.

ಬೃಹತ್ ಗುಡ್ಡಗಳನ್ನು ಅಲ್ಲಾಹನು ಒಂದು ಕಡೆಯಿಂದ ಇನ್ನೊಂದು ಕಡೆಗೆ ನೀಗಿಸಿದ ಚರಿತ್ರೆಗಳು  ಧಾರಾಳವಿದೆ.

ಅಲ್ಲಾಹನು ಹೇಳುತ್ತಾನೆ,
وَإِذْ أَخَذْنَا مِيثَٰقَكُم وَرَفَعْنَا فَوْقَكُمُ ٱلطُّورَ خُذُوا۟ مَآ ءَاتَيْنَٰكُم بِقُوَّةٍۢ وَٱذْكُرُوا۟ مَا فِيهِ لَعَلَّكُمْ تَتَّقُونَ(البقرة 63)
 ನಿಮ್ಮ ಮೇಲೆ ‘ಥೂರ್’   ಬೆಟ್ಟವನ್ನು ಎತ್ತಿ ಹಿಡಿದು, ನಾವಿತ್ತ ಆದೇಶಗಳನ್ನು ಪರಿಶ್ರಮಪೂರ್ವಕ ಅನುಸರಿಸಿರಿ, ಅದರ ಸಾರವನ್ನು ಸ್ಮರಿಸಿಕೊಳ್ಳಿರಿ. ನೀವು ಧರ್ಮಾತ್ಮರಾಗುವಿರಿ’ ಎಂದು ನಿಮ್ಮಿಂದ ಧೃಢಪ್ರತಿಜ್ಞೆ ಪಡಕೊಂಡ ಸಂದರ್ಭ(ವನ್ನು ಸ್ಮರಿಸಿರಿ)
(ಅಲ್ ಬಖರ 63)

ಇದರ ವ್ಯಾಖ್ಯಾನದಲ್ಲಿ ಇಮಾಮ್ ಬೈಳಾವೀ ಬರೆಯುತ್ತಾರೆ,
ಪ್ರವಾದೀ ಮೂಸಾ ಅಲೈಹಿಸ್ಸಲಾಮ್ ರವರು ತೌರಾತ್ ನೊಂದಿಗೆ ಜನರೆಡೆಗೆ ಬಂದಾಗ ಅದರಲ್ಲಿರುವ ಕಠಿಣ ನಿಯಮಗಳನ್ನು ಪಾಲಿಸಲು ಜನರು ಹಿಂಜರಿದರು.ಆವಾಗ ಅಲ್ಲಾಹನು ಜಿಬ್ರೀಲರೊಂದಿಗೆ  ಥೂರ್ ಪರ್ವತವನ್ನು ಅವರ ಮೇಲೆ ಎತ್ತಿ ಹಾಕುವಂತೆ ಆಜ್ಞಾಪಿಸಿದಾಗ ಅವರು ತೌರಾತ್ ಸ್ವೀಕರಿಸಿದರು.(1)
(ತಫ್ಸೀರ್ ಬೈಳಾವಿ1/85)
ಯಾರಿಗೂ ಅಲುಗಾಡಿಸಲು ಸಾಧ್ಯವಿಲ್ಲದ ಬೃಹತ್ ಬೆಟ್ಟವನ್ನು ಜನರ ಮೇಲೆ ಎತ್ತಿ ಹಿಡಿಯುವಂತೆ ಆಜ್ಞಾಪಿಸಿದ ಅಲ್ಲಾಹನಿಗೆ ಕ ಅಬಾ ವನ್ನು ರಿಫಾಯೀ ಶೈಖ್ ಗೆ ಸುತ್ತುವರಿಸಲು ಸಾಧ್ಯವಿಲ್ಲವೇ?

ಅದು ಅಸಾಧ್ಯವೆಂದು ನಂಬುವವನಾದರೆ ಆತನಗಿಗೆ ಅಲ್ಲಾಹನ ಮೇಲೆ ನಂಬಿಕೆಯಿಲ್ಲವೆಂದರ್ಥ.
----------------------------------------
*ಪ್ರವಾದೀ ಲೂತ್  ಅಲೈಹಿಸ್ಸಲಾಮ್ ರ ಜನತೆಗೆ ನೀಡಿದ ಶಿಕ್ಷೆಯ ಬಗ್ಗೆ ಅಲ್ಲಾಹನು ಈ ರೀತಿ ಹೇಳುತ್ತಾನೆ,*
        فَلَمَّا جَآءَ أَمْرُنَا جَعَلْنَا عَٰلِيَهَا سَافِلَهَا وَأَمْطَرْنَا عَلَيْهَا حِجَارَةًۭ مِّن سِجِّيلٍۢ مَّنضُودٍۢ
        ಹೀಗೆ ನಮ್ಮ ಆಜ್ಞೆ ಬಂದಾಗ ನಾವು ಆ ನಾಡನ್ನು ಬುಡಮೇಲು ಮಾಡಿಬಿಟ್ಟೆವು ಮತ್ತು ಅವರ ಮೇಲೆ ಬಿಸಿ ಕಲ್ಲುಗಳನ್ನು ಎಡೆಬಿಡದೆ ಮಳೆಗರೆದೆವು.
(ಸೂರ ಹೂದ್ 82)

ಇಮಾಮ್ ಬಗವೀ (ರ) ಬರೆಯುತ್ತಾರೆ,

5 ಪಟ್ಟಣಗಳನ್ನೊಳಗೊಂಡ ದೊಡ್ಡ ಊರಾಗಿತ್ತು ಅದು.4 ಲಕ್ಷ  ಜನರು ವಾಸ ಮಾಡುತ್ತಿದ್ದ ಊರು.ಆ ಊರನ್ನು ಬುಡ ಮೇಲಾಗಿ ಅವರ ಮೇಲೆ ಹಾಕಿ ಅವರನ್ನು ನಾಶಪಡಿಸಲಾಯಿತು.(2)
(ಮಆಲಿಮುತ್ತಂಝೀಲ್ 4/193)

ಊರನ್ನೇ ಬುಡಮೇಲಾಗಿಸುವ ಅಲ್ಲಾಹನಿಗೆ ಕಅಬಾವನ್ನು ರಿಫಾಯೀ ಶೈಖ್ ಗೆ ಸುತ್ತಿಸಲು ಸಾಧ್ಯವಿಲ್ಲವೇ?
---------------------------------------------

ಚಂದ್ರನು ಹೋಳಾದ ಬಗ್ಗೆ ಖುರ್ ಆನ್ ಈ ರೀತಿ ಹೇಳುತ್ತದೆ.
      وَٱنشَقَّ ٱلْقَمَرُ (سورةرالقمر 2)
  ಚಂದ್ರನು ಹೋಳಾದನು.(ಅಲ್ ಖಮರ್ 2)

 ಮಕ್ಕಾ ಖುರೈಶ್ ಗಳು ಪ್ರವಾದೀ ವರ್ಯರಲ್ಲಿ ಅಲ್ಲಾಹನು ಏಕನು ಎಂಬುವುದಕ್ಕೆ ಪುರಾವೆ ಕೇಳಿದಾಗ ಚಂದ್ರನನ್ನು ಎರಡು ಹೋಳು ಮಾಡುವ ಮೂಲಕ ಪುರಾವೆಯನ್ನು ತೋರಿಸಲಾಯಿತು.(3)
(ತಫ್ಸೀರು ತ್ವಬ್ರೀ 22/565)

ಚಂದ್ರನ ವ್ಯಾಸವು 3,474 ಕಿ.ಮೀ.ಗಳಿದೆ.

   ಕಅಬಾದ   ಉದ್ದ
12.86 ಮೀ (42 ಅಡಿ 2 ಇಂಚು) 
ಅಗಲ
11.03 ಮೀ (36 ಅಡಿ 2 ಇಂಚು)
ಎತ್ತರ (ಗರಿಷ್ಠ)
13.1 ಮೀ (43 ಅಡಿ 0 ಇಂಚು)
ಕಅಬಾಗಿಂತ ಸಾವಿರಾರು ಪಟ್ಟು ಹೆಚ್ಚು ವಿಸ್ತೀರ್ಣವಿರುವ ಚಂದ್ರನನ್ನು ಹೋಳು ಮಾಡಿದ ಅಲ್ಲಾಹನಿಗೆ ಕಅಬಾವನ್ನು ಸುತ್ತಿಸಲು ಸಾಧ್ಯವಿಲ್ಲವೇ?
---------------------------------------
*ಹದೀಸುಗಳಲ್ಲಿ*

ಜಾಬಿರ್ (ರ)ವರದಿ,
ಒಮ್ಮೆ ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಿಸರ್ಜನೆ ಆವಶ್ಯಕ್ಕಾಗಿ ಒಂದು ಕಡೆ ತೆರಳಿದರು.ನಾನು ಅವರೊಂದಿಗೆ ನೀರಿನೊಂದಿಗೆ ತೆರಳಿದೆ.
ಆವಾಗ ಅಲ್ಲಿ ಮರೆಯಾಗಿ ಏನೂ ಇರಲಿಲ್ಲ.ಅಲ್ಲೇ ಎರಡು ಮರಗಳಿದ್ದವು.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಆ ಮರದ ಒಂದು ಗೆಲ್ಲನ್ನು ಹಿಡಿದು"ನನ್ನನ್ನು ನೀನು ಹಿಂಬಾಲಿಸು"ಎಂದು ಹೇಳಿದರು.ಆವಾಗ ಆ ಮರವು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಹಿಂಬಾಲಿಸುತ್ತಾ ಬರ ತೊಡಗಿತು.ನಂತರ ಇನ್ನೊಂದು ಮರದ ಬಳಿ ಹೋಗಿ ಅದೇ ರೀತಿ ಹೇಳಿದರು.ಆ ಮರ ಕೂಡಾ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಹಿಂಬಾಲಿಸುತ್ತಾ ಬಂತು.ಆ ಎರಡು ಮರದೊಂದಿಗೆ "ನೀವು ಅಂಟಿಕೊಳ್ಳಿರಿ"ಎಂದು ಹೇಳಿದಾಗ 2 ಮರವೂ ಪರಸ್ಪರ ಅಂಟಿಕೊಂಡಿತು.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ವಿಸರ್ಜೆನೆಯ ನಂತರ ಆ ಮರವು ಮೊದಲಿನಂತೆಯೇ ಬೇರ್ಪಟ್ಟು  ನಿಂತಿತು.(4)
(ಸ್ವಹೀಹ್ ಮುಸ್ಲಿಮ್)


ದೂರಲ್ಲಿದ್ದ 2 ಮರಗಳನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಮರೆಯಾಗಿ ನಿಲ್ಲಿಸಿದ ಅಲ್ಲಾಹನಿಗೆ  ರಿಫಾಯೀ ಶೈಖ್ ರಿಗೆ ಕ ಅಬಾ ತವಾಫ್ ಮಾಡಿಸಲು ಸಾಧ್ಯವಿಲ್ಲವೇ?
------------------------------------------
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಚಿಕ್ಕಪ್ಪ ಅಬೂ ತಾಲಿಬ್ ರೊಂದಿಗೆ ವ್ಯಾಪಾರಕ್ಕಾಗಿ ಶಾಮ್ ಗೆ ಹೋದಾಗ ದಾರಿ ಮಧ್ಯೆ ಪುರೋಹಿತರೊಬ್ಬರು ಅದ್ಭುತವನ್ನು ಹೇಳಿದ ಚರಿತ್ರೆ ಎಲ್ಲರಿಗೂ ತಿಳಿದಿದೆ.
ಇಮಾಮ್ ತಿರ್ಮುದಿ ಮತ್ತು ಹಾಕಿಮ್ (ರ) ವರದಿಯಲ್ಲಿ ಈ ರೀತಿ ಕಾಣಬಹುದು.
ಖುರೈಶ್'ಗಳು ಆ ಪುರೋಹಿತರೊಂದಿಗೆ ಈ ಮಗುವಿನ ಮಹತ್ವ ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದಾಗ ಅವರು ಹೇಳಿದರು."ನೀವು ಈ ಮಗು(ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮ್)ವಿನೊಂದಿಗೆ ಬರುತ್ತಿದ್ದಾಗ ಎಲ್ಲಾ ಕಲ್ಲು ಮತ್ತು ಮರಗಳು ಸುಜೂದ್ ಮಾಡುವುದಾಗಿ ನಾನು ನೋಡಿದೆ.(5)
(ಹಾಕಿಮ್,ತುರ್ಮುದಿ)
ನಿರ್ಜೀವ ವಸ್ತುಗಳನ್ನು ಸುಜೂದ್ ಮಾಡಿಸಿದ ಅಲ್ಲಾಹನಿಗೆ ಕಅಬಾ ತವಾಫ್ ಮಾಡಿಸಲು ಸಾಧ್ಯವಿಲ್ಲವೇ?
------------------------------------------
ಇಬ್ನ್ ಉಮರ್ (ರ)ವರದಿ,
ನಾವು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಒಂದು ಯಾತ್ರೆಯಲ್ಲಿದ್ದೆವು.
ಆವಾಗ ಅಹ್'ರಾಬಿಯೊಬ್ಬರು ಕಾಣ ಸಿಕ್ಕಿದರು.ನೀವು ಶಹಾದತ್ ಕಲಿಮ ಹೇಳುವಿರಾ ಎಂದು ಅವರೊಂದಿಗೆ ಪ್ರವಾದೀವರ್ಯರು ಕೇಳಿದಾಗ ನೀವು ಅಲ್ಲಾಹನ ಪ್ರವಾದೀ ಎಂಬುವುದಕ್ಕೆ ಪುರಾವೇ ಏನು? ಎಂದು ಒವರು ಕೇಳಿದಾಗ ಒಂದು ಮರವನ್ನು ತೋರಿಸಿ ಹೇಳಿದರು."ಈ ಮರವು ಸಾಕ್ಷಿಯಾಗಿದೆ."ಆ ಮರವನ್ನು ಪ್ರವಾದೀವರ್ಯರು ಸಮೀಪಕ್ಕೆ ಕರೆದಾಗ ಆ ಮರವು ಪ್ರವಾದೀ ವರ್ಯರ ಬಳಿ ನಿಂತು 3 ಸಲ ಶಹಾದತ್ ಕಲಿಮ ಹೇಳಿತು.ನಂತರ ಅದು ಬಂದಲ್ಲಿಗೆ ಹೋಗಿ ನಿಂತಿತು.(6)
(ವರದಿ ಇಮಾಮ್ ದಾರಿಮಿ 16)

ಮರವು ಒಂದು ಕಡೆಯಿಂದ ಬಂದು ಶಹಾದತ್ ಕಲಿಮ ಹೇಳಿ ಅದೇ ಸ್ಥಳಕ್ಕೆ ತೆರಳುವಂತೆ ಮಾಡಿದ ಅಲ್ಲಾಹನಿಗೆ ರಿಫಾಈ ಶೈಖ್ ರವರಿಗೆ ಕ ಅಬಾ ತವಾಫ್ ಮಾಡಿಸಲು ಸಾಧ್ಯವಿಲ್ಲವೇ?
-------------------------------------------
ಸ್ವಹಾಬೀ ಪ್ರಮುಖರಾದ ಸಹ್'ದ್ (ರ)ವಫಾತ್ ಆದಾಗ ಅಲ್ಲಾಹನ ಅರ್ಶ್ ನಡುಗಿತು(7)
(ಬುಖಾರಿ ,ಮುಸ್ಲಿಮ್ )

ಕಅಬಾ ಅಲ್ಲಾಹನ ಸೃಷ್ಠಿಯಾದಂತೆ ಅರ್ಶ್ ಅಲ್ಲಾಹನ ಅತೀ ದೊಡ್ಡ ಸೃಷ್ಠಿಯಾಗಿದೆ.ಅದು ವ್ಯಕ್ತಿಯೊಬ್ಬರ ಮರಣಕ್ಕಾಗಿ ನಡುಗಿದ್ದರೆ ಕಅಬಾ ರಿಫಾಯೀ ಶೈಖ್ ರಿಗೆ ತವಾಫ್ ಮಾಡಿದ್ದಕ್ಕೆ ಅದ್ಭುತವೇಕೆ?

