Wednesday, January 31, 2018

ಝಿಯಾರತ್ತ್ ಕೇಂದ್ರ 60. ಪಾಂಗಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ:ಸಿ)ಮಲಪ್ಪುರಂ

*​ಝಿಯಾರತ್ತ್ ಕೇಂದ್ರ​​*
ಸಮಸ್ತ ನಾಯಕರು = 08
      ​➡6⃣0⃣
*​#ಪಾಂಙಿಲ್ #ಅಹ್ಮದ್_ಕುಟ್ಟಿ_ಉಸ್ತಾದ್ (ನ:ಮ), ಪಾಂಙಿಲ್ ಮಲಪ್ಪುರಂ*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
〰〰〰〰〰〰〰〰〰
ಭಾರತದ ಇತಿಹಾಸದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಅಹ್ಲ್ ಸುನ್ನತ್ ವಲ್ ಜಮಾಅತಿನ ಆಶಯ ಆದರ್ಶಗಳ ಜೈತ್ರ ಯಾತ್ರೆಗೆ ಭದ್ರ ಬುನಾದಿ ಹಾಕಿ ಮುಸ್ಲಿಂ ಉಮ್ಮತ್ತಿನ ಹೃನ್ಮನಗಳಲ್ಲಿ ಚಿರಸ್ಮರಣೀಯರಾದ ಅಸಂಖ್ಯ ವಿಧ್ವಾಂಸರಲ್ಲಿ
ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ:ಸಿ) ಕೂಡ ಒಬ್ಬರು.

ಸ್ವಹಾಬಿವರ್ಯರಾದ ಮಾಲಿಕ್ ಬಿನ್ ಹಬೀಬ್(ರ) ಅನ್ಹುರವರ ವಂಶ ಪರಂಪರೆಯಲ್ಲಿ ಪಾಂಙಿಲ್ ಅಹ್ಮದ್ ಕುಟ್ಚಿ ಮುಸ್ಲಿಯಾರ್(ಖ.ಸಿ)ರವರು ಜನಿಸಿದರು.

ಸಮಸ್ತದ ಸ್ಥಾಪಕರಲ್ಲಿ ಪ್ರಮುಖರೂ, ಎರಡನೇ ಅಧ್ಯಕ್ಷರೂ, ತಾನೂರ್ ಇಸ್ಲಾಹುಲ್ ಉಲೂಮ್ ಕಾಲೇಜನ್ನು ಮೇಲ್ದರ್ಜೆಗೆರಿಸಿದ ಪ್ರಮುಖರೂ ಆಗಿದ್ದರು.

ಸಮಸ್ತದ ಸಂಘಟನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕಾರಣ ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ.ಸಿ) ಅಧ್ಯಕ್ಷ ಸ್ಥಾನ ಸ್ವೀಕರಿಸಬೇಕೆಂಬ ದೀನೀ  ವಿದ್ವಾಂಸರು ಮತ್ತು ಪಂಡಿತರ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿ ಅಹ್ಲ್ ಬೈತ್'ನ ವರಕ್ಕಲ್ ಮುಲ್ಲಕೇೂಯ ತಂಙಳ(ಖ.ಸಿ)ರನ್ನು ಅಧ್ಯಕ್ಷರನ್ನಾಗಿಸಿ ಪಂಡಿತ ವಲಯದ ಕೇೂರಿಕೆಯ ಮೇರೆಗೆ ಉಪಾಧ್ಯಕ್ಷ ಪದವಿ ಸ್ವೀಕರಿಸಿದ್ದರು.
 ನಂತರ  ವರಕ್ಕಲ್ ಮುಲ್ಲಕೇೂಯ ತಂಙಳ್(ಖ.ಸಿ)ರವರ ವಿಯೇೂಗದ ನಂತರ ಸಮಸ್ತದ ಅಧ್ಯಕ್ಷರಾಗಿ ಆಯ್ಕೆಯಾದರು. ( 1932-1946 )

ಮನ್ನಾರ್'ಕಾಡ್, ತಾನೂರ್, ಪಾಂಗ್ ಮುಂತಾದೆಡೆ ದರ್ಸ್ ನಡೆಸಿದ ಉಸ್ತಾದರು 1929ರಲ್ಲಿ ಅಂದರೆ ಸಮಸ್ತದ ಆರಂಭದಿಂದಲೂ ಸಮಸ್ತದ ಮುಖವಾಣಿಯಾದ *ಅಲ್ ಬಾಯನ್* ಪತ್ರಿಕೆಯ ಸಂಪಾದಕರಾಗಿದ್ದರು. ಮಾತ್ರವಲ್ಲ ಇಸ್ಲಾಮಿಕ್ ಸಾಹಿತ್ಯ ರಚನಾಕಾರರೂ ಆಗಿದ್ದರು.

