🍁🍁🍁🍁🍁🍁🍁🍁🍁🍁🍁🍁 *ಕೋಮು ಸೌಹಾರ್ದಕ್ಕೆ ಪ್ರವಾದಿ 🍁 🍁 ಸಂದೇಶ* 🍁🍁🍁🍁🍁🍁🍁🍁🍁🍁🍁🍁
ಪ್ರವಾದಿ(ಸ)ರು ಅನ್ಯಧರ್ಮೀಯರೊಂದಿಗೆ ಬೇರ್ಪಟ್ಟು ನಿಂತು, ಅನುಯಾಯಿಗಳನ್ನು ಸಂಕುಚಿತ ಸಮೂಹವನ್ನಾಗಿ ಬದಲಾಯಿಸಿದರೆಂದು ಕೆಲವು ಪಾಶ್ಚಾತ್ಯರು ಆರೋಪಿಸುವುದುಂಟು. ಅನ್ಯ ಸಂಸ್ಕೃತಿಗಳೊಂದಿಗೆ ಅತ್ಯಂತ ಕಠಿಣ ಅಸಹಿಷ್ಣುತೆ ನೆಬಿಯವರಿಗಿತ್ತು ಎಂಬ ಧಾರಣೆ ಅಭಿನವ ನವೀನವಾದಿಗಳು ಪ್ರಚಾರ ಪಡಿಸಲು ಶ್ರಮಿಸಿದ್ದಾರೆ. ನಿಜಕ್ಕೂ ಇಷ್ಟೊಂದು ಧರ್ಮ ನಿರಪೇಕ್ಷತೆ ಮತ್ತು ಸೌಹಾರ್ದತೆ ಪ್ರಕಟಿಸಿದ ಮತ್ತೊಂದು ಧರ್ಮನೇತಾರನಿಲ್ಲ. ಅನ್ಯಧರ್ಮೀಯರೊಂದಿಗೆ ಅವರು ತೋರಿಸಿದ ವಿಶಾಲ ಮನೋಭಾವ ಇತಿಹಾಸ ಗ್ರಂಥಗಳಲ್ಲಿ ಧಾರಾಳವಾಗಿ ಕಾಣಬಹುದಾಗಿದೆ.
ಇಸ್ಲಾಮಿಕ ರಾಷ್ಟ್ರಗಳಲ್ಲಿರುವ ಅಮುಸ್ಲಿಮರಲ್ಲಿ ಆಶ್ರಿತರು(ದಿಮ್ಮಿಗಳು) ಮತ್ತು ನಿರಾಶ್ರಿತರು ಎಂಬ ಎರಡು ವಿಭಾಗಗಳಿವೆ. ಇತರ ರಾಷ್ಟ್ರಗಳಿಂದ ಪಲಾಯನಗೈದು ತಲುಪುವ ನಿರಾಶ್ರಿತರು ಮತ್ತು ಸ್ಥಿರವಾಸಿಗಳಾದ ದಿಮ್ಮಿಗಳು ಸಮಾನವಾಗಿ ಧರ್ಮ ಸ್ವಾತಂತ್ರ್ಯ ಮತ್ತು ಸಂರಕ್ಷಣೆಗೆ ಅರ್ಹರಾಗಿದ್ದಾರೆ. ಕೆಲವರ ಅಭಿಪ್ರಾಯ ’ದಿಮ್ಮಿಗಳು’ ಎಂಬ ಪದ ನಿಂದ್ಯತೆಯನ್ನು ಸೂಚಿಸುವುದೆಂದಾಗಿದೆ. ಆದರೆ ಇದರ ಅರ್ಥ ’ಪ್ರವಾದಿಯ ಸಂರಕ್ಷಣೆಯಲ್ಲಿರುವವರು’ ಎಂದಾಗಿದೆ. ಪ್ರವಾದಿ(ಸ) ಪ್ರತಿಯೊಂದು ಗವರ್ನರರಿಗೆ ನೀಡಿದ್ದ ನಿರ್ದೇಶಗಳಿಂದಲೇ ಇದು ವ್ಯಕ್ತವಾಗುತ್ತದೆ. ನೆಬಿ(ಸ)ರು ಪ್ರತೀ ಗವರ್ನರರಲ್ಲೂ ಹೇಳಿದ್ದರು, ’ನಿನ್ನನ್ನು ಆಶ್ರಯಿಸುವ ಅಮುಸ್ಲಿಮರಿಗೆ ನೀನು ಅಲ್ಲಾಹನ ಮತ್ತು ನೆಬಿಯವರ ಸಂರಕ್ಷಣೆ ನೀಡಬೇಕು. ಅವರನ್ನು ನಿನ್ನ ಅನುಯಾಯಿಗಳಂತೆ ಕಾಣಬೇಕು. ಅವರೊಂದಿಗಿರುವ ಅನೀತಿಯು ಸ್ವಂತ ಅನುಯಾಯಿಗಳೊಂದಿಗಿರುವ ವಂಚನೆಗಿಂತಲೂ ಭಯಾನಕವಾಗಿದೆ’. (ಮುಸ್ಲಿಂ ೨/೧೩೫೭-೫೮)
ಪ್ರಥಮ ಖಲೀಫ ಅಬೂಬಕ್ಕರ್(ರ) ರವರು ನಜ್‌ರಾನ್ ನಿವಾಸಿಗಳಿಗೆ ಬರೆದ ಪತ್ರ ಗಮನಾರ್ಹವಾಗಿದೆ. ’ಅಮುಸ್ಲಿಮರಿಗೆ ತಿರುನೆಬಿ(ಸ)ರ ಸಂರಕ್ಷಣೆ ನೀಡಬೇಕು. ಅವರ ಜಂಗಮ ಸ್ಥಾವರ ಸೊತ್ತುಗಳು, ಆರಾಧನಾಲಯಗಳು ಮತ್ತು ಪುರೋಹಿತರು ಇವುಗಳೆಲ್ಲವೂ ಸುರಕ್ಷಿತವಾಗಿರಬೇಕು. ಅವರಿಗೆ ತೊಂದರೆ ಮತ್ತು ನಾಶ ನಷ್ಟಗಳಿರಬಾರದು’ (ಕಿತಾಬುಲ್ ಖರಾಜ್ ೭೯). ಇದೇ ರೀತಿಯಲ್ಲಿ ಹಝ್ರತ್ ಉಮರ್(ರ) ಮತ್ತು ಅಲಿಯ್ಯ್(ರ) ರವರ ಪತ್ರಗಳಿವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಅವರು ಇತರ ಪ್ರಜೆಗಳಂತೆಯೇ ಆಗಿರುವರು. ಇಮಾಂ ಖಸಾಈ(ರ) ಹೇಳುತ್ತಾರೆ, ಅವರು ಗುಲಾಮರಲ್ಲ. ಸುರಕ್ಷಿತರಾದ ಸ್ವತಂತ್ರ ಪ್ರಜೆಗಳಾಗಿದ್ದಾರೆ.(ಕಿತಾಬುಲ್ ಅಂವಾಲ್ ೧೫೦)
