Monday, November 20, 2017

*ಅಹ್ಲುಸ್ಸುನ್ನತ್ ವಲ್ ಜಮಾಅತ್* , *ಭಾಗ ---8.*
*••••••••••••••••••••••••••••••••••••••••*
*ವಿಷಯ --1*

*ಮೀಲಾದುನ್ನಬೀ*
----------------------------------------------------------
*_ಈದ್ ವರ್ಷಕ್ಕೆ 2  ಮಾತ್ರವೇ?_*

*2017 ನೇ ಇಸವಿಯಲ್ಲಿ 55 ಈದ್ ಇದೆ.*
*2 ಪೆರ್ನಾಳ್.*
*1 ಈದ್ ಮೀಲಾದ್.*
*52 ಶುಕ್ರವಾರ.*

 ಇನ್ನು ಕೆಳಗೆ ಓದಿ
👇👇👇


ಜಾಗತಿಕ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೀಲಾದ್ ಆಚರಿಸುವಾಗ ವಹ್ಹಾಬಿಗಳು ಹೇಳುವ ಒಂದು ಬಾಲಿಶ ವಾದವಾಗಿದೆ ಈದ್ ವರ್ಷಕ್ಕೆ ಎರಡು ಬಾರಿ ಮಾತ್ರ ಎಂಬುವುದು.ಅಥವಾ  ಈದುಲ್ ಫಿತರ್ ಮತ್ತು ಈದುಲ್ ಅಳ್'ಹಾ.

ಸತ್ಯಕ್ಕೆ ವಿರುದ್ಧವಾದ ಒಂದು ವಾದವಾಗಿದೆ ಇದು.

ಅದಕ್ಕೆ ಅವರು ಒಂದು ಹದೀಸನ್ನು ದುರ್ವ್ಯಾಖ್ಯಾನಿಸುತ್ತಾರೆ.
ಅದು ಈ ರೀತಿ,
عَنْ أَنَسِ بْنِ مَالِكٍ، قَالَ: كَانَ لِأَهْلِ الْجَاهِلِيَّةِ يَوْمَانِ فِي كُلِّ سَنَةٍ يَلْعَبُونَ فِيهِمَا، فَلَمَّا قَدِمَ النَّبِيُّ صَلَّى اللهُ عَلَيْهِ وَسَلَّمَ الْمَدِينَةَ، قَالَ: " كَانَ لَكُمْ يَوْمَانِ تَلْعَبُونَ فِيهِمَا وَقَدْ أَبْدَلَكُمُ اللَّهُ بِهِمَا خَيْرًا مِنْهُمَا: يَوْمَ الْفِطْرِ، وَيَوْمَ الْأَضْحَى
(نسائي 3/179).
ಅನಸ್ (ರ)ಹೇಳುತ್ತಾರೆ.ಜಾಹಿಲಿಯ್ಯಾ ಕಾಲದಲ್ಲಿ ಅವರಿಗೆ 2 ದಿನಗಳು ವಿನೋದದ ದಿನವಾಗಿತ್ತು.ಪ್ರವಾದೀ ﷺ ರು ಮದೀನಾಗೆ ಹಿಜ್ರ ಹೋದಾಗ  ಅವರೊಂದಿಗೆ ಹೇಳಿದರು;ಇದನ್ನು ಬದಲಾಯಿಸಿ ಇದಕ್ಕಿಂತ ಉತ್ತಮವಾದ ಈದುಲ್ ಫಿತ್ರ್ ಮತ್ತು ಈದುಲ್ ಅಳ್'ಹವನ್ನು ಅಲ್ಲಾಹನು ನಿಮಗೆ ನೀಡಿದ್ದಾನೆ.(ನಸಾಈ 3/179).

ವರ್ಷಕ್ಕೆ ಈದ್ 2 ಮಾತ್ರವೆಂದು ಇದರಿಂದ ತಿಳಿದು ಬರುತ್ತದೆ ಎಂದಾಗಿದೆ ಸಲಪಿಯ ವಾದ.
ಹದೀಸನ್ನು ಬೇಕಾದಂತೆ ಗ್ರಹಿಸದ ಕಾರಣದಿಂದ ಈ ರೀತಿಯ ವಿಚಿತ್ರ ವಾದವನ್ನು ಅವರು ಹೇಳುತ್ತಿದ್ದಾರೆ.