ಅಲ್ಲಾಹನ ಅಂಬಿಯಾ ಮತ್ತು ಔಲಿಯಾಗಳಿಗೆ ಅಲ್ಲಾಹನು ಉನ್ನತ ಸ್ಥಾನಗಳನ್ನು ನೀಡಿ ಗೌರವಿಸಿದ್ದಾನೆ.
ಇಸ್ಲಾಮಿನ ಕುರಿತು ಕಲಿತವನಿಗೆ ಇದರಲ್ಲಿ ಅಚ್ಚರಿಯೇನೂ ಇಲ್ಲ.
ರಿಫಾಯೀ ಶೈಕ್ ರ ಪ್ರಸ್ತುತ ಘಟನೆ ಚರಿತ್ರೆಗಳಲ್ಲಿ ದಾಖಲಾದ ಸಂಗತಿಯಾಗಿದೆ.
ಇಮಾಮ್ ಸುಯೂತೀ ಬರೆಯುತ್ತಾರೆ,

ಅಲ್ಲಾಹನ ಔಲಿಯಾಗಳ ಪೈಕಿ ಹಲವರಿಗೆ ಕ ಅಬಾ ತವಾಫ್ ಮಾಡಿದ ಘಟನೆ ಪ್ರಸಿದ್ಧವಾಗಿದೆ.(8)
(ಅಲ್ ಹಾವೀ ಲಿಲ್ ಫತಾವಾ 1/257) 
......................................

ಮೇಲಿನ ಬರಹದಲ್ಲಿ ಹೇಳಿದ ಹದೀಸ್ ಮತ್ತು ಉದ್ಧರಣಿಗಳನ್ನು ಈ ಕೆಳಗೆ ನೀಡುತ್ತಿದ್ದೇನೆ.
(1)
روي أن موسى عليه الصلاة والسلام لما جاءهم بالتوراة فرأوا ما فيها من التكاليف الشاقة كبرت عليهم وأبوا قبولها، فأمر جبريل عليه السلام فقلع الطور فظلله فوقهم حتى قبلوا.( تفسير بيضاوي1/85)

(2)وذلك أن جبريل عليه السلام أدخل جناحه تحت قرى قوم لوط المؤتفكات وهي خمس مدائن، وفيها أربعمائة ألف. وقيل: أربعة آلاف ألف، فرفع المدائن كلها حتى سمع أهل السماء صياح الديكة، ونباح الكلاب، فلم يُكفأ لهم إناءٌ ولم ينتبه نائمٌ، ثم قَلَبها فجعل عاليها سافلها.
(معالم التنزيل 4/193)

(3)وقوله ﴿وَانْشَقَّ الْقَمَرُ﴾ يقول جلّ ثناؤه: وانفلق القمر، وكان ذلك فيما ذُكر على عهد رسول الله ﷺ وهو بمكة، قبل هجرته إلى المدينة، وذلك أن كفار أهل مكة سألوه آية، فآراهم ﷺ انشقاق القمر، آية حجة على صدق قوله، وحقيقة نبوّته؛ فلما أراهم أعرضوا وكذبوا،
(تفسير الطبري 22/565)

(4)
عن جابر 
سِرْنا مع رسولِ اللهِ صلَّى اللهُ عليه وسلَّم حتَّى نزَلْنا واديًا أَفْيَحَ فذهَب رسولُ اللهِ صلَّى اللهُ عليه وسلَّم يقضي حاجتَه واتَّبَعْتُه بإِداوةٍ مِن ماءٍ فنظَر رسولُ اللهِ صلَّى اللهُ عليه وسلَّم فلَمْ يَرَ شيئًا لِيستترَ به فإذا شجَرتانِ بشاطئِ الوادي فانطلَق رسولُ اللهِ صلَّى اللهُ عليه وسلَّم إلى إحداهما فأخَذ بغُصنٍ مِن أغصانِها فقال : ( انقادي علَيَّ بإذنِ اللهِ ) فانقادَتْ معه كالبعيرِ المَخشوشِ الَّذي يُصانِعُ قائدَه حتَّى أتى الشَّجرةَ الأخرى فأخَذ بغُصنٍ مِن أغصانِها فقال : ( انقادي علَيَّ بإذنِ اللهِ ) فانقادَتْ معه كذلك حتَّى إذا كان النِّصفُ جمَعهما فقال : ( التَئِما علَيَّ بإذنِ اللهِ ) فالتأَمَتا قال جابرٌ : فخرَجْتُ أُحضِرُ مخافةَ أنْ يُحِسَّ رسولُ اللهِ صلَّى اللهُ عليه وسلَّم بقُربي فيتباعَدَ فجلَسْتُ فحانَتْ منِّي لَفتةٌ فإذا أنا برسولِ اللهِ صلَّى اللهُ عليه وسلَّم مُقبِلٌ وإذا الشَّجَرتانِ قد افترَقتا فقامتْ كلُّ واحدةٍ منهما على ساقٍ(مسلم 3012)

(5)
 خرجَ أبو طالبٍ إلى الشّامِ وخرج معَه النَّبيُّ ﷺ في أشياخٍ مِن قريشٍ فلمّا أشرَفوا على الرّاهبِ هبَطوا فحلُّوا رحالَهم فخرجَ إليْهمُ الرّاهبُ وَكانوا قبلَ ذلِكَ يمرُّونَ بِهِ فلا يخرجُ إليْهم قالَ فَهم يَحلُّونَ رحالَهم فجعلَ يتخلَّلُهمُ الرّاهبُ حتّى جاءَ فأخذَ بيدِ رسولِ اللَّهِ ﷺ قالَ هذا سيِّدُ العالمينَ هذا رسولُ ربِّ العالمينَ يبعثُهُ اللَّهُ رحمةً للعالمينَ فقالَ لَهُ أشياخٌ من قريشٍ ما عِلمُكَ فقالَ إنَّكم حينَ أشرفتُم منَ العَقبةِ لم يبقَ شجرٌ ولا حجرٌ إلّا خرَّ ساجِدًا ولا يَسجُدانِ إلّا لنبيٍّ وإنِّي أعرفُهُ بخاتمِ النُّبوَّةِ أسفلَ من غُضروفِ كتفِهِ مثلَ التُّفّاحةِ ثمَّ رجعَ فصنعَ لَهم طعامًا فلمّا أتاهم بِهِ وَكانَ هوَ في رِعيةِ الإبلِ قالَ أرسِلوا إليْهِ فأقبلَ وعليْهِ غمامةٌ تظلُّهُ فلمّا دنا منَ القَومِ وجدهم قد سبقوهُ إلى فَيءِ الشَّجرةِ فلمّا جلسَ مالَ فيءُ الشَّجرةِ عليْهِ فقالَ انظُروا إلى فَيءِ الشَّجرةِ مالَ عليْهِ فقالَ أنشُدُكُم اللَّهَ إيُّكم وليُّهُ قالوا أبو طالبٍ فلَم يزل يناشدُهُ حتّى ردَّهُ أبو طالبٍ وبعثَ معَهُ أبو بَكرٍ رضيَ اللهُ عَنهُ بلالًا وزوَّدَهُ الرّاهبُ منَ الْكعْكِ والزَّيتِ.
 ( الترمذي (٣٦٢٠)، 

(6)عن ابن عمر قال كنا مع رسول الله صلى الله عليه وسلم في سفر فأقبل أعرابي فلما دنا منه قال له رسول الله صلى الله عليه وسلم أين تريد قال إلى أهلي قال هل لك في خير قال وما هو قال تشهد أن لا إله إلا الله وحده لا شريك له وأن محمدا عبده ورسوله قال ومن يشهد على ما تقول قال هذه السلمة فدعاها رسول الله صلى الله عليه وسلم وهي بشاطئ الوادي فأقبلت تخد الأرض خدا حتى قامت بين يديه فاستشهدها ثلاثا فشهدت ثلاثا أنه كما قال ثم رجعت إلى منبتها ورجع الأعرابي إلى قومه وقال إن اتبعوني أتيتك بهم وإلا رجعت فكنت معك
(سنن الدارمي 16)

(7)
عن جابر رضي الله عنه
قالَ رَسولُ اللهِ صلَّى اللَّهُ عليه وسلَّمَ وجِنازةُ سَعْدِ بنِ مُعاذٍ بيْنَ أيْدِيهِم: اهْتَزَّ لَها عَرْشُ الرَّحْمَنِ
(بخاري 3803 مسلم 2466)

(8)
 اشتهر عن كثير من الفقهاء وغيرهم أن الكعبة المعظمة شوهدت تطوف بجماعة من الأولياء في أوقات في غير مكانها ومعلوم انها في مكانها لم تفارقه في تلك الاوقات 
(الحاوي للفتاوي 1/257)

ಪುರಾವೆಗಳು ಇನ್ನೂ ಇವೆ.ಮುಂದಿನ ಭಾಗದಲ್ಲಿ ಬರೆಯೋಣ

23/05/2024

ಬರಾಅತ್ ರಾತ್ರಿ: ಇಬ್ನ್ ತೀಮಿಯ ಮತ್ತು ಅಲ್ಬಾನಿಗೆ ಪಥ್ಯವಾದದ್ದು ಸಲಪಿಗೆ ಯಾಕೆ ಪಥ್ಯವಾಗಲಿಲ್ಲ?

*ಬರಾಅತ್ ರಾತ್ರಿ:*
*ಇಬ್ನ್ ತೀಮಿಯ ಮತ್ತು ಅಲ್ಬಾನಿಗೆ ಪಥ್ಯವಾದದ್ದು ಸಲಪಿಗೆ ಯಾಕೆ ಪಥ್ಯವಾಗಲಿಲ್ಲ?* _____________________________
📝 *ಮುನೀರ್ ಸಖಾಫಿ,ಅಲ್ ಫುರ್ಖಾನೀ,ಸಾಲೆತ್ತೂರು*

ಬರಾಅತ್ ರಾತ್ರಿ ಎಂಬುವುದು ಮಹತ್ವವಿರುವ ರಾತ್ರಿ ಎಂಬುವುದರಲ್ಲಿ ಯಾರಿಗೂ ಅಭಿಪ್ರಾಯ ವ್ಯತ್ಯಾಸವಿಲ್ಲ.

ಖುರ್'ಆನ್ ಮತ್ತು ಹದೀಸುಗಳ ಮೂಲಕ ಅದು ಸಾಬೀತಾಗಿದೆ.
ಇಮಾಮರುಗಳ ಧಾರಾಳ ಗ್ರಂಥಗಳಲ್ಲಿ ಅದು ಕಾಣಬಹುದಾಗಿದೆ.
ಇಮಾಮರುಗಳ ಉದ್ಧರಣಿಗಳನ್ನು ಸಧ್ಯಕ್ಕೆ ಇಲ್ಲಿ ಬರೆಯಲು ಉದ್ದೇಶಿಸುವುದಿಲ್ಲ.

ವಹ್ಹಾಬಿಗಳ ಅಂಗೀಕೃತ ನಾಯಕರಾಗಿದ್ದಾರೆ ಇಬ್ನ್ ತೀಮಿಯ ಮತ್ತು ನಾಸಿರುದ್ದೀನ್ ಅಲ್ಬಾನೀ ಎಂಬವರು.ಅವರು ಬರಾಅತ್ ರಾತ್ರಿಯ ಮಹತ್ವವನ್ನು ಅವರ ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ.

ಇಬ್ನ್ ತೀಮಿಯ ಹೇಳುವುದು ನೋಡಿ,
ليلة النصف من شعبان فقد روى في فضلها من الأحاديث المرفوعة والآثار ما يقتضي أنها ليلة مفضلة وأن من السلف من كان يخصها بالصلاة فيها
(اقتضاء الصراط المستقيم 138)
ಶಅಬಾನ್ 15 ರ ಮಹತ್ವ ವಿವರಿಸುವ ದಾರಾಳ ಹದೀಸುಗಳು ವರದಿಯಾಗಿದೆ.ಪೂರ್ವೀಕರು ಅಂದಿನ ರಾತ್ರಿ ಸುನ್ನತ್ ನಮಾಝ್ ಮಾಡುತ್ತಿದ್ದರು.
(ಇಖ್ತಿಳಾವುಸ್ಸಿರಾತುಲ್ ಮುಸ್ತಖೀಮ್ 138 ಪುಟ)

ವಹ್ಹಾಬಿಗಳ ಇನ್ನೊರ್ವ ನಾಯಕ ಅಲ್ಬಾನಿ ತನ್ನ ಪುಸ್ತಕದಲ್ಲಿ ಬರಾಅತ್ ರಾತ್ರಿ ಯ ಬಗ್ಗೆ ವರದಿಯಾದ ಹಲವಾರು ಹದೀಸುಗಳನ್ನು ವರದಿ ಮಾಡಿ ಕೊನೆಗೆ ಈ ರೀತಿ ಬರೆಯುತ್ತಾರೆ.
وجملة القول أن الحديث بمجموع هذه الطرق صحيح بلا ريب، والصحة تثبت بأقل منها عددا ما دامت سالمة من الضعف الشديد؛ كما في الشأن في هذا الحديث؛ فما نقله الشيخ القاسمي رحمه الله تعالى في (إصلاح المساجد) (ص 107)  عن أهل التعديل والجرح أنه ليس في فضل ليلة النصف من شعبان حديث يصح؛ فليس مما ينبغي الاعتماد عليه، ولئن كان أحد منهم أطلق مثل هذا القول؛ فإنما أوتي من قبل التسرع وعدم وسع الجهد لتتبع الطرق على هذا النحو الذي بين يديك، و الله تعالى هو الموفق.)
 السلسلة الصحيحة)

 ಒಟ್ಟು ಸಾರಾಂಶ ಈ ರೀತಿ ಹೇಳಬಹುದಾಗಿದೆ,ಬರಾಅತ್ 15 ರ ಮಹತ್ವ ವಿವರಿಸುವ ಹದೀಸ್ ಸ್ವಹೀಹ್ ಆಗಿರುತ್ತದೆ.ಅತಿಯಾದ ದುರ್ಬಲ ಆಗದಿದ್ದರೆ ಆ ಹದೀಸ್ ಗೆ ಸ್ವಹೀಹ್ ನ ಸ್ಥಾನವಿದೆ.ಹೀಗಿರುವಾಗ ಶೈಖ್ ಖಾಸಿಮಿ ಇಸ್ಲಾಹಿಲ್ ಮಸಾಜಿದ್ ಎಂಬ ಗ್ರಂಥದಲ್ಲಿ (ಶೈಖ್ ಖಾಸಿಮಿ ಎಂಬವರು ವಹ್ಹಾಬಿಗಳ ಒಬ್ಬ ನಾಯಕ.ಆ ಖಾಸಿಮಿಗೆ ವಿರುದ್ಧವಾಗಿ ಅಲ್ಬಾನಿ ಇಲ್ಲಿ ಬರೆಯುತ್ತಿದ್ದಾರೆ)
ಬರಾಅತ್ ರಾತ್ರಿಯ ಮಹತ್ವ ವಿವರಿಸುವ ಹದೀಸ್ ವರದಿಯಾಗಿಲ್ಲ ಎಂಬ ಮಾತಿಗೆ ಯಾವುದೇ ಪರಿಗಣನೆ ನೀಡಬೇಕಾಗಿಲ್ಲ.
ಬರಾಅತ್ ರಾತ್ರಿಗೆ ಮಹತ್ವವಿಲ್ಲ ಎಂದು ಯಾರಾದರೂ ಹೇಳುವುದಾದರೆ ಆತ ಹದೀಸ್ ನ ಬಗ್ಗೆ ಕಲಿಯದೆ ಹೇಳುತ್ತಿದ್ದಾನೆ ಎಂದು ತಿಳಿದಿರಬೇಕಾಗಿದೆ.
(ಸಿಲ್ ಸಿಲತು ಅಹಾದೀಸುಸ್ಸಹೀಹ ಎಂಬ ಅಲ್ಬಾನಿಯ ಪುಸ್ತಕದಿಂದ)

ಇದರಿಂದ ಬರಾಅತ್ ರಾತ್ರಿಯ ಮಹತ್ವವನ್ನು ವಹ್ಹಾಬಿಗಳ ನಾಯಕರೇ ಸಮ್ಮತಿಸಿದ್ದಾರೆಂದು ವ್ಯಕ್ತವಾಯಿತು.
ಅವರಿಗೆ ಪಥ್ಯವಾದದ್ದು ವಹ್ಹಾಬಿಗಳಿಗೆ ಪಥ್ಯವಾಗದಿರಲು ಕಾರಣವೇನು?
ಅಲ್ಲಾಹನೇ ಬಲ್ಲ.

