*ಉತ್ತಮ* *ಬಾಳಸಂಗತಿಯ* *ಆಯ್ಕೆ* *ಹೇಗೆ* *ಎಂಬುದರ* *ಬಗ್ಗೆ* *ಚಿಂತಿತರಾಗಿದ್ದೀರ* ?
👉💐👉💐👉💐👉💐
ಅಸ್ಸಲಾಮು ಅಲೈಕುಂ ಸ್ನೇಹಿತರೆ, ಮೊದನೇಯದಾಗಿ ಒಬ್ಬ ಗಂಡು ತನಗೆ ಉತ್ತಮ ಬಾಳ ಸಂಗಾತಿಯನ್ನು ಹೇಗೆ ಆರಿಸಬಹುದೆಂಬ ಬಗ್ಗೆ ಚರ್ಚೆ ಮಾಡೋಣ.
👉 *ನಿಮ್ಮ* *ಮಕ್ಕಳಿಗೆ* *ಉತ್ತಮ* *ತಾಯಿಯನ್ನು* *ಆರಿಸಿ* :ಹೌದು ಇದು ಬಹಳ ಮುಖ್ಯ. ಬಹುಷಃ ತಂದೆಯಾದವನಿಗೆ ತನ್ನ ಕೆಲಸದ ಒತ್ತಡದಲ್ಲಿ ಮಕ್ಕಳ ಬಗ್ಗೆ ಅಷ್ಟು ಸರಿಯಾಗಿ ಗಮನ ಹರಿಸಲು ಸಾಧ್ಯವಾಗದೇ ಹೋಗಬಹುದು. ಈ ಸಂದರ್ಭದಲ್ಲಿ ಮಕ್ಕಳು ತಾಯಿಯೊಂದಿಗೆ ಬೆಳೆಯುವ ಕಾರಣ ತಾಯಿ ಉತ್ತಮಳಾಗಿದ್ದರೆ ಆಕೆ ತನ್ನ ಮಕ್ಕಳನ್ನು ಸರಿಯಾದ ಮಾರ್ಗದರ್ಶನ ನೀಡಿ ಬೆಳೆಸುವಳು.
ಯಾರಾದರೂ ಕಳಿತ ಹಣ್ಣುಗಳನ್ನು ಉತ್ಪಾದಿಸಲು ಬಯಸಿದರೆ, ಅವರು ನಿಜವಾಗಿಯೂ ಹೆಚ್ಚು ಫಲವತ್ತಾದ ಭೂಮಿಯನ್ನು ಹುಡುಕುತ್ತಾರೆ. ಹಾಗೆ ವಿವಾಹವಾಗಲಿರುವ ವ್ಯಕ್ತಿಯ ಯೋಜನೆಗಳಲ್ಲಿ ಮಹತ್ವಪೂರ್ಣವಾದ ಅಂಶವೆಂದರೆ, ನ್ಯಾಯಯುತವಾದ ಉತ್ತಮ ಸಂತತಿಯನ್ನು ಉತ್ಪತ್ತಿ ಮಾಡುವುದಾಗಿದೆ. ಆ ಸಂತಾನಗಳು ಅಲ್ಲಾಹನನ್ನು ಆರಾಧಿಸುವ ಮತ್ತು ತಮ್ಮ ತಂದೆ ತಾಯಂದಿರ ವಿಷಯದಲ್ಲಿ ನೀತಿ ಪಾಲಿಸುವಂತಹ ಮಕ್ಕಳಾಗಿರಬೇಕು.
👉 *ಪ್ರವಾದಿ* *ಮುಹಮ್ಮದ್* ( *ಸ.ಅ* )ರವರು ಒಬ್ಬ ವಿವಾಹವಾಗಳು ನಾಲ್ಕು ಮಾನದಂಡಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ, ಅವುಗಳೆಂದರೆ, “ಮಹಿಳೆಯರನ್ನು ನಾಲ್ಕು ಕಾರಣಗಳಿಗಾಗಿ ಮದುವೆಯಾಗಿರಿ; ಅವಳ ಸಂಪತ್ತು, ಆಕೆಯ ವಂಶಾವಳಿ, ಅವಳ ಸೌಂದರ್ಯ ಮತ್ತು ಅವಳ ಧರ್ಮ. ಆದ್ದರಿಂದ ನೀವು ಮಹಿಳೆಯ (ಉತ್ತಮ) ಧಾರ್ಮಿಕ ಗುಣಗಳನ್ನು ಆರಿಸಿರಿ.” ವಿವಾಹ ಸಂಬಂಧದ ಅನ್ವೇಷಣೆಯಲ್ಲಿ ಧರ್ಮವು ಮೊದಲ ಆಯ್ಕೆಯಾಗಿರಬೇಕು ಎಂಬುದಾಗಿದೆ ಇದರ ಸಾರಂಶ. ಆದರೆ ನಮ್ಮ ನಡುವೆ ಹೆಚ್ಚಿನ ಪ್ರಕರಣಗಳಲ್ಲಿ ಧರ್ಮವು ಆಯ್ಕೆಯ ಪಟ್ಟಿಯಲ್ಲೇ ಇರುವುದಿಲ್ಲವೆಂಬುದು ದುರಂತ.
