🏵 *ಪ್ರವಾದಿ ಸಂದೇಶ*🏵
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀
*بِسْمِ اللّٰهِ الرَّحْمَانِ الرَّحِيمْ*
*ಸಂಚಿಕೆ* 0⃣3⃣
*ಪ್ರಪಂಚದಲ್ಲಿ ದಿನನಿತ್ಯ ನಡೆಯುವ ಆಗು ಹೋಗುಗಳನ್ನು ನಿಯಂತ್ರಿಸುವವನು, ಸೂರ್ಯ ಚಂದ್ರಾದಿ, ನಕ್ಷತ್ರಗಳ, ಗ್ಯಾಲಕ್ಸಿಗಳ ಚಲನೆಯನ್ನು ಚಾಚೂ ತಪ್ಪದೇ ನಿರ್ವಹಿಸುವವನು. ಮರ, ಸಸ್ಯ, ಜೀವಜಾಲಗಳಿಗೆ ಅನ್ನಾಹಾರಗಳನ್ನು ಒದಗಿಸುವವನು. ಕಣ್ಣಿಗೆ ಕಾಣದಂತಹಾ ಇರುವೆಗಳಿಗೂ ಬದುಕು ನೀಡುವವನು. ಮರಗಿಡಗಳನ್ನು ಭೂಮಿಯಲ್ಲಿ ಮೊಳಕೆಯೊಡೆಯಿಸುವವನು. ವೀರ್ಯ- ಅಂಡಾಣುಗಳಿಂದ ಸಂತಾನೋತ್ಪಾದನೆ ಪ್ರಕ್ರಿಯೆ ನಡೆಸುವವನು. 9 ತಿಂಗಳುಗಳ ಕಾಲ ತಾಯಿಯ ಗರ್ಭಾಶಯಗಳಲ್ಲಿ ಮಗುವನ್ನು ಸುರಕ್ಷಿತವಾಗಿ ಕಾಪಾಡುವವನು. ಸಮಯವಾದಾಗ ಅದನ್ನು ಹೊರತರುವವನು. ಇದೆಲ್ಲಾ ಯಾರು ಎಂದು ಒಂದು ಕ್ಷಣ ಆಲೋಚಿಸಿದರೆ ಲಭಿಸುವ ಉತ್ತರವಾದರೂ ಏನು..? ಗೋಳಾಕಾರದ ಭೂಮಿಯನ್ನು ಯಾವುದೇ ಬ್ಯಾಲೆನ್ಸ್ ಇಲ್ಲದೆ ಹವೆಯಲ್ಲಿ ನಿಲ್ಲಿಸಿದವನು. ದೈತ್ಯಗಾತ್ರದ ಆಕಾಶವನ್ನು ಯಾವುದೆ ಸ್ತಂಭಗಳ ಅಗತ್ಯವಿಲ್ಲದೆ ನೆಲೆ ನಿಲ್ಲಿಸಿದವನು. ಗುಡುಗು, ಮಳೆ, ಗಾಳಿ, ಮಿಂಚು ಬರಿಸುವವನು. ಒಂದೇ ಮಳೆ ನೀರನ್ನು ಸ್ವೀಕರಿಸಿ ಭೂಮಿಯಿಂದ ವಿಭಿನ್ನ ಹಣ್ಣು ಹಂಪಲುಗಳನ್ನೂ, ಫಲಪುಷ್ಪಗಳನ್ನೂ ಹೊರಡಿಸುವವನು. ಜನಿಸುವ ಪ್ರತಿ ಮನುಷ್ಯನಲ್ಲೂ ಒಂದಲ್ಲ ಒಂದು ವ್ಯತ್ಯಾಸ ನೀಡುವವನು. ಕೋಟ್ಯಾಂತರ ಜನರ ಬೆರಳ ತುದಿಯಲ್ಲಿ ವಿವಿದತೆಯನ್ನು ಉಂಟು ಮಾಡುವವನು. ಇದೆಲ್ಲವೂ ಯಾರು ಎಂಬ ಪ್ರಶ್ನೆಗೆ ನಿಜವಾದ ಸೃಷ್ಟಿಕರ್ತ ಅಲ್ಲಾಹು ಎಂದಲ್ಲದೆ ಬೇರೆ ಉತ್ತರವಿಲ್ಲ. ಅವನಿಗಲ್ಲದೇ ಇದು ಸಾಧ್ಯವಿಲ್ಲ. ವಿಶಾಲವಾದ ಸಮುದ್ರಗಳನ್ನು ಸೃಷ್ಟಿಸಿದವನು. ಪರ್ವತಗಳನ್ನೂ ಶಿಖರಗಳನ್ನೂ ಸೃಷ್ಟಿಸಿದವನು ಯಾರಾಗಿರಬಹುದು.? ಒಂದು ಕ್ಷಣ ಬುದ್ಧಿಯನ್ನು ಹರಿಯಬಿಟ್ಟರೆ ಪರಮ ಸತ್ಯವಾದ ಅಲ್ಲಾಹನೆಡೆಗೆ ಮನಸ್ಸು ತಿರುಗಿ ಬಿಡುತ್ತದೆ. ಅವನಿಂದಲ್ಲದೇ ಇದು ಸಾಧ್ಯವೇ ಇಲ್ಲ.*