ಆಂಗ್ಲೇಯ ಇತಿಹಾಸಕರನಾದ ರೊನಾಲ್ಡೊ ಇದನ್ನು ಪ್ರತ್ಯಕ್ಷವಾಗಿ ಅಂಗೀಕರಿಸುವುದಾಗಿ ಕಾಣಬಹುದು: ಇಸ್ಲಾಮಿಕ ಆಡಳಿತ ಕೂಟವು ಎಲ್ಲಾ ಪ್ರಜೆಗಳ ಮೇಲೂ ಕ್ರೈಸ್ತವತೆಯನ್ನು ಕಡ್ಡಾಯಗೊಳಿಸಿದ ರೊಮನ್ ಸಾಮ್ರಾಜ್ಯತ್ವದ ಹಾಗಲ್ಲ. ಬದಲಾಗಿ ಎಲ್ಲಾ ಧರ್ಮದ ಅಲ್ಪಸಂಖ್ಯಾತರನ್ನೂ ಅರಬಿಗಳು ಅಂಗೀಕರಿಸಿ ಸ್ವಾತಂತ್ರ್ಯ ನೀಡಿದರು. ಕ್ರಿಶ್ಚಿಯನ್ನರು, ಯಹೂದಿಯರು ಮತ್ತು ಸೌರಾಷ್ಟ್ರ ಧರ್ಮೀಯರೆಲ್ಲರೂ ಈ ಸ್ವಾತಂತ್ರ್ಯವನ್ನು ಅನುಭವಿಸಿದವರಾಗಿದ್ದರು.
ಸೀನಾ ಪರ್ವತದ ಸಮೀಪವಿರುವ ಸೈಂಟ್ ಕಾತರೀನ್ ಮಠದ ಪುರೋಹಿತರಿಗೆ ಮತ್ತು ಎಲ್ಲಾ ಕ್ರಿಶ್ಚಿಯನ್ನರಿಗೆ ಹಿಜ್‌ರ ೬ನೇ ವರ್ಷದಲ್ಲಿ ಒಂದು ವ್ಯವಸ್ಥೆಯನ್ನು ಅಂಗೀಕರಿಸಿ ಕೊಡಲಾಯಿತು. ಅದು ಇಂದೂ ವಿಶಾಲವಾದ ಸಹಿಷ್ಣುತೆಯ ಒಂದು ಸ್ಮಾರಕವಗಿದೆ. ಸಾರ ಸಂಪೂರ್ಣವಾದ ಇತಿಹಾಸವೂ ಆಗಿದೆ.
ಮಾನವೀಯತೆ:
ಖುರ್‌ಆನಿನ ಸಂಬೋಧನೆಯು ಮನುಷ್ಯನೆಂಬ ನೆಲೆಯಲ್ಲಾಗಿದೆ. ಅಲ್ಲಾಹನು ಮಾನವನನ್ನು ಇತರ ಜೀವಜಂತುಗಳಿಗಿಂತಲೂ ಆದರಿಸಿದ್ದಾನೆ. ’ನಾವು ಆದಂ ಸಂತತಿಗಳನ್ನು ಆದರಿಸಿದ್ದೇವೆ. ನೆಲ ಮತ್ತು ಜಲಗಳಲ್ಲಿ ನಾವು ಅವನ ಮೇಲೆ ಜವಾಬ್ದಾರಿ ಹೊರಿಸಿದ್ದೇವೆ. ನಾವು ಅವರಿಗೆ ಒಳ್ಳೆಯ ವಿಭವಗಳನ್ನು ನೀಡಿದ್ದೇವೆ. ಅವರನ್ನು ಇತರ ಸೃಷ್ಟಿಗಳಿಗಿಂತಲೂ ಉತ್ಕೃಷ್ಟರನ್ನಾಗಿ ಮಾಡಿದ್ದೇವೆ’. ಈ ರೀತಿಯ ಸೂಕ್ತಗಳು ಖುರ್‌ಆನಿನಲ್ಲಿ ಇನ್ನೂ ಹಲವಿದೆ.
’ಮನುಷ್ಯರೆಲ್ಲರೂ ಒಂದೇ’ ಎಂಬುವುದು ಮಾವೇಲಿಯ ಆಡಳಿತವನ್ನು ಕುರಿತು ಇರುವ ಐತಿಹ್ಯವಾಗಿದೆಯಾದರೂ ಇಸ್ಲಾಮಿಕ ಆಡಳಿತದಲ್ಲಿ ಮನುಷ್ಯರಿಗೆ ಅದು ಲಭ್ಯವಾಗಿತ್ತು ಎಂದಾಗಿದೆ ವಾಸ್ತವಿಕತೆ. ಅಲ್ಲಾಹನು ಖಡಾಖಂಡಿತವಾಗಿ ಈ ಅವಕಾಶ ಸಮತ್ವವನ್ನು ಸಾರಿ ಹೇಳುತ್ತಾನೆ. ’ಮನುಷ್ಯರೇ, ನಿಮ್ಮನ್ನು ನಾನು ಒಂದು ಗಂಡು ಮತ್ತು ಹೆಣ್ಣಿನಿಂದ ಸೃಷ್ಟಿಸಿದೆನು. ನೀವು ಪರಸ್ಪರ ಗುರುತಿಸಲು ಬೇಕಾಗಿ ನಿಮ್ಮನ್ನು ಹಲವು ಗೋತ್ರ ಮತ್ತು ವಿಭಾಗಗಳನ್ನಾಗಿ ಮಾಡಿದೆನು. ನಿಜವಾದ ಉತ್ಕೃಷ್ಟನು ಭಕ್ತನು ಮಾತ್ರವಾಗಿದ್ದಾನೆ. ಅಲ್ಲಾಹನು ಸರ್ವಜ್ಞನೂ ಸರ್ವವ್ಯಾಪ್ತಿಯೂ ಆಗಿದ್ದಾನೆ’.
