🏵 *ಪ್ರವಾದಿ ಸಂದೇಶ*🏵
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀
*بِسْمِ اللّٰهِ الرَّحْمَانِ الرَّحِيمْ*
*ಸಂಚಿಕೆ* 0⃣2⃣
ಈ ಪ್ರಪಂಚದಲ್ಲಿರುವ ವಿವಿಧ ಸೃಷ್ಟಿಗಳು ಸ್ವಯಂ ನಿರ್ಮಿತ ಎನ್ನುವುದು ಅತ್ಯಂತ ಬಾಲಿಶವಾಗಿದೆ. ಅಅ್ ರಾಬಿ (ಗ್ರಾಮೀನವಾಸಿ)ಯೊಬ್ಬ ಮುಸ್ಲಿಮನಾದಾಗ ಅವನಲ್ಲಿ ಕೇಳಲಾಯಿತು. "ನೀನು ಹೇಗೆ ಅಲ್ಲಾಹನನ್ನು ಅರಿತೆ..?" ಆಗ ಅವನ ಉತ್ತರ ಹೀಗಿತ್ತು. "ಒಂಟೆಯ ಮಲವೂ ಒಂಟೆಯ ಮೇಲೆ ಅರಿವು ನೀಡುತ್ತದೆ. ಕಾಲ್ಪಾದದ ಗುರುತು ಯಾರೋ ಅಲ್ಲಿ ನಡೆದು ಹೋದುದನ್ನು ತಿಳಿಸುತ್ತದೆ. ಹಾಗಾದರೆ ಈ ಕಾಣುವ ಆಕಾಶ ಭೂಮಿಗಳು ಸೃಷ್ಟಿಕರ್ತನೊಬ್ಬನಿದ್ದಾನೆ ಎಂಬುವುದನ್ನು ತಿಳಿಸುವುದಿಲ್ಲವೇ..?" ಈ ಪರಮ ಸತ್ಯದೆಡೆಗೆ ತಲುಪಿದರೆ ಮಾತ್ರ ಮನುಷ್ಯನಿಗೆ ವಿಜಯಿಯಾಗಲು ಸಾಧ್ಯ.
ಸೃಷ್ಟಿಗಳು ದೇವನಾಗಲು ಸಾಧ್ಯವಿಲ್ಲ. ಸ್ವಯಂ ರಕ್ಷಣೆಯೇ ಅಸಾಧ್ಯವಾದ ಪ್ರತಿಮೆಗಳು, ವಿಗ್ರಹಗಳು, ಚಿತ್ರಗಳು ಹೇಗೆ ತಾನೇ ದೇವರಾದೀತು..? ಜನಿಸುವವನು, ಮರಣ ಹೊಂದುವವನು ದೇವನಾಗುವುದಾದರೂ ಹೇಗೆ..? ಅಲ್ಲಿ ಅವನು ಜನಿಸುವುದಕ್ಕಿಂತ ಮೊದಲು ಈ ಜಗತ್ತನ್ನು ನಿಯಂತ್ರಿಸಿದ್ದು ಯಾರು..? ಅವನು ತೀರಿದ ನಂತರ ಯಾರು ನಿಯಂತ್ರಿಸುವುದು..? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ವಾಸ್ತವದಲ್ಲಿ ದೇವನಾಗುವವನು ಏಕನಾಗಿರಬೇಕು. ನಿರಾಶ್ರಯನಾಗಿರಬೇಕು. ಎಲ್ಲರೂ ಅವನನ್ನು ಆಶ್ರಯಿಸಬೇಕು. ಅವನು ಜನ್ಮ ನೀಡಬಾರದು. ಅವನಿಗೆ ಜನ್ಮ ನೀಡಲೂ ಬಾರದು. ಅವನಿಗೆ ಸಮಾನರಾಗಿ ಯಾರೂ ಇರಕೂಡದು. ಈ ವ್ಯಾಖ್ಯೆ ಯಾರಿಗೆ ಅನ್ವಯಿಸುತ್ತದೆ ಅವನನ್ನು ದೈವವೆಂದು ಅಂಗೀಕರಿಸಲೇಬೇಕು. ಅಲ್ಲದವನು ದೇವನಾಗಲು ಅರ್ಹನಲ್ಲ. ಯಾವ ಸೃಷ್ಟಿಯೊಂದಿಗಾದರೂ ಸಾಮ್ಯತೆಯಿದ್ದರೆ ಅವನೆಂದು ದೇವನೆಂದು ಒಪ್ಪಲು ಬುದ್ಧಿಯುಳ್ಳವರಿಗೆ ಸಾಧ್ಯವಿಲ್ಲ. ಆದ್ದರಿಂದ ದೈವದ ಇರುವಿಕೆಯನ್ನು ನಿಷೇಧಿಸುವುದು, ಕಂಡಕಂಡ ಸೃಷ್ಟಿಗಳನ್ನು ದೇವರೆಂದು ನಂಬಿ ಆರಾಧಿಸುವುದು ಒಮ್ಮೆಯೂ ನೇರ ಹಾದಿಯಾಗಲೂ ಸಾಧ್ಯವಿಲ್ಲ.
*{ಮುಂದುವರೆಯುವುದು}*
No comments:
Post a Comment