Thursday, August 17, 2023

*ಪ್ರಥಮ ಬಹುಮಾನ ಕಾರು*🚘🚘🚘*ವ್ಯಾಪಕವಾಗುತ್ತಿರುವ ಸ್ಕೀಮ್ ಜಾಲ*---------------------------------------------✒️T.M ಮುಹ್ಯುದ್ದಿನ್ ಕಾಮಿಲ್ ಸಖಾಫಿ ತೋಕೆಇತ್ತೀಚಿನ ದಿನಗಳಲ್ಲಿ ಪೀಠೋಪಕರಣಗಳ ಅಂಗಡಿಯವರು ಹಾಗೂ ಇನ್ನಿತರರು ಹಲವು ತರಹದ ಸ್ಕೀಮ್ ಗಳು ನಡೆಸುವುದು ಕಂಡು ಬರುತ್ತಿದೆ.ಪ್ರತಿಯೊಬ್ಬರೂ ತಾವು ನಡೆಸುವ ಸ್ಕೀಮ್ ಗಳ ಬಗ್ಗೆ ಅದರಲ್ಲಿ ಧಾರ್ಮಿಕವಾದ ಯಾವುದೇ ಲೋಪದೋಷಗಳಿಲ್ಲವೆಂದು ಸಮರ್ಥಿಸುವುದರಿಂದ ಅದರ ಸತ್ಯಾಸತ್ಯತೆಗಳ ಬಗ್ಗೆ ತಿಳುವಳಿಕೆ ಇಲ್ಲದ ಹಲವು ಮುಗ್ಧರು ಅದರಲ್ಲಿ ಸದಸ್ಯರಾಗಿದ್ದಾರೆ.ಈ ಕುರಿತು ಲೇಖಕನಿಗೆ ಬಂದ ಹಲವಾರು ದೂರವಾಣಿಗಳ ಕಾರಣದಿಂದ ಅದರ ಬಗ್ಗೆ ಸಂಕ್ಷಿಪ್ತವಾದ ವಿವರಣೆಯೊಂದನ್ನು ಇಲ್ಲಿ ನೀಡುತ್ತಿದ್ದೇನೆ.ಇಂದು ನಡೆಯುತ್ತಿರುವ ಸ್ಕೀಮ್ ಗಳ ಕೆಲವು ರೂಪಗಳು ಈ ಕೆಳಗಿನಂತಿವೆ...1.ಒಟ್ಟು 20 ಕಂತುಗಳ(ಉದಾಹರಣೆಗೆ)ಸ್ಕೀಮ್.ಪ್ರತೀ ವಾರವೂ ಚೀಟಿ ಎತ್ತುವುದರ ಮೂಲಕ ಆಯ್ಕೆಯಾದ ಸದಸ್ಯನು ನಂತರ ಹಣ ಕಟ್ಟಬೇಕೆಂದಿಲ್ಲ.ಆಯ್ಕೆಯಾದವರಿಗೆ ಚೀಟಿಯಲ್ಲಿ ಬಂದ ಸಾಮಾಗ್ರಿಗಳನ್ನು ನೀಡಲಾಗುವುದು.(ಉದಾ: ಕಾರು,ಬೈಕು,ಫ್ರಿಜ್,ವಾಶಿಂಗ್ ಮೆಷಿನ್ ಇತ್ಯಾದಿ)ಚೀಟಿ ಎತ್ತುವಿಕೆಯಲ್ಲಿ ಆಯ್ಕೆಯಾಗದ ಸದಸ್ಯರಿಗೆ ನಿಗದಿತ 20 ಕಂತುಗಳ ಬಳಿಕ ಅವರು ಕಟ್ಟಿದ ಒಟ್ಟು ಹಣದ ಮೌಲ್ಯವಿರುವ ಯಾವುದಾದರೊಂದು ವಸ್ತುವನ್ನು ನೀಡಲಾಗುವುದು.ಉದಾ:ಪ್ರತೀ ವಾರ 100 ರೂಪಾಯಿಯಂತೆ 20 ವಾರ ಕಟ್ಟಬೇಕು.ಸ್ಕೀಮ್ ಮುಗಿಯುವುದಕ್ಕಿಂತ ಮುಂಚೆ ಸಾಪ್ತಾಹಿಕವಾಗಿ ನಡೆಯುವ ಚೀಟಿ ಎತ್ತುವಿಕೆಯಲ್ಲಿ ಆಯ್ಕೆಯಾದರೆ ನಂತರ ಹಣ ಕಟ್ಟುವ ಅಗತ್ಯವಿಲ್ಲ.20 ವಾರಗಳ ತನಕ ಈತನ ಹೆಸರು ಆಯ್ಕೆಯಾಗದಿದ್ದರೆ ಕೊನೆಗೆ 2000 ರೂಪಾಯಿ ಮೌಲ್ಯದ ಟೇಬಲ್ ಫ್ಯಾನನ್ನು ನೀಡಲಾಗುವುದು.ಈ ಸ್ಕೀಮ್'ಗಾರರು ಹೇಳುವ ಸಮರ್ಥನೆ ಏನೆಂದರೆ ಇಲ್ಲಿ ಹಣ ಕಟ್ಟುವ ಪ್ರತಿಯೊಬ್ಬರಿಗೂ ಅವರು ಕಟ್ಟಿದ ಒಟ್ಟು ನಿಶ್ಚಿತವಾದ್ದರಿಂದ ಯಾರಿಗೂ ನಷ್ಟವಾಗುವ ಪ್ರಮೇಯವೇ ಇಲ್ಲ.ಆದ್ದರಿಂದ ಇದರಲ್ಲಿ ಧಾರ್ಮಿಕವಾಗಿ ಯಾವುದೇ ಕೇಡುಗಳು ಕಂಡು ಬರುವುದಿಲ್ಲ.ರೂಪ 2.ನಿಗದಿತ ಕಂತುಗಳ (ಉದಾ:20 ಕಂತುಗಳ ) ಸ್ಕೀಮ್ ಆಗಿದ್ದು ಪ್ರತೀ ವಾರವು ಚೀಟಿ ಎತ್ತಲಾಗುವುದು.ಅದರಲ್ಲಿ ಆಯ್ಕೆಯಾದವನಿಗೆ ಕಾರು,ಬೈಕು,ಫ್ರಿಜ್ ,ವಾಶಿಂಗ್ ಮೆಷಿನ್ ಮುಂತಾದ ವಸ್ತುವನ್ನು ನೀಡಲಾಗುವುದು.ಆದರೆ ಈ ಸಾಮಾಗ್ರಿಗಳು ದೊರೆತ ಬಳಿಕವೂ ನಿಗದಿತ ಕಂತುಗಳು ಮುಗಿಯುವ ತನಕ ಹಣ ಕಟ್ಟಬೇಕಾಗುತ್ತದೆ.ಆಯ್ಕೆ ಆಗದವರಿಗೆ ಸ್ಕೀಮ್ ನ ಕೊನೆಯಲ್ಲಿ ಕಟ್ಟಿದ ಹಣದ ಮೌಲ್ಯದಲ್ಲಿ ವಸ್ತುವೊಂದನ್ನು ನೀಡಲಾಗುವುದು.ರೂಪ 3.ನಿಗದಿತ ಕಂತುಗಳ ಸ್ಕೀಮ್ ಆಗಿದ್ದು ಎಲ್ಲರೂ ಕಂತು ಮುಗಿಯುವ ತನಕ ನಿಗದಿತ ಹಣ ಕಟ್ಟಬೇಕು.ಸ್ಕೀಮ್ ನ ಕೊನೆಯಲ್ಲಿ ಚೀಟಿ ಎತ್ತಿ ಐದು ಅಥವಾ ಪ್ರಾಯೋಜಕರು ನಿಗದಿಪಡಿಸಿದಷ್ಟು ಮಂದಿಗಳಿಗೆ ಹೆಚ್ಚಿನ ಮೌಲ್ಯದ ವಸ್ತುಗಳನ್ನು ನೀಡಲಾಗುವುದು.ಉಳಿದವರಿಗೆ ಕಟ್ಟಿದ ಹಣದ ಒಟ್ಟು ಮೌಲ್ಯವಿರುವ ವಸ್ತುವೊಂದನ್ನು ನೀಡಲಾಗುವುದು.ಈ ಮೇಲೆ ತಿಳಿಸಲಾದ ಮೂರು ರೀತಿಯ ಸ್ಕೀಮ್ ಗಳ ಶರೀಅತ್ ವಿಧಿಯ ಬಗ್ಗೆ ಹೇಳುವ ಮುಂಚೆ ವ್ಯಾಪಾರದ ನಿಬಂಧನೆಗಳ ಬಗ್ಗೆ ಸ್ವಲ್ಪ ಅವಲೋಕನ ನಡೆಸಬೇಕಾಗಿದೆ.ಈ ಅವಲೋಕನದಿಂದಲೇ ಪ್ರಸ್ತುತ ಸ್ಕೀಮ್ ಗಳು ಧಾರ್ಮಿಕವಾಗಿ ಸಮ್ಮತಾರ್ಹವೇ ?ಅಲ್ಲವೇ ? ಎಂಬುವುದನ್ನು ತಿಳಿಯಬಹುದಾಗಿದೆ.ವ್ಯಾಪಾರವನ್ನು ಇಸ್ಲಾಮ್ 3 ರೀತಿಯಾಗಿ ವಿಂಗಡಿಸಿದೆ.1.بيع عين مشاهدة للمتبائعين ಕೊಡುವವನು ಮತ್ತು ಕೊಳ್ಳುವವನು ಇಬ್ಬರೂ ದರ್ಶಿಸಿದ ವಸ್ತುವೊಂದನ್ನು ಮಾರಾಟ ಮಾಡುವುದು2.بيع شيئ موصوف في الذمة ವಿಶೇಷಣಗಳು ಹೇಳಲ್ಪಟ್ಟ ವಸ್ತುವೊಂದನ್ನು ದ್ಸಿಮ್ಮತ್ ನಲ್ಲಿ (ವಸ್ತುವನ್ನು ಪ್ರತ್ಯೇಕವಾಗಿ ತೋರಿಸಿ ನಿಗದಿ ಪಡಿಸದೆ)ಮಾರಾಟ ಮಾಡುವುದು.3.بيع عين غائبة ಅನುಪಸ್ಥಿತಿಯಲ್ಲಿರುವ ವಸ್ತುವೊಂದನ್ನು ಮಾರುವುದು.ಈ ಮೂರು ವ್ಯಾಪಾರಗಳಲ್ಲಿ ಮೊದಲೆರಡು ವ್ಯಾಪಾರವು ಕೆಲವೊಂದು ನಿಬಂಧನೆಗಳ ಪ್ರಕಾರ ಸಿಂಧುವಾಗಿರುತ್ತದೆ.ಮೂರನೇಯ ವ್ಯಾಪಾರವು ಅಸಿಂಧುವಗಿದೆ.(ಬುಜೈರಿಮಿ ಅಲಲ್ ಇಖ್'ನಾಹ್ ಪುಟ 45 ಭಾಗ 3)ಮೂರನೇಯ ವ್ಯಾಪಾರವು ಅಸಿಂಧುವಾಗಲು ಕಾರಣ ಮಾರಾಟದ ವಸ್ತು ಕೊಡು-ಕೊಳ್ಳುವವನಿಗೆ ಅಗೋಚರವಾಗಿದೆ ಮತ್ತು ಅಸ್ಪಷ್ಟವಾಗಿದೆ ಎಂಬುವುದಾಗಿದೆ.*ವ್ಯಾಪಾರದ ಕಡ್ಡಾಯ ಘಟಕಗಳು ಆರು.*1.بائع ಮಾರಾಟ ಮಾಡುವವ2.مشتريಕೊಳ್ಳುವವ3.ثمنಕ್ರಯ4. مثمن ಮಾರಾಟ ವಸ್ತು5.ايجاب ಮಾರಾಟದ ಮೇಲೆ ತಿಳಿಸುವ ಮಾತು6 .قبول ಕೊಳ್ಳುವಿಕೆಯ ಮೇಲೆ ತಿಳಿಸುವ ಮಾತು ಇವುಗಳಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕವಾದ ನಿಬಂಧನೆಗಳಿವೆ.ಇದರಲ್ಲಿ ಮೂರು ಮತ್ತು ನಾಲ್ಕನೇ ಘಟಕವಾದ ಕ್ರಯ (ಬೆಲೆ) ಮತ್ತು ಮಾರಾಟ ವಸ್ತುವಿನ ನಿಬಂಧನೆಗಳ ಬಗ್ಗೆ ಚುಟುಕಾಗಿ ತಿಳಿದುಕೊಳ್ಳೋಣ.1.ಕೊಳ್ಳುವವನಿಗೆ ಮತ್ತು ಕೊಡುವವನಿಗೆ ಒಡೆತನವಿರಬೇಕು.ಅಂದರೆ ಯಾವುದಾದರೊಂದು ವಸ್ತುವನ್ನು ಮಾರುವಾಗ ಅಥವಾ ಬೆಲೆಯಾಗಿ ನೀಡುವಾಗ ಆ ವಸ್ತು ಆತನ ಒಡೆತನಕ್ಕೆ ಸೇರಿದ್ದಾಗಿರಬೇಕು.2.ಶುದ್ಧಿಯಿರುವ ಅಥವಾ ಶುದ್ಧಿ ಮಾಡಲು ಸಾಧ್ಯವಿರುವ ವಸ್ತುವಾಗಿರಬೇಕು.ಇದರ ಪ್ರಕಾರ ಮಲಿನ ವಸ್ತುಗಳಾದ ಮದ್ಯ,ಮಲ,ರಕ್ತ,ನಾಯಿ,ಹಂದಿ ಮುಂತಾದವುಗಳನ್ನು ಮಾರಾಟ ಮಾಡಬಾರದು ಹಾಗೂ ಬೆಲೆಯಾಗಿ ನೀಡಬಾರದು.ರಾಫಿಹ್ ಬಿನ್ ಖದೀಜ್ (ರ)ರಿಂದ ವರದಿ,ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ,ثمن الكلب خبيث "ನಾಯಿ ಮಾರಾಟ ಮಾಡಿ ದೊರಕುವ ಹಣವು ಮಲಿನವಾಗಿದೆ"(ಮುಸ್ಲಿಮ್)ಅಬೂ ಮಸ್'ಊದ್ (ರ)ರಿಂದ ವರದಿ,ಅವರು ಹೇಳುತ್ತಾರೆ,ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಾಯಿ ಮಾರಾಟ ಮಾಡಿ ದೊರಕುವ ಹಣವನ್ನು ವಿರೋಧಿಸಿದ್ದಾರೆ.(ಬುಖಾರಿ,ಮುಸ್ಲಿಮ್)ಜಾಬಿರ್( ರ) ವರದಿ,ان الله ورسوله حرم بيع الخمر والميتة والخنزير والاصنام (بخاري ،مسلم)"ಖಂಡಿತವಾಗಿಯೂ ಅಲ್ಲಾಹನು ಮತ್ತು ಅವನ ರಸೂಲರು ಮದ್ಯ,ಶವ,ಹಂದಿ ಹಾಗೂ ವಿಗ್ರಹಗಳನ್ನು ನಿಷೇಧಿಸಿದ್ದಾರೆ."(ಬುಖಾರಿ,ಮುಸ್ಲಿಮ್)ಈ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲು ಕಾರಣ ಈ ವಸ್ತುಗಳು ಮಲಿನ (ನಜಸ್)ವಾಗಿದೆ ಎಂಬುವುದಾಗಿದೆ.ಆದ್ದರಿಂದಲೇ ಇತರ ಎಲ್ಲಾ ಮಲಿನ ವಸ್ತುಗಳನ್ನು ಇವುಗಳೊಂದಿಗೆ ತುಲನೆ ಮಾಡಿ ಅವುಗಳ ಮಾರಾಟವು ನಿಷಿದ್ಧವೆಂದು ಕರ್ಮ ಶಾಸ್ತ್ರ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ.3.ಮಾರಾಟ ವಸುವನ್ನು ಕಾಣುವುದು.ಮಾರಾಟ ವಸ್ತು ಅವರಿಬ್ಬರ ಸಮ್ಮುಖದಲ್ಲಿದ್ದರೆ ಅದನ್ನು ಕಾಣಬೇಕು.ಸಮ್ಮುಖದಲ್ಲಿಲ್ಲದಿದ್ದರೆ ಆ ವಸ್ತು ಮತ್ತು ಅದರ ಎಲ್ಲಾ ವಿಶೇಷಣಗಳನ್ನು ಹೇಳಬೇಕು.4.ವಸ್ತುವನ್ನು ಹಸ್ತಾಂತರಿಸಲು ಸಾಧ್ಯವಿರಬೇಕು.ಇದರ ಪ್ರಕಾರ ನೀರಿನಲ್ಲಿರುವ ಮೀನು,ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿ ಮುಂತಾದವುಗಳನ್ನು ಮಾರಾಟ ಮಾಡಬಾರದು.ಹಾಗೂ ಬೆಲೆಯಾಗಿ ನೀಡಬಾರದು.ಇಮಾಮ್ ಝಕರಿಯ್ಯಲ್ ಅನ್ಸಾರೀ ಹೇಳುತ್ತಾರೆ,وهي ثلاثة اذا العين اما حاضرة او غائبة او في الذمة فالحاضرة وهي المرئية الرؤية المعتبرة في صحة البيع يصح بيعها بشرطه الآتي "ವಸ್ತುಗಳ ಮಾರಟವು ಮೂರು ವಿಧದಲ್ಲಿದೆ.ಏಕೆಂದರೆ ಮಾರಾಟ ವಸ್ತು ಒಂದೋ ಸಮ್ಮುಖದಲ್ಲಿರಬಹುದು ಅಥವಾ ಅನುಪಸ್ಥಿತಿಯಲ್ಲಿರಬಹುದು ಅಥವಾ ಕೇವಲ ಕರಾರು ಪ್ರಕಾರವಾಗಿರಬಹುದು.ಸಮ್ಮುಖದಲ್ಲಿರುವ ವಸ್ತುವಾಗಿದ್ದರೆ ನಿಬಂಧನೆ ಪ್ರಕಾರ ಅದರ ಮಾರಾಟ ಸಿಂಧುವಾಗಿದೆ.(ತುಹ್'ಫತುತ್ತುಲ್ಲಾಬ್ ಭಾಗ 3, ಪುಟ 31)ಆ ನಿಬಂಧನೆಗಳ ಬಗ್ಗೆ ಅವರು ಹೀಗೆ ಸ್ಪಷ್ಟಪಡಿಸುತ್ತಾರೆ."ಮಾರಟ ವಸ್ತುವಿನ ಒಡೆತನವಿರಬೇಕು,ಶುದ್ಧಿಯಿರಬೇಕು,ಇಬ್ಬರಿಗೂ ತಿಳಿಯಲ್ಪಟ್ಟದ್ದಾಗಿರಬೇಕು.(ತುಹ್'ಫತುತ್ತುಲ್ಲಾಬ್ 3/42)ಪುನಃ ಅವರು ಹೇಳುತ್ತಾರೆ,"ಅಗೋಚರವಾದ ವಸ್ತುವನ್ನು ಅವರಿಬ್ಬರೋ ಅಥವಾ ಒಬ್ಬರೋ ವ್ಯವಹಾರ ಪ್ರಕ್ರಿಯೆಗಿಂತ ಮುಂಚೆ ಕಾಣದಿದ್ದರೆ ಆ ವ್ಯಾಪಾರವು ಸಿಂದುವಾಗಲಾರದು.(ತುಹ್'ಫತುತ್ತುಲ್ಲಾಬ್ 3/32)ಪುನಃ ಅವರು ಹೇಳುತ್ತಾರೆ,ಕರಾರು ಪ್ರಕಾರವಿರುವ ವ್ಯಾಪಾರದಲ್ಲಿ ಮಾರಾಟ ವಸ್ತುವಿನ ಬಗ್ಗೆ ಮತ್ತು ಅದರ ವಿಶೇಷಣವನ್ನು ಹೇಳಿದರೆ ಅದರ ಮಾರಾಟವು ಸಿಂಧುವಾಗಲಾರದು.(ತುಹಫತುತ್ತುಲ್ಲಾಬ್ 3/38)ಒಟ್ಟಿನಲ್ಲಿ ವಸ್ತುಗಳನ್ನು ಮಾರಾಟ ಮಾಡುವಾಗ ಆ ವಸ್ತುಗಳ ಬಗ್ಗೆ ಮಾರುವವನಿಗೂ ಪಡೆದುಕೊಳ್ಳುವವನಿಗೂ ಸ್ಪಷ್ಟವಾದ ಅರಿವಿರಬೇಕು.ವಸ್ತು ಸಮ್ಮುಖದಲ್ಲಿದ್ದರೆ ಅವರಿಬ್ಬರೂ ನೋಡಿ ಖಾತರಿ ಪಡಿಸಬೇಕು.ಇನ್ನು ವ್ಯಾಪಾರ ಕರಾರು ಪ್ರಕಾರವಾಗಿದ್ದರೆ ಆ ವಸ್ತುವಿನ ಎಲ್ಲಾ ವಿಷೇಷಣಗಳನ್ನು ಹೇಳಿ ಅದನ್ನು ನಿಗದಿಪಡಿಸಬೇಕು.ಆದ್ದರಿಂದ ಮಜ್'ಹೂಲ್ ಅಥವಾ ತಿಳಿಯದ ವಸ್ತುವನ್ನು ಮಾರಾಟ ಮಾಡುವುದು ನಿಷಿದ್ಧವೂ ಅಸಿಂಧುವಾಗಿದೆ.ಶರಹುಲ್ ಮುಹದ್ದಬ್ ನಲ್ಲಿ ಈ ರಿತಿ ಇದೆ."ಗೊತ್ತಿಲ್ಲದ ವಸ್ತುವನ್ನು ಮಾರುವುದು ಅಸಿಂಧುವಾಗಿದೆ".(ಶರಹುಲ್ ಮುಹದ್ದಬ್ 11/335)ಇಮಾಮ್ ಮಾವರ್ದಿ ಹೇಳುತ್ತಾರೆ,ಬೆಲೆ ಎಷ್ಟೆಂದು ಗೊತ್ತಿಲ್ಲದ ವ್ಯಾಪಾರ ಸಿಂಧುವಾಗಲಾರದು.(ಹಾವಿಲ್ ಕಬೀರ್ 5/763)ಒಟ್ಟಿನಲ್ಲಿ ವ್ಯಾಪಾರ ಮಾಡುವಾಗ ವ್ಯಾಪಾರದ ವಸ್ತು ಹಾಗೂ ಅದರ ಬೆಲೆ ನಿಖರವಾಗಿ ತಿಳಿದಿರಬೇಕು.ಇನ್ನು ನಮ್ಮ ಸ್ಕೀಮಿನ ವಿಚಾರಕ್ಕೆ ಬರೋಣ.