ತಿರುನೆಬಿ(ಸ)ರವರು ಹಿಜ್‌ರ ೧೦ನೇ ವರ್ಷದಲ್ಲಿ ವಿದಾಯ ಭಾಷಣ ನಡೆಸಿದಾಗಲೂ ಇದನ್ನೇ ಘೋಷಿಸಿದರು. ’ತಿಳಿಯಿರಿ, ನಿಮ್ಮೆಲ್ಲರ ಒಡೆಯನು ಒಬ್ಬನಾಗಿದ್ದಾನೆ. ನೀವೆಲ್ಲರೂ ಒಂದು ತಂದೆಯ ಮಕ್ಕಳಾಗಿದ್ದೀರಿ. ತಿಳಿಯಿರಿ, ಅರಬಿಗೆ ಅನರಬಿಗಿಂತಲೂ ಸ್ಥಾನವಿಲ್ಲ. ಅನರಬಿಗೆ ಅರಬಿಗಿಂತಲೂ ಸ್ಥಾನವೂ ಇಲ್ಲ. ಕರಿಯನಿಗೂ ಬಿಳಿಯನಿಗೂ ಪ್ರತ್ಯೇಕ ಸ್ಥಾನವಿಲ್ಲ. ಸೂಕ್ಷ್ಮತೆ ಮತ್ತು ಭಯಭಕ್ತಿಯೇ ವಿನ: ಯಾವುದೇ ಸ್ಥಾನವಿಲ್ಲ. ನಾನಿದೆಲ್ಲವನ್ನೂ ನಿಮಗೆ ತಿಳಿಸಿಕೊಡಲಿಲ್ಲವೇ…..’(ಮುಸ್‌ನದ್ ಅಹ್‌ಮದ್ ೧೨/೨೨೬).
ಅನ್ಯಧರ್ಮೀಯರ ವೇದ ಗ್ರಂಥಗಳೊಂದಿಗೂ ಪ್ರವಾದಿ(ಸ) ರವರು ಗೌರವ ತೋರಿದ್ದರು. ಅವರ ವೇದ ಗ್ರಂಥಗಳನ್ನು ನಿಂದಿಸಬಾರದೆಂದೂ ಪ್ರವಾದಿ(ಸ)ರು ಆಜ್ಞಾಪಿಸಿದ್ದರು. ’ನೀವು ಕ್ರಿಶ್ಚಿಯನ್ ಮತ್ತು ಯಹೂದಿಗಳನ್ನು ನಂಬಬೇಡಿರಿ. ಅವರೊಂದಿಗೆ ಅವಿಶ್ವಾಸವೂ ಬೇಡ. ಅವರಲ್ಲಿ ನೀವು ಹೇಳಬೇಕಾದದ್ದು, ಅಲ್ಲಾಹು ನಮಗೂ ನಿಮಗೂ ಅವತೀರ್ಣಗೊಳಿಸಿದ್ದನ್ನು ವಿಶ್ವಾಸವಿರಿಸುತ್ತೇವೆ ಎಂದಾಗಿದೆ’.(ಬುಖಾರಿ ೩/೧೬೩).
ಮುಸ್‌ನದ್ ಅಹ್‌ಮದಿನಲ್ಲೂ ಈ ಅರ್ಥದಲ್ಲಿರುವ ಹದೀಸನ್ನು ಕಾಣಬಹುದು. ಇಮಾಂ ಕಿರ್ಮಾನೀ(ರ) ಹೇಳುತ್ತಾರೆ, ’ನೆಬಿಯವರ ಈ ಹದೀಸಿನ ಪ್ರಕಾರ ಪ್ರವಾದಿಗಳಿಗೆ ಅವತೀರ್ಣಗೊಂಡ ಎಲ್ಲಾ ವೇದಗಳಲ್ಲೂ ವಿಶ್ವಾಸವಿರಿಸಬೇಕು. ಗ್ರಂಥ ಕ್ರೋಢೀಕರಣ ಮಾಡಿದವರು ನಿರ್ಮಿಸಿದ ತಪ್ಪುಗಳು ಯಾವುದೆಂದು ಕಂಡುಹಿಡಿಯುವುದು ಹೆಚ್ಚು ಶ್ರಮದಾಯಕವಾಗಿದೆ. ಆದರೂ ನಾವು ಅವರ ಮೇಲೆ ಅಪನಂಬಿಕೆಯಿಡಬಾರದು. ಆ ಗ್ರಂಥಗಳಲ್ಲಿರುವ ದೋಷಗಳಲ್ಲಿ ಬಾದ್ಯಸ್ಥರಲ್ಲದ ಹಾಗೆ ಅವರಂತೆ ಅವುಗಳನ್ನು ಅಂಗೀಕರಿಸಬಾರದು. ಆ ಗ್ರಂಥಗಳಲ್ಲಿ ಯಾಥಾರ್ಥ್ಯವಿರಲೂ ಸಾಧ್ಯತೆಯಿದೆ. ಆ ದಿಸೆಯಲ್ಲಿ ಆ ವೇದಗಳನ್ನು ನಾವು ತಿರಸ್ಕರಿಸಬಾರದು’(ತಫ್‌ಸೀರುಲ್ ಕಿರ್ಮಾನೀ ೧೩/೧೪)
ಅನ್ಯಧರ್ಮೀಯರ ದೈವಗಳನ್ನು ಮತ್ತು ವಿಗ್ರಹಗಳನ್ನು ಆಕ್ಷೇಪಿಸುವುದನ್ನು ಪ್ರವಾದಿ(ಸ)ರು ವಿರೋಧಿಸಿದ್ದಾರೆ. ಪ್ರವಾದಿ(ಸ)ರು ಮನುಷ್ಯನನ್ನು ಮತ್ತು ಅವನು ಗೌರವಿಸುವುದನ್ನು ಅಂಗೀಕರಿಸಿದ್ದಾರೆ. ಅಲ್ಲಾಹು ಹೇಳುವನು, ’ಅಲ್ಲಾಹನನ್ನಲ್ಲದೆ ಆರಾಧಿಸುವವರನ್ನು ನೀವು ಆಕ್ಷೇಪಿಸಬಾರದು. ಆಗ ಅವರು ವಿದ್ವೇಷದಿಂದ ಅಜ್ಞತೆಯ ಕಾರಣ ಅಲ್ಲಾಹನನ್ನು ಆಕ್ಷೇಪಿಸುವರು. ಎಲ್ಲಾ ಸಮೂಹಕ್ಕೂ ಅವರವರ ಪ್ರವೃತ್ತಿಗಳನ್ನು ನಾವು ಅಂದವಾಗಿಸಿದೆವು. ಎಲ್ಲರ ಮರಳುವಿಕೆಯೂ ಅಲ್ಲಾಹನ ಬಳಿಗಾಗಿವೆ. ಅವರು ಏನನ್ನೆಲ್ಲಾ ಮಾಡಿದ್ದರೆಂದು ಅವರಿಗೆ ಆಗ ತಿಳಿಸಲಾಗುವುದು’. ಇಮಾಂ ಖುರ್ತುಬಿ ಈ ಸೂಕ್ತದ ವಿವರಣೆಯಲ್ಲಿ ಅನ್ಯಧರ್ಮೀಯರ ವಿಗ್ರಹ ಮತ್ತು ಶಿಲುಬೆಗಳನ್ನು ನಿಂದಿಸಬಾರದೆಂದು ಸ್ಪಷ್ಟಪಡಿಸುತ್ತಾರೆ.
ಪ್ರವಾದಿ(ಸ)ರು ಪೂರ್ವಿಕ ಪ್ರವಾದಿಗಳನ್ನು ಹೊಗಳಿ ಗೌರವಿಸಿದ್ದಾರೆ. ಯಹೂದ್ಯರು ಆಶೂರಾ ದಿನದಂದು ವ್ರತ ಆಚರಿಸುವುದನ್ನು ಕಂಡಾಗ ತನ್ನ ಅನುಯಾಯಿಗಳೊಂದಿಗೂ ವ್ರತ ಆಚರಿಸಿ ಮೂಸಾ ನೆಬಿ(ಅ)ರನ್ನು ಗೌರವಿಸಲು ಆಜ್ಞಾಪಿಸಿದ್ದರು. ಯೋನಾ ಪ್ರವಾದಿ ಜೋಸಫ್(ಯೂಸುಫ್-ಅ) ಮತ್ತು ಯೇಶು(ಈಸಾ-ಅ)ರವರನ್ನು ಕುರಿತು ನೆಬಿ(ಸ)ರ ಪ್ರಕೀರ್ತನೆಗಳು ಸುವ್ಯಕ್ತವಾಗಿದೆ. ’ಯೇಶುವಿನೊಂದಿಗೆ ಇಹ ಮತ್ತು ಪರದಲ್ಲಿ ಅತ್ಯಧಿಕ ಬಂಧವುಳ್ಳವನು ನಾನಾಗಿದ್ದೇನೆ. ಎಲ್ಲಾ ಪ್ರವಾದಿಗಳೂ ಸಹೋದರರಾಗಿದ್ದಾರೆ. ಮಾತೆಯರು ಹಲವಿರಬಹುದು, ಆದರೆ ಧರ್ಮ ಒಂದೇ ಆಗಿದೆ’.
ಒಂದು ಯಹೂದ್ಯರ ಶವಶರೀರವನ್ನು ಹೊತ್ತುಕೊಂಡು ಹೋಗುವುದನ್ನು ಕಂಡಾಗ ನೆಬಿ(ಸ)ರು ಎದ್ದು ನಿಂತರು. ಅನುಚರರಲ್ಲಿ ಒಬ್ಬರು ಕೇಳಿದರು, ’ಅದು ಯಹೂದ್ಯನ ಶವವಲ್ಲವೇ?’ ನೆಬಿ(ಸ) ಪ್ರತಿಕ್ರಿಯಿಸಿದರು, ’ಅವನೂ ಮನುಷ್ಯನು ತಾನೇ?’(ಬುಖಾರಿ ೩/೨೨೨೨) ಈ ಹದೀಸ್ ಇತರ ಸ್ಥಳಗಳಲ್ಲೂ ಕಾಣಬಹುದು. ಪ್ರವಾದಿ(ಸ)ರವರು ಮಾನವೀಯತೆಯನ್ನು ಎತ್ತಿಹಿಡಿದವರಾಗಿದ್ದರು. ಮನುಷ್ಯರೆಂಬ ನೆಲೆಯಲ್ಲಿ ಎಲ್ಲಾ ಧರ್ಮೀಯರನ್ನೂ ಅರ್ಥೈಸಿಕೊಳ್ಳಲಿರುವ ವಿಶಾಲ ಮನೋಭಾವವನ್ನು ಅವರು ತೋರ್ಪಡಿಸಿದರು. ಅದರಲ್ಲಿ ಎಳ್ಳಷ್ಟೂ ವಿವೇಚನೆ ಕಾಣಿಸಲಿಲ್ಲ. ಇಲ್ಲೆಲ್ಲಾ ನಾವು ಕಾಣುವುದು ಉದಾತ್ತ ಮಾನವಿಕತೆಯ ಉತ್ತಮ ನಿದರ್ಶನವನ್ನಾಗಿದೆ.
ಧರ್ಮ ಸ್ವಾತಂತ್ರ್ಯ:
ಪ್ರವಾದಿ(ಸ)ರ ಜೀವನ ಚರಿತ್ರೆಯಲ್ಲಿ ಬಲಾತ್ಕಾರವಾಗಿ ಮತಾಂತರಗೊಳಿಸಿದ್ದನ್ನು ಎಲ್ಲಿಯೂ ಕಾಣಲಾರದು. ’ಜಿಝ್‌ಯ’ವು ಮುಸ್ಲಿಮರಿಂದ ಝಕಾತ್ ಪಡೆಯುವ ಹಾಗಿರುವ ಋಣಭಾದ್ಯತೆ ಮಾತ್ರವಾಗಿದೆ. ’ದೀನಿನಲ್ಲಿ ಬಲಾತ್ಕಾರವಿಲ್ಲ’ ಎಂಬ ಸೂಕ್ತವು ಅವತೀರ್ಣಗೊಂಡದ್ದು ಪುತ್ರರು ಅವಿಶ್ವಾಸಿಗಳಾದ ಪಿತರನ್ನು ಬಲಾತ್ಕಾರವಾಗಿ ಮತಾಂತರಗೊಳಿಸಲು ಶ್ರಮಿಸಿದ ಸಂದರ್ಭದಲ್ಲಾಗಿತ್ತೆಂದು ವಾಹಿದಿ ಅಸ್‌ಬಾಬುನ್ನುಸೂಲಿ ನಲ್ಲಿ ಉದ್ಧರಿಸಲ್ಪಟ್ಟಿದೆ. ಸ್ವಂತ ಮಕ್ಕಳನ್ನೂ ಸಹ ಧರ್ಮದ ಹೆಸರಿನಲ್ಲಿ ಬಲಾತ್ಕಾರಗೊಳಿಸಬಾರದೆಂದು ಹೇಳುವ ಪ್ರವಾದಿ ಚರ‍್ಯೆ ಎಷ್ಟೊಂದು ಉತ್ಕೃಷ್ಟವಾಗಿದೆ.