👉 *ಕುರ್‌ಆನ್* ಹೇಳುತ್ತೆ;
“ಆದ್ದರಿಂದ ನೀತಿವಂತ *ಹೆಂಡತಿಯರು* ತಮ್ಮ *ಗಂಡನಿಗೆ* ವಿಧೇಯರಾಗಿರುತ್ತಾರೆ ಮತ್ತು ತಮ್ಮ ಗಂಡನ ಅನುಪಸ್ಥಿತಿಯಲ್ಲಿ *ಅಲ್ಲಾಹನು* ಅವರಿಗೆ ಸಂರಕ್ಷಿಸಲು ಆಜ್ಞಾಪಿಸಿದ ಎಲ್ಲ ವಿಷಯಗಳಲ್ಲೂ ಅವರು ಕಾವಲುಗಾರರಾಗಿರುತ್ತಾರೆ.” [ಸುರಾ ಅನ್-ನಿಸ: 34]
ಧಾರ್ಮಿಕ ಆಜ್ಞಾಧಾರಕ (ಖ್ವಾನಿತಾತ್) ಇಲ್ಲಿ ಮಹಿಳೆಯರು ತಮ್ಮ ಗಂಡಂದಿರಿಗೆ ವಿಧೇಯರಾಗುತ್ತಾರೆ – ತಮ್ಮ ಗೌರವ, ಸಂಪತ್ತು ಮತ್ತು ಜೀವನವನ್ನು ಅವರ ಗಂಡಂದಿರ ಅನುಪಸ್ಥಿತಿಯಲ್ಲಿ ಅವರು ಕಾಪಾಡಿಕೊಳ್ಳುವರು ಎಂದು ಇಲ್ಲಿ ಉಲ್ಲೇಖಿಸಲಾಗಿದೆ.
👉 ಕೆಟ್ಟ ಮೂಲದ ಅಥವಾ ಪಾರಂಪರ್ಯ ಉತ್ತಮವಿಲ್ಲದ ಸುಂದರವಾದ ಸ್ತ್ರೀಯನ್ನು ಒಬ್ಬ ವ್ಯಕ್ತಿಯು ವಿವಾಹವಾಗುವುದನ್ನು ಪ್ರವಾದಿ(ಸ) ರವರು “ಹಸಿರು ಗೊಬ್ಬರ”ಕ್ಕೆ ಹೋಲಿಕೆ ಮಾಡಿದ್ದಾರೆ. ಪ್ರವಾದಿ(ಸ)ರವರ ಸಹಪಾಟಿಗಳು ಆಗ ಇದರ ತಾತ್ಪರ್ಯವೇನೆಂದು ಪ್ರವಾದಿ(ಸ)ರವರಲ್ಲಿ ಕೇಳುತ್ತಾರೆ. ಆಗ ಪ್ರವಾದಿ(ಸ) ಹೇಳಿದ್ದು, ಅವಳೊಬ್ಬಳು ವಂಶಪಾರಂಪರ್ಯ ಅಥವಾ ಮನೆತನ ಉತ್ತಮವಿಲ್ಲದ ಅಥವಾ ಕೆಟ್ಟ ಮನೆತನದಲ್ಲಿ ಬೆಳೆದ ಸುಂದರವಾದ ಸ್ತ್ರೀಯಾಗಿರುತ್ತಾಳೆ. ಆಕೆಯ ಕಾರಣದಿಂದಾಗಿ ಆಕೆಯಲ್ಲಿ ಹುಟ್ಟುವ ಮಕ್ಕಳಿಗೂ ಆಕೆಯ ವಂಶದ ಗುಣ ಬರುತ್ತದೆ.