ಒಂದನೇ ರೂಪದಲ್ಲಿಅಡಕ ಗೊಂಡಿರುವ ಕೆಲವು ಅಂಶಗಳನ್ನು ಗಮನಿಸಿ. ಇಲ್ಲಿ ಚೀಟಿ ಎತ್ತುವುದರ ಮೂಲಕ ವಸ್ತುವನ್ನು ಆಯ್ಕೆ ಮಾಡುವುದಾದರೆ ದೊರಕುವ ವಸ್ತು ಯಾವುದು ಎಂದು ಸ್ಪಷ್ಟವಲ್ಲ. ಏಕೆಂದರೆ ಚೀಟಿ ಎತ್ತುವಿಕೆಯಲ್ಲಿ ಯಾವ ವಸ್ತು ಬರಬಹುದೆಂದು ಯಾರಿಗೂ ಗೊತ್ತಿಲ್ಲ ತಾನೇ?ಆದ್ದರಿಂದ ಇಲ್ಲಿ ಮಬೀಅ ಅಥವಾ ಮಾರಾಟ ವಸ್ತುವಿನಲ್ಲಿ ನಿಗೂಢತೆ ಹಾಗೂ ಅಸ್ಪಷ್ಟತೆ ಇದೆ. ಎರಡನೆಯದಾಗಿ ಸಾಪ್ತಾಹಿಕವಾಗಿ ವಸ್ತುವನ್ನು ಚೀಟಿ ಎತ್ತುವಿಕೆಯ ಮೂಲಕ ನಿರ್ಣಯಿಸುವಾಗ ಸದಸ್ಯರಾದ ಪ್ರತಿಯೊಬ್ಬರಿಗೂ ಯಾವುದೇ ವಾರ ಯಾವುದೇ ವಸ್ತು ಬರಲು ಸಾಧ್ಯವಿದೆ .ಆಗ ಎಷ್ಟರ ತನಕ ಹಣ ಕಟ್ಟಬೇಕೆಂದು ಪ್ರತಿಯೊಬ್ಬರಿಗೂ ಸ್ವಷ್ಠವಲ್ಲ ಆದ್ದರಿಂದ ಇಲ್ಲಿ ಸಮನ್ ಅಥವಾ ಬೆಲೆಯಲ್ಲೂ ನಿಗೂಢತೆ ಇದೆ ಕೆಲವೊಮ್ಮೆ ಅದು ನೂರು ರೂಪಾಯಿ ಆಗಿರಬಹುದು ಅಥವಾ ಇನ್ನೂರಾಗಿರಬಹುದು ಅಥವಾ ಅದಕ್ಕಿಂತ ಮೇಲೆ ಆಗಿರಬಹುದು. ಇನ್ನು ಒಂದೊಂದು ವಾರದಲ್ಲಿ ಒಂದೊಂದು ವಸ್ತುವನ್ನು ನಿಗದಿಪಡಿಸಿ ಪಡೆಯುವವನನ್ನು ಚೀಟಿ ಎತ್ತಿ ನಿರ್ಣಯಿಸುವುದಾದರೆ ಆಗಲು ಪಡೆಯುವವನಲ್ಲೂ ನಿಗೂಢತೆ ಇದೆ .ಅದೇ ರೀತಿ ಬೆಲೆಯು ಸ್ಪಷ್ಟವಲ್ಲ.ಎರಡನೇ ರೂಪದಲ್ಲಿ ಬೆಲೆ ನಿಶ್ಚಿತವಾಗಿದ್ದರೂ ಲಭಿಸುವ ವಸ್ತು ಸ್ಪಷ್ಟವಲ್ಲ ಏಕೆಂದರೆ ಈ ವಸ್ತು ಅದರಲ್ಲಿ ಸದಸ್ಯರಾದ ಪ್ರತಿಯೊಬ್ಬರಿಗೂ ಲಭಿಸಲು ಸಾಧ್ಯತೆ ಇದೆ. ಪ್ರತಿಯೊಬ್ಬರೂ ಅದು ತನಗೆ ಲಭಿಸಬಹುದು ತನಗೆ ಲಭಿಸಬಹುದು ಎಂದು ಕಾತರದಿಂದಿರುತ್ತಾರೆ. ಆದ್ದರಿಂದ ಇಲ್ಲೂ ಮಾರಾಟ ವಸ್ತುವಿನಲ್ಲಿ ನಿಗೂಢತಯಿದೆ. ಮೂರನೇ ರೂಪದ ಅವಸ್ಥೆಯು ಇದೇ ರೀತಿಯಾಗಿದೆ.ಇನ್ನು ಇದರ ಬಗ್ಗೆ ಹದೀಸ್ ಮತ್ತು ಇಮಾಮಗಳ ಉಲ್ಲೇಖಗಳು ಏನೆನ್ನುತ್ತದೆ ಎಂಬುವುದನ್ನು ನೋಡೋಣ ಅಬೂಹುರೈರ (ರ.ಅ) ವರದಿ, ಅವರು ಹೇಳುತ್ತಾರೆ "ಪ್ರವಾದಿ ಸ್ವಲ್ಲಲ್ಲಾಹು ಅಲಯಿಹಿವಸಲ್ಲಮರವರು ಹಸ್ವಾತ್ ವ್ಯಾಪಾರ ಮತ್ತು ವಂಚನೆಗೆ ಸಾಧ್ಯತೆ ಇರುವ ವ್ಯಾಪಾರವನ್ನು ವಿರೋಧಿಸಿರುವವರು" (ಮುಸ್ಲಿಂ , ಮಿಶ್ಕಾತ್ ಹದೀಸ್ 2854)ಹದೀಸ್ ನಲ್ಲಿ ಹೇಳಿದ ಹಸ್ವಾತ್ ವ್ಯಾಪಾರವೇನೆಂಬುವುದನ್ನು ನೋಡೋಣ..ಇಮಾಂ ಮಾವರ್ದಿರವರು ಹೇಳುತ್ತಾರೆ, ಇದರಲ್ಲಿ ಮೂರು ತಾತ್ಪರ್ಯಗಳಿವೆ1.ಒಬ್ಬನು ಕೈಯಲ್ಲಿ ಚಿಕ್ಕ ಕಲ್ಲುಗಳನ್ನು ಹಿಡಿದು ಬಟ್ಟೆ ವ್ಯಾಪಾರಿಯ ಬಳಿ ಬರುತ್ತಾನೆ.ಬಟ್ಟೆ ವ್ಯಾಪಾರಿ ತನ್ನ ಬಟ್ಟೆಗಳನ್ನು ಒಂದೆಡೆ ರಾಶಿ ಹಾಕಿರುತ್ತಾನೆ. ಗ್ರಾಹಕ ತನ್ನ ಕೈಯಲ್ಲಿರುವ ಕಲ್ಲನ್ನು ಆ ರಾಶಿಯ ಮೇಲೆ ಬಿಸಾಡುತ್ತಾನೆ.ಆಗ ಕಲ್ಲು ಯಾವ ಬಟ್ಟೆಯ ಮೇಲೆ ಬೀಳುತ್ತದೋ ಆ ಬಟ್ಟೆ ಆತನಿಗಾಗಿದೆ. ಈ ವ್ಯಾಪಾರವು ಬಾತಿಲ್ ಅಥವಾ ಅಸಿಂಧು ವಾಗಿದೆ. ಏಕೆಂದರೆ ಯಾವ ವಸ್ತು ದೊರಕುತ್ತದೆ ಎಂಬುದು ಇಲ್ಲಿ ಸ್ಪಷ್ಟವಲ್ಲ.2. ಆತ ಒಂದು ವಸ್ತುವನ್ನು ನಿಗದಿ ಪಡಿಸಿ ಖರೀದಿಸುತ್ತಾನೆ. ಆದರೆ ಆ ಕಲ್ಲು ಆ ವಸ್ತುವಿನ ಮೇಲೆ ಬೀಳುವ ತನಕ ಬೆಲೆಯಲ್ಲಿ ಅವಧಿ ನಿಗದಿ ಪಡಿಸುತ್ತಾನೆ.ಇದು ಕೂಡ ಅಸಿಂಧುವಾಗಿದೆ ಏಕೆಂದರೆ ಇಲ್ಲಿ ಅವಧಿಯ ಸಮಯವೆಷ್ಟು ಎಂದು ಸ್ವಷ್ಟ ಅಲ್ಲ.3. ಜಾಗ ಖರೀದಿಸುವಾಗ ಆ ಕಲ್ಲನ್ನು ಬಿಸಾಡಿ ಅದು ಎಲ್ಲಿ ಬಿತ್ತೋ ಅಲ್ಲಿಯ ತನಕವಿರುವ ಜಾಗವನ್ನು ಖರೀದಿಸುವುದು.ಇದು ಕೂಡ ಅಸಿಂಧುವಾಗಿದೆ.ಏಕೆಂದರೆ ಇಲ್ಲಿ ಖರೀದಿಸುವ ಜಾಗದ ವಿಸ್ತೀರ್ಣ ಎಷ್ಟೆಂದು ಸ್ಪಷ್ಟವಲ್ಲ .(ಅಲ್ ಹಾವಿಲ್ ಕಬೀರ್ ಕಾಂಡ 5 ಪುಟ 752)ಇಮಾಮ್ ಮಾವರ್ದಿರವರ (ರ.ಅ)ರವರ ಈ ವಿವರಣೆಯಿಂದ ಒಂದು ಕಾರ್ಯ ಸ್ಪಷ್ಟವಾಗುತ್ತದೆ.ಬಟ್ಟೆಗಳ ರಾಶಿಗೆ ಕಲ್ಲು ಹಾಕಿ ಅದರಿಂದ ಆಯ್ಕೆ ಯಾಗುವ ವಸ್ತುವಿನ ಮಾರಾಟವು ಸಿಂಧು ಅಲ್ಲ. ಏಕೆಂದರೆ ಅಲ್ಲಿ ಮಾರಾಟ ವಸ್ತುವಿನಲ್ಲಿ ನಿಗೂಢತೆ ಉಂಟಾಗುತ್ತದೆ. ಇಲ್ಲಿ ಪ್ರಸ್ತಾಪಿತವಾದ ಸ್ಕೀಮ್ ನ ಅವಸ್ಥೆಯೂ ಇದೇ ರೀತಿಯಾಗಿದೆ. ಏಕೆಂದರೆ ಜಾಹಿಲಿಯಾ ಕಾಲದಲ್ಲಿ ಕಲ್ಲೆಸೆದು ಸಾಮಗ್ರಿಗಳನ್ನು ಆಯ್ಕೆ ಮಾಡುತ್ತಿದ್ದರೆ ಇಂದು ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡುತ್ತಾರೆ ಅಷ್ಟೇ. ಎರಡು ರೂಪದಲ್ಲೂ ಮಾರಾಟ ವಸ್ತು ಸ್ಪಷ್ಟವಲ್ಲ.ಇದೇ ಕಾರ್ಯವನ್ನು ಇಮಾಂ ಶಾಫಿ( ರ.ಅ) ರವರು ಹೇಳುವುದನ್ನು ನೋಡಿ,"ಬೈಉಲ್ ಹಸ್ವಾತ್ ಎಂಬುದಕ್ಕೆ ಹಲವು ವ್ಯಾಖ್ಯಾನಗಳಿವೆ. ಗ್ರಾಹಕನೊಂದಿಗೆ ಮಾರುವವನು ಈ ಬಟ್ಟೆಗಳ ಪೈಕಿ ಒಂದನ್ನು ನಿನಗೆ ನಾನು ಮಾರಿರುವೆ ನಿನ್ನ ಕೈಯಲ್ಲಿರುವ ಕಲ್ಲನ್ನು ಆ ಬಟ್ಟೆಗಳಿಗೆ ಬಿಸಾಡು ಅದು ಯಾವುದರ ಮೇಲೆ ಬಿತ್ತೋ ಅದು ಮಾರಲ್ಪಟ್ಟ ಬಟ್ಟೆಯಾಗಿದೆ ಎಂದು ಹೇಳುವುದಾಗಿದೆ ಅಥವಾ ಈ ಕಲ್ಲನ್ನು ಬಿಸಾಡು. ಅದು ಎಲ್ಲಿಗೆ ಬಿತ್ತೋ ಅಲ್ಲಿಯ ತನಕದ ಜಾಗ ನಿನಗೆ ಮಾರಲ್ಪಟ್ಟಿದ್ದಾಗಿದೆ ಎಂದು ಹೇಳುವುದಾಗಿದೆ".(ಶರಹುಲ್ ಕಬೀರ್, ಭಾಗ 8, ಪುಟ 194)ಇನ್ನೊಂದು ರೀತಿಯನ್ನು ಬಹು ಅಬೂ ಸುಲೈಮಾನ್ ಅಹಮದ್ ಬಿನು ಮಹಮ್ಮದ್ ಖತ್ತಾಬಿ( ರ ‌.ಅ) ರವರು ತಿಳಿಸುವುದನ್ನು ನೋಡಿ, ಇನ್ನೊಂದು ವಿಧವೇನೆಂದರೆ ಆಡನ್ನು ಸಾಕುವ ವ್ಯಕ್ತಿ ಒಬ್ಬ ತನ್ನ ಆಡಿನ ಗುಂಪನ್ನು ತೋರಿಸಿ ಈ ಗುಂಪಿನಲ್ಲಿ ಯಾವುದಕ್ಕೆ ನಿನ್ನ ಕಲ್ಲು ಬಿತ್ತೋ ಅದು ಮಾರಾಟಗೊಂಡ ಆಡೆಂದು ಹೇಳುವುದು. ಇದು ಪ್ರವಾದಿ ವಿರೋಧಿಸಿದ ವ್ಯಾಪಾರವಾಗಿದೆ".ಇಮಾಂ ಇಬ್ನ್ ಹಜರಿಲ್ ಅಸ್ಕಲಾನಿ (ರ.ಅ)ರವರು ಹೇಳುತ್ತಾರೆ,ನೀವು ನೀರಿನಲ್ಲಿರುವ ಮೀನನ್ನು ಖರೀದಿಸಬೇಡಿ. ಏಕೆಂದರೆ ಅದು ನಷ್ಟಕ್ಕೆ ಸಾದ್ಯತೆ ಇರುವಂತಹ ದ್ದಾಗಿದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಹದೀಸನ್ನು ಅಬುಹುರೈರ (ರ)ರಿಂದ ಇಮಾಮ್ ಅಹಮದ್( ರ.ಅ)ರವರು ಉಲ್ಲೇಖಿಸಿದ್ದಾರೆ. ನೀರಿನಲ್ಲಿರುವ ಮೀನನ್ನು ಖರೀದಿಸುವುದು ನಷ್ಟ ಮತ್ತು ವಂಚನೆಯ ವಿಧಗಳ ಪೈಕಿ ಒಂದಾಗಿದೆ. ಇದರೊಂದಿಗೆ ಆಕಾಶದಲ್ಲಿ ಹಾರುವ ಹಕ್ಕಿ, ಇಲ್ಲದ ವಸ್ತು, ತಿಳಿಯದ ವಸ್ತು, ಓಡಿ ಹೋದದ್ದು ಮುಂತಾದವುಗಳನ್ನು ಮಾರಾಟ ಮಾಡುವುದನ್ನು ತುಲನೆಗೊಳಿಸಲಾಗಿದೆ.(ಫತುಹುಲ್ ಬಾರಿ, ಕಾಂಡ 4 ಪುಟ 357)ಉಮ್ದತುಲ್ ಖಾರಿಯಲ್ಲಿ ಹೀಗೆ ಕಾಣಬಹುದು,"ಪ್ರವಾದಿ ಸ.ಅ ರವರು ವಿರೋಧಿಸಿದ ಬೈಉಲ್ ಗರರ್ ಎಂದರೆ ಅಪಾಯವಿರುವ ಮಾರಾಟವಾಗಿದೆ. ಅದೆಂದರೆ ಬೆಲೆ ,ಮಾರಾಟ ವಸ್ತು ,ಮತ್ತು ಅದು ನ್ಯೂನೆತೆಗಳಿಂದ ಮುಕ್ತಿ ಹೊಂದಿರುವುದು ಹಾಗೂ ಅವಧಿಯ ಬಗ್ಗೆ ಸ್ಪಷ್ಟ ಇಲ್ಲದ ವ್ಯಾಪಾರವಾಗಿದೆ .(ಉಮ್ದತುಲ್ ಖಾರಿ ಭಾಗ 17 ಪುಟ 471).ಇಮಾಮ್ ನವವಿ( ರ.ಅ )ರವರು ಹೇಳುತ್ತಾರೆ, ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಿರೋಧಿಸಿದ ಬೈವುಲ್ ಹಸ್ವಾತ್ ಎಂಬುದರಲ್ಲಿ ಮೂರು ವ್ಯಾಖ್ಯಾನಗಳಿವೆ ಒಂದು ಕಲ್ಲು ಬಿದ್ದ ಬಟ್ಟೆಯನ್ನು ನಿನಗೆ ನಾನು ಮಾರಿದೆ ಎಂದು ಹೇಳುವುದಾಗಿದೆ.(ಶರಹು ಮಸ್ಲಿಂ ಭಾಗ ಹತ್ತು ಪುಟ 150).ಇಮಾಮ್ ಕತ್ತಾಬೀ (ರ.ಅ)ರವರು ಹೇಳುತ್ತಾರೆ, "ಉದ್ದೇಶಿಸಲ್ಪಟ್ಟ ವಸ್ತು ಅಸ್ಪಷ್ಟವಾದ ,ಹಸ್ತಾಂತರಿಸಲು ಸಾಧ್ಯವಿಲ್ಲದ ಎಲ್ಲಾ ವ್ಯಾಪಾರವೂ ವಿರೋಧಿಸಲ್ಪಟ್ಟ ಗರರ್ ವ್ಯಾಪಾರಕ್ಕೆ ಒಳಪಟ್ಟದ್ದಾಗಿದೆ.(ಮಆಲಿಮುಸ್ಸುನನ್ ಭಾಗ 3 ಪುಟ 88)ವ್ಯಾಪಾರದಲ್ಲಿ ಸಮಯ ನಿಗದಿಪಡಿಸದಿರುವುದು ಮತ್ತು ಇತರ ಯಾವುದಾದರೂ ಒಂದು ಕಾರ್ಯದ ಮೇಲೆ ವ್ಯಾಪಾರವನ್ನು ಸಂಯೋಜನೆಗೊಳಿಸದಿರುವುದು ವ್ಯಾಪಾರ ಸಿಂಧುವಾಗಲು ನಿಬಂಧನೆಯಾಗಿದೆ. ಇಮಾಂ ಖತೀಬ್ ಶಿರ್ಬೀನಿ (ರ.ಅ) ರವರು ಹೇಳುತ್ತಾರೆ, ವ್ಯಾಪಾರದಲ್ಲಿ ಇತರ ಕಾರ್ಯದ ಮೇಲೆ ಸಂಯೋಜನೆಗೊಳಿಸದಿರುವುದು ಹಾಗೂ ಸಮಯ ನಿಗದಿಪಡಿಸದಿರುವುದು ನಿಬಂಧನೆ ಆಗಿದೆ.ಆದ್ದರಿಂದ ಒಬ್ಬನು "ನನ್ನ ತಂದೆ ತೀರಿದರೆ ಇದನ್ನು ನಿನಗೆ ನಾನು ಇಷ್ಟು ರೂಪಾಯಿಗೆ ಮಾರಿದೆನು" ಅಥವಾ" ಒಂದು ತಿಂಗಳಿಗೆ ಇದನ್ನು ನಾನು ನಿನಗೆ ಮಾರಿದೆನು"ಎಂದು ಹೇಳಿದರೆ ಆ ವ್ಯಾಪಾರವು ಸಿಂಧುವಾಗಲಾರದು. ( ಇಖ್ನಾಅ ಭಾಗ-3 ಪುಟ 13)ಪ್ರಸ್ತುತ ಸ್ಕೀಮ್ ಗಳಲ್ಲಿ ಒಂದು ರೀತಿಯ ತಅಲೀಕ್ ಅಥವಾ ಸಂಯೋಜನೆಯನ್ನು ನಮಗೆ ಕಾಣಬಹುದು. ಅದೇನಂದರೆ "ಸಾಪ್ತಾಹಿಕವಾಗಿ ಅಥವಾ ಕೊನೆಯಲ್ಲಿ ಹಾಕುವ ಚೀಟಿ ಎತ್ತುವಿಕೆಯಲ್ಲಿ ನೀನು ಆಯ್ಕೆಯಾದರೆ ಆ ವಸ್ತು ನಿನಗೆ" ಎಂಬ ಸಂಯೋಜನೆಯು ಇಲ್ಲಿದೆ.ಆದ್ದರಿಂದ ಇದು ಕೂಡ ಒಂದು ಅಡಚಣೆಯಾಗಿದೆ.ಮಾತ್ರವಲ್ಲ ಒಂದನೇ ರೀತಿಯಲ್ಲಿ ಚೀಟಿ ಎತ್ತುವಿಕೆಯಲ್ಲಿ ಆಯ್ಕೆಯಾದವರು ನಂತರ ಹಣ ಕಟ್ಟ ಬೇಕಾಗಿಲ್ಲ ಎಂಬುದು ಒಂದು ಬಗೆಯ ಮೈಸಿರ್ ಅಥವಾ ಜೂಜಿಗೆ ಒಳಪಟ್ಟದ್ದಾಗಿದೆ.ಒಟ್ಟಿನಲ್ಲಿ ಇಂದು ನಡೆಸುವ ಸ್ಕೀಮ್ ಗಳಲ್ಲಿ ಬಹುಮಾನಗಳೆಂದು ಅವರು ಕರೆಯುವ ವಸ್ತುಗಳು ಯಾರಿಗೆ ದೊರಕುತ್ತಿದೆ ಎಂದು ಹೇಳಲು ಸಾಧ್ಯವಿಲ್ಲದಿರುವುದರಿಂದ ಅಲ್ಲಿ ನಿಗೂಢತೆ ತಲೆದೋರುತ್ತದೆ ಅದೇ ರೀತಿ ವಿಜಯಿಯಾದ ಬಳಿಕ ಹಣ ಕಟ್ಟಬೇಕಾದ ಅಗತ್ಯವಿಲ್ಲವೆಂಬ ವ್ಯವಸ್ಥೆ ಇದ್ದರೂ ಬೆಲೆಯಲ್ಲಿ ನಿಗೂಢತೆ ಉಂಟಾಗುತ್ತದೆ. ಆದ್ದರಿಂದ ಈ ರೀತಿಯ ಸ್ಕೀಮ್ ಗಳು ಸಮತರ್ಹವಲ್ಲವೆಂದು ತಿಳಿದುಕೊಳ್ಳಬಹುದು.ಎಲ್ಲರೂ ನಿಗದಿತ ಹಣವನ್ನು ಕಟ್ಟಬೇಕೆಂದು ಅವರೆಲ್ಲರಿಗೂ ಅಷ್ಟು ಮೌಲ್ಯದ ನಿಗದಿತ ವಸ್ತುವನ್ನು ನೀಡಲಾಗುವುದೆಂದು (ಆ ವಸ್ತುವನ್ನು ಸ್ಪಷ್ಟವಾಗಿ ಮಾಡಲು ನಿಶ್ಚಯ ಗೊಳಿಸಬೇಕು) ವ್ಯವಸ್ಥೆಗೊಳಿಸಿ ಅದನ್ನು ನೀಡಿದ ಬಳಿಕ ಪ್ರಾಯೋಜಕರು ತಮಗೆ ದೊರೆತ ಲಾಭದಿಂದ ಯಾವುದಾದರೂ ಕೆಲವು ವಸ್ತುಗಳನ್ನು ಚೀಟಿ ಹಾಕಿ ಸದಸ್ಯರಲ್ಲಿ ಯಾರಿಗಾದರೂ ಬಹುಮಾನವಾಗಿ ನೀಡುವುದಾದರೆ ತೊಂದರೆ ಇಲ್ಲ. ಆದರೆ ಇದು ವ್ಯಾಪಾರದ ಭಾಗವಾಗಿರಬಾರದು.ಕೇವಲ ಅವರ ವತಿಯಿಂದ ಸೌಜನ್ಯವಾಗಿ ನೀಡುವಂತದ್ದು ಆಗಿರಬೇಕು.ಇದಲ್ಲದೆ ಮೇಲೆ ತಿಳಿಸಲಾದ ರೀತಿಯಲ್ಲಿ ಸ್ಕೀಮ್ ನಡೆಸುವುದು ಅನಿಸ್ಲಾಮಿಕವೆಂದು ತಿಳಿದುಕೊಳ್ಳಬೇಕಾಗಿದೆ.the end

