🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
*ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 0⃣3⃣
➖➖➖➖➖➖➖➖➖
ಅದ್ನಾನ್ ಕೇಳಿದರು ನೀನು ಯಾರು? ಏನು ಬೇಕು ನಿನಗೆ..?
*ಯುವಕ:* "ನಾನು ಯಾರೆಂದು ಹೇಳುತ್ತೇನೆ.. ಆದರೆ ಅದಕ್ಕಿಂತ ಮುಂಚೆ ಒಳಗೆ ಹೋದ ಆ ಯುವತಿ ಯಾರೆಂದು ಹೇಳಬೇಕು.."
*ಅದ್ನಾನ್:* ಅದು ನನ್ನ ಮಗಳು ಮಲಿಹಾ...
ನೀವು ಯಾರೆಂದು ಹೇಳಲಿಲ್ಲ..🤷♂
*ಯುವಕ:* ನಾನು *ಯಮಾಮ ಎಂಬ ರಾಜ್ಯದ ದೊರೆಯನಾದ ಕೋಟ್ಯಾಧಿಪತಿ ಮುಸೈಲಿಮತು ಸಮಾಮರ ಮಗನಾದ ಮಸೂದ್ ಬಿನು ಮುಸೈಲಿಮ'ನಾಗಿದ್ದೇನೆ.*
*ಅದ್ನಾನ್:* ಮುಸೈಲಿಮರ ಮಗನಿಗೇನು ಕೆಲಸ ನನ್ನ ಮನೆಯಂಗದಲ್ಲಿ?
*ಮಸೂದ್:* ನಾನು ಈ ದಾರಿಯಾಗಿ ಅಹುವಾಸಿ ಎಂಬ ಸ್ಥಳಕ್ಕೆ ಹೋಗುತ್ತಿರುವಾಗ
ನಿಮ್ಮ ಮಗಳನ್ನು ಕಂಡೆನು..
*ಅದ್ನಾನ್:* ಅದಕ್ಕೇನು?
*ಮಸೂದ್:* ನನಗೆ ಅವಳನ್ನು ತುಂಬಾ ಇಷ್ಟವಾಯಿತು.
ನಾನು ನಿಮ್ಮ ಮಗಳನ್ನು ವಿವಾಹ ಮಾಡಲು ಇಚ್ಚಿಸುತೇನೆ.
ಅದ್ನಾನ್ ಗಂಭೀರ ದ್ವನಿಯನ್ನು ಕಡಿಮೆಗೊಳಿಸಿ ಆಶ್ಚರ್ಯವಾದರೂ ನಗುಮುಖದಿಂದ ಕೇಳಿದ.. ನೀವೇನು ಹೇಳುತ್ತಿರುವುದು? ಜಗದೊಡೆಯ ಅನುಗ್ರಹಿಸಿದ ಒಂದು ಶ್ರೇಷ್ಠ ರಾಜ್ಯದ ಅಧಿಕಾರವು, ಅವಕಾಶವು ಸ್ವಂತ ಕೈಯಲ್ಲಿರುವ ಸಕಲ ಸಂಪತ್ತಿನ ಒಡೆಯನಾದ ಒಬ್ಬ ನಾಯಕನ ಮಗನಲ್ಲವೇ.. ತಾವು?
ನಾವಾದರೆ ಒಂದು ಸಮಯದ ಊಟಕ್ಕೂ ಕೂಡ ಗತಿಯಿಲ್ಲದ ನಿರಾಶ್ರಿತರು..? ಹೀಗಿದ್ದೂ ನನ್ನ ಮಗಳನ್ನು ನೀವು ಮದುವೆ ಆಗುವುದೆಂದರೆ ಅದು ನಡೆಯದ ವಿಷಯವಲ್ಲವೇ?!!
ಮಸೂದ್ ತುಂಬಾ ಸರಳವಾಗಿ "ಅದಕ್ಕೇನು ತೊಡಕಾಗದು..
ನನಗೆ ನಿಮ್ಮ ಮಗಳನ್ನು ಅಷ್ಟಕ್ಕೂ ಇಷ್ಟವಾಯಿತು" ಎಂದನು.
*ಅದ್ನಾನ್:* ನಿಮಗೆ ಇಷ್ಟವಾದ ಕಾರಣ, ನಾನು ನನ್ನ ಮಗಳ ಹತ್ತಿರ ಕೇಳಿ ನೋಡುತ್ತೆನೆ ಎಂದು ಹೇಳಿ ಬೇಗವಾಗಿ ಮನೆಯ ಒಳಗೆ ನಡೆದರು..
ಅದ್ನಾನ್ ಮನೆಯೊಳಗೆ ಹೋಗಿ ನೋಡಿದಾಗ ಕಂಡ ದೃಶ್ಯ ಅವರನ್ನು ದಂಗಾಗಿಸಿತ್ತು.. *ಮಲಿಹ* ಆ ಸಣ್ಣ ಮನೆಯ ಕಿಟಿಕಿಯಿಂದ ಮಸೂದ್'ನನ್ನು ನೋಡುತ್ತಿದ್ದಳು.
ಆದರೆ ತಂದೆ ಹಿಂದೆ ಬಂದು ನಿಂತು ಆಕೆಯನ್ನು ನೋಡುತ್ತಿರುವುದು ಆಕೆಯ ಗಮನಕ್ಕೆ ಬಂದಿರಲಿಲ್ಲ.
ಅದ್ನಾನ್: *ಮಲಿಹ*'ಳನ್ನು ಮೆಲ್ಲನೆ ಹತ್ತಿರ ಕರೆದರು..⤵
ಮುಂದುವರಿಯುವುದು...
✍ಗಫೂರ್ ಬಾಯಾರ್
+974 6669 3010
ಸಹಾಯ: ಅಕ್ಬರ್ ಪಿ.ಎ.
🛡🛡🛡🛡🛡🛡🛡
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment