Sunday, September 24, 2017

ಇತಿಹಾಸ ಪ್ರಸಿದ್ಧ ಯಮಾಮ ಯುದ್ಧ ಭಾಗ-05

🥗🥗🥗🥗🥗🥗🥗🥗🥗
⚔ *ಇತಿಹಾಸ ಪ್ರಸಿದ್ಧ*
    *ಯಮಾಮ ಯುದ್ಧ* ⚔
♻♻♻♻♻♻♻♻♻
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
_________________________
*ಚರಿತ್ರೆಯ ಪುಟಗಳ*
*ಅಂತರಾಳದಿಂದ*
➖➖➖➖➖➖➖➖➖
*ಭಾಗ* 0⃣5⃣
➖➖➖➖➖➖➖➖➖
ಮದುವೆ ಅತೀ ವಿಜೃಂಭಣೆಯಿಂದಲೇ ನಡೆಯಿತು.

ಆರು ತಿಂಗಳವರೆಗೆ ಅವರಿಬ್ಬರ ದಾಂಪತ್ಯ ಜೀವನವು ಸುಖಕರವಾಗಿ ಸಾಗಿತ್ತು.

ದಿನ ಕಳೆದಂತೆ *ಮಸೂದ್'*ನ ಕೈಯಲ್ಲಿರುವ ಹಣವೆಲ್ಲ ಮುಗಿಯುವ ಹಂತಕ್ಕೆ ತಲುಪಿತು...

ಒಂದು ದಿನ ಬೆಳಿಗ್ಗೆ ಮಸೂದ್ ಮಲಿಹ'ಳನ್ನು ಕರೆದು ಹೇಳಿದನು *"ಮಲಿಹ.... ನೋಡು ನನಗೊಮ್ಮೆ ಊರಿಗೆ ಹೋಗಬೇಕು.!"*

ಮಲಿಹ ಆಶ್ಚರ್ಯದಿಂದ ಕೇಳಿದಳು ಯಾಕೆ?

*ಮಸೂದ್*: ನಾನು ಕುಟುಂಬದವರೆಲ್ಲರನ್ನು ಬಿಟ್ಟು ವ್ಯಾಪಾರಕ್ಕೆ ಬಂದವನಲ್ಲವೇ..?
ಊರು ಬಿಟ್ಟು ಇವತ್ತಿಗೆ ಆರು ತಿಂಗಳಾಯಿತು.. ತಂದೆಯವರನ್ನು ಒಮ್ಮೆ ನೋಡಿ ಬರಬೇಕೆಂದು ಅನಿಸುತ್ತಿದೆ..

*ಮಲಿಹ* ನಿರಾಕರಿಸುತ್ತಾ ಹೇಳಿದಳು  *"ಬೇಡ.. ನೀವು ಹೋಗುವುದು ಬೇಡ.. ನೀವು ಹೋದರೆ ನಾನು ಒಂಟಿಯಾಗುವೆನು"*

*ಮಸೂದ್:* ಹೆಣ್ಣೇ..  ನನಗೆ ಹೋಗದಿರಲು ಸಾಧ್ಯವಿಲ್ಲ,
ನಾನು ಹೋಗಿ ಬಹು ಬೇಗನೆ ಮರಳಿ ಬರುವೆನು, ಹೆದರದಿರು ನೀನು ಎಂದು ಅವಳಿಗೆ ಧೈರ್ಯ ತುಂಬಲು ಶ್ರಮಿಸಿದನು..

ಮಲಿಹ ತನ್ನ ಏರುದ್ವನಿಯಲ್ಲಿ  ಬೇಡ ಎಂದಳು..!!

*ಮಸೂದ್:* ಈ ಗುಡಿಸಲಿನಂತಹ ಮನೆಯಲ್ಲಿ ವಾಸ ಮಾಡಿ ನಿನಗೆ ಸಾಕಗಿಲಿಲ್ಲವೇ? ದೊಡ್ಡ ಬಂಗಲೆಯಂತಹ ಮನೆಯಲ್ಲಿ ಜೀವಿಸಿದವನಾಗಿದ್ದೇನೆ ನಾನು..!! ನಾನು ಹೋಗಿ ಮರಳಿ ಬಂದ ಮೇಲೆ ಈ ಮನೆಯನ್ನು ಕೆಡವಿ ಹೊಸತೊಂದು ಅರಮನೆಯಂತಹ ಮನೆ ಕಟ್ಟಿಸಬೇಕು.. ಅದರಲ್ಲಿ ನಮಗೆ ರಾಜಕುಮಾರನಾಗಿಯೂ, ರಾಜಕುಮಾರಿಯಾಗಿಯೂ ಜೀವಿಸಬೇಕು..

