#ದೇಶದ_ಅಭಿವೃದ್ಧಿಯ_ಪಥದಲ್ಲಿ #ಮುಸ್ಲಿಮರ_ಪಾತ್ರ
🇮🇳🇮🇳🇮🇳🇮🇳🇮🇳🇮🇳🇮🇳
✍ ಗಫೂರ್ ಬಾಯಾರ್
**********************
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿ ವೀರ ಮರಣವನ್ನಪ್ಪಿ ಹುತಾತ್ಮರಾದುದಲ್ಲದೆ ಸ್ವಾತಂತ್ರ್ಯಾನಂತರವೂ ದೇಶದ ಏಕತೆ, ಸಮಗ್ರತೆ, ಅಖಂಡತೆ, ಮತ್ತು ಸಾರ್ವಭೌಮತ್ವಕ್ಕಾಗಿ ಭದ್ರ ಬುನಾದಿ ಹಾಕುವಲ್ಲಿ ಮುಂಚೂಣಿಯಲ್ಲಿದ್ದ ಸಮುದಾಯವಾಗಿದೆ ಮುಸ್ಲಿಂ ಸಮುದಾಯವೆನ್ನುವುದು ಹೆಮ್ಮೆಯ ಸಂಗತಿ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರವೇನೆನ್ನುವುದನ್ನು ಇತಿಹಾಸದ ಪುಟಗಳು ಸಾರಿ ಸಾರಿ ಹೇಳುತ್ತಿವೆ.
ಮಾತ್ರವಲ್ಲ, ದೇಶ ಪ್ರೇಮವನ್ನು ಗುತ್ತಿಗೆಗೆ ಪಡೆದುಕೊಂಡಂತೆ ವರ್ತಿಸುವ ನಕಲಿ ದೇಶ ಪ್ರೇಮಿಗಳಿಗೆ, ದೆಹಲಿಯ ಕೆಂಪು ಕೋಟೆಯೊಂದರಲ್ಲೇ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿ ವೀರ ಮರಣವನ್ನಪ್ಪಿದ 65,000 ಕ್ಕಿಂತ ಹೆಚ್ಚು ಮುಸ್ಲಿಂ ಧೀರ ಯೋಧರ ಹೆಸರುಗಳು ಉಲ್ಲೇಖಿಸಲ್ಪಟ್ಟಿದೆ.
ಇನ್ನು ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಮುಸ್ಲಿಂ ಯೋಧರ ಸಂಖ್ಯೆ ಅದೆಷ್ಟಿರಬಹುದೆಂದು ಒಮ್ಮೆ ಊಹಿಸಿ ನೋಡಿ..!
ಮತಾಂಧತೆಯ ಅಮಲು ತಲೆಗೇರಿದ ನಕಲಿ ದೇಶ ಪ್ರೇಮಿಗಳು ತಮ್ಮ ಮತಾಂಧತೆಯ ಕನ್ನಡಕವನ್ನು ತೆಗೆದು ನೋಡಿದರೆ ದೇಶಕ್ಕಾಗಿ ಮುಸ್ಲಿಮರ ಕೊಡುಗೆಯೇನು ಎನ್ನುವುದಕ್ಕೆ ದೇಶದ ಉದ್ದಗಲಕ್ಕೂ ಪೂರಕ ಸಾಕ್ಷ್ಯ ದೊರೆಯುತ್ತದೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲದೆ ದೇಶದ ಏಕತೆ, ಅಖಂಡತೆ, ಸಾರ್ವಭೌಮತ್ವ ಹಾಗೂ ದೇಶದ ಅಭಿವೃದ್ಧಿಯ ಹಾದಿಯಲ್ಲೂ ಮುಸ್ಲಿಮರ ಪಾತ್ರ ಚಿಕ್ಕದೇನೂ ಅಲ್ಲ.
ದೇಶದ ಅಭಿವೃದ್ಧಿಗಾಗಿ ತಮ್ಮ ಖಜಾನೆಯಿಂದ 500 ಕಿಲೋ ಚಿನ್ನವನ್ನು ದೇಣಿಗೆಯಾಗಿ ನೀಡಿ ಇತಿಹಾಸವನ್ನೇ ನಿರ್ಮಿಸಿದವರೂ ಸಹ ಮುಸ್ಲಿಮರೇ ಎನ್ನುವುದು ನಿರಾಕರಿಸಲಾಗದ ಸತ್ಯ.
ಇನ್ನೂರು ವರ್ಷಗಳ ಕಾಲ ದಕ್ಷಿಣ ಭಾರತವನ್ನಾಳಿದ ಹೈದರಾಬಾದ್ ನಿಜಾಮ್ ಸಂತತಿಯ ಕೊನೆಯ ದೊರೆಯಾಗಿದ್ದ "ಉಸ್ಮಾನ್ ಅಲಿ ಖಾನ್ ಆಸಿಫ್" ಎಂಬ ವ್ಯಕ್ತಿಯೇ ದೇಶಕ್ಕಾಗಿ ತಮ್ಮ ಖಜಾನೆಯಲ್ಲಿದ್ದ 500 ಕಿಲೋ ಚಿನ್ನವನ್ನು ದೇಣಿಗೆ ನೀಡಿ ದೇಶ ಪ್ರೇಮ ಮೆರೆದ ಮಹಾನರಾಗಿದ್ದಾರೆ.
1886ರ ಏಪ್ರಿಲ್ 24ರಂದು ಜನಿಸಿ ಫೆಬ್ರವರಿ 24 1967ಕ್ಕೆ ನಿಧನರಾದ ಉಸ್ಮಾನ್ ಅಲಿಖಾನ್ ಆಸಿಫ್‌ರವರು ವಿಶ್ವದಲ್ಲೇ ಅತಿ ಶ್ರೀಮಂತ ರಾಜರಾಗಿದ್ದರು.
ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಸ್ಥಾಪಕರೂ ಆದ ಉಸ್ಮಾನ್ ಅಲಿಖಾನ್ ಆಸಿಫ್‌ರ ಬಗ್ಗೆ 1937ರ ಫೆಬ್ರವರಿಯಲ್ಲಿ ಟೈಮ್ಸ್ ಮ್ಯಾಗಝಿನ್ ತನ್ನ ಮುಖಪುಟದಲ್ಲಿ ಅವರ ಶ್ರೀಮಂತಿಕೆ ಮತ್ತು ಸೇವಾ ಮನೋಭಾವನೆಯ ಬಗೆಗಿನ ವಿಸ್ತೃತ ವರದಿಯನ್ನೇ ಪ್ರಕಟಿಸಿತ್ತು.
50 ಮಿಲಿಯನ್ ಡಾಲರ್ ಬೆಲೆ ಬಾಳುವ ಜೇಕಬ್ ಪೆಪ್ಪರ್ ಡೈಮಂಡನ್ನು ಹೊಂದಿದ್ದ ಉಸ್ಮಾನ್ ಅಲಿಖಾನ್ ಆಸಿಫ್‌ರವರು 1948 ರಲ್ಲಿ ಹೈದರಾಬಾದ್ ಭಾರತದೊಂದಿಗೆ ವಿಲೀನವಾದ ನಂತರ ಭಾರತದಲ್ಲೇ ನೆಲೆಸಿದ್ದರು.
1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಸಮಯದಲ್ಲಿ ಆಂಧ್ರ ಪ್ರದೇಶ ರಾಜ್ಯವೂ ರಚನೆಯಾಗಿ ಹೈದರಾಬಾದ್ ಅದರ ಭಾಗವಾದ ನಂತರ ಭಾರತ ಸರ್ಕಾರವು ಉಸ್ಮಾನ್ ಅಲಿ ಖಾನ್ ಅವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿತು.
1965 ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ನಡೆದಾಗ ಅಂದಿನ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಜೆಗಳೊಂದಿಗೆ ದೇಶದ ಖಜಾನೆಗೆ ದೇಣಿಗೆ ನೀಡಲು ಕರೆ ಕೊಟ್ಟಾಗ ವಿಶ್ವದಲ್ಲಿ ಅತಿ ಶ್ರೀಮಂತ ರಾಜರೆಂಬ ಹೆಗ್ಗಳಿಕೆ ಹೊಂದಿದ್ದ ಉಸ್ಮಾನ್ ಅಲಿ ಖಾನ್‌ರವರು ಭಾರತದ ರಕ್ಷಣಾ ನಿಧಿಗೆ 500 ಕಿಲೋ ಚಿನ್ನವನ್ನು ಉದಾರವಾಗಿ ದೇಣಿಗೆ ನೀಡಿದ್ದರು.
