*ಅಹ್ಲುಸ್ಸುನ್ನತ್ ವಲ್ ಜಮಾಅತ್* , *ಭಾಗ ---10.*
*••••••••••••••••••••••••••••••••••••*
*📝ಮುನೀರ್ ಸಖಾಫಿ,ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
*ವಿಷಯ : 1*
*ಮೀಲಾದುನ್ನಬೀ.*
*------------------------------------------*
*_ಈದ್ ಮೀಲಾದ್ ಕೇರಳ,ಕರ್ನಾಟಕದಲ್ಲಿ ಮಾತ್ರವೇ?_*
ವರ್ಷಗಳ ಮುಂಚೆ ವಹ್ಹಾಬಿಗಳು ಈದ್ ಮೀಲಾದ್ ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ನಡೆಯುವ ಆನಾಚಾರಗಳೆಂದು ಹೇಳಿ ಜನರನ್ನು ಮೋಸ ಮಾಡುತ್ತಿದ್ದರು.ಆದರೆ ಈಗ ಕಾಲ ಬದಲಾಗಿದೆ.ಬೆರಳ ತುದಿಯಲ್ಲೇ ಪ್ರಪಂಚವಿದೆ.ಜಗತ್ತಿನ ಮೂಲೆ ಮೂಲೆಗಳಲ್ಲಿ ಏನೇ ನಡೆದರೂ ನಿಮಿಷಾರ್ಧದಲ್ಲೇ ಅದು ಜಗತ್ತಿಗೆ ತಿಳಿಯುತ್ತದೆ.
ಭಾರತ ಮಾತ್ರವಲ್ಲದೆ ಇನ್ನಿತರ ರಾಷ್ಟ್ರಗಳಾದ ಲಂಡನ್ ,ಬ್ರಿಟನ್ ,ಮಲೇಶ್ಯ ಈಜಿಪ್ಟ್ ,ಫೆಲಸ್ತೀನ್ ಮುಂತಾದ ಅನೇಕ ರಾಷ್ಟ್ರಗಳಲ್ಲಿ ಈದ್ ಮೀಲಾದ್ ಆಚರಿಸುವ ವೀಡಿಯೋ ಮತ್ತು ಫೋಟೋಸ್ ಗಳನ್ನು ನಾವು ನೋಡಿದ್ದೇವೆ.ಈ ಹೇಳಿದ ಎಲ್ಲಾ ರಾಷ್ಟ್ರಗಳಲ್ಲಿ ನಡೆಯುವ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಶೈಖುನಾ ಎ.ಪಿ.ಉಸ್ತಾದ್ ಭಾಗವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಇದಲ್ಲದೆ ಮಕ್ಕಾದಲ್ಲೂ ಕೂಡಾ ಪೂರ್ವೀಕರು ಈದ್ ಮೀಲಾದ್ ಆಚರಿಸುತ್ತಿದ್ದದ್ದಾಗಿ ಗ್ರಂಥಗಳಲ್ಲಿ ವಿವರಿಸಲಾಗಿದೆ.
ವಹ್ಹಾಬಿಗಳ ಆಡಳಿತ ದೇಶವಾದ ಸೌದಿಯಲ್ಲಿ ಸುನ್ನೀ ಆಶಯವನ್ನು ಸಾಧ್ಯವಾದಷ್ಟು ವಹ್ಹಾಬಿಗಳು ನಿರ್ಮೂಲನೆಗೊಳಿಸಿದ್ದಾರೆ.
ಎತ್ತರಿಸಲ್ಪಟ್ಟ ಖಬ್'ರ್'ಗಳನ್ನು ನೆಲಸಮ ಮಾಡಿದ್ದು ಕೂಡಾ ಅವರೇ.
ಮರ್ಹೂಂ ಸೆಯ್ಯಿದ್ ಅಲವೀ ಅಲ್ ಮಾಲಿಕೀ ಅವರ ಮನೆಯಲ್ಲಿ ಮತ್ತು ಇನ್ನಿತರ ಸುನ್ನೀ ಕುಟುಂಬದ ಅರಬಿಗಳ ಮನೆಯಲ್ಲಿ ಬೃಹತ್ ಮೌಲಿದ್ ಗಳು ಇಂದು ಕೂಡಾ ನಡೆದು ಬರುತ್ತಿದೆ.
