Monday, March 16, 2020

ಜಾಮಿಯಾ ಸಅದಿಯ್ಯಾ 50

*#ಸುವರ್ಣ_ಮಹೋತ್ಸವದ ಸಂಭ್ರಮದಲ್ಲಿ ಕಾಸರಗೋಡಿನ ಜಾಮಿಯಾ ಸ‌ಅದಿಯ್ಯಾ ಅರೇಬಿಯಾ ಕಾಲೇಜು.*

✍ ಗಫೂರ್ ಬಾಯಾರ್
🍂🍂🍂🍂🍂🍂🍂

ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕವಾದ ವಾತಾವರಣ ನಿರ್ಮಿಸುವುದರ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡುತ್ತಾ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶಿಕ್ಷಣ ಸಂಸ್ಥೆಯಾಗಿದೆ ಕಾಸರಗೋಡಿನ ಜಾಮಿಅ ಸ‌ಅದಿಯ್ಯ ಅರೇಬಿಯಾ ಕಾಲೇಜು.

ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣವನ್ನೂ ನೀಡುವ ಮೂಲಕ ಸಮಾಜಕ್ಕೆ ಅತ್ಯಮೂಲ್ಯವಾದ ಕೊಡುಗೆಯನ್ನು ಜಾಮಿಅ ಸ‌ಅದಿಯ್ಯ ಅರೇಬಿಯಾ ಕಾಲೇಜು ನೀಡುತ್ತಿದೆ.

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಆಗರ್ಭ ಶ್ರೀಮಂತರೂ, ಪರೋಪಕಾರಿಯೂ ಆಗಿದ್ದ ಕಲ್ಲಟ್ರ ಅಬ್ದುಲ್ ಖಾದಿರ್ ಹಾಜಿಯವರು ದಾನ ಮಾಡಿದ 5 ಎಕರೆ ಜಮೀನಿನಲ್ಲಿ ಸಣ್ಣ ಮದರಸವಾಗಿ ತಲೆಯೆತ್ತಿದ ಮದರಸವು ಇಂದು ಸುಮಾರು ಜಾಮಿಆ ಸ‌ಅದಿಯ್ಯಾ ಅರೇಬಿಯಾ ಕಾಲೇಜಾಗಿ 70 ಎಕರೆ ಪ್ರದೇಶದಲ್ಲಿ ಹೆಮ್ಮರದಂತೆ ಬೆಳೆದು ಸಮಾಜಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡುತ್ತಿದೆ.

ಶಿಕ್ಷಣ ತಜ್ಞರೂ ಚಿಂತಕರೂ ವಿದ್ವಾಂಸರೂ ಆಗಿದ್ದ ಮರ್ಹೂಂ ಎಂ. ಎ ಉಸ್ತಾದ್(ನ.ಮ) ರವರು ಪ್ರಾಂಶುಪಾಲರಾಗಿ ಈ ಕಾಲೇಜಿನ ಚುಕ್ಕಾಣಿ ಹಿಡಿದ ನಂತರ ಮಹಾನರ ದೂರದೃಷ್ಟಿ ಮತ್ತು ಅಪಾರವಾದ ಕಾಳಜಿಯಿಂದಾಗಿ ಈ ಕಾಲೇಜು ದೇಶದ ಉನ್ನತ ಮಟ್ಟದ ಕಾಲೇಜುಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿತು.

ತಾಜುಲ್ ಉಲಮಾ ಉಳ್ಳಾಲ ತಂಙಳ್ (ನ.ಮ) ನೂರುಲ್ ಉಲಮಾ ಎಂ. ಎ. ಉಸ್ತಾದ್  (ನ.ಮ) ಮತ್ತು ಕನ್ಸುಲ್ ಉಲಮಾ ಚಿತ್ತಾರಿ ಉಸ್ತಾದ್ (ನ.ಮ)ರ ನೇತೃತ್ವದಲ್ಲಿ ನಡೆದ ಇಸ್ಲಾಮಿಕ್ ವಿದ್ವಾಂಸರ ಸಭೆಯಲ್ಲಿ ಚರ್ಚಿಸಿ ಕೈಗೊಂಡ ತೀರ್ಮಾನದಿಂದಾಗಿ ಸ‌ಅದಿಯ್ಯ ಕಾಲೇಜು ಶೈಕ್ಷಣಿಕ ರಂಗದಲ್ಲಿ ಕ್ರಾಂತಿಕಾರಿಯಾದ ಬದಲಾವಣೆಯನ್ನು ತರಲು ಸಾಧ್ಯವಾಯಿತು.

ಅಸಂಖ್ಯ ವಿದ್ವಾಂಸರನ್ನು ರೂಪಿಸಿ ಸಮಾಜಕ್ಕೆ ಸಮರ್ಥಿಸುತ್ತಿರುವ ಸ‌ಅದಿಯ್ಯಾ ಕಾಲೇಜು ಇದೀಗ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಮುಸ್ಲಿಂ ಸಮುದಾಯದ ಸಹಭಾಗಿತ್ವದೊಂದಿಗೆ ನಡೆಯುತ್ತಿರುವ ಈ ಸಮ್ಮೇಳನವು 2019ರ ಡಿಸೆಂಬರ್ 27 ರಂದು ಆರಂಭವಾಗಿದ್ದು 29 ರಂದು ಸಮಾಪನೆಗೊಳ್ಳಲಿದೆ.

ಈ ಸುವರ್ಣ ಮಹೋತ್ಸವದಲ್ಲಿ ಸನದುದಾನವೂ ನಡೆಯಲಿದ್ದು 602 ಸ‌ಅದಿಗಳು, 95 ಅಫ್‌ಳಲಿಗಳು ಮತ್ತು 57 ಆಫಿಲ್‌ಗಳು ಸೇರಿದಂತೆ ಒಟ್ಟು 754 ದೀನೀ ಸೇವಕರನ್ನು ಸ‌ಅದಿಯ್ಯಾ ಸಮಾಜಕ್ಕೆ ಸಮರ್ಪಿಸಲಿದೆ.

No comments:

Post a Comment