ಉಸ್ಮಾನ್ ಅಲಿ ಖಾನ್ ಆಸಿಫ್‌ರವರ ಈ ದಾಖಲೆಯನ್ನು ಮುರಿಯಲು ಈ ತನಕ ಯಾರಿಂದಲೂ ಸಾಧ್ಯವಾಗಿಲ್ಲ ಎನ್ನುವುದು ವಿಶೇಷ.
ತಮ್ಮ ಬದುಕಿನ ಕೊನೆಯುಸಿರಿನ ತನಕವೂ ಭಾರತದಲ್ಲೇ ಜೀವಿಸಿದ್ದ ಅವರನ್ನು ಚರಿತ್ರೆಯ ಗಂಧಗಾಳಿ ಗೊತ್ತಿಲ್ಲದ ಬಲಪಂಥೀಯ ನಾಯಕರೊಬ್ಬರು, ಉಸ್ಮಾನ್ ಅಲಿ ಖಾನ್ ಆಸಿಫ್‌ರವರು ಭಾರತ ಬಿಟ್ಟು ಪಲಾಯನ ಮಾಡಿದ್ದರು ಎಂದು ಒಂದೆಡೆ ಹೇಳಿರುವುದು ವಿಪರ್ಯಾಸ.
ಒಂದು ವೇಳೆ ಉಸ್ಮಾನ್ ಅಲಿ ಖಾನ್ ಆಸಿಫ್‌ರವರು ಅಂದು ಮನಸ್ಸು ಮಾಡಿದ್ದರೆ ತಮ್ಮ ಹಣದ ಸಮೇತ ವಿದೇಶಕ್ಕೆ ತೆರಳಿ ಹಾಯಾಗಿರಬಹುದಿತ್ತು. ಆದರೆ ಹಾಗೆ ಮಾಡದೆ ತಮ್ಮ ಸಂಪತ್ತನ್ನು ದೇಶದ ಖಜಾನೆಗೆ ಧಾರೆಯೆರೆದು ಇತಿಹಾಸದ ಪುಟಗಳಲ್ಲಿ ಲೀನವಾದ ಮಹಾನ್ ವ್ಯಕ್ತಿಯಾಗಿದ್ದಾರೆ ಉಸ್ಮಾನ್ ಅಲಿಖಾನ್ ಆಸಿಫ್.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಕ್ಷಮೆ ಕೋರಿ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಂದೆ ಸರಿದು ಬ್ರಿಟಿಷರಿಂದಲೇ ಮಾಸಿಕ ಪೆನ್ಷನ್ ಪಡೆದ ಇತಿಹಾಸವನ್ನು ಹೊಂದಿರುವ ನಕಲಿ ದೇಶ ಭಕ್ತರಿಗೆ ಈ ಸತ್ಯದ ಬಗ್ಗೆ ತಿಳುವಳಿಕೆ ಇಲ್ಲವೆಂದಲ್ಲ. ಇಂತಹ ಸತ್ಯವನ್ನು ಒಪ್ಪಿಕೊಂಡರೆ ತಾವು ನಿರುದ್ಯೋಗಿಗಳಾಗಬೇಕಾದೀತು ಎನ್ನುವುದರ ಅರಿವು ಅವರಿಗೆ ಸ್ಪಷ್ಟವಾಗಿರುವುದರಿಂದ ಸತ್ಯವನ್ನು ಮರೆಮಾಚಲು ಸದಾ ಪ್ರಯತ್ನಿಸುತ್ತಲೇ ಇರುತ್ತಾರಲ್ಲದೆ ಅಂಥವರಿಂದ ಮತ್ತೇನನ್ನು ತಾನೇ ನಿರೀಕ್ಷಿಸಲು ಸಾಧ್ಯ?
No comments:
Post a Comment