*ಮಲಿಹ;* ಹಾಗಾದರೆ ನೀವು ಹೋಗಿ, ಯಾವಾಗ ಮರಳಿ ಬರುತ್ತೀರಿ..?

*ಮಸೂದ್:* ನಾನು ಊರಿಗೆ ತಲುಪಿದ ಕೂಡಲೇ ನನ್ನ ತಂದೆಯ ಕೈಯಿಂದ ನನ್ನ ಅವಕಾಶಗಳನ್ನು ಪಡೆದು ಬೇಗನೆ ಮರಳಿ ಬರುವೆನು. ನಾನು ಊರಿಗೆ ಹೋಗಿ ಪುನಃ ಮರಳಿ ಬರುವ ಸಮಯಾವಕಾಶ ನಿನ್ನಿಂದ ನನಗೆ ಬೇಕಾಗಿರುವುದು..
ನಾನು ನಿನ್ನನ್ನು ಬಿಟ್ಟು ಬೇರೆಲ್ಲಿಗೂ ಹೋಗಲಾರೆ ಎಂದು ಭರವಸೆ ಕೊಟ್ಟನು..

ಕೊನೆಗೆ ಮಲಿಹ ಹೋಗಲು ಸಮ್ಮತಿ ನೀಡಿದಾಗ ಮಸೂದ್ ಮನೆಯಂಗಳಕ್ಕೆ ಇಳಿದು ಹೊರಡಲನುವಾದನು..

ಅದ್ನಾನ್ ತನ್ನ ಅಳಿಯನನ್ನು ಯಾತ್ರೆ ಕಳುಹಿಸಲು ಅಗ್ನಿಯಲ್ಲಿ ಸೌದೆ ಇಟ್ಟು ಹೊತ್ತಿಸಿದರು. ಅವರು ಆರಾಧಿಸುವ ದೈವದ ಪ್ರೀತಿ ಸಂಪಾದಿಸಲಿಕ್ಕಾಗಿ ಈ ರೀತಿಯ ಸಂಪ್ರದಾಯ ಅವರಲ್ಲಿ ಅಂದು ಬೇರೂರಿತ್ತು..

ಯಾವುದೇ ತೊಂದರೆ ಇಲ್ಲದೆ ಮರಳಿ ಬರಲಿಕ್ಕಾಗಿ ಬೆಂಕಿಯೊಂದಿಗೆ ಪ್ರಾರ್ಥಿಸಿ ಬೀಳ್ಕೊಟ್ಟರು..

*ಮಸೂದ್* ದಿಜಿಲಾ ನದಿ ತೀರದಲ್ಲಿ ನಡೆದುಕೊಂಡು ಹೋಗುತ್ತಿರುವಾಗ.. ಕಣ್ಣೀರಿನಿಂದ ಹೆಪ್ಪು ಕಟ್ಟಿದ ಕಣ್ಣಿನೊಂದಿಗೆ ತನ್ನ ಕಣ್ಣಿನಿಂದ ಮರೆಯಾಗುವ ತನಕ *ಮಲಿಹ* 😰 ನೋಡುತ್ತಾ ನಿಂತಳು.

*ಮಸೂದ್* ನಡೆಯುತ್ತಾ ಬಹಳ ದೂರ ತಲುಪಿದಾಗ *ಅಹುವಾಸಿ*ಯಿಂದ ವ್ಯಾಪಾರಗಳನ್ನು ಮುಗಿಸಿ ಹಿಂದಿರುಗಿ ಹೋಗುವ  ವ್ಯಾಪಾರ ತಂಡದಲ್ಲಿದ್ದ ಒಬ್ಬರು ದಿಜಿಲ ನದಿಯ ಕಿನಾರೆಯಲ್ಲಿ ನಡೆದು ಹೋಗುವ ಮಸೂದ್'ನನ್ನು ನೋಡಿದರು.. ⤵

ಮುಂದುವರಿಯುವುದು..

✍ *ಗಫೂರ್ ಬಾಯಾರ್*
+974 6669 3010
*ಸಹಾಯ: ಅಕ್ಬರ್ ಪಿ.ಎ.*
🛡🛡🛡🛡🛡🛡🛡

No comments:

Post a Comment