🏵 *ಪ್ರವಾದಿ ಸಂದೇಶ*🏵
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀
*بِسْمِ اللّٰهِ الرَّحْمَانِ الرَّحِيمْ*
*ಸಂಚಿಕೆ* 0⃣1⃣
🐟 *ಕೆನಡಾದ ಆರ್ಟಿಕ್ ಸಮುದ್ರದ ಬಳಿಯೊಂದು ಸ್ಥಳವಿದೆ. ಅಲ್ಲಿ ಸಾಲ್ಮನ್ ಮೀನು ಮೊಟ್ಟೆಯಿಡುತ್ತದೆ. ಮೊಟ್ಟೆಯೊಡೆದು ಹೊರ ಬಂದ ಮರಿ ಮೀನುಗಳು ಸಾಲ್ಮನ್ ಕ್ರಿಕ್ ಆರ್ಟಿಕ್ ಸಮುದ್ರದಿಂದ ಕೆಳಗೆ ಬಂದು ಫೆಸಿಫಿಕ್ ಸಮುದ್ರದಲ್ಲಿ ಸಾಗಿ ನೇರ ಸೌತ್ ಆಫ್ರಿಕ ದಾಟಿ ಅಟ್ಲಾಂಟಿಕ್ ಸಮುದ್ರವನ್ನೂ ಹಾದು ಪುನಃ ಆರ್ಟಿಕ್ ಸಮುದ್ರದ ಸಾಲ್ಮನ್ ಕ್ರಿಕ್ ಗೆ ಮೂರು ವರ್ಷದ ಬಳಿಕ ತಲುಪುತ್ತದೆ. ಆಗ ಅದು ದೊಡ್ಡ ಸಾಲ್ಮನ್ ಮೀನಾಗಿ ಮಾರ್ಪಟ್ಟಿರುತ್ತದೆ. ನಂತರ ಅಲ್ಲಿ ಮೊಟ್ಟೆಯಿಟ್ಟು ತನ್ನ ತಲೆ ಜಜ್ಜಿ ಸತ್ತು ಹೋಗುತ್ತದೆ. ಸುಮಾರು 32 ಲಕ್ಷ ಟನ್ ಸಾಲ್ಮನ್ ಮೀನುಗಳು ಒಂದು ಸಮಯದಲ್ಲಿ ಸತ್ತು ಬೀಳುತ್ತದೆ. ಪ್ರಸ್ತುತ ಶವಗಳನ್ನು ತಿನ್ನಲು ಆ ಪ್ರದೇಶವಿಡೀ ಕರಡಿಗಳು ತುಂಬಿರುತ್ತದೆ.*
🐣 ಹಲ್ಲಿಯ ಮೊಟ್ಟೆಯನ್ನು ನೀವು ಕಂಡಿರಬಹುದು. ಮೊಟ್ಟೆ ಹೊರಬಂದ ಪ್ರಥಮ ದಿವಸ ಅದರೊಳಗೆ ಕೇವಲ ನೀರಿರುತ್ತದೆ. ಹನ್ನೊಂದು ದಿವಸಗಳ ಬಳಿಕ ಆ ದ್ರವವೂ ಒಂದು ಹಲ್ಲಿಯಾಗಿ ಹೊರ ಬರುತ್ತದೆ.
🐓 ಒಂದು ಕೋಳಿ ಮೊಟ್ಟೆಯಿಟ್ಟರೆ 21 ದಿನವಾದಾಗ ಅದರೊಳಗಿನಿಂದ ಕಾಲು, ಉಗುರು, ರೆಕ್ಕೆಗಳಿರುವ ಕೋಳಿಮರಿ ಹೊರಬರುತ್ತದೆ. ಮರಿ ಹೊರಬರಲು ಸಮಯವಾದ ಒಂದು ಕೋಳಿ ಮೊಟ್ಟೆ ಮತ್ತು ಬಾತುಕೋಳಿ ಮೊಟ್ಟೆಯನ್ನು ನೀರು ತುಂಬಿರುವ ಕೆರೆ ಸಮೀಪವಿಟ್ಟು ಗಮನಿಸಿ. ಅವೆರಡರಿಂದ ಎರಡು ಮರಿಗಳು ಹೊರಬರುತ್ತದೆ. ಎರಡು ಮರಿಗಳೂ ಆಗ ನೀರನ್ನು ನೋಡಿ ನಿಲ್ಲುತ್ತದೆ. ಕೋಳಿ ಮರಿ ನೀರನ್ನು ನೋಡಿ ಹಿಂದೆ ಸರಿಯುತ್ತದೆ. ಆದರೆ ತಾನು ನೀರಿಗಿಳಿದರೆ ಮುಳುಗಲಾರೆ ಎಂದು ಬಾತುಕೋಳಿಗೆ ತಿಳಿದಿರುತ್ತದೆ. ಎರಡೂ ಹೊರ ಬಂದಿರುವುದು ಮೊಟ್ಟೆಯಿಂದಲೇ.
