Friday, November 24, 2017

☘☘☘☘☘☘☘☘☘☘☘☘          *ಪ್ರವಾದಿ ನಿಂದನೆಯ           ☘☘☘   ವ್ಯೂಹಾತ್ಮಕ ಇತಿಹಾಸ*   ☘☘☘☘☘☘☘☘☘☘☘☘☘

*﷽*

*ಭಾಗ*- 0⃣2⃣

ಇಸ್ಲಾಂನ ಪುನರುದಯ ತಾರುಣದಲ್ಲೇ ಕ್ರೈಸ್ತರು ಮತ್ತು ಯಹೂದಿಗಳು ದ್ವೇಷವನ್ನೇ ಅಸ್ತ್ರವನ್ನಾಗಿ ಇಸ್ಲಾಮಿನ ವಿರುದ್ದ ಪ್ರಯೋಗಿಸತೊಡಗಿದರು. ಅದರೆ ಇಸ್ಲಾಮಿನ ಸ್ಪಟಿಕ ಆದರ್ಶ, ಸಿದ್ದಾಂತ, ತಾತ್ವಿಕ ಪ್ರತಿಪಾದನೆಗಳಿಂದ ಪೇರ್ಶ್ಯಾ, ಶಾಂ ಮುಂತಾದ ಪ್ರದೇಶಗಳು ಇಸ್ಲಾಮಿಗೆ ಬಾಗಿಲು ತೆರದುಕೊಟ್ಟಿತು. ಜೂದರ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲೇ ಮುಹಮ್ಮದ್ ನಬಿಯವರ ಪ್ರತಿಪಾದನೆಗಳು ಅಸ್ತಿತ್ವವನ್ನು ಪಡೆದುಕೊಳ್ಳುವುದನ್ನು ಅರಿತಾಗ ಸಾಮ್ರಾಜ್ಯಶಾಹಿ ಶಕ್ತಿಗಳು ಹಲವು ಪಿತೂರಿಗಳನ್ನು ನಡೆಸಿದರು. ಅದರ ಪರಿಣಾಮವೆಂಬಂತೆ ಶತಮಾನಗಳವರೆಗೆ, ಕ್ರೂಸೇಡರ್‌ಗಳು ಇಸ್ಲಾಮಿನ ವಿರುದ್ಧ ದ್ವೇಷವನ್ನೇ ಆಯುಧವನ್ನಾಗಿ ಬಳಸಿದರು.

