*ಝಿಯಾರತ್ತ್ ಕೇಂದ್ರ*
ಸಮಸ್ತ ನಾಯಕರು = 10
👉6⃣2⃣
🔹ಭಾಗ== 02
➖➖➖➖➖➖➖➖➖
*#ಮೌಲಾನಾ_ಅಬ್ದುಲ್ #ಬಾರಿ_ಮುಸ್ಲಿಯಾರ್ (ಖ:ಸಿ), ವಾಳಕುಳಂ, ಪುತುಪ್ಪರಂಬ್, ಕೊಟ್ಟಕಲ್ ಮಲಪ್ಪುರಂ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕎🕎🕎🕎🕎🕎🕎🕎🕎
✍ _ಗಫೂರ್ ಬಾಯಾರ್_
***********************
ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಸುನ್ನತ್ ಜಮಾಅತಿನ ಆಶಯ ಆದರ್ಶಗಳಿಗನುಗುಣವಾಗಿ ಲೇಖನಗಳನ್ನೂ ಬರೆಯುತ್ತಿದ್ದರು.
*ಸಮಸ್ತವು 1929ರಲ್ಲಿ ಅಲ್ ಬಯಾನ್* ಎಂಬ ಮಾಸ ಪತ್ರಿಕೆ ಪ್ರಾರಂಭಿಸಲು ತೀರ್ಮಾನಿಸಿದಾಗ ಅದಕ್ಕೆ ಸಂಪೂರ್ಣ ಬೆಂಬಲ ನೀಡಿದ ಉಸ್ತಾದರು ನಡುವೆ ಆರ್ಥಿಕ ಮುಗ್ಗಟ್ಟಿನಿಂದ ಪತ್ರಿಕೆ ಸ್ಥಗಿತವಾದಾಗ ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮ ಜನ್ಮ ನಾಡಾದ ಪುತುಪರಂಬಿಲ್'ನಲ್ಲಿ ಪ್ರೆಸ್ ಸ್ಥಾಪಿಸಿ ಪತ್ರಿಕೆಯನ್ನು ಮುನ್ನಡೆಸಿದರು. ಅಂದು ಆ ಮಾಸಿಕದಲ್ಲಿ ಬಹುತೇಕ ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ.ಸಿ) ಮತ್ತು ಅಬ್ದುಲ್ ಬಾರಿ ಉಸ್ತಾದ್ (ಖ.ಸಿ)ರವರ ಲೇಖನಗಳೇ ಇರುತ್ತಿದ್ದವು.
