Monday, March 16, 2020

ಝಿಯಾರತ್ತ್ ಕೇಂದ್ರ 82. ಖಾಝಿ ಶೈಖ್ ಸಈದ್ ಮುಸ್ಲಿಯಾರ್ (ರ) ಪಯೊಟ್ಟ ಕಾಲ್ನಾಡ್ ಕಾಸರಗೋಡು ಜಿಲ್ಲೆ

*ಝಿಯಾರತ್ತ್ ಕೇಂದ್ರ​​​*
    ಭಾಗ 👉 8⃣2⃣
➖➖➖➖➖➖➖ #ಖಾಝಿ_ಶೈಖ್_ಸಈದ್_ಮುಸ್ಲಿಯಾರ್  (ಖ:ಸಿ) ಕಿಝೂರ್, ಪಯೊಟ್ಟ, ಕಳನಾಡ್, ಕಾಸರಗೋಡು.
➖➖➖➖➖➖➖
🕌🕌🕌🕌🕌🕌🕌
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
**********************

ಸುಮಾರು ಒಂದೂವರೆ ಶತಮಾನಗಳ ಹಿಂದೆ ಕೇರಳ ಸಮೂಹವನ್ನು ಆಧ್ಯಾತ್ಮಿಕ ಪ್ರಭೆಯಿಂದ ಬೆಳಗಿಸಿದ ಮಹಾ ವಿದ್ವಾಂಸರಾಗಿದ್ದಾರೆ. ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು.

ಕಾಸರಗೋಡು ಜಿಲ್ಲೆಯ ಕುಂಞಾರ್‌ನ ಖಾಝಿ ಅಹ್ಮದ್ ಮುಸ್ಲಿಯಾರ್ (ಖ.ಸಿ) ಪುತ್ರರಾದ 
ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು ಚಿಕ್ಕ ವಯಸ್ಸಿನಲ್ಲೇ ಉತ್ಸಾಹದಿಂದ ಬಹಳಷ್ಟು ಧಾರ್ಮಿಕ ವಿದ್ಯೆ ಕರಗತ ಮಾಡಿಕೊಂಡ ನಂತರ ಅಲ್ ಅಝ್ಹರ್ ಎಂದು ಅರಿಯಲ್ಪಡುವ ಪೊನ್ನಾನಿಗೆ ತೆರಳಿ ಉನ್ನತ ವ್ಯಾಸಂಗ ಪಡೆದರು.

ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರು, ಪ್ರವಾದಿ ﷺِ ಪ್ರೇಮದ ಮೂಲಕ ಜಗತ್ತೇ ತಿರುಗಿ ನೋಡುವಂತಹ ಅಸಾಮಾನ್ಯ ಸಾಧನೆ ಮಾಡಿದ ಮಹಾ ವಿದ್ವಾಂಸರೂ, ಸ್ವಾತಂತ್ರ್ಯ ಹೋರಾಟಗಾರರೂ ಆದ ವೆಳಿಯಂಗೋಡು ಉಮರ್ ಖಾಝಿ (ರ) ರವರ ಸಹಪಾಠಿಯೂ, ಆತ್ಮೀಯ ಮಿತ್ರರೂ ಆಗಿದ್ದರು.

ಇಸ್ಲಾಮಿಕ್ ಧಾರ್ಮಿಕ ಸಂಹಿತೆಗಳ (ಶರಿಆತ್) ಬಗ್ಗೆ ಅಗಾಧ ಪಾಂಡಿತ್ಯ ಹೊಂದಿದ್ದ ಮಹಾನರು, ಫತ್ವಾ ನೀಡುವ ಅರ್ಹತೆ ಹೊಂದಿರುವ ಬಗ್ಗೆ ಮಹಾನರಾದ ವೆಳಿಯಂಗೋಡು ಉಮರ್ ಖಾಝಿ (ರ) ರವರಿಂದ ಅಂಗೀಕಾರ ಪಡೆದ ಫಖೀಹ್ ಕೂಡ ಆಗಿದ್ದರು.

ಉತ್ತರ ಕೇರಳದಿಂದ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ತಿಳಿಯಲು ವೆಳಿಯಂಗೋಡು ಉಮರ್ ಖಾಝಿ (ರ) ರವರ ಬಳಿ ಬರುತ್ತಿದ್ದ ಜನರನ್ನು ಮಹಾನರು ಸ‌ಈದ್ ಮುಸ್ಲಿಯಾರ್ (ಖ.ಸಿ) ರವರ ಬಳಿಗೆ ಕಳುಹಿಸುತ್ತಿದ್ದರು.