Wednesday, March 15, 2023

ಮಸೀದಿಯ ಸಾರ್ವಜನಿಕ ದರ್ಶನ ಇಸ್ಲಾಮಿನ ನಿಲುವೇನು?

*ಮಸೀದಿಯ ಸಾರ್ವಜನಿಕ ದರ್ಶನ ಇಸ್ಲಾಮಿನ ನಿಲುವೇನು?*
____________________________
✍️ ಮುನೀರ್ ಸಖಾಫಿ ಸಾಲೆತ್ತೂರು 

 ( *ಇದು ಯಾವ ಧರ್ಮವನ್ನು ಅಥವಾ ಪುರುಷರನ್ನೋ* *ಮಹಿಳೆಯರನ್ನೋ ಗೇಲಿ ಮಾಡಲು ಬರೆದ ಬರಹವಲ್ಲ.*
*ಇಸ್ಲಾಮಿನ ನಿಯಮಗಳನ್ನು ವಿವರಿಸಿ ಹೇಳಿದ್ದೇನೆ ಅಷ್ಟೇ.*)

ಹಳೇ ಕಾಲದಲ್ಲಿದ್ದ ಮಸೀದಿಗಳನ್ನು ಈಗೀಗ ಪುನರ್ ರ್ನಿಮಾಣ 
ಮಾಡಲಾಗುತ್ತಿದೆ.
ಉದ್ಘಾಟನೆಯ ಮೊದಲು ಅಥವಾ ಅದನ್ನು ಸಾರ್ವಜನಿಕ ದರ್ಶನಕ್ಕಿಡಲಾಗುತ್ತದೆ. ಮಸೀದಿಯಲ್ಲಿ ಆರಾದನೆಗಳಿಲ್ಲದ ಮಹಿಳೆಯರು,
ಮುಸ್ಲಿಮೇತರರೂ ದರ್ಶಿಸುತ್ತಾರೆ. ಇದರ ಕುರಿತು ಇಸ್ಲಾಮಿನ ನಿಲುವೇನೆಂದು ಹಲವರು ಕೇಳಿದ್ದರಿಂದ ಇದರ ಬಗ್ಗೆ ಬರೆಯುತ್ತಿದ್ದೇನೆ.