ಕುಗ್ರಾಮವಾಗಿದ್ದ ವಾಳಕುಳಂನ ಪುತುಪರಂಬಿಲ್ ಇಂದು ಬಹಳ ಹೆಸರು ವಾಸಿಯಾಗಿದೆ. ಕಾರಣ *ಎಸ್.ವೈ.ಎಸ್'ನ ಪ್ರಥಮ ಯೂನಿಟ್ ಆರಂಭಿಸಿದ್ದೇ ಪುತುಪರಂಬಿಲ್'ನಲ್ಲಿ. ಸಮಸ್ತದ ಪ್ರಥಮ ಮದ್ರಸವೂ ಸ್ಥಾಪಿಸಿರುವುದು ಇಲ್ಲಿಯೇ ಆಗಿದೆ. ಮಾತ್ರವಲ್ಲ ಮಹಾನರ ಮುಂದಾಳತ್ವದಲ್ಲಿ ಸ್ಥಾಪಿತವಾದ ಸುನ್ನತ್ ಜಮಾಅತಿನ ಮುಖವಾಣಿ ಅಲ್ ಬಯಾನ್ ಮಾಸ ಪತ್ರಿಕೆಯ ಪ್ರೆಸ್ ಪುನರ್ ಸ್ಥಾಪಿಸಿರುವುದು ಈ ಪುತುಪರಂಬಿಲ್'ನಲ್ಲಾಗಿತ್ತು. 1930ರಲ್ಲಿ ಸಮಸ್ತದ ನೇೂಂದಣಿಗೆ ಹಣವಿಲ್ಲದಿದ್ದಾಗ ಹಣದ ನೆರವು ನೀಡಿ ಸಮಸ್ತದ ನೇೂಂದಾವಣಿಗೆ ಸಹಕರಿಸಿದ ಸಹೃದಯಿಯಾದ ಮಹಾನರ ತಂದೆಯಾದ ಶೈಖುಲ್ ಕೋಯ ಕುಟ್ಟಿ ಮುಸ್ಲಿಯಾರ್ (ಖ.ಸಿ) ಹಾಗೂ ಸಮಸ್ತದ ಉಪಾಧ್ಯಕ್ಷರಾದ ಸಿ. ಎಚ್ ಹೈದ್ರೂಸ್ ಉಸ್ತಾದ್ (ಖ:ಸಿ) ಅಂತ್ಯ ವಿಶ್ರಮ ಪಡೆಯುತ್ತಿರುವುದೂ ಇದೇ ಪುತುಪರಂಬಿಲ್ ಮಣ್ಣಿನಲ್ಲಾಗಿದೆ.*
ವಾಳಕುಳಂನಲ್ಲಿ ನಡೆಯುವ ಸಮಸ್ತದ ಸಭೆಗಳಿಗೆ ಆಗಮಿಸುತ್ತಿದ್ದ ವಿಧ್ವಾಂಸರಾದ ಶೈಖುನಾ ನೂರುಲ್ ಉಲಮಾ ಎಂ.ಎ. ಉಸ್ತಾದ್ (ಖ.ಸಿ)ರು ಪರಪ್ಪನಂಙಾಡಿಯ ರೈಲು ನಿಲ್ದಾಣದಲ್ಲಿಳಿದು ವಾಳಕುಳಂನ ಸಭೆಗಳಿಗೆ ಕಾಲ್ನಡಿಗೆಯಲ್ಲೇ ಬರುತ್ತಿದ್ದರು. ಈ ಎಲ್ಲ ಕಾರಣದಿಂದ ಪುತುಪರಂಬಿಲ್ ಬಹಳ ಹೆಸರುವಾಸಿಯಾಗಿದೆ.
ಕಲ್ಲಿಕೇೂಟೆಯ ವಾಳಕುಳಂನ ಕುಟ್ಟಿ ಹಸನ್ ಎಂಬುವವರ ಪುತ್ರಿ ಆಯಿಷರನ್ನು ವರಿಸಿದ ಉಸ್ತಾದರಿಗೆ ಒಟ್ಟು ಮೂವರು ಪತ್ನಿಯರಿದ್ದು ಒಂದರಲ್ಲೂ ಸಂತಾನ ಭಾಗ್ಯ ಲಭಿಸಲಿಲ್ಲ.
