🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
*ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 0⃣4⃣
➖➖➖➖➖➖➖➖➖
ಅದ್ನಾನ್ *ಮಲಿಹ*'ಳನ್ನು ಮೆಲ್ಲನೆ ಹತ್ತಿರಕ್ಕೆ ಕರೆದರು.
ಮಲಿಹ ಗಾಬರಿಯಿಂದ
ತಿರುಗಿ ನೋಡಿಕೊಂಡು ಕೇಳಿದಳು ಹಾ!!... ಅಪ್ಪಾ.. ನೀವು...?!
ಆಗ ಅದ್ನಾನ್ ಹೌದೆನ್ನುತ್ತಾ ಕೇಳಿದರು "ನಾನು ಮತ್ತು ಆ ಯುವಕ ಮಾತನಾಡುವುದನ್ನು ನೀನು ಕೇಳಿದೆಯಾ ಮಗಳೇ?"
ಅವಳು ಒಮ್ಮೆ ಗಾಬರಿಗೊಂಡರೂ ನುಣುಚಿಕೊಂಡು ಇಲ್ಲವೆಂದು ಹೇಳಿದಳು.
ಅವಳ ಆ ನುಣುಚು ಸ್ವಬಾವದ ಕಾರಣದಿಂದ ಇವಳು ನಮ್ಮ ಮಾತನ್ನೆಲ್ಲಾ ಕೇಳಿದ್ದಾಳೆಂದು ಅದ್ನಾನ್'ರಿಗೆ ಮನದಟ್ಟಾಯಿತು...
*ಅದ್ನಾನ್:* ನಮ್ಮ ಮನೆಯಂಗಳದಲ್ಲಿ ನಿಂತಿರುವ ಮನುಷ್ಯನಿಗೆ ನಿನ್ನನ್ನು ಇಷ್ಟವೆಂದು ಹೇಳುತ್ತಿದ್ದಾನೆ.
ಮಗಳೇ ಇದರ ಬಗ್ಗೆ ನಿನ್ನ ಅಭಿಪ್ರಾಯವೇನು?
ನಿನ್ನ ಮನಸ್ಸಿಗೆ ಆ ಯುವಕ ಇಷ್ಟವಾದನೇ.?
ಮಲಿಹ ಹಲವು ಕನಸುಗಳನ್ನು ಮನಸ್ಸಿನೊಳಗೆ ಅದುಮಿಕೊಂಡು ನಾಚಿಕೆಯಿಂದ ತಲೆ ತಗ್ಗಿಸಿ
ಅಪ್ಪನಿಗೆ ಇಷ್ಟವಾದರೆ ನನ್ನದೇನೂ ಅಭ್ಯಂತರವಿಲ್ಲ ಎಂದಳು...
ಆ ಮಾತನ್ನು ಮಗಳ ಬಾಯಿಯಿಂದ ಕೇಳಿಸಿಕೊಂಡಾಗ ಅದ್ನಾನ್ ಸಂತೋಷದಿಂದ ಮನೆಯ ಹೊರಗೆ ಬಂದು,
ಮಸೂದ್'ನ ಹತ್ತಿರ ಹೇಳಿದರು ನನ್ನ ಮಗಳಿಗೆ ನಿಮ್ಮನ್ನು ಇಷ್ಟವಾಯಿತು. ಪರಸ್ಪರ ಇಷ್ಟವಾದ ಕಾರಣ ನಮಗೆ ಮದುವೆ ಕಾರ್ಯಕ್ರಮ ಯಾವಾಗ ಇಡಲು ಸಾಧ್ಯವಿದೆ.?
ಮಸೂದ್ ಈ ಮಾತು ಕೇಳಿದ್ದೇ ತಡ.. ಸಂತೋಷದ ತರಂಗಗಳು ಗಗನದ ಉತ್ತುಂಗಕ್ಕೆ ತಲುಪುವಂತಿತ್ತು.. ಆಕಾಂಕ್ಷೆ ಮನಸ್ಸಿನೊಳಗೆ ಕುಣಿದು ಕುಪ್ಪಳಿಸಿ ಬಾಯಿಯಿಂದ ಹೊರಚಿಮ್ಮಿದಂತೆ ಈಗಲೇ ಎಂದನು!!!!
ಅದ್ನಾನ್ ಬೆಚ್ಚಿ ಬಿದ್ದರು.!!!!
ಈಗಲೇ ವಿವಾಹವೇ??... ಈಗ ಸಾಧ್ಯವಿಲ್ಲ. ಒಂದು ವಿವಾಹ ಮಾಡುವ ಸನ್ನಿವೇಶದಲ್ಲಿಲ್ಲ ನಾನೀಗ..!
ಮಸೂದ್ ವಿವಾಹ ಈಗಲೇ ನಡೆಯಲೇ ಬೇಕೆಂದು ಹಠದಿಂದ ಹೇಳಿದನು..
ನಿರ್ಬಂಧ ಅತಿಯಾದಾಗ ಅದ್ನಾನ್ ಹೇಳಿದರು ಅಲ್ಲ ಮಸೂದ್ ನನ್ನ ಮಗಳ ಮದುವೆ ನಡೆಯುವಾಗ ನೆರೆಕರೆಯವನ್ನಾದರೂ ಕರೆಯಬೇಕಲ್ಲವೇ?
*ಮಸೂದ್:* ಹೌದು.. ಹಾಗಾದರೆ ಈಗಲೇ ಹೋಗಿ ಎಲ್ಲರನ್ನೂ ಮದುವೆಗೆ ಆಮಂತ್ರಿಸಿಕೊಂಡು ಬನ್ನಿ..
ಒತ್ತಾಯಕ್ಕೆ ಮಣಿದ ಅದ್ನಾನ್ ಬೇರೆ ದಾರಿ ಕಾಣದೆ ಅಕ್ಕಪಕ್ಕದವರ ಹತ್ತಿರ ಹೋಗಿ *"ನನ್ನ ಮಗಳ ಮದುವೆಯ ಸಂಭ್ರಮಕ್ಕೆ ನೀವೆಲ್ಲರೂ ಬರಬೇಕು"* ಎಂದು ಆಹ್ವಾನಿಸಿದರು..
ಅವರ ಸಂಪ್ರದಾಯದಂತೆ ಅಂದು ರಾತ್ರಿ ಅಗ್ನಿಕುಂಡದಲ್ಲಿ ಸೌದೆ ಹಾಕಿ ಹೊತ್ತಿಸಿ ಅವರು ನಂಬುವ ದೇವರನ್ನು ಧ್ಯಾನಿಸಿ ತನ್ನ ಮಗಳನ್ನು ಮಸೂದ್'ನಿಗೆ ವಿವಾಹ ಮಾಡಿ ಕೊಟ್ಟರು.
*ಮಸೂದ್* ಹಾಗೂ *ಮಲಿಹ'ಳ* ಮದುವೆ ಅತೀ ವಿಜೃಂಭಣೆಯಿಂದಲೇ ನಡೆಯಿತು..⤵
ಮುಂದುವರಿಯುವುದು...
✍ *ಗಫೂರ್ ಬಾಯಾರ್*
+974 6669 3010
*ಸಹಾಯ: ಅಕ್ಬರ್ ಪಿ.ಎ.*
🛡🛡🛡🛡🛡🛡🛡
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment