ಫ್ಯಾಷನ್ ಎಲ್ಲಿಯವರೆಗೆ ಬಂತು??
ನನ್ನ ಸಂಬಂಧಿಕರೊಬ್ಬರು ತಮ್ಮ ಅನುಭವನ್ನು ನನ್ನ ಜೊತೆ ಹೀಗೆ ಹಂಚಿಕೊಂಡರು:
ನಾನು ಬುರ್ಖಾ ಹೊಲಿಸುವ ಸಲುವಾಗಿ ಬುರ್ಖಾದ ಅಂಗಡಿಗೆ ತೆರಳಿದ್ದೆ. ಬುರ್ಖಾದ ಅಂಗಡಿಯ ಮಾಲೀಕನ ಹೋಗಿ ನಾನು ಕೇಳಿದೆ ಅಣ್ಣ ಬುರ್ಖಾ ಹೊಲಿದರೆ ಎಷ್ಣು ಆಗುತ್ತದೆ? ಅದಕ್ಕೆ ಅಂಗಡಿ ಮಾಲಿಕ ಹೇಳುತ್ತಾರೆ "ನೋಡಮ್ಮ ಬುರ್ಖಾ ಹೊಲಿದರೆ ಅಷ್ಟು ಹಣವಿಲ್ಲ, ಅದರ ಡಿಸೈನುಗಳಿಗೆ ಹೆಚ್ಚು ಹಣವನ್ನು ತೆರಬೇಕಾಗುತ್ತದೆ" ನಾನು ಅವರ ಮಾತಿಗೆ ಪ್ರತಿಕ್ರಿಯೆಸುತ್ತ, ಹಾಗಾದರೆ ನನಗೆ ಡಿಸೈನ್ ಬೇಡ ಬಿಡಿ, ಸರಳವಾಗಿ ಮತ್ತು ಪೂರ್ತೀ ಸಡಿಲಾಗಿ ಹೊಲಿದು ಕೊಡಿ ಎಂದಿದಕ್ಕೆ ಅಂಗಡಿ ಮಾಲೀಕ ಮತ್ತು ಕೆಲಸಕ್ಕಿದ್ದ ಇತರ ಯುವತಿಯರು ಮುಸಿ ಮುಸಿ ನಕ್ಕರು. ನನಗೆ ಬಹಳ ಮುಜುಗರವಾಯಿತು ಆದರು ನಾನು ಸುಮ್ಮನಾಗಿ ಬಿಟ್ಟೆ. ಆದರೆ ಒಳಗಿನಿಂದ ಎಲ್ಲರೂ ಗುಸು ಗುಸು ಮಾತನಾಡುತ್ತಿರುವುದು ಕೂಡ ನನ್ನ ಕಿವಿಗೆ ಕೇಳುತ್ತಿತ್ತು.
ತದನಂತರ ಅಂಗಡಿ ಮಾಲೀಕ ಮತ್ತೊಮ್ಮೆ ನನ್ನ ಬಳಿ ಕೇಳುತ್ತಾನೆ ಇಷ್ಟು ಸಿಂಪಲ್ ಬುರ್ಖಾ ಯಾಕೆ? ಇದರ ದರ ಬರೀ 600 ರುಪಾಯಿಗಳು. ಅದಲ್ಲದೆ ಈಗ ಈತರ ಬುರ್ಖಾ ಯಾರು ಧರಿಸುವುದಿಲ್ಲ ಕನಿಷ್ಠ ಪಕ್ಷ ಫಿಟ್ಟಿಂಗಾದರು ಮಾಡಿಸಬಹುದು ತಾನೆ ಎಂದರು. ನಾನು ಮತ್ತೊಮ್ಮೆ ಅವರಿಗೆ ಹೇಳಿದೆ, ಇಲ್ಲ ಬಿಡಿ ಫ್ಯಾಷನ್ ಬುರ್ಖಾ ನನಗೆ ಇಷ್ಟವಿಲ್ಲ ಅದಲ್ಲದೆ ನನ್ನ ಪತಿ ಕೂಡ ಟೈಟ್ ಫಿಟ್ ಬುರ್ಖಾನ್ ಇಷ್ಟಪಡುವುದಿಲ್ಲ ಎನ್ನುತ್ತಾ ನಾನು ಮಂಗಡ ಹಣವನ್ನು ಪಾವತಿಸಿ ಹೊರ ಬಂದೆ ಹೊರ ನಡೆಯುತ್ತ ಯೋಚಿಸತೊಡಗಿದೆ, ಇವರೆಂಥ ಜನಗಳು? ಇವರಿಂದಾಗಿ ಇವತ್ತು ಸ್ತ್ರೀಯರು ಫ್ಯಾಷನ್ ಅನ್ನೊ ರೋಗವನ್ನು ತನ್ನ ಮೈಗೆಳೆದುಕೊಂಡು ದಾರಿ ತಪ್ಪುತ್ತಿದ್ದಾರೆಯೇ? ವ್ಯವಹಾರ ಕುದುರಿಸುವ ಸಲುವಾಗಿ ಇಸ್ಲಾಂ ಅನ್ನೊ ಮಾರುವುದಕ್ಕೆ ಹೊರಟ್ಟಿದ್ದಾರೆಯೆ? ಈ ರೀತಿಯ ಹಲವು ಯೋಚನೆಗಳು ನನ್ನ ತಲೆಯಲ್ಲಿ ಹುಟ್ಟಿಕೊಂಡು ಬಿಟ್ಟಿದ್ದವು.
ನಾನು ರಸ್ತೆ ಬದಿಯಲ್ಲಿ ನಡೆದಾಡುತ್ತ ಮನೆಗೆ ಬಾಗಿಲಿನ ಬಳಿ ಬಂದಾಗ ನನ್ನ ಸಹೋದರ ಈ ಹಿಂದೆ ಗೋಡೆಯ ಮೇಲೆ ಸ್ಟಿಕ್ಕರ್ ಲಗತ್ತಿಸಿದ್ದು ಕಣ್ಣಿಗೆ ಕಾಣುತ್ತದೆ ಪ್ರವಾದಿ ಮುಹಮ್ಮದ್ ಮುಸ್ತಾಫ (ಸ)ರ ಹೇಳಿದ ಮಾತು: ಬಟ್ಟೆ ಧರಿಸಿಯು ನಗ್ನರಾಗಿರುವ, ಪರ ಪುರುಷರನ್ನು ಆಕರ್ಷಿಸುವ ಮತ್ತು ಸ್ವಯಂ ಆಕರ್ಷಿತರಾಗುವ ಸ್ತ್ರೀಯರು ನರಕವಾಸಿಗಳಾಗುವರು (ರಿಯಾದುಸ್ವಾಲಿಹೀನ್/ಸಹೀಹ್ ಮುಸ್ಲಿಂ 5310) ಇದನ್ನು ಮತ್ತೊಮ್ಮೆ ಓದಿದ ನನಗೆ ಇನ್ನಷ್ಟು ಭಯವಾಗತೊಡಗಿತು. ನಾನು ಕೂಡಲೆ ಮನೆಯೊಳಗೆ ಓಡಿ ಹೋಗಿ ನನ್ನ ಅತ್ತೆ ಬಳಿ ನಡೆದ ವಿಚಾರಗಳನ್ನು ಹೇಳಿದೆ ಅವರು ತಾಳ್ಮೆಯಿಂದ ಪ್ರತಿಕ್ರಿಯೆಸುತ್ತಾ "ನೋಡು ಮಗಳೆ, ಇಲ್ಲಿ ನೀನು ಮೂರ ಒಳ್ಳೆಯ ಕೆಲಸ ಮಾಡಿ ಬಂದೆ 1. ಅಲ್ಲಾಹನಿಗೆ ಭಯಪಟ್ಟೆ, 2. ಪ್ರವಾದಿವರನ್ನು ಅನುಸರಿಸಿದೆ, 3. ನಿನ್ನ ಗಂಡನ ಮಾತನ್ನು ಪಾಲಿಸಿದೆ"..
ಅತ್ತೆಯ ಮಾತು ಕೇಳಿದ ನನಗೆ ಬಹಳ ಸಂತೋಷವಾಯಿತು. ಮರುದಿನ ನಾನು ಬುರ್ಖಾ ಅಂಗಡಿಗೆ ಹೋಗಿ ಬುರ್ಖಾ ಪಡೆಯಲು ಹೋದಾಗ ಅವರೋಡನೆ ಒಂದೈದು ನಿಮಿಷ ಮಾತನಾಡುವ ಧೈರ್ಯ ಮಾಡಿಕೊಂಡು ಅಂಗಡಿ ಮಾಲಕನಿಗೆ ಒಂದೆರಡು ಪ್ರಶ್ನೆಗಳನ್ನು ಕೇಳಿದೆ. ಅಣ್ಣಾ ತಾವು ಹೇಳಿದ್ದೀರಿ ಬುರ್ಖಾಕ್ಕೆ ಡಿಸೈನ್ ಬೇಕು. ಡಿಸೈನ್ ಯಾಕೆ ಬೇಕೆಂದು ಹೇಳುವೀರಾ? ಆತ ನಗುತ್ತ ನೋಡಮ್ಮ ಈಗಿನಾ ಕಾಲದಲ್ಲಿ ಹಳೆ ಮಾದರಿಯ ಬುರ್ಖಾ ಯಾರು ಧರಿಸುವಿದಿಲ್ಲ ಫ್ಯಾಷನ್ ಬೇಕು ಎಂದ. ಇವರ ಉತ್ತರದಿಂದ ತ್ರಪ್ತಿಯಾಗದ ನಾನು ಹೇಳಿದೆ, "ಅಣ್ಣ ಈ ಬುರ್ಖಾ ಅನ್ನೋದು ಹೆಣ್ಣಿಗೆ ರಕ್ಷಾಕವಚ ಅದು ತನ್ನ ಶರೀರದ ಭಾಗವನ್ನು ಇತರರಿಗೆ ತೋರಿಸುವ ಸಲುವಾಗಿ ಅಲ್ಲ, ಸಾವಿರಾರು ರುಪಾಯಿಯ ಬುರ್ಖಾನಿಗೆ ಫ್ಯಾಷನ್ ಡಿಸೈನ್ ಮಾಡಿಸಿ ಒಳಗಡೆ ಬಣ್ಣ ಬಣ್ಣದ ಬಟ್ಟೆಯನ್ನು ಯಾಕೆ ಧರಿಸಬೇಕು? ನೋಡಿ ಕಾಲಚಕ್ರ ತಿರುಗಿದಂತೆ ನಾನು ನೀವು ಬದಲಾಗಬಹುದಷ್ಟೆ 'ಇಸ್ಲಾಂ' ಬದಲಾಗುವುದಿಲ್ಲ ಎಂದೆ.
ನನ್ನ ಮಾತು ಕೇಳಿದ ಒಳಗಿದ್ದ ಯುವತಿಯರು ಒಬ್ಬರನ್ನೊಬ್ಬರು ಮುಖ ನೋಡುತ್ತಾ ನಿಂತುಕೊಂಡಿದ್ದರು. ಅಂಗಡಿ ಮಾಲಕ ಬೆರೆ ಕಟ್ಟು ಕತೆ ಹೇಳಿ ಮಾತನ್ನು ಬೇರಡೆ ವಾಲಿಸಿಬಿಟ್ಟ. ನಾನು ಒಂದು ಸಾರಿ ಅಂಗಡಿ ಸುತ್ತಲೂ ಕಣ್ಣಾಯಿಸಿದಾಗ ಅಲ್ಲಿರುವ ಕೆಲವೊಂದು ಬುರ್ಖಗಳನ್ನು ನೋಡಿ ನನ್ನ ಕಣ್ತುಂಬಿ ಬಂತು. ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವ ಸಾವಿರಾರು ರುಪಾಯಿಗಳ ಡಿಸೈನ್ ಬುರ್ಖಾನ್, ಸ್ಲಿಮ್ ಫಿಟ್, ಟೈಟ್ ಫಿಟ್, ಹಿಪ್ ಕಟ್, ಬಟರ್ ಫ್ಲೈ, ಅಂಬ್ರೆಲ್ಲಾ, ಇವೆಲ್ಲವೂ ಹೆಣ್ಣಿನ ದೇಹವನ್ನು ಸ್ಪಷ್ಟವಾಗಿ ತೋರಿಸುವಂತಿತ್ತು. ನನಗನಿಸಿತು ಇವರಿಗಿಂತ ಮುಸ್ಲಿಮೇತರ ಸಹೋದರಿಯರು ಧರಿಸುವ ಸರಳವಾದ ಬಟ್ಟೆಗಳೆ ಒಳಿತು ಅವರ ಬಟ್ಟೆಗಳಲ್ಲಿ ಯಾವುದೇ ರೀತಿಯ ಕಾಮ ಪ್ರಚೋದಕ ನೋಟವಿರುವುದಿಲ್ಲ. ಆದರೆ ನಮ್ಮವರ ರಕ್ಷಾಕವಚ ಮಾತ್ರ "ದೇಹ ಭಕ್ಷಕವಚ"ದ ರೀತಿಯಲ್ಲಿದೆ.