*ಇಲ್ಲಿ ಈ ಎರಡು ಮರಿಗಳಿಗೆ ಇಂಥಹಾ ವಿವರಗಳನ್ನು ನೀಡಿದ್ದು ಯಾರು..? ಮೇಲಿನ ಉದಾಹರಣೆಯಲ್ಲಿ ಸಾಲ್ಮನ್ ಮೀನಿಗೆ ಆರ್ಟಿಕ್ ಸಮುದ್ರದಿಂದ ನ್ಯೂಝಿಲಾಂಡ್ ತನಕ ಸಾಗಿ ಪುನಃ ಅಲ್ಲಿಗೇ ಬಂದು ತಲೆ ಜಜ್ಜಿ ಸಾಯಬೇಕೆಂಬ ಅರಿವು ನೀಡಿದ್ದು ಯಾರು..? ಇಲ್ಲಿ ಮನುಷ್ಯನ ಬುದ್ಧಿ ಎಚ್ಚರವಾಗಬೆಕಿದೆ. ಮನುಷ್ಯನು ಅವನ ಶರೀರದಲ್ಲಿ ಹೆಚ್ಚು ಉಪಯೋಗಿಸುವುದು ಯಾವುದನ್ನು ಎಂದು ಕೇಳಿದರೆ ಕೆಲವೊಮ್ಮೆ ಕಣ್ಣು, ಕಿವಿ, ನಾಲಗೆ ಎಂಬ ಉತ್ತರವಾಗಿರಬಹುದು. ಆದರೆ ವಾಸ್ತವದಲ್ಲಿ ಅವನು ಹೆಚ್ಚು ಉಪಯೋಗಿಸಬೇಕಾದುದು ಅವನ ಬುದ್ಧಿಯನ್ನು. ಅದನ್ನು ಉಪಯೋಗಿಸಿ ಈ ಜಗತ್ತಿನ ಸೃಷ್ಟಿಕರ್ತನನ್ನು ಅವನು ತಿಳಿಯಬೇಕಿದೆ. ತಾಯಿಯ ಗರ್ಭದಿಂದ ಹೊರಬರುವ ಅಥವ ಮೊಟ್ಟೆಯೊಡೆದು ಹೊರ ಪ್ರಪಂಚಕ್ಕೆ ಕಾಲಿಡುವ ಜೀವಿಗಳಿಗೆ ಅಗತ್ಯ ಅರಿವುಗಳನ್ನು ನೀಡಲು ಅದರ ಸೃಷ್ಟಿಕರ್ತನಿಗಲ್ಲದೇ ಸಾಧ್ಯವಿಲ್ಲ. ಪ್ರತಿಯೊಬ್ಬರ ಶರೀರಗಳನ್ನು ನಿಯಂತ್ರಿಸುವ ದೈವಿಕ ಶಕ್ತಿಯೊಂದಿದೆ. ಅದನ್ನು ಅಂಗೀಕರಿಸುವವನು ಮಾತ್ರ ನಿಜವಾದ ಬುದ್ಧಿವಂತ. ಬುದ್ಧಿಜೀವಿ ಯಾರು ಎಂದು ಕೇಳಿದರೆ ಶಾಸ್ತ್ರಜ್ಞ, ಸಂಶೋಧಕ ಎನ್ನುವ ಬದಲು ಏಕ ದೇವ ಸಿದ್ಧಾಂತವನ್ನು ಅಂಗೀಕರಿಸುವವನೇ ಬುದ್ಧಿ ಜೀವಿ ಎನ್ನಬೇಕಿದೆ. ಎಲ್ಲಾ ಧರ್ಮದ ಧರ್ಮ ಗ್ರಂಥಗಳಲ್ಲಿ ದೇವವಿಶ್ವಾಸ ಮತ್ತು ಏಕದೇವತ್ವವನ್ನು ಸ್ಪಷ್ಟಪಡಿಸಲಾಗಿದೆ.*
*{ಮುಂದುವರೆಯುವುದು}*
No comments:
Post a Comment