Wednesday, March 14, 2018

*ಜಪಮಾಲೆ ಹಿಡಿಯುವುದು ಅನಿಸ್ಲಾಮಿಕವೇ?*

ಭಾಗ --2

✍ *ಮುನೀರ್ ಸಖಾಫಿ, ಸಾಲೆತ್ತೂರು*

ಮೇಲಿನ ಸ್ವಫಿಯ್ಯ ಬೀವಿಯ (ರ) ಘಟನೆಗೆ ಸಮಾನವಾದ ಘಟನೆ.

ಅಬೂದಾವೂದ್ ವರದಿ,
 صلى الله عليه وسلم على امرأة وبين يديها نوى أو حصى تسبح به فقال أخبرك بما هو أيسر عليك من هذا أو أفضل فقال سبحان الله عدد ما خلق في السماء وسبحان الله عدد ما خلق في الأرض وسبحان الله عدد ما خلق بين ذلك وسبحان الله عدد ما هو خالق والله أكبر مثل ذلك والحمد لله (ابو داود 1282)
ಸಅದ್ ಬಿನ್ ಅಬೀ ವಖ್ಖಾಸ್ (ರ) ಹೇಳುತ್ತಾರೆ.ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಜೊತೆ ಅವರು ಒಬ್ಬರು ಸ್ತ್ರೀಯ ಬಳಿ ತೆರಳಿದರಂತೆ. ಆವಾಗ ಆ ಸ್ತ್ರೀಯ ಎದುರಲ್ಲಿ ತಸ್ಬೀಹ್ ಹೇಳಲು ಉಪಯೋಗಿಸುವ  ಖರ್ಜೂರದ ಬೀಜ ಅಥವಾ ಪುಟ್ಟ ಪುಟ್ಟ ಕಲ್ಲುಗಳು ಇದ್ದವು.ಆಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,
ಇದಕ್ಕಿಂತ ಸುಲಭವಾದ ಒಂದು ಕಾರ್ಯವನ್ನು ನಿನಗೆ ನಾನು ತಿಳಿಸಿ ಕೊಡಲೇ?
ಅಥವಾ ಇದಕ್ಕಿಂತ ಮಹತ್ವವಿರುವ ಒಂದು ಕಾರ್ಯ ಎಂದಾಗಿದೆ ಅವರು ಹೇಳಿದ್ದು.

