Friday, June 8, 2018

😰🏹🏹⚔⚔⚔🏹🏹 😰
😰 ​ *ಕಣ್ಣೀರ ಕಡಲಾದ ಕರ್ಬಲ*​ 😰
😰 🗡   ​ *ಯುದ್ಧ ಚರಿತ್ರೆ​*  🗡   😰
😰😰😰😰😰😰😰😰😰
     👉 ​ *ಭಾಗ* 4⃣4⃣
**********************
 *صَـلــُّوا عَـلَـى النَّبِيِّ ﷺ وَآلـِهِ*
 *اللَّهُمَّ صَلِّ عَلَى سَيِّدِنَا مُحَمَّدٍ*
 *عَدَدَ مَا فِي عِلْمِ الله*
 *صَلاَةً دَائِمَةً بِدَوَامِ مُلْكِ الله*
➖➖➖➖➖➖➖➖➖
✍ _ಗಫೂರ್ ಬಾಯಾರ್_
☔☔☔☔☔☔☔☔☔

*ಮುಂದೇನಾದೀತು ಎನ್ನುವುದಕ್ಕಿಂತಲೂ ತಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಒಡನಾಡಿ ಗುಟುಕು ನೀರೂ ಸಿಗದೆ ಒದ್ದಾಡುತ್ತಾ ಶತ್ರುಗಳ ಖಡ್ಗದ ದಾಳಿಗೀಡಾಗಿ ತುಂಡು ತುಂಡಾಗಿ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಅನಾಥವಾಗಿ ಬಿದ್ದಿರುವುದನ್ನು ಕಣ್ಣಾರೆ ಕಂಡವರ ಸ್ಥಿತಿ ವರ್ಣನೆಗೆ ನಿಲುಕೀತೇ? ಅದಕ್ಕೂ ಮಿಗಿಲಾಗಿ..* ⬇

*ಅಬಲೆಯರೂ ಅಸಹಾಯಕಿಯರೂ ಆದ ಮಹಿಳೆಯರ ಸ್ಥಿತಿ ಹೇಗಿದ್ದಿರಬಹುದೆಂಬುದು ನಮ್ಮ ಊಹೆಗೂ ನಿಲುಕದ ಸಂಗತಿ.*

ನಂತರ ಬಂಧಿತರೊಂದಿಗೆ ಹುಸೈನ್ (ರ)ರವರ ಶಿರಸ್ಸನ್ನು ಕೂಫದ ದಾರುಲ್ ಇಮಾರ್'ಗೆ ಒಯ್ದು ಸಯ್ಯದುನಾ ಹುಸೈನ್ (ರ)ರವರ ಪವಿತ್ರ ಶಿರಸ್ಸನ್ನು ನೇೂಡುತ್ತಾ ಉಬೈದ್, ತನ್ನ ಕೈಯಲಿದ್ದ ಕೇೂಲೊಂದರಿಂದ  ಹುಸೈನ್ (ರ)ರವರ ಕೆನ್ನೆಗೆ ಚುಚ್ಚಿದನು.

ಆಗ ಅಲ್ಲಿದ್ದ ಸ್ವಹಾಬಿವರ್ಯರಾದ *ಝೈದ್ ಬಿನ್ ಅರ್'ಕಂ (ರ) ರವರು* ರೇೂಷದಿಂದ ಕುದಿಯುತ್ತಾ ಏ ಉಬೈದ್... ನೀನೇನು ಮಾಡುತ್ತಿರುವೆಯೆಂಬ ವಿವೇಕವಾದರೂ ನಿನಗಿದೆಯೇ? *ಅಲ್ಲಾಹನ ರಸೂಲ್ ﷺ ರವರು ತಮ್ಮ ಅಮೃತ ಹಸ್ತದಿಂದ ಸ್ಪರ್ಶಿಸಿ ಪ್ರೀತಿಯಿಂದ  ಚುಂಬಿಸಿದ ಕೆನ್ನೆಯದು. ಮತ್ತೊಮ್ಮೆ ಮುಟ್ಟಿದರೆ ಪರಿಸ್ಥಿತಿ ನೆಟ್ಟಗಿರದು ಎಂದಾಗ ಸೈನಿಕರು ಮತ್ತು ಗಣ್ಯರಿಂದ ತುಂಬಿದ್ದ ಆ ಸಭೆ ಮಾತ್ರವಲ್ಲ ಖುದ್ದು ಉಬೈದನೂ ಬೆಚ್ಚಿಬಿದ್ದ.*

ಕಾರಣ ಉಬೈದನ ಮಾತಿಗೆ ಎದುರಾಡುವಂತೆಯೇ ಇರಲಿಲ್ಲ. ಎದುರಾಡಿದರೆ ತಕ್ಷಣ ಮರು ಮಾತಿಲ್ಲದೆ ಉಬೈದ್ ತಲೆ ಹಾರಿಸುತ್ತಿದ್ದ.

ಇದರಿಂದ ಕೇೂಪಗೊಂಡ ಉಬೈದ್, *ಝೈದ್ ಬಿನ್ ಅರ್'ಕಂ (ರ) ರೊಂದಿಗೆ* ಹೇಳಿದ...

*"ನೀನೊಬ್ಬ ಮುದುಕನಲ್ಲದಿರುತ್ತಿದ್ದರೆ ಇಷ್ಟೊತ್ತಿಗೆ ನಿನ್ನ ತಲೆ ಹಾರಿಸಿರುತ್ತಿದ್ದೆ" ಎಂದ.*

ಇದರಿಂದ ಎಳ್ಳಷ್ಟೂ ವಿಚಲಿತರಾಗದ ಸಯ್ಯದುನಾ ಝೈದ್ ಬಿನ್ ಅರ್'ಕಂ (ರ) ಆ ವೇದಿಕೆಯಲ್ಲಿದ್ದ ಸಭಿಕರನ್ನುದ್ದೇಶಿಸಿ ಹೇಳಿದರು...