ವಾಸ್ತವದಲ್ಲಿ
ಪ್ರವಾದೀﷺ ಮರು ಅವರಲ್ಲಿ "ನೀವು ಉತ್ಸವವಾಗಿ ಕಾಣುವ ಈ ಎರಡು ದಿನಗಳಿಗೆ ಬದಲಾಗಿ 2 ಈದ್ ಗಳು ಪುಣ್ಯದಾಯಕವಾಗಿದೆ" ಎಂದು ಹೇಳಿದ್ದಾರೆಯೇ ಹೊರತು ಈದ್ 2 ಮಾತ್ರವಿರುವುದು ಎಂದು ಹೇಳಿಲ್ಲ.ಬುದ್ಧಿಯಿರುವ ಯಾರಿಗೂ ಇದು ತಿಳಿಯುವ ವಿಚಾರ.

ಮಂಗಳೂರು ಮತ್ತು ಪುತ್ತೂರು ದೊಡ್ಡ ಸಿಟಿ ಎಂದು ಹೇಳಿದ ಒಬ್ಬನಲ್ಲಿ ನಾನು ಹೇಳಿದೆ.ಅದಕ್ಕಿಂತಲೂ ದೊಡ್ಡ ಸಿಟಿ ಮೈಸೂರು ಮತ್ತು ಬೆಂಗಳೂರು ಇದೆ.
ಆವಾಗ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ  ಸಿಟಿಯಿರುವುದು ಮೈಸೂರು ಮತ್ತು ಬೆಂಗಳೂರು ಮಾತ್ರವೆಂದು ಅವರು ಹೇಳಿದ್ದಾರೆ  ಎಂದು ಒಬ್ಬ ಹೇಳಿದರೆ ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಕಟ್ಟಿಯಿಡಬೇಕಾದೀತು.ಅದೇ ರೀತಿಯಾಗಿದೆ ಸಲಪಿಯ ಅರ್ಥ ಕೂಡಾ.
ಈ ಎರಡು "ಈದ್" ನ ಬಗ್ಗೆ ಹೇಳಿದ ಅದೇ ಪ್ರವಾದೀ ﷺಮರು
ಶುಕ್ರವಾರದ ಕುರಿತು ಹೇಳಿದ ಹದೀಸ್ ನೋಡಿ,

 عن ابن عباس قال :قال رسول الله صلى الله عليه وسلم إن هذا يوم عيد .جعله الله للمسلمين. فمن جاء إلى الجمعة فليغتسل .وإن كان طيب فليمس منه. وعليكم بالسواك
(ابن ماجه 1/349 )
ಇಬ್ನ್ ಅಬ್ಬಾಸ್(ರ)ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಖಂಡಿತವಾಗಿಯೂ ಈ ದಿನ(ಶುಕ್ರವಾರ) ಮುಸ್ಲಿಮರಿಗೆ ಅಲ್ಲಾಹನು ಮಾಡಿದ ಈದ್ ಆಗಿದೆ.ಆದುದರಿಂದ ಜುಮುಅ ನಮಾಝ್ ಗೆ ಬರುವವನು ಸ್ನಾನ ಮಾಡಲಿ.ಸುಗಂಧ ದ್ರವ್ಯವಿದ್ದಲ್ಲಿ  ಹಚ್ಚಲಿ.
(ಇಬ್ನ್ ಮಾಜ 1/349)

ಅದೇ ರೀತಿ ಮುವತ್ವ 1/65,
ಮುಸ್ನದು ಶ್ಶಾಫಿಈ 1/63
ರಲ್ಲೂ ಕಾಣಬಹುದಾಗಿದೆ.
*ಈ ಹದೀಸ್ ಸ್ವೀಕಾರ್ಯಯೋಗ್ಯವಾಗಿದೆಯೆಂದು ವಹ್ಹಾಬೀ ನಾಯಕ ಅಲ್ಬಾನಿಯೇ ಸಮ್ಮತಿಸಿದ್ದಾರೆ.*
*(ಇಬ್ನ್ ಮಾಜ ಟಿಪ್ಪಣಿ 1/349)*