ಮನ್ಸೂರ್ ರಾಜ ಖಲ್ಲಾವ್ ಗ್ರಾಮವನ್ನು ವಶಪಡಿಸಿಕೊಂಡು ಆ ಗ್ರಾಮವಾಸಿಗಳನ್ನು ಬಲತ್ಕಾರದಿಂದ ಇಸ್ಲಾಮಿಗೆ ಮತಾಂತರಗೊಳಿಸಿದಾಗ ಆ ಕಾಲದ ಮುಸ್ಲಿಂ ಪಂಡಿತರು ರಾಜನನ್ನು ವಿಚಾರಣೆಗೊಳಪಡಿಸಿದರು. ಅವರಿಗೆ ಮರುಚಿಂತನೆಗೆ ಅವಕಾಶ ನೀಡಲು ರಾಜನಲ್ಲಿ ಭಿನ್ನಯಿಸಿದರು. ನಂತರ ಹಲವರೂ ಪೂರ್ವ ಧರ್ಮಕ್ಕೆ ಮರಳಿದರು. (ಬಿದಾಯ ವನ್ನಿಹಾಯ ೧೭/೫೭೩-೭೭)
ಇಟಲಿಯನ್ ಪಂಡಿತನಾದ ಡಾ. ಲೋರೋ ವಾಚ್ ಪ್ರಾಲಿರಿ ಇದನ್ನು ಯಾವುದೇ ಮುಚ್ಚುಮರೆ ಇಲ್ಲದೆ ಅಂಗೀಕರಿಸುತ್ತಾರೆ. ಅವರು ಈ ರೀತಿ ಹೇಳುತ್ತಾರೆ ಮುಸ್ಲಿಮರು ರಾಷ್ಟ್ರಗಳನ್ನು ವಶಪಡಿಸಿಕೊಂಡದ್ದು ಅನ್ಯ ಧರ್ಮಿಯರಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ ನಂತರ ಮಾತ್ರವಾಗಿದೆ.
ಗೋಸ್ತಾಫ್ ಲೋಪನ್ ಹೇಳುತ್ತಾರೆ ಖುಲಫಾಗಳ ಕಾಲದಿಂದಲೇ ಕ್ರೈಸ್ತ ಮತ್ತು ಯಹೂದ್ಯರು ಆರಾಧನೆ ಮತ್ತು ಧರ್ಮಚಾರಗಳನ್ನು ಪೂರ್ಣ ಸಾತಂತ್ರ್ಯದಿಂದಲೇ ನಿರ್ವಹಿಸುತ್ತಿದ್ದರು. ಅವರು ಇನ್ನೊಂದೆಡೆ ಹೇಳುತ್ತಾರೆ. ಮುಹಮ್ಮದ್ (ಸ) ಯಹೂದ್ಯ ಮತ್ತು ಕ್ರೈಸ್ತರಿಗೆ ನೀಡಿದ ಸ್ವಾತಂತ್ರ್ಯ ಅಪಾರವಾಗಿದೆ. ಅದಕ್ಕೂ ಮೊದಲು ಯಾವುದೇ ಧರ್ಮ ಸ್ಥಾಪಕರು ಹೀಗಿರಲಿಲ್ಲ. ಅವರ ಅನುಯಾಯಿಗಳು ಇದೇ ರೀತಿಯಾಗಿದ್ದಾರೆ. ಇತಿಹಾಸವನ್ನು ಚೆನ್ನಾಗಿ ಅಧ್ಯಯನ ಮಾಡಿದ ಯುರೋಪಿಯನ್ ಪಂಡಿತರು ಇದನ್ನಂಗೀಕರಿಸುತ್ತಾರೆ.
ಓರಿಯಂಟಲಿಸ್ಟ್ ಪಂಡಿತನಾದ ತೋಮಸ್ ಆರ್‌ನೋಡ್ ಹೇಳುತ್ತಾರೆ. ಮುಸ್ಲಿಮರು ಯಾವುದೇ ಧರ್ಮನುಯಾಯಿಗಳನ್ನು ಉಚ್ಚಾಟಿಸಲು ಶ್ರಮಿಸಲಿಲ್ಲ. ಸ್ಪೈನಿನಿಂದ ಇಸ್ಲಾಮನ್ನು ನಿರ್ನಾಮ ಮಾಡಲು ಫೆರ್ಡಿನಾಂಡ್ ಮತ್ತು ಇಸಬಲ್ಲ ಹಾಗೂ ಫ್ರಾಸ್ನಿನ ಪ್ರೋಟಸ್ವೆಂಟಿಗೆದುರಾಗಿ ಲೂಯಿಸ್ ೧೪ ಅನುವರ್ತಿಸಿದ ರೀತಿಗಳನ್ನು ಮುಸ್ಲಿಮರು ಅನುಕರಿಸಿದ್ದರೆ ಕ್ರೈಸ್ತ ಧರ್ಮವು ನಾಮಾವಶೇಷವಾಗಬಹುದಿತ್ತು. ಇಸ್ಲಾಮಿಕ ದೇಶಗಳಲ್ಲಿ ಸಿನಗೋಗುಗಳು (ಯಹೂದ್ಯ ಆರಾಧನಾಲಯ) ಮತ್ತು ಚರ್ಚುಗಳು ಯಾವುದೇ ಹಾನಿಯಿಲ್ಲದೆ ನೆಲೆಗೊಲ್ಲುತ್ತಿರುವುದು ಇಸ್ಲಾಮಿನ ಸಹಿಷ್ಣುತೆಯ ಜ್ವಲಂತ ನಿದರ್ಶನವಾಗಿದೆ. ತುರ್ಕಿಗಳು ಪ್ರಜೆಗಳಿಗೆ ನೀಡುತ್ತಿರುವ ಸಂರಕ್ಷಣೆಯಿಂದ ಅವರ ಆಡಳಿತ ಇಟಲಿಯಲ್ಲೂ ಜಾರಿಯಾಗಲಿ ಎಂದು ಭೀಕರ ಕ್ರಿಸ್ತೀಯ ಆಡಳಿತದಿಂದ ಕಂಗಾಲಾಗಿರುವ ಇಟಲಿಯ ಅಲ್ಪಸಂಖ್ಯಾತರು ಬಯಸಿದ್ದರೆಂದು ಆರ್ನೋಡ್ ಉದ್ದರಿಸುತ್ತಾರೆ.