ನಂತರ ಹೇಳಿದರು,
"ಸುಬ್'ಹಾನಲ್ಲಾಹಿ  ಅದದ ಮಾ ಖಲಖ ಫಿಸ್ಸಮಾಇ,
ವಸುಬ್'ಹಾನಲ್ಲಾಹಿ ಅದದ ಮಾ ಖಲಕ ಫಿಲ್ ಅರ್'ಳಿ
 ವಸುಬ್'ಹಾನಲ್ಲಾಹಿ  ಅದದ ಮಾ ಖಲಕ ಬೈನ ದ್ಸಾಲಿಕ, ವಸುಬ್'ಹಾನಲ್ಲಾಹಿ ಅದದ ಮಾ ಹುವ ಖಾಲಿಕ್ ಎಂದು ಹೇಳು. 
ಅಲ್ಲಾಹು ಅಕ್ಬರ್, ಅಲ್ ಹಮ್ದುಲಿಲ್ಲಾಹ್, ಲಾಇಲಾಹ ಇಲ್ಲಲ್ಲಾಹ್, ಲಾ ಹೌಲ ವಲಾ ಖುವ್ವತ ಇಲ್ಲಾ ಬಿಲ್ಲಾಹ್ ಎಂದು ಅದೇ ರೀತಿ ಹೇಳು"
(ಅಬೂದಾವೂದ್ 1282)
-----------------------------------------------------------
ಈ ಹದೀಸ್ ವ್ಯಾಖ್ಯಾನದಲ್ಲಿ ವ್ಯಖ್ಯಾನಗಾರರಾದ ಮುಹಮ್ಮದ್ ಶಂಸುಲ್ ಹಖ್ಖ್ ಅಲ್ ಅಬಾದೀ (ರ) ಬರೆಯುವುದು ನೋಡಿ,
وهذا أصل صحيح لتجويزالسبحة بتقريره ـ صلى الله عليه وسلم ـ فإنه في معناها إذ لا فرق بين المنظومة والمنثورة فيما يعد به ، ولا يعتد بقول من عدها بدعة
(عون المعبود 4/257)
ಜಪ ಮಾಲೆ ಉಪಯೋಗಿಸಬಹುದು ಎಂಬುವುದಕ್ಕೆ ಸ್ಪಷ್ಟವಾದ ಆಧಾರವಾಗಿದೆ ಈ ಹದೀಸ್. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಆ ಸ್ತ್ರೀಯ ಪ್ರವರ್ತಿಯನ್ನು ಅಂಗೀಕರಿಸಿದರು. ಕಾರಣ, ಲೆಕ್ಕ ಹಿಡಿಯುವ ವಿಷಯದಲ್ಲಿ ನೂಲಿನಿಂದ ಕಟ್ಟಿದ ಬೀಜಗಳು ಮತ್ತು  ಕಟ್ಟದ ಬೀಜಗಳ ನಡುವೆ ವ್ಯತ್ಯಾಸವಿಲ್ಲ ತಾನೇ!
ತಸ್ಬೀಹ್ ಮಾಲೆ ಉಪಯೋಗಿಸುವುದು ಬಿದ್ ಅತೆಂದು ಹೇಳುವವರ ಮಾತನ್ನು ಪರಿಗಣಿಸಬೇಕಾದ ಅಗತ್ಯವಿಲ್ಲ.
(ಔನುಲ್ ಮ ಅಬೂದ್ 4/257)
-----------------------------------------------------------
ನಂತರ ಅವರು  ಹೇಳುತ್ತಾರೆ,
والحديث دليل على جواز عد التسبيح بالنوى والحصى وكذا بالسبحة لعدم الفارق لتقريره ـ صلى الله عليه وسلم ـ للمرأة على ذلك وعدم إنكاره ، والإرشاد إلى ما هو أفضل لا ينافي الجواز وقد وردت بذلك آثار .
(عون المعبود 4/257)

ತಸ್ಬೀಹ್'ಗಳನ್ನು ಬೀಜ, ಕಲ್ಲು ಗಳಿಂದ ಲೆಕ್ಕ ಹಿಡಿಯಬಹುದು ಎಂಬುವುದಕ್ಕೆ ಈ ಹದೀಸ್ ಆಧಾರವಾಗಿದೆ. ಅದೇ ರೀತಿ ತಸ್ಬೀಹ್ ಮಾಲೆ ಉಪಯೋಗಿಸಬಹುದಕ್ಕೂ ಇದು ಪ್ರಮಾಣವಾಗಿದೆ. ಕಾರಣ ಅವುಗಳ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ.
ಪ್ರಸ್ತುತ ಸ್ತ್ರೀಯನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ವಿರೋಧಿಸಿಲ್ಲ ಎಂಬುವುದೇ ಅದಕ್ಕಿರುವ ಕಾರಣ.
ಅದಕ್ಕಿಂತ ಉತ್ತಮವಾದದ್ದು ಹೇಳು ಎಂದದ್ದು ಅದು ಉಪಯೋಗಿಸುವುದಕ್ಕೆ   ವೀರೋಧವಾಗಲಾರದು.
ತಸ್ಬೀಹ್ ಮಾಲೆಯ ವಿಷಯದಲ್ಲೂ ಹಲವಾರು ಅಸರ್ ಗಳು ಬಂದಿವೆ.
(ಔನುಲ್ ಮಅಬೂದ್ 4/258)
ಇದೇ ರೀತಿ ಶೌಕಾನಿ ತನ್ನ ನೈಲುಲ್ ಅವ್'ತಾರ್ ನ  2/358 ರಲ್ಲೂ ವಿವರಿಸಿದ್ದಾರೆ.
-----------------------------------------------------------
ತಸ್ಬೀಹ್ ಮಾಲೆ ಉಪಯೋಗಿಸಬಹುದೇ? ಎಂದು ಹಲವರು ಪ್ರಶ್ನೆ ಕೇಳಿದಾಗ ಲಕ್ಷಾಂತರ ಹದೀಸ್ ಕಂಠಪಾಟ ಮಾಡಿದ ಪ್ರಖ್ಯಾತ ಹಾಫಿಲ್ ಇಮಾಮ್ ಸುಯೂಥೀ (ರ) ತಸ್ಬೀಹ್ ಮಾಲೆ ಹಿಡಿಯುವುದರ ಕುರಿತು ಒಂದು ಕೃತಿಯನ್ನೇ ರಚಿಸಿದರು.
 "ಅಲ್'ಮಿನ್ಹ ಫಿಸ್ಸುಬ್'ಹ ಎಂದಾಗಿದೆ ಅದರ ಹೆಸರು.
ಅದರಲ್ಲಿ ಅವರು ಹೇಳುವುದು ನೋಡಿ,
وفي جزء هلال الحفار ومعجم الصحابة للبغوي وتاريخ ابن عساكر من طريق معتمر بن سليمان عن ابي بن كعب عن
 جده بقية عن أبي صفية مولى النبي صلى الله عليه وسلم أنه كان يوضع له نطع ويجاء بزنبيل فيه حصى فيسبح به إلى نصف النهار ثم يرفع فإذا صلى الأولى أتى به فيسبح به حتى يمسي.واخرجه احمد في الزهد.
(الحاوي للفتاوي 2/140)