*ಅಲ್ಲಾಹನ ರಸೂಲ್ ﷺ ರವರ ಮಗಳಾದ ಫಾತಿಮಾ (ರ)ರವರ ಮಕ್ಕಳನ್ನು ನಾಶ ಮಾಡಿದ ಮರ್ಜಾನಳ (ಉಬೈದ್'ನ ತಾಯಿ) ಪುತ್ರನಿಗೆ ಅಧಿಕಾರ ಕೊಟ್ಟಿರುವ ನೀವೂ ಸರ್ವನಾಶವಾಗದಿರಲಾರಿರಿ ಎಂದು ಎಚ್ಚರಿಸುತ್ತಾ ಆ ವೇದಿಕೆಯಿಂದ ಹೊರ ನಡೆದರು.*

ನಂತರ ಸಯ್ಯದುನಾ ಹುಸೈನ್ (ರ)ರವರ ಪವಿತ್ರವಾದ ಶಿರಸ್ಸಿನೊಂದಿಗೆ ಬಂಧಿಸಲ್ಪಟ್ಟ ಮಹದಿಯರಾದ ಸಯ್ಯಿದತುನಾ ಬೀವಿ ಶಹ್ರುಬಾನು (ರ) ಝೈನಬಾ ಬೀವಿ (ರ) ಸೇರಿದಂತೆ ಮತ್ತಿತರರೊಂದಿಗೆ ಬದುಕುಳಿದ ಅಹ್ಲ್'ಬೈತಿನ ಏಕೈಕ ಕಣ್ಮಣಿಯಾದ ಸಯ್ಯದುನಾ ಝೈನುಲ್ ಆಬಿದೀನ್ (ರ) ತಂಙಳರನ್ನೂ ಡಮಾಸ್ಕಸ್'ಗೆ ಕರೆದೊಯ್ದು ವಿಶ್ವ ಮುಸ್ಲಿಮರು ನಿಷ್ಕಪಟ ಹೃದಯದಿಂದ ತಮ್ಮ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುವ ಅಹ್ಲ್'ಬೈತನ್ನೇ ಸರ್ವನಾಶ ಮಾಡಲೆತ್ನಿಸಿದ ದುರಹಂಕಾರಿಯಾದ ಯಝೀದ್'ನ ಮುಂದೆ ಹಾಜರುಪಡಿಸಲಾಯಿತು.

*ಸಯ್ಯದುನಾ ಹುಸೈನ್ (ರ) ತಲೆ ಕಂಡು ಯಝೀದ್ ಬೆಚ್ಚಿಬಿದ್ದನಲ್ಲದೆ ಈ ಭಯಾನಕವಾದ ದುಷ್ಕೃತ್ಯಗಳ ಬಗ್ಗೆ ಬೇಸರ ವ್ಯಕ್ತಪಡಿಸಿದನು.*

ಕಾರಣ ಹುಸೈನ್ (ರ)ರನ್ನು ಕೊಲ್ಲಬೇಕೆನ್ನುವುದು ಆತನ ಉದ್ದೇಶವಾಗಿರದೆ ಅವರನ್ನು ಹಿಮ್ಮೆಟ್ಟಿಸಿ ಅಧಿಕಾರ ಉಳಿಸಿಕೊಳ್ಳುವುದಷ್ಟೇ ಅವನ ಉದ್ದೇಶವಾಗಿತ್ತು.

ಆಮೇಲೆ ಯಝೀದ್ ಇಬ್ನು ಮುಹವಿಯಾ ಸಯ್ಯದುನಾ ಝೈನುಲ್ ಆಬಿದೀನ್ (ರ) ತಂಙಳರೊಂದಿಗೆ....

*ನಿನ್ನ ತಂದೆಯವರು ತಮ್ಮ ಸಹಚರರೊಂದಿಗೆ ನನ್ನಿಂದ ಅಧಿಕಾರವನ್ನು ತಪ್ಪಿಸಲು ಪ್ರಯತ್ನಿಸದಿರುತ್ತಿದ್ದರೆ ನಿನಗಿಂದು ಈ ಗತಿ ಬರುತ್ತಿರಲಿಲ್ಲ ಎಂದ.*

ಆಗ ಅಹ್ಲ್'ಬೈತಿನ ವಂಶಾಭಿವೃದ್ಧಿಗಾಗಿ ಅಲ್ಲಾಹನ ತೀರ್ಮಾನಕ್ಕನುಗುಣವಾಗಿ ಅಳಿದುಳಿದ ಏಕೈಕ ಕಣ್ಮಣಿಯಾದ *ಸಯ್ಯದುನಾ ಝೈನುಲ್ ಆಬಿದೀನ್ (ರ) ರವರು* ಸ್ವಲ್ಪವೂ ವಿಚಲಿತರಾಗದೆ ಕರ್ಣಾನಂದಕರವಾಗಿ ಕುರ್ಆನಿನ ಸೂಕ್ತವೊಂದನ್ನು ಪಠಿಸುತ್ತಾ ಆತ್ಮಸ್ಥೈರ್ಯದಿಂದ ಹೇಳಿದರು.... ⤵

*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🛡🛡🛡🛡🛡🛡🛡🛡🛡

No comments:

Post a Comment