ಆರಾದನಾಲಯಗಳು ಪವಿತ್ರವಾಗಿದೆ.ದೇವಸ್ಥಾನ ಹಿಂದೂ ಬಾಂಧವರಿಗೆ ಪವಿತ್ರವಾದಂತೆ ಚರ್ಚ್ ಗಳು ಕ್ರೈಸ್ತ ಸಹೋದರರಿಗೂ ಮಸೀದಿಗಳು ಮುಸ್ಲಿಮರಿಗೂ ಪವಿತ್ರವಾಗಿದೆ.
ಆರಾದನಾ ಕೇಂದ್ರಗಳು ಯಾವಾಗಲೂ ಮಲಿನವಾಗಬಾರದು. ಆರಾದಾನಲಯಗಳ ಪಾವಿತ್ರತೆಯನ್ನು ಎಲ್ಲರೂ ಕಾಪಾಡಬೇಕಾಗಿದೆ. ಅವರವರ ಧರ್ಮದ ನಿಲುವನುಸರಿಸಿ ಸ್ವಛ್ಛತೆಯಿಂದ ಅದನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ.
ಮಸೀದಿಯ ಆರಾಧನೆಗಳು ಮುಸ್ಲಿಮ್ ಪುರುಷರಿಗೆ ಮಾತ್ರ ಸೀಮಿತವಾಗಿದೆ.
ತಮ್ಮೊಂದಿಗೆ ಮಸೀದಿಯಲ್ಲಿ ನಮಾಝ್ ಮಾಡಲು ಅನುಮತಿ ನೀಡುವಿರಾ ಎಂದು ಪೈಗಂಬರ್ ﷺِರವರಲ್ಲಿ ಅನುಮತಿ  ಕೇಳಿದ ಉಮ್ಮು ಉಮೈದುಸ್ಸಾಇದೀ ಎಂಬ ಮಹಿಳೆಯೊಂದಿಗೆ ನೀನು ಮನೆಯೊಳಗಿನ ಕೋಣೆಯಲ್ಲಿ ನಿರ್ವಹಿಸುವ ನಮಾಝಾಗಿದೆ ಉತ್ತಮ ನಮಾಝ್ ಎಂದು ಹೇಳಿ ಅವರನ್ನು ಮನೆಗೆ ಕಳುಹಿಸಿದ ಹದೀಸ್ ಗ್ರಂಥಗಳಲ್ಲಿ ದಾಖಲಾಗಿದೆ.
(ಹದೀಸ್ ವರದಿ ಇಮಾಮ್ ಅಹ್ಮದ್ 
ಭಾಗ 6 ಪುಟ 371)

ಆರಾಧನೆಯಲ್ಲದ ಇನ್ನಿತರ ಅಗತ್ಯಕ್ಕಾಗಿ ಮಹಿಳೆ ಮಸೀದಿಯೊಳಗೆ ಹೋಗುವುದಕ್ಕೆ ವಿರೋಧವಿಲ್ಲ. ಉದಾಹರಣೆಗೆ ಖಾಝಿಯ ಬಳಿ ಹೋಗುವ ಅನಿವಾರ್ಯತೆ ಬಂದರೆ ಖಾಝಿ ಮಸೀದಿಯಲ್ಲಿದ್ದರೆ ಫತ್ವ ಕೇಳಲು ಮಸೀದಿಗೆ ಹೋಗಬಹುದಾಗಿದೆ.

*ಮುಸ್ಲಿಮೇತರರು ಮಸೀದಿಗೆ ಪ್ರವೇಶಿಸಬಹುದೇ?*

ಅಮುಸ್ಲಿಮರು ಮಸೀದಿ ಪ್ರವೇಶಿಸುವ ಬಗ್ಗೆ ಇಮಾಮರುಗಳು ಅವರ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
ಇಮಾಮ್ ಅಬ್ದುಲ್ ಹಮೀದುಶ್ಶರ್ವಾನೀ (ರ) ಬರೆಯುತ್ತಾರೆ,

ಮುಸ್ಲಿಮ್ ಆದ ವ್ಯಕ್ತಿ ಅನುಮತಿ ನೀಡಿದ್ದಲ್ಲಿ ಮುಸ್ಲಿಮೇತರರು ಮಸೀದಿಗೆ ಪ್ರವೇಶಿಸಬಹುದಾಗಿದೆ.
ಅವರಿಗೆ ಸ್ನಾನ ಕಡ್ಡಾಯವಾಗಿದ್ದರೂ ಸರಿ.
ಹೈಲ್ ಆದ ಮಹಿಳೆಗೂ ಇದೇ ನಿಯಮ ಆಗಿರುತ್ತದೆ.
(ಹಾಶಿಯತು ತುಹ್ಫಾ 2/168)

ಮಸೀದಿಯ ಕೆಲಸಕ್ಕೆ ಮುಸ್ಲಿಮೇತರರಿಗೂ ಪ್ರವೇಶನ ನೀಡಬಹುದಾಗಿದೆ ಎಂದು ಇಮಾಮ್ ಜಮಾಲುದ್ದೀನ್ ಮುಹಮ್ಮದ್ ಅಲ್ ಅಹ್ದಲ್ (ರ) ತನ್ನ ಉಮ್ದತುಲ್ ಮುಫ್ತಿಯಲ್ಲಿ ವಿವರಿಸಿದ್ದಾರೆ.

ಒಂದು ವೇಳೆ ಅಮುಸ್ಲಿಮರ ಪ್ರವೇಶದಿಂದ ಮಸೀದಿ ಕೊಳಕಾಗುವುದಾದರೆ ಅವರಿಗೆ ಅನುಮತಿ ನೀಡುವುದು ಹರಾಮ್ ಆಗಿರುತ್ತದೆ (ಅದು ಮುಸ್ಲಿಮ್ ಮಹಿಳೆಗಾದರೂ)
 ಎಂದು
ಇಮಾಮ್ ಮುಹಮ್ಮದುರ್ರಂಲೀ (ರ) ತನ್ನ ನಿಹಾತುಲ್ ಮುಹ್ತಾಜ್'ನ 1/219ರಲ್ಲಿ ವಿವರಿಸಿದ್ದಾರೆ

ಕೊಳಕಾಗದಿದ್ದರೆ ಕರಾಹತ್ ಆಗಿರುತ್ತದೆ.
ಕುರ್'ಆನ್ ಅಥವಾ ಇನ್ನಿತರ ಇಸ್ಲಾಮಿನ ಬಗ್ಗೆ ಕಲಿಯಲು ಬೇಕಾಗಿ ಮಸೀದಿಗೆ ಅನುಮತಿ ನೀಡುವುದು ಸುನ್ನತ್ ಆಗಿದೆ.
(ಹಾಶಿಯತು ತುಹ್ಫ 2/168)

ಒಟ್ಟಿನಲ್ಲಿ ಅಮುಸ್ಲಿಮರು ಮಸೀದಿ ಪ್ರವೇಶಿಸಬೇಕಾದರೆ 3 ನಿಬಂಧನೆಗಳಿವೆ.

1. ಮುಸ್ಲಿಮ್ ಅನುಮತಿ ನೀಡಬೇಕು.
2. ಮಸೀದಿ ಕೊಳಕಾಗಬಾರದು.
3. ಅಗತ್ಯಕ್ಕಾಗಿ ಪ್ರವೇಶಿಸಬೇಕು. ಅಗತ್ಯವಿಲ್ಲದಿದ್ದಲ್ಲಿ ಹರಾಮ್ ಆಗಿರುತ್ತದೆ.

ಈ 3 ನಿಬಂಧನೆ ಪಾಲಿಸದಿದ್ದರೆ ಹರಾಮ್ ಆಗಿರುತ್ತದೆ.
ಋತುಸ್ರಾವವಿರುವ ಮುಸ್ಲಿಮ್ ಮಹಿಳೆ ಮಸೀದಿ ಪ್ರವೇಶಿದಾಗ (ರಕ್ತಗಳಿಂದ) ಕೊಳಕಾದರೆ ಹರಾಮ್ ಆಗಿರುತ್ತದೆ.

ಅಮೂಲ್ಯ ಸಲಹೆಗೆ ವಾಟ್ಸಪ್ ( ಮಾತ್ರ ) ಮಾಡಿ
🤝🤝🤝🤝
+919902623313

ಈ ಬಿರುದುದಾರಿಗಳಿಗೆ ಕಡಿವಾಣ ಹಾಕುವವರಾರು?

*ಈ ಬಿರುದುಗಳಿಗೆ ಕಡಿವಾಣ ಹಾಕುವವರು ಯಾರು?*
------------------------------------------------
✍️ ಮುನೀರ್ ಸಖಾಫಿ ಸಾಲೆತ್ತೂರು 

ಹಳೇ ಕಾಲದ ಉಸ್ತಾದರುಗಳು ಹತ್ತಿಪ್ಪತ್ತು ವರ್ಷ ಕಲಿತು ಉನ್ನತ ವಿಧ್ಯಭ್ಯಾಸಕ್ಕಾಗಿ ಅರೆಬಿಕ್ ಕಾಲೇಜಿಗೆ ತೆರಳುತ್ತಿದ್ದರು.
ವೆಲ್ಲೂರು ಬಾಖಿಯ್ಯಾತ್ ಹಾಗೂ ಉತ್ತರ ಭಾರತದ ದಯೂಬಂದ್ ಗೆ ಅವರು ತೆರಳುತ್ತಿದ್ದರು.
ನಂತರ ನಮ್ಮ ನೆರೆಯ ಕೇರಳದಲ್ಲೇ ಪಟ್ಟಿಕ್ಕಾಡ್ ಕಾಲೇಜ್, ನಂದಿ ದಾರುಸ್ಸಲಾಮ್ ಕಾಲೇಜು, ಎ.ಪಿ. ಉಸ್ತಾದರ ಮರ್ಕಝ್, ಜಾಮಿಅ  ಸಅದಿಯಾ, ಉಳ್ಳಾಲದ ಮದನೀ ಕಾಲೇಜ್, ಅಹ್ಸನೀ ಕಾಲೇಜ್ ಮುಂತಾದ ಉನ್ನತ ವಿಧ್ಯಾಭ್ಯಾಸದ ಕಾಲೇಜ್'ಗಳು ಅಸ್ತಿತ್ವಕ್ಕೆ ಬಂತು.
ಕನಿಷ್ಟ 8 ವರ್ಷ ದರ್ಸ್ ಕಲಿತು 2 ವರ್ಷ ಅಥವಾ 3 ವರ್ಷ ಕಾಲೇಜುಗಳಲ್ಲಿ ಕಲಿತವರೇ ಉಸ್ತಾದರುಗಳಲ್ಲಿ ಅಧಿಕ ಮಂದಿ ನಂತರ 2 ವರ್ಷದ ಮುತವ್ವಲ್ ಕೋರ್ಸನ್ನು 1 ವರ್ಷದ ಮುಖ್ತಸರ್ ಕೋರ್ಸ್ ಆಗಿ ಪರಿವರ್ತನೆ ಮಾಡಿದಾಗಲೂ ಉನ್ನತ ವಿಧ್ಯೆ ಲಭಿಸುತ್ತಿತ್ತು.

ಈಗೀಗ ಏನಾಗಿದೆ ಅಂದರೆ ಎಲ್ಲೂ ದರ್ಸ್ ಕಲಿಯದ ಕೆಲವು ಜಾಹಿಲ್'ಗಳನ್ನು ಸೇರಿಸಿ ಆನ್ಲೈನ್ ಕೋರ್ಸ್ ಎಂಬ ಹೆಸರಲ್ಲಿ 3 ತಿಂಗಳ ಕೋರ್ಸ್'ಗೆ ಸೇರಿಸಿ ಅವರಿಗೆ ವಾಟ್ಸಪ್'ನ ನಾಲ್ಕು ಕ್ಲಿಪ್'ಗಳನ್ನು ಕಳುಹಿಸಿ ಅವರಿಗೆ ಬಿರುದು ನೀಡಲಾಗುತ್ತಿದೆ.
ಮುಂದೆ ಅವರು ಬಂದು ನಾವು ಕೂಡಾ ಸನದ್ ಪಡೆದ ಆಲಿಮ್'ಗಳು ಎಂಬ ರೂಪದಲ್ಲಿ ವರ್ತಿಸುತ್ತಿರುವುದನ್ನು ಕಾಣುವಾಗ ಹಳೇ ಕಾಲದಲ್ಲಿ ಕಷ್ಟ ಪಟ್ಟು ಕಲಿತ ಉಸ್ತಾದರುಗಳ ಬಗ್ಗೆ ಸಾಮಾನ್ಯ ಜನರೆಡೆಯಲ್ಲಿ ಇವರು ಕೂಡಾ ವಾಟ್ಸಪ್ ಆಲಿಂಗಳೇ ಆಗಿರಬಹುದು ಎಂದು ಭಾವಿಸಿದರೆ ಅದಕ್ಕೆ ಹೊಣೆ ಯಾರು?

ಅನ್ಲೈನಲ್ಲಿ ಇಲ್ಮ್ ಕಲಿಯುವುದಕ್ಕೆ ನಾನಿಲ್ಲಿ ವಿರೋಧ ಮಾಡುತ್ತಿಲ್ಲ.
ಸೌಕರ್ಯವಾದಂತೆ ಇಲ್ಮ್ ಕಲಿಯಬಹುದು.
ಆದರೆ  3 ತಿಂಗಳ ಕೋರ್ಸ್ ಕಲಿತವರಿಗೆ ಈ ಬಿರುದು ಬೇಕೆ?
ನನಗೂ ಕೂಡಾ ಶಿಷ್ಯ ವೃಂದವಿದೆ ಎಂದು ಜನರೆಡೆಯಲ್ಲಿ ಹೆಸರಿಗಾಗಿ ಮಾಡುತ್ತಿದ್ದಾರೆಯೇ ಅಲ್ಲಾಹನೇ ಬಲ್ಲ. 🤷‍♂️🤷‍♂️

ಮೊನ್ನೆ ಒಂದು ಮೆಸೇಜ್ ನೋಡಿದೆ.
ಒಂದುವರೇ ತಿಂಗಳಲ್ಲಿ ಮುಗಿಯುವ ಕೋರ್ಸ್ ಅಂತೆ. ಕೊನೆಗೆ ಸನದ್ ಇದೆಯಂತೆ.
ನೋಡಿದಾಗ ನಾಚಿಕೆ ಮತ್ತು ಬೇಸರವೂ ಆಯಿತು.
ಇದಕ್ಕೆಲ್ಲಾ ಕಡಿವಾಣ ಹಾಕುವವರು ಯಾರು?