ಸಹೋದರಿಯರೇ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಾನು ಇನ್ನೊಬ್ಬರ ತಪ್ಪನ್ನು ಎತ್ತಿ ಹಿಡಿದು ನಾನೊಬ್ಬಳು ಪತಿವ್ರತೆ ಅಥವಾ ಪರಿಪೂರ್ಣ ಮುಸ್ಲಿಂ ಎಂದಲ್ಲ. ಕನಿಷ್ಠ ಪಕ್ಷ ಇಂತಹ ತಪ್ಪುಗಳನ್ನು ವಿರಳವಾಗಿಸಬಹುದು ಎಂದಾಗಿದೆ ನನ್ನ ಮಾತಿನ ಅರ್ಥ. ಇದು ನನ್ನ ಅನುಭವ ಮತ್ತು ಅನಿಸಿಕೆಯಾಗಿದೆ. ಇವತ್ತು ಪ್ರೀತಿ ಪ್ರೇಮದ ಹೆಸರಿನಲ್ಲಿ ಪೋಷಕರನ್ನು ತೊರೆದು ಹೋಗುವ ಪ್ರಕ್ರಿಯೆ ರಾಜರೋಷವಾಗಿ ನಡೆಯುತ್ತಿದೆ. ಕಾರಣ ಮಕ್ಕಳ ಮೇಲಿನ ಅತೀಯಾದ ಸಲುಗೆ. ಸಲುಗೇಯ ಇನ್ನೊಂದು ಭಾಗವೆ ನಾವೀನ್ಯ ಮಾದರಿಯ ವಸ್ತ್ರಗಳು ತಮ್ಮ ಮಕ್ಕಳಿಗೆ ಕೊಡಿಸಿ ಮುದ್ದು ಮಾಡುತ್ತ ಬೇಳೆಸುವುದು. ಪರಪುರುಷನನ್ನು ಆಕರ್ಷಿಸುವ ಉಡುಪುಗಳನ್ನು ತೊಡುವ ಮಹಿಳೆಯರೆ ತಮ್ನ ಮಕ್ಕಳು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಬಂದು ತಮ್ಮನ್ನು ಮೀರಿಸುವ ಉಡುಪುಗಳನ್ನು ಧರಿಸಲಿದ್ದಾರೆ ಎನ್ನುವ ಸತ್ಯವನ್ನು ಮರೆಯದಿರಿ. ಇಂತಹ ಕೆಟ್ಟ ಚಾಳಿಯಿಂದ ಕಂಡವರ ಬಾಯಿಗೆ ಅಹಾರವಾಗಿ ಯಾಕೆ ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳಬೇಕು? ದಯವಿಟ್ಟು ನಾವು ಜಾಗ್ರತರಾಗೋಣ ಅದೇ ರೀತಿ ನಮ್ಮ ಮಕ್ಕಳನ್ನು ಕೂಡ.
(ಕೃಪೆ: ವಾಟ್ಸಪ್)
No comments:
Post a Comment