ಪುರಾತನ ಕಾಲದಲ್ಲಿ ಮಕ್ಕಾದಲ್ಲಿ ಎಲ್ಲಾ ಕಡೆಗಳಲ್ಲೂ ಈದ್ ಮೀಲಾದ್ ಇತ್ತು.ವಹ್ಹಾಬೀ ಬೀಕರರ ಉಪದ್ರವ ಹೆದರಿ ಕೆಲವು ಕಡೆಗಳಲ್ಲಿ ಗೌಪ್ಯವಾಗಿ ಈಗಲೂ ನಡೆಯುತ್ತಾ ಇದೆ.
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸುತ್ತಿದ್ದ ಬಗ್ಗೆ ಇಮಾಮರುಗಳು ನೂರಾರು ವರ್ಷಗಳ ಮುಂಚೆಯೇ ಗ್ರಂಥಗಳಲ್ಲಿ ವಿವರಿಸಿದ್ದಾರೆ.
ಪ್ರಸಿದ್ಧ ಸಂಚಾರಿ ,ಹಿಜ್ರ 540 ರಲ್ಲಿ ಜನಿಸಿ 614 ರಲ್ಲಿ ಮರಣ ಹೊಂದಿದ ಮುಹಮ್ಮದ್ ಬಿನ್ ಅಹ್ಮದ್ ಬಿನ್ ಜುಬೈರ್ ಅಲ್ ಉಂದುಲುಸಿ(ರ)ಬರೆಯುವುದು ನೋಡಿ;
_" يفتح هذا الموضع المبارك فيدخله الناس كافة متبركين به في شهر ربيع الأول ويوم الاثنين منه، لأنه كان شهر مولد النبي صلى الله عليه وسلم، وفي اليوم المذكور الذي ولد فيه النبي صلى الله عليه وسلم، تفتح المواضع المقدسة المذكورة كلها. وهو يوم مشهود بمكة دائما_
(رحلة ابن جبير 1/34)
_ರಬೀವುಲ್ ಅವ್ವಲ್ 12 ರಂದು ಮಕ್ಕಾದಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಮನೆಯ ಬಾಗಿಲನ್ನು ತೆರೆಯಲಾಗುತ್ತದೆ.ಜನರು ಬರ್ಕತ್'ಗಾಗಿ ಅದರೊಳಗೆ ಪ್ರವೇಶಿಸುತ್ತಾರೆ.ಕಾರಣ,ಆ ದಿನ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನವಾಗಿದೆ.ಮಹತ್ವವಿರುವ ಆ ಎಲ್ಲಾ ಸ್ಥಳಗಳನ್ನು ತೆರೆಯಲ್ಪಡಲಾಗುತ್ತದೆ._
(ರಿಹ್'ಲ ಇಬ್ನ್ ಜುಬೈರ್ 1/34)
ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಇದು ನಿರ್ವಹಿಸುತ್ತಿದ್ದರೆಂದು ಹೇಳುವುದು ಇಲ್ಲಿನ ಸಮಸ್ತದ ಆಲಿಂಗಳಲ್ಲ.
ಎಸ್ಸೆಸ್ಸೆಫ್ ನಾಯಕರಲ್ಲ.
ಹೊರತು 800 ವರ್ಷಗಳ ಮುಂಚೆ ಮರಣ ಹೊಂದಿದ ಇಮಾಮರುಗಳಾಗಿದ್ದಾರೆ.
ಇದನ್ನೆಲ್ಲಾ ಮಕ್ಕಾದಿಂದ ನಿರ್ಮೂಲಗೊಳಿಸಿ ಮಕ್ಕಾ , ಮದೀನದಲ್ಲಿ ಇದು ಇಲ್ಲವಲ್ಲಾ ಎಂದು ಹೇಳುವುದು ವಹ್ಹಾಬಿಗಳ ಕಾಪಟ್ಯಕ್ಕಿರುವ ದೊಡ್ಡ ಉದಾಹರಣೆಯಾಗಿದೆ.