ಇದೀಗ ಗಂಡಸರಿಗಿಂತ ಹೆಣ್ಮಕ್ಕಳ ಅನ್ಲೈನ್ ಕೋರ್ಸೇ ಅಧಿಕ.
ಅದರ ಬಗ್ಗೆ ಹೇಳದಿರುವುದೇ ಒಳಿತು.
ಮದುವೆ ಪತ್ರಿಕೆಯಲ್ಲಿ ಮಧುಮಗಳ ಹೆಸರಿನೊಂದಿಗೆ ನಾಲ್ಕೈದು ಬಿರುದುಗಳು.
3 ತಿಂಗಳಲ್ಲಿ ಕಲಿತು ಹೆಣ್ಣು ಆಲಿಮತ್ ಅಂತೆ.
ತನ್ನನ್ನು ತಾನೇ ನಾನು ಆಲಿಮತ್ ಎಂದು ಕೊಚ್ವಿಕೊಳ್ಳುವ ಮಟ್ಟಕ್ಕೆ ಈ ಆಲಿಮತ್'ಗಳು ಇಳಿದಿದ್ದಾರೆ.
ಈಗೀಗ ಆ ಆಲಿಮತ್'ಗಳು ಯಾವ ಆಲಿಮ್ ಮಸ್'ಅಲ ಹೇಳಿದರೂ ಕೇಳಲು ತಯಾರಾಗುತ್ತಿಲ್ಲ. ಕಾರಣ ಅವರೂ ಕೂಡಾ ಆಲಿಮತ್'ಗಳು. 😃

ಇಲ್ಮ್ ಎಲ್ಲರೂ ಕಲಿಯಬೇಕು. ಅದಕ್ಕಿರುವ ಎಲ್ಲಾ ಒಳ್ಳೆಯ ಮಾರ್ಗವನ್ನು ಅನುಸರಿಸಬೇಕು.
ಆದರೆ ಪೂರ್ವೀಕ ಉಸ್ತಾದರಗಳು ಕಷ್ಟಪಟ್ಟು ಕಲಿತು ಬಿರುದು ಪಡೆದದ್ದನ್ನು  ಹಿಯಾಳಿಸುವ ಹಂತಕ್ಕೆ ಇಂದು ಬಿರುದು ನೀಡುವವರು ಇಳಿದಿದ್ದಾರೆ ಎನ್ನುವಾಗ ತುಂಬಾ ಬೇಸರವಾಗುತ್ತಿದೆ.
😰😰😰

ಆಲಿಂಗಳಿಗೆ ಸಮೂಹದಲ್ಲಿ ಉನ್ನತ ಸ್ಥಾನಗಳಿವೆ.
ಪ್ರಾಯ ಎಷ್ಟೇ ಕಡಿಮೆಯಾದರೂ ಆಲಿಂಗಳು ಹಿರಿಯರು.
ಜಾಹಿಲ್'ಗಳು ಪ್ರಾಯದಲ್ಲಿ ಎಷ್ಟೇ ದೊಡ್ಡವರದರೂ ಕಿರಿಯರು ಎಂದು ಇಮಾಮ್ ಶಾಫಿಈ (ರ) ಹೇಳಿದ್ದೂ ಬಹಳ ಸತ್ಯದ ಮಾತು.

ವಾಟ್ಸಪಲ್ಲಿ ನಾಲ್ಕು ಕ್ಲಿಪ್ ಬಿಟ್ಟು ಬಿರುದು ನೀಡಲ್ಪಟ್ಟವರು ಇಂದು ಉಲಮಾಗಳಂತೆ ಪೋಸ್ ಕೊಡುತ್ತಿದ್ದಾರೆ.
ಹೊಟ್ಟೆಪಾಡಿಗಾಗಿ ಬೇರೆ ಏನೆಲ್ಲಾ ದುಡಿಮೆಗಳಿವೆ.
ಹಲಾಲಾದ ಇನ್ನಿತರ ಕಸುಬು ನಡೆಸಬಹುದು.

ತನ್ನ ಸಂಸ್ಥೆಯಲ್ಲಿ ಮುತಲ್ಲಿಮರು ಕಲಿಯುತ್ತಿದ್ದಾರೆ ಎಂದು ಸುಳ್ಳು ಹೇಳಿ ಹಣ ಕಲೆಕ್ಷನ್ ಮಾಡಿ ಅದನ್ನು ಗುಳುಮ್ ಮಾಡಿ ಸಂಸ್ಥೆಯ ವಾರ್ಷಿಕದಂದು ಸನದ್ ನೀಡಲು ರೆಡಿಮೆಡ್ ಬಿರುದುದಾರಿಗಳನ್ನು ನಿರ್ಮಿಸಲು ಆನ್ಲೈನ್ ಕೋರ್ಸ್ ನಡೆಸಿದರೆ
ಅಲ್ಲಾಹನ ಬಳಿ ಅದರ ಲೆಕ್ಕ ಕೊಡಬೇಡವೇ?

ಜಾಹಿಲ್'ಗಳು ಆಲಿಮರಂತೆ ವರ್ತಿಸುವುದು ಮಹಾ ಪಾಪಗಳಲ್ಲೊಂದು ಎಂದು ಹೇಳಿದ ಇಮಾಮರುಗಳಿಲ್ಲವೇ?
ಅಂತ್ಯ ದಿನದಲ್ಲಿ ಹೆಸರಿಗಾಗಿ ಇಲ್ಮ್ ಕಲಿಯುವ ಒಂದು ವಿಭಾಗ ಬರಲಿದ್ದಾರೆ.
ಅವರು ಇಲ್ಮ್ ಇಲ್ಲದೆ ಜನರಿಗೆ ಫತ್ವ ಕೊಡುವ ಮೂಲಕ ಅವರು ಮತ್ತು ಫತ್ವ ಕೇಳಿದವರೂ ದಾರಿ ತಪ್ಪಿದವರು ಎಂದು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದು ಎಷ್ಟು ಸರಿಯಾದ ಮಾತಾಗಿದೆ.

ಇದಕ್ಕೆ ಉಲಮಾಗಳು ಕಡಿವಾಣ ಹಾಕಲೇಬೇಕಾಗಿದೆ.

✍️. ಮುನೀರ್ ಸಖಾಫಿ ಸಾಲೆತ್ತೂರು

ಮಕ್ಕಳನ್ನು ಬೆಳೆಸುವುದು ಈ ರೀತಿಯಾಗಿರಲಿ

*ಮಕ್ಕಳನ್ನು ಬೆಳೆಸುವುದು ಈ ರೀತಿ ಆಗಿರಲಿ*

📝 ಮುನೀರ್ ಸಖಾಫಿ ಸಾಲೆತ್ತೂರು
---------------------------------------------
   ಮಕ್ಕಳು ಅಲ್ಲಾಹನು ನಮಗೆ ಕರುಣಿಸಿದ ಅನುಗ್ರಹವಾಗಿದೆ.ಅದನ್ನು ಬೇಕಾದ ರೀತಿಯಲ್ಲಿ ಬೆಳೆಸುವುದು ಎಲ್ಲಾ ತಂದೆ ತಾಯಿಯರ ಕರ್ತವ್ಯವಾಗಿದೆ.
ನಿಮ್ಮ ಮಕ್ಕಳು ನಿಮ್ಮ ಮಕ್ಕಳಾಗಿಯೇ ಉಳಿಯಬೇಕಾದಲ್ಲಿ ಈ ಕೆಳಗಿನ 100 ಉಪದೇಶಗಳನ್ನು ಓದಿ ,ಪ್ರಯೋಗಿಸಿ ನೋಡಿ.
--------------------------------------------
1.ಮಗುವಿಗೆ ಇಹ ಮತ್ತು ಪರ ದಲ್ಲಿ ಪ್ರಯೋಜನವಾಗುವ ಉಪದೇಶಗಳನ್ನು ನೀಡಿ

2.ಅಲ್ಲಾಹನಿಗೆ ಮತ್ತು ಮಾತಾ ಪಿತರಿಗೆ ಕೃತಞ್ಞತೆ ಖಡ್ಡಾಯವೆಂದು ಕಲಿಸಿ ಕೊಡಿ.

3.ಸತ್ಯ ವಿಶ್ವಾಸಿಗಳ ಮಾರ್ಗ ಅವಲಂಬನೆಗೆ ಪ್ರಚೋದನೆ ನೀಡಿ.

4.ನೂತನ ವಾದಿಗಳ ಮಾರ್ಗ ಅನುಸರಿಸದಂತೆ ಜಾಗ್ರತೆ ವಹಿಸಿ.

5.ಬಾಹ್ಯ ಮತ್ತು ಗೌಪ್ಯತೆ  ಅಲ್ಲಾಹನ ನಿರೀಕ್ಷಣೆಯಲ್ಲಿ ಎಂಬ ನೆನಪು ಮಾಡಿಕೊಡಿ.

6.ಅತೀ ಪುಟ್ಟ ಒಳಿತಾದರೂ ಕೆಡುಕಾದರೂ ಅದರ ಬಗ್ಗೆ ವಿವರಿಸಿ ಕೊಡಿ.

7.ನಮಾಝ್ ನ ಶರ್ತ್, ಫರ್ಲ್ , ಸುನ್ನತ್ , ಕರಾಹತ್ ಗಳ ಬಗ್ಗೆ ಮನದಟ್ಟು ಮಾಡಿಕೊಡಿ.

8.ಒಳಿತನ್ನು ಬೋಧಿಸುವುದು ಮತ್ತು ಕೇಡುಕನ್ನು ವಿರೋಧಿಸಿ.

9.ಕಷ್ಟ ಸಂದರ್ಭಗಳಲ್ಲಿ ಸಹನೆ ಕಳೆದು ಕೊಳ್ಳದೆ ಸಹನೆಯಿಂದಿರಲು ಉಪದೇಶಿಸಿ.

10.ನಡತೆಯಲ್ಲಿ ಅಹಂಕಾರ ಪ್ರದರ್ಶಿಸದಿರಲಿ ಹೇಳಿ.

11.ನಡೆಯುವಾಗ ಸಮಾದಾನದಿಂದ ನಡೆಯುವಂತೆ ಕಲಿಸಿ ಕೊಡಿ.

12.ಅಗತ್ಯ ಕ್ಕಿಂತ ಹೆಚ್ಚು ಶಬ್ಧದಲ್ಲಿ ಮಾತನಾಡುವುದನ್ನು ವಿರೋಧಿಸಿ.

13.ಎಲ್ಲಾ ಕೆಲಸಗಳಲ್ಲಿ ಪೂರ್ಣತೆ ಆಗುವಂತೆ ನೋಡಿಕೊಳ್ಳಿ.

14.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲಿನ ಪ್ರೀತಿ ಕಲಿಸಿ ಕೊಡಿ.

15.ಆರೋಗ್ಯ ಸಂದರ್ಭದಲ್ಲಿ ಅಲ್ಲಾಹನನ್ನು ಅನುಸರಿಸಿದರೆ ಅನಾರೋಗ್ಯ ವೇಳೆ ಅಲ್ಲಾಹನು  ಕಾಪಾಡುವನು ಎಂದು ಹೇಳಿಕೊಡಿ.

16.ಯಾವಾಗಲೂ ಚಿಂತಿತರಾಗದೇ ಸಂತೋಷದಿಂದಿರಲು  ಕಲಿಸಿ ಕೊಡಿ.

17.ಒಂದು ದುಖಃ ಉಂಟಾದಲ್ಲಿ ಅದರ ಬೆನ್ನಿಗೇ ಸುಖಃವು ಲಬಿಸುವುದೆಂಬ ಪ್ರವಾದಿ ವಚನ ಹೇಳಿ ಕೊಡಿ.

18.ಎಲ್ಲರಿಗೂ ಒಂದೊಂದು ರೀತಿಯಲ್ಲಿ ಜವಬ್ದಾರಿಯಿದೆ ಎಂಬುವುದನ್ನು ಮನವರಿಕೆ ಮಾಡಿ ಕೊಡಿ.

19.ಎಲ್ಲಾ ಮಕ್ಕಳನ್ನು ಒಂದೇ ರೀತಿಯಲ್ಲಿ ಪ್ರೀತಿಸಿ.

20.ಮಕ್ಕಳಿಗೆ ಎಳೆಯ ಪ್ರಾಯದಲ್ಲೇ "ಲಾಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್" ಎಂಬುವುದನ್ನು ಕಲಿಸಿ ಕೊಡಿ.

21.ಇಸ್ಲಾಮ್ ನಿಂದ ಹೊರ ಹೋಗುವುದರ ಕುರಿತು ಮತ್ತು ಅದರಿಂದುಂಟಾಗುವ ವಿಪತ್ತುಗಳ ಬಗ್ಗೆ ವಿವರಿಸಿ ಕೊಡಿ.

22.ಮದ್ಯಪಾನ ಮತ್ತು ಲಹರಿ ಇಸ್ಪೀಟ್ ಗಳ ಬಗ್ಗೆ ಎಚ್ಚರವಹಿಸಿ.

23.ಅದರ ಭವಿಷ್ಯತ್ ಗಳ ಬಗ್ಗೆ ಖುರ್ ಆನ್ , ಹದೀಸ್ ವಚನ ವಿವರಿಸಿ.

24.ನಗ್ನ ಚಿತ್ರ ಗಳ ವಿಕ್ಷಣೆಯ ಬಗ್ಗೆ ಜಾಗ್ರತೆ ವಹಿಸಿ.

25.ಬೀಡಿ ಸಿಗರೇಟ್ ಗಳ ಸೇವನೆಯ ಜಾಗ್ರತೆ ವಹಿಸಿ.

26.ಸತ್ಯ ಮಾತ್ರ  ಹೇಳುವುದನ್ನು ಕಲಿಸಿ ಕೊಡಿ.

27.ಅನ್ಯರ ಸೊತ್ತು ತಿನ್ನುವುದನ್ನು ತಡೆಯಿರಿ.

28.ಮಕ್ಕಳಿಗೆ ನಾಶ ಬರುವಂತೆ ಪ್ರಾರ್ಥಿಸದಿರಿ.

29.7 ನೇ ಪ್ರಾಯದಲ್ಲಿ ನಮಾಝ್ ಮತ್ತು ಅದಕ್ಕೆ  ಸಂಬಂದಪಟ್ಟ ವಿಷಯಗಳನ್ನು  ಕಲಿಸಿ.

30.10 ನೇ ಪ್ರಾಯವಾದಲ್ಲಿ ನಮಾಝ್ ತ್ಯಜಿಸಿದರೆ ಸಣ್ಣ ಪ್ರಮಾಣದಲ್ಲಿ ಶಿಕ್ಷಿ ನೀಡಿ.

31.10 ನೇ ವಯಸ್ಸಿನಲ್ಲಿ ತಾಯಿ,ಸಹೋದರಿ ಮತ್ತಿತರ ಸ್ತ್ರೀಯರೊಂದಿಗೆ ಮಲಗದಂತೆ ಎಚ್ಚರವಹಿಸಿ.

32.ಸಣ್ಣ ವಯಸ್ಸಿನಲ್ಲೇ ಚಿಕ್ಕ ಪುಟ್ಟ  ಖುರ್ ಆನ್ ಸೂರತ್ ಗಳನ್ನು ಕಲಿಸಿ ಕೊಡಿ.

33.ಜುಮುಅ , ಜಮಾಅತ್ ನಮಾಝ್ ನ ಮಹತ್ವ ಹೇಳಿ ಕೊಡಿ.

34.ಉಪವಾಸ ಹಿಡಿಯುವಂತೆ ನೋಡಿ ಕೊಳ್ಳಿ.

35.ಹೆಣ್ಣು ಮಕ್ಕಳು ಸಂಪೂರ್ಣ ಶರೀರ ಮುಚ್ಚುವಂತೆ ನೋಡಿ ಕೊಳ್ಳಿ.

36.ಗಂಡು ಮಕ್ಕಳಿಗೆ ಅವರ ವಸ್ತ್ರವೂ, ಹೆಣ್ಣು ಮಕ್ಕಳಿಗೆ ಹೆಣ್ಣು ಮಕ್ಕಳ ವಸ್ತ್ರ ದರಿಸುವಂತೆ ನೋಡಿ ಕೊಳ್ಳಿ.

37.  7 ನೇ ವಯಸ್ಸಾದ ಹೆಣ್ಣು ಮಗು ತಲೆ ಮುಚ್ಚುವಂತೆ ಆಜ್ಞ್ಞಾಪಿಸಿ.

38.ತಿನ್ನುವಾಗ , ಕುಡಿಯುವಾಗ, ಕೊಡುವಾಗ , ಪಡೆಯುವಾಗ ಬಲಕೈ ಉಪಯೊಗಿಸುವಂತೆಯೂ ಬಿಸ್ಮಿ , ಹಂದ್ ಹೇಳುವಂತೆಯೂ ಹೇಳಿ ಕೊಡಿ.

39.ಶರೀರ , ವಸ್ತ್ರ , ಸ್ಥಳ ಶುದ್ಧೀಕರಿಸುವಂತೆ ನೋಡಿ ಕೊಳ್ಳಿ.

40.ಎಲ್ಲಾ ಶುಕ್ರವಾರ ಉಗುರು ಕತ್ತರಿಸುವಂತೆ ಹೇಳಿ ಕೊಡಿ.