ಅರಬಿಯಲ್ಲಿ ಭಾಷೆಯಲ್ಲಿ ಪಾಂಡೀತ್ಯಗಳಿಸಿದ್ದ ಮಹಾನರು ಅಲ್ ಬಾಯನ್ ಪ್ರಕಾಶನದಲ್ಲಿ  *ಅಲ್ ಬಯಾನುಸ್ಸಾಫಿ, ಫೀ ಇಲ್ಮಿನ್ ಅರುಳ್, ಅಲ್ ಮವಾಹಿಬುಲ್ ಜಲೀಲ್, ಫೀ ಮನಾಖಿಬಿ ಸಯ್ಯಿದ್ ಜಮಲುಲ್ಲೈಲ್, ಅಲ್ ಖೌಲುಸ್ಸದೀದ್ಫೀ ಅಹ್ಕಾಮಿ ತಖ್'ಲೀದ್* ಸೇರಿದಂತೆ ಸುಮಾರು ಇಪ್ಪತ್ತೈದು ಗ್ರಂಥಗಳನ್ನು ರಚಿಸಿದ್ದಾರೆ.

ಹಿಜರಿ 670ರಲ್ಲಿ ತಾನೂರ್ ವಲಿಯ ಕುಳಂಙರ ಮಸೀದಿಯ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ಲಾಹಿಲ್ ಹಲ್'ರಮಿ(ರ) ರಿಂದ ಆರಂಭವಾಗಿ ಉಮರ್ ಖಾಲಿ(ಖ.ಸಿ) ಔವುಕೇೂಯ ಮುಸ್ಲಿಯಾರ್(ಖ.ಸಿ) ಶೈಖ್ ಅಬ್ದುರ್ರಹ್ಮಾನ್ ನಖ್ಶಬಂದಿ(ಖ.ಸಿ) ಯೂಸುಫುಲ್ ಫಳ್'ಫರಿ(ಖ.ಸಿ) ಆಮಿನು ಮಾಂಡೆಕತ್ತ್ ಪರಿಕುಟ್ಟಿ ಮುಸ್ಲಿಯಾರ್(ಖ.ಸಿ) ಮುಂತಾದ ಮಹಾಭಾವರು ನಡೆಸಿದ ದರ್ಸನೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದ ಪಾಂಙಿಲ್ ಉಸ್ತಾದರು ತಮ್ಮ ಅವಿರತ ಶ್ರಮದಿಂದ ಆ ದರ್ಸನ್ನು ಮೇಲ್ದರ್ಜೆಗೇರಿಸಿ *ಇಸ್ಲಾಹುಲ್ ಉಲೂಮ್* ಎಂಬ ಕಾಲೇಜನ್ನಾಗಿಸಿದರು. ಮಾತ್ರವಲ್ಲ ಇಸ್ಲಾಹುಲ್ ಉಲೂಮನ್ನು ಕೇರಳದ ಉದ್ದಗಲಕ್ಕೂ ವಿಸ್ತರಿಸಬೇಕೆಂಬುದು ಅವರ ಕನಸಾಗಿತ್ತು. 
 
ನೂತನವಾದಿಗಳ ವಂಚನೆಗೀಡಾಗದೆ ಸಮೂಹವನ್ನು ಅಹ್ಲ್ ಸುನ್ನತ್ ವಲ್ ಜಮಾಅತ್ತಿನ ಆಶಯ ಆದರ್ಶಗಳಡಿಯಲ್ಲಿ ಜನರನ್ನು ಒಗ್ಗೂಡಿಸಲು ಶ್ರಮಿಸಿದ ಮಹಾನರು ಪಾಂಙಿಲ್ ಜುಮಾ ಮಸೀದಿಯ ಪಕ್ಕ ಸಮಸ್ತದ ಮತ್ತೇೂರ್ವ ಸದಸ್ಯರಾದ ಸಿ.ಎಸ್. ಬೀರಾನ್ ಮುಸ್ಲಿಯಾರ್ (ಖ:ಸಿ)ರ ಮಖ್ಬರದ ಸಮೀಪ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ದುಲ್'ಹಜ್ಜ್ 25 ಪಾಂಙಿಲ್ ಉಸ್ತಾದರ (ಖ:ಸಿ)ರ ವಾರ್ಷಿಕ ದಿನವಾಗಿದೆ.

ದಾರಿ: ಕುರುವ, ಪಡಪ್ಪರಬ್,
ಪಾಂಙಿಲ್, ಮಲಪ್ಪುರಂ.
🔰🔰🔰🔰🔰🔰🔰🔰🔰

No comments:

Post a Comment