ಸದಾ ಇಬಾದತ್ತಿನಲ್ಲೂ, ದಿಕ್ರ್'ನಲ್ಲೂ ನಿರತರಾಗುತ್ತಿದ್ದ ಮಹಾನರು ಖಾದಿರಿಯ್ಯ ತ್ವರೀಖತ್ತಿನ ಶೈಖ್ ಆಗಿದ್ದರು. ಉತ್ತಮ ವಾಗ್ಮಿಯೂ ಆಗಿದ್ದ ಮಹಾನರ ಪಾಂಡಿತ್ಯಕ್ಕೂ ಹೆಸರಿಗೂ ಒಪ್ಪುವಂತಹ *ಒಂದು ಜ್ಞಾನ ಕೇಂದ್ರ ನಿರ್ಮಿಸಬೇಕೆಂದು ಭಾವಿಸಿದ ಊರಿನ ದೀನೀ ಪ್ರೇಮಿಗಳು ಮತ್ತು ಎ.ಪಿ. ಉಸ್ತಾದ್ ಒಳಗೊಂಡ ವಿದ್ವಾಂಸರು ಸೇರಿ ಮಹಾನರ ನಾಮದೇಯದಲ್ಲಿ ಅವರ ಜನ್ಮನಾಡಿನಲ್ಲಿಯೇ ರೂಪ ಕೊಟ್ಟ "ಮೌಲಾನಾ ಅಬ್ದುಲ್ ಬಾರಿ ಇಸ್ಲಾಮಿಕ್ ಅಕಾಡಮಿ"* ಎಂಬ ದೀನೀ ವಿದ್ಯಾ ಕೇಂದ್ರ ಸ್ಥಾಪಿಸಿದರು. ಈ ವಿದ್ಯಾಕೇಂದ್ರದ ಅಧೀನದಲ್ಲಿ *"ಇಖಾಮತುಸ್ಸುನ್ನ: ದಆವಾ & ಶರೀಅತ್ತ್ ಕಾಲೇಜುಗಳಿದ್ದು ಇದರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ದೀನೀ ಕೇಂದ್ರದ ಅಧೀನದಲ್ಲಿ ಆಚರಿಸಿಕೊಂಡು ಬರುತ್ತಿರುವ ಮಹಲರತ್ತುಲ್ ಬದ್ರಿಯ್ಯ ಒಳಗೊಂಡ ಆದ್ಯಾತ್ಮಿಕ ಸದಸ್ಸುಗಳಲ್ಲಿ ಅಸಂಖ್ಯ ವಿಶ್ವಾಸಿಗಳು ಬಾಗವಹಿಸುತ್ತಿರುವುದು ಶ್ಲಾಘನೀಯ.*
ಮಸ್ಜಿದುಲ್ ಮುಹೈಮಿನು ಹಾಗು ಬಾರಿ ಸುನ್ನಿಯ್ಯ ಮದ್ರಸವು ಪ್ರಸ್ತುತ ಮೌಲಾನಾ ಅಬ್ದುಲ್ ಬಾರಿ ಇಸ್ಲಾಮಿಕ್ ಅಕಾಡೆಮಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮತ್ತೊಂದು ಸಂಸ್ಥೆಯಾಗಿದೆ.
87 ವರ್ಷದವರೆಗೆ ಜೀವಿಸಿದ ಮಹಾನರು
ತಮ್ಮ ಜೀವನ ಪರ್ಯಂತ ಸುನ್ನತ್ತ್ ಜಮಾಅತ್ತಿನ ಉನ್ನತಿ ಮತ್ತು ಏಳಿಗೆಗಾಗಿ ಶ್ರಮಿಸುತ್ತಲೇ ಹಿಜರಿ 1385 ಜುಮಾದುಲ್ ಅವ್ವಲ್ 2ರ ಆದಿತ್ಯವಾರ ವಫಾತಾದರು.
1951ರಲ್ಲಿ ಪುತುಪ್ಪರಂಬಿಲ್'ನಲ್ಲಿ ಮಹಾನರೇ ನಿರ್ಮಿಸಿದ್ದ ಮಸ್ಜಿದುಲ್ ಬಾರಿಯ ಮುಂಭಾಗದಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
ಮಹಾನವರೊಂದಿಗೆ ನಮ್ಮನ್ನು ಅಲ್ಲಾಹನು ಸ್ವರ್ಗಲೋಕದಲ್ಲಿ ಒಂದು ಗೂಡಿಸಲಿ ಆಮೀನ್.
ದಾರಿ: ಪುತುಪ್ಪರಂಬಿಲ್ ವಾಳಕುಳಂ ಕೊಟ್ಟಕ್ಕಲ್, ಮಲಪ್ಪುರಂ.
ಮುಗಿಯಿತು.🕎
💢💢💢💢💢💢💢💢💢
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)


No comments:
Post a Comment