ಎಲ್ಲಾ ವಾರಗಳಲ್ಲೂ *ಈದ್* ಇದೆ ಎಂದು ಈ ಹದೀಸಿನಿಂದ ಬಹಳ ಸ್ಪಷ್ಟ.
ಒಂದು ಹದೀಸನ್ನು ಅಂಗೀಕರಿಸಿ ಇನ್ನೊಂದು ಹದೀಸ್ ತಿರಸ್ಕರಿಸುವುದು ಒಮ್ಮೆಯೂ ಮುಸ್ಲಿಮನಿಗೆ ಭೂಷಣವಲ್ಲ.

ಶುಕ್ರವಾರ ದಿನ ಈದ್ ಆಗಲು ಕಾರಣವೇನೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಬೇರೊಂದು ಹದೀಸಿನಲ್ಲಿ ವಿವರಿಸಿದ್ದಾರೆ.

عن ابي هريرة قال قال رسول الله ﷺخير يوم طلعت فيه الشمس يوم الجمعة فيه خلق ادم وفيه ادخل الجنة وفيه اخرج من النار.
(مسلم 3/6)

ದಿವಸಗಳ ಪೈಕಿ ಶ್ರೇಷ್ಟವಾದ ದಿವಸ ಶುಕ್ರವಾರವಾಗಿದೆ.ಆ ದಿನ ಆದಮ್ ನೆಬಿಯನ್ನು ಸೃಷ್ಠಿಸಲಾಗಿದೆ.ಅದೇ ದಿನ ಸ್ವರ್ಗಕ್ಕೆ ಅವರನ್ನು ಪ್ರವೇಶಿಸಲಾಯಿತು ಹಾಗೂ ಶುಕ್ರವಾರ ಸ್ವರ್ಗದಿಂದ ಹೊರಕಳುಹಿಸಲಾಯಿತು.
(ಮುಸ್ಲಿಂ 3/6)

ಆದಮ್ ನೆಬಿಯವರನ್ನು ಸೃಷ್ಠಿಸಿದ ದಿವಸ ಎಂಬ ಕಾರಣಕ್ಕೆ ಶುಕ್ರವಾರಕ್ಕೆ ಮಹತ್ವ ಲಭಿಸಿರುವುದಾದರೆ ಅವರಿಗಿಂತಲೂ ಶ್ರೇಷ್ಠರಾದ ಪ್ರವಾದೀ ಮುಹಮ್ಮದ್  ﷺ ರು
ಜನಿಸಿದ ದಿವಸಕ್ಕೆ ಖಂಡಿತವಾಗಿಯೂ ಅದಕ್ಕಿಂತಲೂ ಮಹತ್ವ ಇದೆ ಎಂಬುವುದರಲ್ಲಿ ಸಂಶಯವಿಲ್ಲ.

ಆದಮ್ ನೆಬಿಯನ್ನು ಸೃಷ್ಠಿಸಲ್ಪಟ್ಟ ಶುಕ್ರವಾರವನ್ನು *ಈದ್*  ಎಂದು ಹೇಳಬಹುದಾದರೆ ಪ್ರವಾದೀ ﷺ ರು ಜನಿಸಿದ ರಬೀವುಲ್ 12 ನೇ ದಿನಕ್ಕೆ *ಈದ್ ಮೀಲಾದ್* ಎನ್ನುದರಲ್ಲಿ ಯಾವುದೇ ತಪ್ಪಿಲ್ಲ.

ಆದುದರಿಂದಲೇ ಆ ದಿನ *"ಈದ್ ಮೀಲಾದ್"* ಎಂಬ ಹೆಸರಲ್ಲಿ ತಿಳಿಯಲ್ಪಡುತ್ತದೆ.



*ಮುಂದುವರಿಯುವುದು.............*

*📝ಮುನೀರ್ ಸಖಾಫಿ,ಸಾಲೆತ್ತೂರು*

No comments:

Post a Comment