41.ಆಹಾರದ ಮುಂಚೆ ಹಾಗೂ ನಂತರ ಕೈ ತೊಳೆಯುವಂತೆ ನೋಡಿ ಕೊಳ್ಳಿ.

42.ತಪ್ಪು ಕಂಡು ಬಂದಲ್ಲಿ ಅಶ್ಲೀಲ ಮಾತುಗಳಿಂದ ಬಯ್ಯದೆ ಬಹಳ ಪ್ರೀತಿಯ ಮೂಲಕ ಹೇಳಿ ಸರಿ ಪಡಿಸಿ.

43.ಅಝಾನ್ ನ ವೇಳೆ ಮಾತಾಡುವುದನ್ನು ವಿರೊಧಿಸಿ.

44.ಅಝಾನ್ ಗೆ ಉತ್ತರಿಸುವುದನ್ನು ಮತ್ತು ನಂತರವಿರುವ ಪ್ರಾರ್ಥನೆಯನ್ನು ಕಲಿಸಿ ಕೊಡಿ.

45.ಸಾಧ್ಯವಾದರೆ ಎಲ್ಲಾ ಮಕ್ಕಳನ್ನೂ ಬೇರೆ ಬೇರೆ ಹಾಸಿಗೆಯಲ್ಲಿ ಮಲಗಿಸಿ.

46.ಅದು ಅಸಾದ್ಯವಾದಲ್ಲಿ ಗಂಡು ಮಕ್ಕಳನ್ನು ಒಂದು ರೂಮಿನಲ್ಲೂ ಹೆಣ್ಣು ಮಕ್ಕಳನ್ನು ಇನ್ನೊಂದು ರೂಮಿನಲ್ಲೂ ಮಲಗಿಸಿ.

47.ದಾರಿ ಮಧ್ಯೆ ಕಸ ಕಡ್ಡಿಗಳನ್ನು ಎಸೆಯದಂತೆ ಎಚ್ಚರವಹಿಸಿ.

48.ದಾರಿ , ಮಾರ್ಗ ಗಳಲ್ಲಿರುವ ಅಡೆ ತಡೆಗಳನ್ನು ನಿವಾರಿಸಲು ಹೇಳಿ ಕೊಡಿ.

49.ಅಂಗಡಿಗಳ ಬಳಿ, ಬಸ್ ಸ್ಟ್ಯಾಂಡ್ ಗಳಲ್ಲಿ ಅನಗತ್ಯ ನಿಲ್ಲದಂತೆ ನೋಡಿಕೊಳ್ಳಿ.

50.ಇಡೀ ಸಮಯ ಆಟ ಆಡದಂತೆ ನೋಡಿಕೊಳ್ಳಿ.

51.ಸಮಯವು ಅಮೂಲ್ಯವಾಗಿದೆ ಎಂದೂ ಅದನ್ನು ಅನಗತ್ಯ ಖರ್ಚು ಮಾಡದಂತೆ ಉಪದೇಶಿಸಿ.

52.ಸುನ್ನೀ ಮುಸಲ್ಮಾನರನ್ನು ಕಂಡರೆ ಸಲಾಂ ಹೇಳಬೇಕೆಂದು ಹೇಳಿಕೊಡಿ.

53.ನೆರೆಕರೆಯವರಿಗೆ, ಗೆಳೆಯರಿಗೆ , ಕುಟುಂಬಕ್ಕೆ ಉಪಕಾರ ಮಾಡುವ ಮನುಷ್ಯನಾಗಬೇಕೆಂದು ಹೇಳಿ ಕೊಡಿ.

54.ಅತಿಥಿ ಗಳನ್ನು ಗೌರವಿಸುವುದು, ಅವರನ್ನು ಸತ್ಕರಿಸುವುದರ ಬಗ್ಗೆ ಹೇಳಿಕೊಡಿ.

55.ಒಳ್ಳೆಯ ಕಾರ್ಯಗಳಲ್ಲಿ ಮಕ್ಕಳಿಗೆ ಧೈರ್ಯ ತುಂಬಿ ಕೊಡಿ.

56.ಖುರ್ ಆನ್ , ಹದೀಸ್ , ಇಮಾಮರುಗಳ ಗ್ರಂಥಗಳಲ್ಲಿ ಇರುವ ಸಜ್ಜನರ ಚರಿತ್ರೆ ಹೇಳಿ ಕೊಡಿ.

57.ಮಕ್ಕಳಿಗೆ ಹಣ ಹಾಗೂ ಇನ್ನಿತರ ಸೊತ್ತುಗಳು ನೀಡುವಾಗ ಎಲ್ಲರಿಗೂ ಒಂದೇ ರೀತಿಯಲ್ಲಿ ನೀಡಿ.

58.ಇಸ್ಲಾಮಿಕ್  ಪುಸ್ತಕ ಓದುವುದನ್ನು ರೂಡಿ ಮಾಡಿಸಿ.

59.ನೂತನವಾದಿಗಳ ಆಶಯಗಳನ್ನೂ ಅವರ ಗೆಳೆತನದಿಂದಲೂ ದೂರ ಸರಿಯುವಂತೆ ನೋಡಿಕೊಳ್ಳಿ.

60.ಹಣದೊಂದಿಗೆ  ಪ್ರೀತಿ ಬರದಂತೆ ನೋಡಿಕೊಳ್ಳಿ.

61.ಮಕ್ಕಳು ವಿವಾಹ ಪ್ರಾಯ ತಲುಪಿದ್ದಲ್ಲಿ ಒಳ್ಳೆಯ ನೆಂಟಸ್ಥಿಕೆ ನೋಡಿ ವಿವಾಹ ಮಾಡಿ ಕೊಡಿ.

62.ಅನ್ಯ ಸ್ತ್ರೀ ಪುರುಷರು ಮಾತ್ರ ಇರುವ ಸಂದರ್ಭವನ್ನು ಇಲ್ಲವಾಗಿಸಿ.

63.ಭ್ರೂಣ ಹತ್ಯೆ, ಗರ್ಭ ಶಸ್ತ್ರ ಚಿಕಿತ್ಸೆ ಮಾಡುವುದನ್ನು ವಿರೋಧಿಸಿ.

64.ಮಣಿ ಗಂಟಿನ ಕೆಳಗೆ ವಸ್ತ್ರ ಇಳಿಯದಂತೆ ಗಂಡು ಮಕ್ಕಳನ್ನು ನೋಡಿಕೊಳ್ಳಿ.

65. ಸಂಪ್ರದಾಯವನ್ನು ತ್ಯಜಿಸದಂತೆ ನೋಡಿಕೊಳ್ಳಿ.

66.ರಾತ್ರಿ ಬೇಗ ಮಲಗುವಂತೆ ಹಾಗೂ ಬೆಳಿಗ್ಗೆ ಬೇಗನೆ ಎದ್ದು ಸುಬಹ್ ನಮಾಝ್ ಮಾಡುವಂತೆ ನೋಡಿಕೊಳ್ಳಿ.

67.ರಾತ್ರಿ ಮಲಗುವಾಗ ಖುರ್ ಆನಿನ ಕೆಲವು ಭಾಗಗಳು ಮತ್ತು ದ್ಸಿಕ್ರ್ , ತಸ್ಬೀಹ್, ಸ್ವಲಾತ್ ಹೇಳಿ ಮಲಗುವಂತೆ ಉಪದೇಶಿಸಿ.

68.ಹಿರಿಯರ ಮುಂದೆ ಕುಳಿತು ಕೊಳ್ಳಬಾರದೆಂದು ಅವರನ್ನು ಗೌರವಿಸುವಂತೆ ಕಲಿಸಿ ಕೊಡಿ.

69.ಹಿರಿಯ ಮಗ ತಂದೆಯ ಸ್ಥಾನದಲ್ಲಿ ಎಂದು ಹೇಳಿ ಕೊಡಿ.

70.ಬಿಳಿ ವಸ್ತ್ರದೊಂದಿಗೆ ಹೆಚ್ಚು ಪ್ರೀತಿ ಉಂಟು ಮಾಡಿ ಕೊಡಿ.

71.ಪೆರ್ನಾಳ್ ಗಳ ದಿವಸ ಗೆಳೆಯರೊಡನೆ ಸೇರಿ ಅಲ್ಲಾಹನು ಇಷ್ಟಪಡದಂತಹ ಸ್ಥಳಗಳಿಗೆ ಹೋಗುವುದರ ಬದಲಾಗಿ ಕುಟುಂಬಸ್ಥರ ಮನೆಗೆ ಹೋಗುವಂತೆ ನೋಡಿಕೊಳ್ಳಿ.

72.ಪ್ರವಾದಿ ಕುಟುಂಬವಾದ ಅಹ್ಲ್ ಬೈತ್ ನ ಬಗ್ಗೆ ವಿಶೇಷವಾಗಿ ಕಲಿಸಿಕೊಡಿ.

73.ತಲೆಕೂದಲು, ಗಡ್ಡ , ಮೀಸೆ ಸರಿಯಾಗಿ ಇಸ್ಲಾಮಿನ ಚೌಕಟ್ಟಿನೊಳಗಿರುವಂತೆ ನೋಡಿಕೊಳ್ಳಿ.

74.ದುಡುಕು ಮಾಡಬಾರದೆಂದು ಹೇಳುತ್ತಿರಿ.

75.ಯಾರೊಂದಿಗೂ ತರ್ಕ, ವಾದ ಮಾಡಬಾರದಾಗಿ ಹೇಳುತ್ತಿರಿ.

76.ತಂದೆ ತಾಯಿಯನ್ನು ಕಾಣುವಾಗ ಎದ್ದು ನಿಲ್ಲಲು ಕಲಿಸಿ.

77.ತಂದೆ ತಾಯಿ ಅನುಮತಿ ನೀಡದಿದ್ದಲ್ಲಿ ಯಾತ್ರೆ ಹೋಗದಂತೆ ಉಪದೇಶಿಸಿ.

78.ಅವರಲ್ಲಿ ಸುಳ್ಳು ಹೇಳದಂತೆ ಉಪದೇಶಿಸಿ.

79.ತಂದೆ ತಾಯಿಗಿಂತ ಪತ್ನಿ ಮಕ್ಕಳಿಗೆ ಬೆಲೆಕೊಡದಂತೆ ಉಪದೇಶಿಸಿ.

80.ತಂದೆ ತಾಯಿ ಕುಳಿತ ಸ್ಥಳಕ್ಕಿಂತ ಎತ್ತರದ ಸ್ಥಳದಲ್ಲಿ ಕುಳಿತುಕೊಳ್ಳದಂತೆ ನೋಡಿಕೊಳ್ಳಿ.

81.ವಿದ್ಯೆ ಕಲಿಸುವ ಉಸ್ತಾದ್ / ಗುರುಗಳ ಕೊರತೆ ಮಕ್ಕಳ ಎದುರಲ್ಲಿ ಹೇಳದಂತೆ ಎಚ್ಚರವಹಿ.

82.ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡರೆ ಬಯ್ಯದೆ , ಹೊಡೆಯದೆ  ಇನ್ನೊಮ್ಮೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂಬ ಬುದ್ಧಿವಾದ ಹೇಳಿ.

83.ಪತ್ನಿ ಮಕ್ಕಳಿಗೆ ಧರಿಸಲು ವಸ್ತ್ರ ಕೊಳ್ಳುವಾಗ ತಂದೆ ತಾಯಿಯನ್ನು ಅವಗಣಿಸದಂತೆ ಹೇಳಿ.

84.ತಂದೆ ತಾಯಿಯರ ಶಾಪ ಲಭಿಸಿದ್ದಲ್ಲಿ ಉಂಟಾಗುವ ಭವಿಷ್ಯತನ್ನು ವಿವರಿಸಿ ಕೊಡಿ.

85.ಪತ್ನಿ ಮಕ್ಕಳಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುವಂತೆ ಹೇಳುತ್ತಿರಿ.

86.ನಮಾಝ್ ಯಾ ಇನ್ನಿತರ ವೇಳೆಗಳಲ್ಲಿ ತಂದೆ ತಾಯಿಯರಿಗೆ ಪ್ರಾರ್ಥಿಸಲು ಮರೆಯದಂತೆ ಹೇಳುತ್ತಿರಿ.

87.ಜೀವಿಸಿದ್ದರೂ ಮರಣ ಹೊಂದಿದರೂ ತಂದೆ ತಾಯಿಯನ್ನು ಸಂದರ್ಶಿಸುವಂತೆ ಹೇಳುತ್ತಿರಿ.

88.ತಂದೆ ತಾಯಿ ರೋಗಿಯಾದಲ್ಲಿ ಅವರಿಗೆ ಪ್ರತ್ಯೇಕ ಪರಿಗಣನೆ ಕೊಡಬೇಕಾಗಿ ಹೇಳುತ್ತಿರಿ.

89.ಅಲ್ಲಾಹನ ಪರೀಕ್ಷೆಗೆ ವಿದೇಯನಾದ ಒಬ್ಬ ವ್ಯಕ್ತಿಯನ್ನು ಕಂಡರೆ "ಅಲ್ ಹಂದುಲಿಲ್ಲಾಹ್ " ಎಂದು ಹೇಳಲು ಕಲಿಸಿ ಕೊಡಿ.

90.ಆಪತ್ತು ಬಂದಲ್ಲಿ" ಇನ್ನಾಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್" ಎಂದು ಹೇಳಲು ಕಲಿಸಿ.

91."ಮಕ್ಕಳಾದ ನೀವು ಮಾತ್ರ ನಮ್ಮ ಆಸರೆ" ಎಂದು ಮಕ್ಕಳಲ್ಲೇ ಹೇಳುತ್ತಿರಿ.

92.ಮಕ್ಕಳ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಿ.

93.ಮಗಳ ಮಕ್ಕಳಿಗೆ ವಿಶೇಷ ಗೌರವ ಕೊಟ್ಟು ಮಗನ ಮಕ್ಕಳಿಗೆ ಬೇಲೆ ನೀಡದಂತವರಾಗಬೇಡಿ.

94.ಮಕ್ಕಳು ವಿದೇಶದಲ್ಲಾದರೆ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಹೋಗುವಾಗ ಸೊಸೆಯರನ್ನು ಜತೆಗೆ ಕರೆದೊಕೊಂಡು ಹೋಗಿ.

95.ಸೊಸೆಯರ ನಡುವೆ ಯಾವ ಕಾರಣಕ್ಕೂ ಹೆಚ್ಚು ಕಡಿಮೆ ಮಾಡುವವರಾಗಬೇಡಿ.

96.ಮಕ್ಕಳ ಒಳಿತಿಗಾಗಿ ಸದಾ ಸಮಯ ಪ್ರಾರ್ಥಿಸುತ್ತಿರಿ.

97.ಸೊಸೆಯ ಮನೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದಲ್ಲಿ ಆಹ್ವಾನವಿದ್ದರೆ ಹೋಗಿ ಸಂತೋಷಪಡಿಸಿ.

98.ನಿನ್ನ ಸ್ವಂತ ತಂದೆ ತಾಯಿಯಂತೆ ನಾವು ಕೂಡಾ ನಿನ್ನ ತಂದೆ ತಾಯಿಯವರೇ ಎಂದು ಸೊಸೆಯಲ್ಲಿ ನಿಮ್ಮ ಸ್ನೇಹ ಪ್ರಕಟಿಸುತ್ತಿರಿ.

99.ಸ್ವಂತ ಹೆಣ್ಣು ಮಕ್ಕಳು  ನಿಮ್ಮಲ್ಲಿ ಸೊಸೆಯರ ಬಗ್ಗೆ ಚಾಡಿ ಹೇಳಿದ್ದಲ್ಲಿ ಅದನ್ನು ಕೇಳಿ ಸೊಸೆಯರೊಂದಿಗೆ ವಾಗ್ವಾದಕ್ಕಿಳಿಯುವವರಾಗಬೇಡಿ.

100.ಇಂತಹ ಉಪದೇಶ ನೀಡದೆ ನಿಮ್ಮ ಮಕ್ಕಳು ದುನ್ಯಾ ಮತ್ತು ಪರಲೋಕದಲ್ಲಿ ನಿಮಗೆ ಉಪಕರಿಸುವರು ಎಂದು ಭಾವಿಸುವವರಾಗಬೇಡಿ.

🌷🌷🌷🌷🌷🌷🌷🌷🌷🌷🌷🌷