Thursday, September 21, 2017

ಇತಿಹಾಸ ಪ್ರಸಿದ್ದ ಯಮಾಮ ಯುದ್ಧ ಭಾಗ- 02

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 0⃣2⃣

ಅವನು ಮೆಲ್ಲನೆ ಒಂಟೆಯ ಮೇಲಿನಿಂದ ಕೆಳಗಿಳಿದು ತನ್ನ ಜೊತೆಗಿರುವವರ ಹತ್ತಿರ ಹೇಳಿದ
"ನೀವು ಅಹುವಾಸಿಗೆ ಹೋಗಿ..
ವ್ಯಾಪಾರ ಮುಗಿಸಿ ಲಾಭ ಸಿಕ್ಕಿದರೆ ಅದನ್ನು  ಯಮಾಮಗೆ ಹೋಗಿ  ನನ್ನ ತಂದೆಯವರಿಗೆ ಕೊಡಬೇಕು" ಎಂದನು..

ಆಗ ಆಶ್ಚರ್ಯದಿಂದ ಅವರು ಕೇಳಿದರು..
ನೀವು ಬರುವುದಿಲ್ಲವೇ..?

ಇಲ್ಲ! ನಾನು ಬಹುಶಃ ಬರುವೆನು ಅಥವಾ ಬಾರದಿರುವೆನು..
ನನ್ನನ್ನು ನೀವು ಕಾಯಬೇಡಿ.
ವ್ಯಾಪಾರವನ್ನು ಮಾಡಿ ಬನ್ನಿ ಎಂದು ಹೇಳಿದನು.

ಅವರು ನೇತಾರನ ಮಾತು ಕೇಳಿದ ಮೇಲೆ ವೇಗವಾಗಿ ಮುಂದಕ್ಕೆ ಚಲಿಸಿದರು.

ಅವರು ಹೋದ ನಂತರ ಯುವತಿಯನ್ನು ನೋಡಬೇಕೆಂಬ ಕುತೂಹಲದಿಂದ ಯುವಕನು ಬಂಡೆ ಕಲ್ಲಿನ ಮೇಲೆ ಕುಳಿತಿರುವ *ಮಲಿಹ*'ಳ ಹತ್ತಿರಕ್ಕೆ  ಮೆಲ್ಲನೆ ಹೋದನು.

ಅವನು ಆಶ್ಚರ್ಯದಿಂದ *ಮಲಿಹ*'ಳ ಮುಖವನ್ನೇ ದಿಟ್ಟಿಸಿ ನೋಡಿದ!😳

ಅವಳ ಪ್ರಕಾಶಿಸುವ ಸೌಂದರ್ಯವನ್ನು ಕಂಡು ಅವನು ದಿಗ್ಭ್ರಮೆಗೊಂಡನು 😳

ಒಬ್ಬ ಅನ್ಯಯುವಕ ತನ್ನನ್ನೆ ನೋಡುವುದನ್ನು ಕಂಡ *ಮಲಿಹಾ*  ದಿಟ್ಟಿಸಿ ನೋಡುತ್ತಾ..
ಹೇಳಿದಳು, ಛೀ...!! ನೀನು ಯಾಕೆ ಹೀಗೆ ನನ್ನನ್ನೇ ನೋಡುತ್ತಿದ್ದೀಯಾ?
ನೀನೊಬ್ಬ ಅನ್ಯ ಪುರುಷನಲ್ಲವೇ?

ಆಗ ಅವನು ನಾಚಿಕೆಯಿಂದ ಹೇಳಿದನು.. ಹೌದು ನೀನು ಸುಂದರಿಯಾಗಿದ್ದೀಯ.. ಅದಕ್ಕಾಗಿಯೇ ನಿನ್ನನ್ನು ನೋಡುತ್ತಿರುವುದು!.

ಆ ಯುವಕನ ಮರುಳು ಮಾತಿಗೆ ಕಿವಿಗೊಡದೆ *ಮಲಿಹ* ಇವನೊಂದಿಗೆ ಮಾತನಾಡಿ ಪ್ರಯೋಜನವಿಲ್ಲ ಎಂದು ಭಾವಿಸುತ್ತಾ ವೇಗವಾಗಿ ತನ್ನ ಮನೆಯ ಕಡೆ ಓಡಿ ಹೋದಳು.
ಅವನು ಕೂಡ ಅವಳನ್ನು ಹಿಂಬಾಲಿಸುತ್ತಾ ಹೋದನು....

*ಮಲಿಹ*'ಳ  ಮನೆಯ ಅಂಗಳಕ್ಕೆ ಬಂದು ಅವಳಿಗಾಗಿ ಕಾಯುತ್ತಾ ನಿಂತನು.

ಅದ್ನಾನ್ ಬಿನ್ ಹುಕ್ಬ ಮಗಳ ಮುಖದಲ್ಲಿ ಅಡಗಿರುವ ಭಯವನ್ನು ಬೇಜಾರನ್ನು ನೋಡಿ ನನ್ನ ಮಗಳಿಗೆ ಏನೋ ಸಂಭವಿಸಿದೆಂದು ಭಾವಿಸುತ್ತಾ ಮನೆಯ ಹೊರಗೆ ಇಣುಕಿ ನೋಡಿದಾಗ ಒಬ್ಬ ಅನ್ಯಯುವಕ ಮನೆಯ ಅಂಗಳದಲ್ಲಿ ಏಕಾಂಗಿಯಾಗಿ ನಿಂತಿರುವುದನ್ನು ಕಂಡರು..

ತನ್ನ ಮನೆಯ ಅಂಗಳದಲ್ಲಿ ಅನ್ಯ ಪುರುಷನೇ?🤔 ಯಾರಿರಬಹುದೆಂಬ ಗೊಂದಲದಿಂದ ಏರುದ್ವನಿಯಲ್ಲಿ ಅದ್ನಾನ್ ಕೇಳಿದರು ಯಾರು ನೀನು? ⤵

ಮುಂದುವರಿಯುವುದು..

✍ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡

No comments:

Post a Comment