*ಆದರೆ ಈ ಎಲ್ಲಾ ಬಾಲಿಶ ಪ್ರಯತ್ನಗಳೂ ಅವರಿಗೆ ಕಹಿನೀರನ್ನೇ ಕುಡಿಸಿತೇ ವಿನಃ ಇಸ್ಲಾಮಿನ ತತ್ವಗಳು ಹಾಗೂ ಪ್ರವಾದಿಯವರ ಆದರ್ಶಗಳಿಗೆ ಯಾವುದೇ ಚ್ಯುತಿಯೂ ಬರಲಿಲ್ಲ. ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಮುಸ್ಲಿಮರನ್ನು ಅಧೀರಗೊಳಿಸಲು ಸಾಧ್ಯವಿಲ್ಲವೆಂದೂ, ಅವರು ಇಸ್ಲಾಮಿನ ವಿರುದ್ದ ನಡೆಯುವ ಬೌದ್ಧಿಕ ಯುದ್ಧದಲ್ಲಿ ಅಕ್ಷುಣಗೊಳ್ಳಲಾರರೆಂದೂ  ಅವರು ಅರಿತುಕೊಂಡರು. ಹೀಗಾಗಿ, ಮುಸ್ಲಿಮರ ಮತ್ತು ಇಸ್ಲಾಂ ಧರ್ಮದ ಬಗ್ಗೆ ಅನುಮಾನಗಳನ್ನು ಸೃಷ್ಟಿಸಲು  ಶ್ರಮಿಸಿದರು. ಅದೂ ವಿಫಲವಾಯಿತು.  ಕೊನೆಗೆ ಜಗತ್ತು ವಿಕಸಿತಗೊಂಡತೆ, ವಿಚಾರವಾದ ಉಚ್ರಾಯಗೊಂಡಂತೆ, ವೈಚಾರಿಕತೆ ಧಾರ್ಮಿಕ ತತ್ವಗಳ ಮೇಲೆ ಅಸ್ತಿತ್ವಬೆಳೆಸಿಕೊಂಡಂತೆ ಪ್ರವಾದಿಯವರ ತತ್ವಗಳನ್ನು ವಿಮರ್ಶಿಸಲು ಪ್ರಯತ್ನಿಸಿದರು. ಆದರೆ ಪ್ರವಾದಿಯವರದ್ದು ಪ್ರಶ್ನಾತೀತ ತತ್ವಗಳಾಗಿತ್ತು  ಎಂಬುದು ಎಲ್ಲರಿಗೂ ತಿಳಿದ ವಿಚಾರ. ಸಾರ್ವಕಾಲಿಕ ಮೌಲ್ಯಗಳಿದ್ದ ಪ್ರವಾದೀ ಪ್ರತಿಪಾದನೆಗಳು ಈಗಲೂ ವಿಜ್ಞಾನ ಕ್ಷೇತ್ರಕ್ಕೆ ಸವಾಲಾಗಿಯೇ ಉಳಿದಿದೆ. ಪ್ರವಾದಿಯವರ ಬದುಕು ಮತ್ತು ಆದರ್ಶಗಳು ಪ್ರತಿಯೊಂದು ಕಾಲಕ್ಕೂ ಅನುಕರಣಾಯೋಗ್ಯವಾಗಿದೆ. ಮತ್ತು ಕಲ್ಮಶ ರಹಿತವಾಗಿದೆ. ಅವುಗಳಲ್ಲಿ ವಿಮರ್ಶನೆಗೆ ಆಸ್ಪದವೇ ಇಲ್ಲ*

ಪ್ರಪಂಚದ ಮೇಲೆ ಆಧಿಪತ್ಯ ಸ್ಥಾಪಿಸಿ ಸಾಮ್ರಾಜ್ಯ ವಿಸ್ತರಣೆ ನಡೆಸುವ  ಅವರ ಗುರಿಗೆ ಇಸ್ಲಾಮಿನ ಪ್ರತಿಪಾದಿತ ತತ್ವ ಹಾಗೂ ವಿಚಾರಗಳು ಕಗ್ಗಂಟಾಗಿ ಪರಿಣಮಿಸಿತು. ಇದು ಅವರಲ್ಲಿ ಧಾರ್ಮಿಕ ಮತ್ಸರವನ್ನು ಸೃಷ್ಟಿಸಿತು. ಆ ಮೂಲಕ ಇಸ್ಲಾಮಿನ ತತ್ವ ಹಾಗೂ ಸಿದ್ದಾಂತಗಳನ್ನು ವಿಮರ್ಶಿಸುವ ಸಲುವಾಗಿ ತೇಜೋವಧೆ, ಅಪಹಾಸ್ಯ ನಡೆಸತೊಡಗಿದರು.  ಅವರು ಈ ಧ್ವೇಷಾಸ್ತ್ರವನ್ನು ಪ್ರವಾದಿಯವರ ಮೇಲೆ‌ ಪ್ರಯೋಗಿಸತೊಡಗಿದರು. ಪ್ರವಾದಿಯವರ ತತ್ವ ಹಾಗೂ ಪ್ರತಿಪಾದಿತ ಸಿದ್ದಾಂತಗಳ ಮೇಲೆ ದಾಳಿ ನಡೆಸಿದರು. ಇವು ಅದರ ಸೀಮೆಯನ್ನು ದಾಟಿ ಪರಿಹಾಸ್ಯದ ಪರಾಕಾಷ್ಠೆಗೆ ತಲುಪಿದಾಗ ಪ್ರವಾದಿಯವರ ನಿಂದನೆಗಳಾದವು. ಉತ್ಕೃಷ್ಟ‌ ಬದುಕಿನ ಬಗ್ಗೆ ಅವಹೇಳನವಾದವು..

 *(ಮುಂದುವರಿಯುವುದು)*

✍🏻  *ಟಿ.ಎಂ ತಂಬಿನಮಕ್ಕಿ*

No comments:

Post a Comment