ಮುಸ್ಲಿಮರಿಗೆ ಇಂದು ಸರ್ವವೂ ನಷ್ಟಹೊಂದಲು ಸಹ ಕಾರಣ ಅವರ ಸಹಿಷ್ಣುತೆಯಾಗಿದೆಯೆಂದು ಓರಿಯಂಟಲಿಸ್ಟ್‌ಗಳು ಸಾಕ್ಷ್ಯಪಡಿಸುತ್ತಾರೆ. ಸ್ಪೈನಿನಿಂದ ಕ್ರೂರವಾಗಿ ಹೊಡೆದೋಡಿಸಲ್ಪಟ್ಟ ಯಹೂದ್ಯರಿಗೆ ಆಶ್ರಯ ನೀಡಿದ್ದು ತುರ್ಕಿಯಾಗಿತ್ತು. ಅವರು ಖಲೀಫರಿಗೆ ದ್ರೋಹವೆಸಗಿದ್ದರು. ಕೆನಟ್ ಹೆನ್‌ಟ್ರಿ ಕಾಸ್‌ಟ್ರೊ ಹೇಳುತ್ತಾರೆ. ಸಾಮ್ರಾಜ್ಯದ ನಾಶಕ್ಕೆ ಹೇತುವಾದದ್ದು ಮುಸ್ಲಿಮರ ಸೌಹಾರ್ದ ಮತ್ತು ಮಮತೆಯಾಗಿದೆ. (ಇಸ್ಲಾಂ ೪೯)
ಅವಕಾಶ ಸಮತ್ವ:
ಅನ್ಯ ಧರ್ಮೀಯರಿಗೆ ಸಮಾನನೀತಿ ಮತ್ತು ಅವಕಾಶ ಸಮತ್ವವನ್ನು ಇಸ್ಲಾಂ ನೀಡಿದೆ. ಇಸ್ಲಾಮಿಕ ಕರ್ಮಶಾಸ್ತ್ರದ ಶಿಕ್ಷಾ ನಡವಳಿಕೆಗಳು ಇಸ್ಲಾಮನ್ನು ಅಂಗೀಕರಿಸುವವರಿಗೆ ಮಾತ್ರ ಬಾಧಕವಾಗಿತ್ತು. ವಿವಾಹ ಆಚಾರಗಳಲ್ಲಿ ಮತ್ತು ನಿರೋಧಿತ ಕಾರ್ಯಗಳಲ್ಲಿ ಅವರ ಧರ್ಮಕ್ಕನುಸಾರವಾಗಿ ಜೀವಿಸಲು ಅನುಮತಿ ನೀಡಲಾಗಿತ್ತು.
ನಬಿಯವರೊಂದಿಗೆ ಅಲ್ಲಾಹನು ಹೇಳುವನು. ಅವರು ತಮ್ಮ ಬಳಿ ಬಂದರೆ ವಿಧಿ ನೀಡಿರಿ. ಅಲ್ಲದಿದ್ದಲ್ಲಿ ಬಿಟ್ಟುಬಿಡಿರಿ. ಅವರ ಇಷ್ಟಕ್ಕೂ ಬಿಟ್ಟರೆ ಏನೂ ಸಮಸ್ಯೆಯಿಲ್ಲ. ವಿಧಿ ನೀಡುವುದಾದರೆ ನೀತಿ ಪಾಲಿಸಬೇಕು. ಅಲ್ಲಾಹನು ನೀತಿವಂತರನ್ನು ಇಷ್ಟಪಡುತ್ತಾನೆ. (ಮಾಇದ ೪೨)
ಭಾರತದ ಮುಸ್ಲಿಂ ಆಡಳಿತಗಾರರು ಹಿಂದುಗಳ ಆಂತರಿಕ ಕಾರ‍್ಯಗಳಲ್ಲಿ ಕೈ ಹಾಕುತ್ತಿರಲಿಲ್ಲ. ಅವರ ಜಾತೀಯತೆಯನ್ನು ವಿಮರ್ಶಿಸಲು ಮತ್ತು ಧರ್ಮ ಸಂಪ್ರದಾಯಗಳನ್ನು ಎದುರಿಸಲು ಶ್ರಮಿಸಲಿಲ್ಲ. ಆದರೆ ಕೆಳಜಾತಿಯವರು ಅವರನುಭವಿಸುವ ವಿಪತ್ತುಗಳಂದ ವಿದಾಯ ಹೊಂದಲು ಇಸ್ಲಾಂ ಸ್ವೀಕರಿಸುತ್ತಿದ್ದರು.