ಇನ್ನೊಬ್ಬ ಪ್ರಸಿದ್ಧ ಪ್ರಪಂಚ ಸಂಚಾರಿ ಹಿಜರಿ 703 ರಲ್ಲಿ ಜನಿಸಿ 779 ರಲ್ಲಿ ಮರಣ ಹೊಂದಿದ ಇಬ್ನ್ ಬತೂತ ರವರ ಮಾತು ನೋಡಿ,
_ويفتح الباب الكريم في كل يوم جمعة بعد الصلاة ،ويفتح في يوم مولد النبي صلي الله عليه وسلم_ (رحلة 60).
_ಪಾವನ ಕಅಬಾದ ಬಾಗಿಲನ್ನು ಎಲ್ಲಾ ಶುಕ್ರವಾರ ಜುಮುಅ ನಮಾಝಿನ ಬಳಿಕ ಮತ್ತು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಂದು ತೆರೆಯಲಾಗುತ್ತದೆ._
( ರಿಹ್'ಲ 60).
ಮತ್ತೊಂದು ಸ್ಥಳದಲ್ಲಿ ಅವರು ಹೇಳುತ್ತಾರೆ;
_قاضي مكة العالم الصالح العابد نجم الدين محمد بن إمام العالم محيي الدين الطبري، وهو فاضل كثير الصدقات والمواساة للمجاورين، حسن الأخلاق كثير الطواف والمشاهدة للكعبة الشريفة، يطعم الطعام الكثير في المواسم المعظمة، وخصوصاً في مولد رسول الله صلى الله عليه وسلم، فإنه يطعم فيه شرفاء مكة وكبراءها وفقراءها وخدام الحرم الشريف وجميع المجاورين. وكان سلطان مصر الملك الناصر رحمه الله يعظمه كثيراً، وجميع صدقاته وصدقات أمرائه تجرى على يديه. وولده شهاب الدين فاضل، وهو الآن قاضي مكة شرفها الله._
(رحلة 67)
_ಮಕ್ಕಾದಲ್ಲಿ ಹಿರಿಯ ಆಲಿಂ ನಜ್ಮುದ್ದೀನ್ ಮುಹಮ್ಮದ್ ಬಿನ್ ಮುಹ್ಯುದ್ದೀನ್ ಅತ್ತಬ್'ರೀ ಎಂಬವರು ಖಾಝಿಯಾಗಿದ್ದರು.ಅವರು ಮಹಾ ದಾನಿಯಾಗಿದ್ದರು.ಉತ್ತಮ ಗುಣ ನಡತೆಯುಳ್ಳ ವ್ಯಕ್ತಿಯಾಗಿದ್ದರು.ಅವರು ಇತರರಿಗೆ ಆಹಾರಗಳನ್ನು ನೀಡುತ್ತಿದ್ದರು. *ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಲ್ಲಿ ಮಕ್ಕಾದಲ್ಲಿರುವ ಬಡವರಿಗೂ ಶ್ರೀಮಂತರಿಗೂ ಊಟ ನೀಡುತ್ತಿದ್ದರು.* ಮಿಸ್ರಿನ ರಾಜ ನಾಸಿರ್ ರವರು ಅವರನ್ನು ಅತಿಯಾಗಿ ಗೌರವಿಸುತ್ತಿದ್ದರು.ಅವರ ಮಗ ಶಿಹಾಬುದ್ದೀನ್ ಎಂಬ ಆಲಿಂ ಈಗ ಮಕ್ಕಾದಲ್ಲಿ ಖಾಝಿಯಾಗಿರುವರು._
(ರಿಹ್'ಲ 67)
*ಪ್ರೀತಿಯ ಓದುಗರೇ !*
ಇನ್ನು ನೀವೇ ಹೇಳಿ,
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸಲಾಗುತ್ತಿತ್ತೇ?ಇಲ್ಲವೇ?
ಅದನ್ನೆಲ್ಲಾ ತೊಡೆದು ಹಾಕಿ ಕೇರಳ ಕರ್ನಾಟಕದಲ್ಲಿ ಮಾತ್ರವಿರುವ ಕಾರ್ಯವೆಂದು ಹೇಳಿದ್ರೆ ಅಲ್ಲಾಹನು ಮೆಚ್ಚಲಾರನು.
*ಮುಂದುವರಿಯುವುದು.............*
*📝ಮುನೀರ್ ಸಖಾಫಿ,ಸಾಲೆತ್ತೂರು*
No comments:
Post a Comment