ಆ ಕಾಲದ ಜಮೀನ್ದಾರರೂ, ಆಗರ್ಭ ಶ್ರೀಮಂತರೂ, ಪರೋಪಕಾರಿಯೂ ಆಗಿದ್ದ ಜನಾಬ್ ಹಸನ್ ಕುಟ್ಟಿ ಹಾಜಿಯವರು ಧಾರ್ಮಿಕ ರಂಗದಲ್ಲಿ ಬಹಳ ಆಸಕ್ತಿ ಹೊಂದಿದ್ದರು.

ಹಾಗಾಗಿ ಉನ್ನತ ಶಿಕ್ಷಣ ಗಳಿಸುವ ವಿದ್ಯಾರ್ಥಿಗಳಿಗಾಗಿ ವಿದ್ವತ್ಪೂರ್ಣ ಧಾರ್ಮಿಕ ವಿದ್ವಾಂಸರ ಸಹಯೋಗದೊಂದಿಗೆ ಒಂದು ಪಳ್ಳಿ ದರ್ಸ್ ಸ್ಥಾಪಿಸುವ ಅಭಿಲಾಷೆ ಹೊಂದಿದ್ದರು.

ಅಷ್ಟರಲ್ಲಾಗಲೇ ಕುಂಞಾರುಣ್ಣಿ ಎಂದು ಕರೆಯಲ್ಪಡುತ್ತಿದ್ದ ಖಾಝಿ ಸಈದ್ ಮುಸ್ಲಿಯಾರ್ (ಖ.ಸಿ)ರೊಂದಿಗೆ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರಲ್ಲದೆ ಕಾಸರಗೋಡು ಜಿಲ್ಲೆಯ  ಕಿಝೂರಿನ ಪಯೊಟ್ಟ ಎಂಬ ಸ್ಥಳದಲ್ಲಿ ಖಾಝಿ ಸ‌ಈದ್ ಮುಸ್ಲಿಯಾರ್ (ಖ.ಸಿ) ನೇತೃತ್ವದಲ್ಲಿ ಒಂದು ಪಳ್ಳಿ ದರ್ಸ್ ಪ್ರಾರಂಭಿಸಿದರು.

ಕಿಝೂರ್'ನ ಇತಿಹಾಸದಲ್ಲಿ ಇದು ಮೊಟ್ಟಮೊದಲಿಗೆ ನಿರ್ಮಿಸಿದ ಪಳ್ಳಿ ದರ್ಸ್ ಆಗಿತ್ತು. ಪಳ್ಳಿ ದರ್ಸ್ ಪ್ರಾರಂಭವಾದ ನಂತರ ಮಹಾನರು 
ಕಿಝೂರಿನಲ್ಲಿ ಖಾಯಂ ಆಗಿ ವಾಸ್ತವ್ಯ ಹೂಡಿದರು.

ಉತ್ತರ ಕೇರಳದ ವಿದ್ವಾಂಸರಾದ ಅಲ್ಲಮಾ ಕಿಝೂರ್ ಇಬ್ರಾಹಿಂ ಮುಸ್ಲಿಯಾರ್ (ಖ.ಸಿ) ಕಾಸರಗೋಡು ಖಾಝಿಯಾಗಿದ್ದ ಹೆಸರಾಂತ ವಿದ್ವಾಂಸರಾದ ಖಾಝಿ ಅಬ್ದುಲ್ಲಾ ಹಾಜಿ (ಖ.ಸಿ) ಅವುಳಾಜಿ ತಂಙಳ್ (ಖ.ಸಿ) ಮೊದಲಾದ ವಿದ್ವಾಂಸರು ಈ ಪಳ್ಳಿ ದರ್ಸ್‌ನಲ್ಲಿ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡಿದ್ದಾರೆ.

ಕಳನಾಡ್ ರೈಲ್ವೆ ಸ್ಟೇಷನ್ನಿನ ಸಮೀಪದಲ್ಲಿರುವ ಅಂದಿನ ಚಿಕ್ಕ ಪಳ್ಳಿ ದರ್ಸ್'ಗೆ ದಶಕಗಳು ಕಳೆದರೂ ಜೀರ್ಣೋದ್ದಾರವಾಗದೆ ಇಂದೂ ಸಹ ಅಂದಿನಂತೆಯೇ ಇದೆ. ಅದರ ಮುಂಭಾಗದ ಪ್ರಾಂಗಣದಲ್ಲಿ ಪಳ್ಳಿ ದರ್ಸ್ ನಿರ್ಮಿಸಲು ನೆರವಾದ ಜನಾಬ್ ಹಸ್ಸನ್ ಕುಟ್ಟಿ ಹಾಜಿಯವರೊಂದಿಗೆ ಮಹಾನರಾದ ಸ‌ಈದ್ ಮುಸ್ಲಿಯಾರ್ (ಖ.ಸಿ)ರವರೂ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ಉತ್ತರ ಮಲಬಾರಿನ ಧಾರ್ಮಿಕ ರಂಗಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ ಸ‌ಈದ್ ಮುಸ್ಲಿಯಾರ್ (ಖ.ಸಿ) ರವರ ಸ್ಮರಣಾರ್ಥ 1971ರಲ್ಲಿ ಮರ್ಹೂಮ್ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿಯವರು ತಮ್ಮ ಸ್ವಗೃಹದಲ್ಲಿ ಒಂದು ದೀನಿ ಸಂಸ್ಥೆ ಆರಂಭಿಸಿ ಅದಕ್ಕೆ *"ಸ‌ಅದಿಯ್ಯ"* ಎಂದು ನಾಮಕರಣ ಮಾಡಿದ್ದರು.

ಹಾಗೆ ಸ‌ಈದ್ ಮುಸ್ಲಿಯಾರ್ (ಖ.ಸಿ) ಹೆಸರಿನೊಂದಿಗೆ ಕಲಟ್ರ ಅಬ್ದುಲ್ ಖಾದರ್ ಹಾಜಿಯವರು ಸಂಸ್ಥಾಪಿಸಿದ ಸ‌ಅದಿಯ್ಯಾ ಸಂಸ್ಥೆಯೇ ದಶಕಗಳ ನಂತರ ನೂರುಲ್ ಉಲಮಾ ಎಂ. ಎ. ಉಸ್ತಾದರ (ಖ:ಸಿ) ನೇತೃತ್ವದಲ್ಲಿ ಅಸಂಖ್ಯ ಧಾರ್ಮಿಕ ವಿದ್ವಾಂಸರನ್ನು ರೂಪಿಸಿ ಸಮಾಜಕ್ಕೆ ಸಮರ್ಥಿಸುತ್ತಿರುವ ಜಾಮಿಯಾ ಸ‌ಅದಿಯ್ಯ ಅರೇಬಿಯಾ ಎಂಬ ಹೆಸರಾಂತ ಅರೇಬಿಕ್ ಕಾಲೇಜ್ ಆಗಿದ್ದು ಪ್ರಖ್ಯಾತಿ ಗಳಿಸಿದ್ದು ಇದು ವಿಶ್ವ ದರ್ಜೆಯ ಅರೇಬಿಕ್ ಕಾಲೇಜ್‌ಗಳಲ್ಲೊಂದಾಗಿದೆ.

ಈ ಜಾಮಿಯಾ ಸ‌ಅದಿಯ್ಯಾ ಅರೇಬಿಕ್ ಕಾಲೇಜು ದೀನೀ ಸೇವೆಯಲ್ಲಿ ಐವತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಅಂದರೆ 2019ರ ಡಿಸೆಂಬರ್'ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸುವರ್ಣ ಮಹೋತ್ಸವವನ್ನು ಹಮ್ಮಿಕೊಂಡಿದ್ದು ಆ ಸಮಾರಂಭದಲ್ಲೇ ಈ ವರ್ಷದ ಸನದು ದಾನವೂ ನಡೆಯಲಿದೆ.

*ಸಅದಿಯ್ಯಾ ಗೋಲ್ಡನ್ ಜ್ಯೂಬಿಲಿ ಸನದುದಾನ ಮಹಾ ಸಮ್ಮೇಳನ: ಡಿಸೆಂಬರ್ 27, 28, 29. 2019*
*ಸಅದಬಾದ್ ದೆಳಿ, ಕಾಸರಗೋಡು.*
🔰🔰🔰🔰🔰🔰🔰

▪▪▪▪▪▪▪▪▪▪
*Sa-adiya Golden Jubilee*
2019 December 27, 28, 29
Saadabad, Deli, Kasaragod

*Whatsapp Group Link 7👇🏽*
https://chat.whatsapp.com/BtFHZFwOB8pHPbinQwWVxi

▪▪▪▪▪▪▪▪▪▪

No comments:

Post a Comment