🐊 ಇಲ್ಲೊಂದು ವಿಸ್ಮಯವನ್ನು ಗಮನಿಸಿ ಅತ್ಯಂತ ಅಕ್ರಮಣಕಾರಿ ಜೀವಿಯಾದ ಮೊಸಳೆಯೂ ಆಹಾರ ಸೇವಿಸಿದರೆ ಅದಕ್ಕೆ ವಿಸರ್ಜನೆ ಮಾಡಲು ಪ್ರತ್ಯೇಕ ದ್ವಾರವನ್ನು ನೀಡಲಾಗಿಲ್ಲ. ಹೊಟ್ಟೆ ತುಂಬಿದಾಗ ಅದು ನೇರ ನೀರಿನಿಂದ ಹೊರಗೆ ಬಂದು ಕಿನಾರೆಯಲ್ಲಿ ಹಾಯಾಗಿ ಬಿದ್ದುಕೊಂಡಿರುತ್ತದೆ. ಆಗ ಅದು ತನ್ನ ಬಾಯನ್ನು ತೆರೆದಿಟ್ಟಿರುತ್ತದೆ. ಅಷ್ಟರಲ್ಲಿ ಖತ್ ಬಾತ್ ಎಂಬ ವಿಶೇಷ ಪಕ್ಷಿಯೊಂದು ಬಂದು ಮೊಸಳೆಯ ಬಾಯೊಳಗೆ ನುಗ್ಗಿ ಅದರ ಹೊಟ್ಟೆ ತುಂಬಿ ಮೇಲೆ ಬಂದ ಆಹಾರದ ಅಂಶಗಳನ್ನೂ, ವಸರ್ಜನೆಯನ್ನೂ ಹೆಕ್ಕಿ ತಿನ್ನುತ್ತದೆ. ಮೊಸಳೆಯೇನಾದರೂ ಬಾಯಿ ಮುಚ್ಚಿದರೆ ಅದು ಈ ಹಕ್ಕಿಯ ಕೊನೆಗಾಲ ಎಂದು ನೀವು ಭಾವಿಸಬಹುದು. ಆದರೆ ಪ್ರಸ್ತುತ ಹಕ್ಕಿಯ ಮೇಲೆ ಸೂಜಿಯಂತಹಾ ಉದ್ದದ ಒಂದು ಮುಳ್ಳಿದೆ. ಮೊಸಳೆ ಬಾಯಿ ಮುಚ್ಚಿದರೆ ಅದು ಮೊಸಳೆಗೆ ಚುಚ್ಚುತ್ತದೆ. ಇದನ್ನು ಭಯಗೊಂಡ ಮೊಸಳೆಯೂ ಹಕ್ಕಿ ಹೊರ ಹೋಗುವವರೇಗೂ ಬಾಯ್ತೆರೆದೇ ಮಲಗಿರುತ್ತದೆ. ಇಲ್ಲಿ ಮೊಸಳೆಗೆ ತನ್ನ ವಿಸರ್ಜ್ಯ ಹೊರಹಾಕಿ ಆರೋಗ್ಯ ಕಾಪಾಡಿದ ಖುಷಿಯಾದರೆ ಹಕ್ಕಿಗೆ ಆಹಾರ ಸಿಕ್ಕ ಸಂತೋಷವೂ ಆಗುತ್ತದೆ. ಇದನ್ನು ವ್ಯವಸ್ಥೆಗೊಳಿಸಿದವನು ಯಾರಾಗಿರಬಹುದು.? ಬುದ್ಧಿಯಿರುವವರು ಇಂತಹಾ ನಿದರ್ಶನಗಳನ್ನು ಉಪಯೋಗಿಸಿ ದೇವಸತ್ಯವನ್ನು ಅರಿಯಬೇಕಿದೆ. ಪ್ರಸ್ತುತ ಮೊಸಳೆಗೆ ವಿಸರ್ಜ್ಯ ನೀಗಲು ನೀರಿನಿಂದ ಹೊರಬಂದು ಬಾಯ್ತೆರೆದು ಮಲಗಲೂ ಹಕ್ಕೆಗೆ ಅದನ್ನು ಹೆಕ್ಕಿ ತಿನ್ನಲೂ ಅರಿವು ನೀಡಿದವನು ಯಾರು..!?
*{ಮುಂದುವರೆಯುವುದು}*
No comments:
Post a Comment