\ಒಮ್ಮೆ ಸುಅಮ ಬಿನ್ ಅಬ್‌ರಕ್ ಎಂಬ ಅನ್ಸಾರಿ ತನ್ನ ನೆರೆಯವನ ಅಂಗಿಯನ್ನು ಕಳವುಗೈದರು. ಆ ಅಂಗಿ ಧಾನ್ಯ ಹುಡಿಯುಳ್ಳ ಒಂದು ಚೀಲದಲ್ಲಾಗಿತ್ತು. ಇವರು ನಡೆದ ದಾರಿಯಲ್ಲೆಲ್ಲ ಆ ಹುಡಿಯ ಲಕ್ಷಣ ಕಂಡುಬರುತ್ತಿತ್ತು. ಅನ್ಸಾರಿಯು ಆ ಅಂಗಿಯನ್ನು ಒಂದು ಯಹೂದ್ಯರ ಮನೆಯಲ್ಲಿ ಅಡಗಿಟ್ಟರು. ಆ ಯಹೂದ್ಯರ ಹೆಸರು ಝೈದುಬ್‌ನ್ ಸಮೀನ್ ಎಂದಾಗಿತ್ತು. ಸುಆಮನನ್ನು ಹುಡುಕುತ್ತ ಆ ಅಂಗಿಯ ವಾರೀಸುದಾದರು ತಲುಪಿದರು. ಆಗ ಸುಅಮ ಕಳವನ್ನು ನಿಷೇಧಿಸಿದರು. ಕೊನೆಗೆ ಅವರು ಯಹೂದ್ಯನ ಮನೆ ತಲುಪಿ ಅಂಗಿಯನ್ನು ಕಂಡುಹಿಡಿದರು. ಆ ಊರಿನವರು ಸುಅಮರನ್ನು ಕಂಡದ್ದಾಗಿ ಆರೋಪಿಸಿದರು. ಆಗ ಸುಅಮರ ಬೆಂಬಲಿಗರು ಈ ರೀತಿ ಹೇಳಿದರು. ನಮಗೆ ನೆಬಿ(ಸ) ರ ಸನ್ನಿಧಿಗೆ ಹೋಗೋಣ. ನಂತರ ನೆಬಿಯ ಬಳಿ ಬಂದು ಹೇಳಿದರು, ನೀವು ನಮಗೆ ಅನುಕೂಲವಾಗಿ ವಿಧಿಸದೆ ಹೋದಲ್ಲಿ ಮುಸ್ಲಿಮರು ಅಪಹಾಸ್ಯಕ್ಕೀಡಾಗಿ ಯಹೂದ್ಯನು ಬಚಾವಾಗುವನು ಆದರೆ ನೆಬಿ(ಸ)ರವರು ಸತ್ಯಕ್ಕಾಗಿ ನೆಲೆಗೊಂಡರು. ಕೊನೆಗೆ ವಿಧಿಯು ಯಹೂದ್ಯನಿಗೆ ಅನುಕೂಲವಾಗಿ ಬಂತು. ’ಅನ್ನಿಸಾಲ್’ ಅದ್ಯಾಯದ ೧೦೯ನೇ ಸೂಕ್ತದ ವಿವರಣೆಯಲ್ಲಿ ವಾಹಿದಿ ಈ ಘಟನೆಯನ್ನು ಉದ್ಧರಿಸುತ್ತಾರೆ.
ಪ್ರವಾದಿ(ಸ) ರವರು ಹೇಳುತ್ತಾರೆ ’ನೀವು ನ್ಯಾಯಾಧೀಶರಾಗುವಾಗ ಮಾತು, ಸಂಜ್ಞೆ ಮತ್ತು ಭವನಗಳಲ್ಲಿ ನೀತಿ ಪಾಲಿಸಬೇಕು’. ಪ್ರವಾದಿ(ಸ)ರ ಅನುಯಾಯಿಗಲಲ್ಲೂ ಇದು ಗೊಚರವಾಗುತ್ತಿತ್ತು. ಮುಸ್ಲಿಮ ಆಡಳಿತಗಾರರೆಲ್ಲರೂ ನೀತಿ ಪಾಲಿಸಿದವರಾಗಿದ್ದರು. ಅದು ದೀನೀ ಆಡಳಿತಗಾರನಾದ ವಲೀದ್‌ನ ಕಾಲದಲ್ಲಿ ಸೈಪ್ರಸಿನ ಅಮುಸ್ಲಿಮರನ್ನು ಗಡಿಪಾರು ಮಾಡಿದಾಗ ಪಂಡಿತರು ಅದರೆದುರಾಗಿ ರಂಗಕ್ಕಿಳಿದರು. ಅವರನ್ನು ಮರಳಿ ಕಳುಹಿಸಲು ನಂತರ ಬಂದ ಖಲೀಫ ಯಸೀದ್ ಆಜ್ಞಾಪಿಸಿದನು.
ಪ್ರವಾದಿ(ಸ)ರವರು ಅರಫಾ ದಿನದಂದು ಘೋಷಿಸಿದರು: ’ನಿಮ್ಮ ರಕ್ತ, ಸಂಪತ್ತು ಮತ್ತು ಘನತೆ ಈ ಸುದಿನದಂತೆ ಗೌರವಿಸಲ್ಪಡಬೇಕಾದದ್ದಾಗಿದೆ’. ನೀತಿಯನ್ನು ಜಾರಿಗೊಳಿಸುವುದರಲ್ಲಿ ಪ್ರವಾದಿ(ಸ)ರು ಅತೀವ ನಿಷ್ಟೆಯುಳ್ಳವರಾಗಿದ್ದರು. ನಿರಾಶ್ರಿತನಾದ ಅಮುಸ್ಲಿಮನನ್ನು ಕೊಂದವನಿಗೆ ಸ್ವರ್ಗದ ಪರಿಮಳವು ಲಭಿಸಲಿಕ್ಕಿಲ್ಲವೆಂದು ಸ್ವಹೀಹುಲ್ ಬುಖಾರಿ ಸ್ಪಷ್ಟಪಡಿಸಿದೆ. ಯುದ್ಧವಿಲ್ಲದೆ ಸಮಾಧಾನದಿಂದ ಜೀವಿಸುವ ಅಮುಸ್ಲಿಮರನ್ನು ಯಾವೊಂದೂ ಉದ್ರೇಕವೂ ಇಲ್ಲದೆ ಕೊಲ್ಲುವುದನ್ನು ನ್ಯಾಯೀಕರಿಸಲಸಾಧ್ಯ ತಾನೇ? ಒಮ್ಮೆ ನೆಬಿ(ಸ)ರ ಬಳಿ ಒಂದು ಮುಸ್ಲಿಮನು ಅಮುಸ್ಲಿಮನನ್ನು ಕೊಂದ ದೂರು ತಲುಪಿತು. ಆಗ ನೆಬಿ(ಸ) ಹೇಳಿದರು, ’ನಮ್ಮೊಂದಿಗೆ ಯಾವುದೇ ರೀತಿಯಲ್ಲಿ ವಂಚಿಸದ ಸತ್ಯ ಸಂತರೊಂದಿಗೆ ನಾನು ಅತ್ಯಧಿಕವಾಗಿ ಬಾಧ್ಯಸ್ಥನಾಗಿದ್ದೇನೆ’. ನಂತರ ಆ ಆರೋಪಿಯನ್ನು ಕೊಲ್ಲಲು ನೆಬಿಯವರು ಆಜ್ಞಾಪಿಸಿದರು(ದಾರುಕುತ್‌ನಿ).