ಹಿಲಾಲುಲ್ ಹಫ್ಫಾರ್ (ರ) ಎಂಬವರ ಗ್ರಂಥದಲ್ಲೂ ಇಮಾಮ್ ಬಗವಿ (ರ) ಯವರ ಮುಅಜಮುಸ್ಸಹಾಬ ಎಂಬ ಗ್ರಂಥದಲ್ಲೂ ಇಬ್ನ್ ಅಸಾಕಿರ್ (ರ) ತನ್ನ ತಾರೀಖ್ ನಲ್ಲೂ ಮುಅತಮಿರ್ ಬಿನ್  ಸುಲೈಮಾನ್ (ರ) ಮೂಲಕ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೌಲ ಅಬೂ ಸಫಿಯ್ಯ ರಿಂದ ವರದಿ,
ಅವರಿಗೆ ಒಂದು ವಸ್ತ್ರ ಹಾಸಲಾಯಿತು. ನಂತರ ಪುಟ್ಟ ಕಲ್ಲುಗಳಿಂದ ತುಂಬಿದ ಒಂದು ಬುಟ್ಟಿಯನ್ನು ಇಡಲಾಯಿತು. ನಂತರ ಅವರು ಹಗಲಿನ ಅರ್ಧ ಸಮಯದೊಳಗೆ ಅವುಗಳಿಂದ ತಸ್ಬೀಹ್ ಹೇಳುವರು. ಬಳಿಕ ಅವುಗಳನ್ನು ತೆಗೆಯಲ್ಪಡಲಾಯಿತು. ನಮಾಝಿನ ಬಳಿಕ ಪುನಃ ಕಲ್ಲುಗಳನ್ನು ಇಡಲಾಯಿತು. ಸಂಜೆಯ ತನಕ ಅವರು ತಸ್ಬೀಹ್ ಹೇಳುತ್ತಿದ್ದರು.
ಇದನ್ನು ಇಮಾಮ್ ಅಹ್'ಮದ್ ತನ್ನ ಝುಹ್'ದ್ ನಲ್ಲೂ ವರದಿ ಮಾಡಿದ್ದಾರೆ.
(ಅಲ್ ಹಾವೀ ಲಿಲ್ ಫತಾವಾ 2/140)
-----------------------------------------------------------


_*ಇನ್ನಷ್ಟು ಮುಂದಿನ ಭಾಗದಲ್ಲಿ , ಇಂಶಾ ಅಲ್ಲಾಹ್.*_

No comments:

Post a Comment