ಇದಾಗಿದೆ ಪ್ರವಾದಿ(ಸ)ರವರ ನೈಜ ರೂಪ. ಅವರು ಮನುಷ್ಯರೆಡೆಯಲ್ಲಿ ನೀತಿಯನ್ನು ಜಾರಿಗೊಳಿಸಿದ್ದರು. ಧರ್ಮದ ಹೆಸರಿನಲ್ಲಿ ಅನ್ಯರೊಂದಿಗೆ ಅನಧಿಕೃತವಾಗಿ ವರ್ತಿಸಲು ಅವರು ಸಮ್ಮತಿಸಲಿಲ್ಲ. ಇಸ್ಲಾಮಿನ ಯುದ್ಧಗಳು ನಡೆದದ್ದು ನೀತಿಯನ್ನು ಸಂರಕ್ಷಿಸಲು, ಮನುಷ್ಯರನ್ನು ಗುಲಾಮರನ್ನಾಗಿಸುವ ವ್ಯಕ್ತಿ ದೈವಗಳನ್ನು ನಿರ್ನಾಮ ಮಾಡಲು ಮತ್ತು ಎಲ್ಲರಿಗೂ ಪೂರ್ಣ ಸ್ವಾತಂತ್ರ್ಯ ನೀಡಲು ಬೇಕಾಗಿದೆ. ನೆಬಿ(ಸ)ರು ಹೇಳುತ್ತಾರೆ, ’ಒಪ್ಪಂದದಲ್ಲಿ ಕಳೆಯುತ್ತಿರುವ ಅಮುಸ್ಲಿಮನ ಧನ ಅನ್ಯಾಯವಾಗಿ ಸಮ್ಮತಾರ್ಹವಲ್ಲ’.(ಮುಸ್‌ನದ್ ಅಹ್‌ಮದ್ ೪/೮೯)
ಉಮ್ಮುಹಾನಿಅನ ವಸತಿಯಲ್ಲಿ ಆಶ್ರಯ ಪಡೆದಿದ್ದ ಅಮುಸ್ಲಿಮನನ್ನು ವಧಿಸುವೆವೆಂದು ಕೆಲವರು ಬೆದರಿಕೆಯೊಡ್ಡಿದಾಗ ನೆಬಿ(ಸ) ಹೇಳಿದರು, ’ಸಲ್ಲದು, ಉಮ್ಮುಹಾನಿಅ ಆಶ್ರಯ ನೀಡಿದವರಿಗೆ ನಾವು ಆಶ್ರಯ ನೀಡಿದ್ದೇವೆ’.(ಬುಖಾರಿ)
ಆಡಳಿತದ ಅಧೀನದಲ್ಲಿರುವ ಎಲ್ಲಾ ಪ್ರಜೆಗಳೊಂದಿಗೆ ಸಮಾನವಾದ ನೀತಿ ಕಾಣಿಸಬೇಕಾಗಿದೆ. ಅಲ್ಲಾಹನು ಹೇಳುತ್ತಾನೆ, ’ಯಾರಾದರೂ ಅಕ್ರಮಿಸಿದ್ದಲ್ಲಿ ಅವನಿಗೆ ನಾವು ಕಠಿಣ ಶಿಕ್ಷೆ ನೀಡುತ್ತೇವೆ’(ಫುರ್‌ಖಾನ್ ೧೯). ಮತ್ತೊಂದು ಖುದ್‌ಸಿಯ್ಯಾದ ಹದೀಸಿನಲ್ಲಿ ಹೀಗಿದೆ, ’ನನ್ನ ದಾಸರೇ, ನಾನು ಅಕ್ರಮವನ್ನು ಸ್ವಯಂ ನಿಷಿದ್ಧಗೊಳಿಸಿದ್ದೇನೆ. ಆದ್ದರಿಂದ ಅದು ನಿಮಗೂ ನಿಷಿದ್ಧವಾಗಿದೆ. ನೀವು ಪರಸ್ಪರ ಅಕ್ರಮಿಸದಿರಿ’(ಮುಸ್ಲಿಂ).
ಮದೀನಕ್ಕೆ ಬಂದ ಕ್ರೈಸ್ತ ಅಬಿಸೀನಿಯನ್ ದೌತ್ಯ ಸಂಘಕ್ಕೆ ಮದೀನಾ ಮಸೀದಿಯಲ್ಲಿ ಆರಾಧನೆಗೆ ಅನುವು ಮಾಡಿಕೊಟ್ಟ ಘಟನೆ ಅಬೂದಾವೂದ್‌ನಲ್ಲಿ ಉದ್ಧರಿಸಲ್ಪಟ್ಟಿದೆ.
ಪ್ರವಾದಿ(ಸ) ನಿಧನ ಹೊಂದುವಾಗ ತನ್ನ ಅಂಗಿಯು ಒಬ್ಬ ಯಹೂದ್ಯನ ಬಳಿ ಅಡವಿನಲ್ಲಾಗಿತ್ತೆಂದು ಸಾಕ್ಷಿ. ಅದರಿಂದೆಲ್ಲಾ ಪ್ರವಾದಿ(ಸ)ರು ಅನ್ಯಧರ್ಮೀಯರೊಂದಿಗೆ ವರ್ತಿಸಿದ ಸೌಹಾರ್ದ ಮತ್ತು ಸಹಿಷ್ಣುತೆಯು ಸ್ಪಷ್ಟವಾಗುತ್ತದೆ. ಜಗತ್ತಿನ ಇತಿಹಾಸದಲ್ಲಿ ಈ ರೀತಿ ಅನ್ಯಧರ್ಮೀಯರಲ್ಲಿ ಒಳ್ಳೆಯ ರೀತಿಯಲ್ಲಿ ವರ್ತಿಸಿದ ಮತ್ತೊಂದು ನಾಯಕನನ್ನು ಕಾಣಲಸಾಧ್ಯ. ಆದ್ದರಿಂದಲೇ ಪ್ರಸಿದ್ಧ ಮಲಯಾಳ ಕವಿ ವಳ್ಳತ್ತೋಳ್ ಹಾಡಿದ್ದು….
ಮೊಳಗಿಸಿರಿ ಹೇ ಜಯಕಾರವೆಲ್ಲೂ…
ಬಾಳಲಿ ಇಸ್ಲಾಂ ತಿರುಮೇನಿ ಎಂದೂ…
*ಮುಹಮ್ಮದ್ ತಾಜುದ್ದೀನ್ ರಹ್ಮಾನಿ ಅಡ್ಯನಡ್ಕ*
No comments:
Post a Comment