ಮತ್ತೊಂದೆಡೆ, *ಪ್ರವಾದಿ*( *ಸ.ಅ*) ರು ಉತ್ತಮ ಧಾರ್ಮಿಕ ಗುಣಗಳನ್ನು ಹೊಂದಿದ ಮಹಿಳೆಯನ್ನು ಪ್ರಶಂಸಿಸುತ್ತಾ, “ಒಬ್ಬ ಮನುಷ್ಯನು ಸಂಗ್ರಹಿಸಿದ ಅತ್ಯುತ್ತಮ ನಿಧಿಯನ್ನು ನಾನು ತಿಳಿಸಲೇ- ಆಕೆ ನಿಮ್ಮ ನೀತಿವಂತ ಹೆಂಡತಿ” ಯಾಗಿದ್ದಾಳೆ ಎಂದು ಹೇಳಿದ್ದಾರೆ. [ಅಲ್-ಹಾಕಿಮ್ರಿಂದ ವರದಿ ಮಾಡಲಾಗಿದೆ]
ಮತ್ತೊಂದು ಹದೀಸಿನಲ್ಲಿ ಅವರು(ಸ) ಹೇಳಿದರು: “ನೀವು ಉತ್ತಮ ಬೀಜಗಳನ್ನು (ಒಳ್ಳೆಯ ತಾಯಿ) ಆರಿಸಿಕೊಳ್ಳಿ, ನಿಜವಾಗಿಯೂ ಸಂತಾನೋತ್ಪತ್ತಿಯು ಒಂದು ಕಾರ್ಯತಂತ್ರವಾಗಿದೆ.” [ಇಬ್ನ್ ಮಾಜಾರಿಂದ ವರದಿ ಮಾಡಲಾಗಿದೆ]
👉 ತಂದೆಗೆ ತನ್ನ ಮಕ್ಕಳ ಮೇಲಿರುವ ಹಕ್ಕು ಭಾಧ್ಯತೆಯಾಗಿದೆ, ಅವರಿಗೆ ಒಬ್ಬಳು ಉತ್ತಮ ತಾಯಿಯನ್ನು ಆಯ್ಕೆ ಮಾಡಿಕೊಡುವುದು.
"ಒಂದು ವ್ಯಕ್ತಿ ಒಮ್ಮೆ ಖಲೀಫ ಉಮರ್ ಬಿನ್ ಅಲ್-ಖತ್ತಾಬ್ (ರ) ರವರ ಬಳಿ ಬಂದು ತನ್ನ ಮಗನು ತನಗೆ ಅವಿಧೇಯನಾಗಿರುವುದರ ಬಗ್ಗೆ ದೂರಿದನು. ಆ ವ್ಯಕ್ತಿಯು ತನ್ನ ಮಗನನ್ನು ಖಲೀಫಾರ ಬಳಿಗೆ ತನ್ನ ಮಗನನ್ನು ಕರೆತಂದು ಮತ್ತು ಅವನ ಅಸಹಕಾರಕ್ಕಾಗಿ ಅವನನ್ನು ದೂಷಿಸಲು ಪ್ರಾರಂಭಿಸಿದನು.
ಆಗ ಮಗ ಖಲೀಫಾರಲ್ಲಿ ಕೇಳಿದನು;
“ಒಬ್ಬ ಮಗನ ವಿಷಯದಲ್ಲಿ ಆತನ ತಂದೆಯು ಯಾವುದೇ ಹಕ್ಕು ಭಾಧ್ಯತೆಯನ್ನು ಹೊಂದಿಲ್ಲವೇ?” ಎಂದು ಮಗನು ಕೇಳಿದನು.
ಖಲೀಫಾ “ಖಂಡಿತವಾಗಿಯೂಇದೆ” ಎಂದು ಉತ್ತರಿಸಿದರು.
ಮಗ ಕೇಳಿದ “ಅದು ಏನು?”
ಖಲೀಫಾ ಉಮರ್ ಉತ್ತರಿಸಿದರು: “ಅವನ ತಂದೆ ಬಹಳ ಸೂಕ್ಷ್ಮತೆಯಿಂದ ಆತನಿಗೆ ಒಬ್ಬ ಉತ್ತಮ ತಾಯಿಯನ್ನು ಆಯ್ಕೆ ಮಾಡಿಕೊಡುವ ಜವಾಬ್ದಾರಿಯನ್ನು ಹೊಂದಿದ್ದಾನೆ, ಅವನು ತನ್ನ ಮಗನಿಗೆ ಒಂದು ಒಳ್ಳೆಯ ಹೆಸರನ್ನು ಇಡಬೇಕು ಮತ್ತು ಅವನು ಆ ಮಗನಿಗೆ ಕುರ್‌ಆನಿನ ಜ್ಞಾನವನ್ನು ಬೋಧಿಸಬೇಕು.”
ಇದನ್ನು ಕೇಳಿದ ಮಗ ಬಹಳ ದುಃಖದಿಂದ ಖಲೀಫಾರ ಕಡೆಗೆ ನೋಡಿ ಹೀಗೆ ಹೇಳಿದನು: “ನನ್ನ ತಂದೆ ಈ ವಿಷಯಗಳಲ್ಲಿ ಯಾವುದನ್ನೂ ಮಾಡಲಿಲ್ಲ. ನನ್ನ ತಾಯಿಯು ಅವಳು ಕಪ್ಪು ಗುಲಾಮ ಮಹಿಳೆಯಾಗಿದ್ದಳು, ಅದು ಕೂಡ ಜೊರಾಸ್ಟ್ರಿಯನ್ (ಮಾಜೊವೋಸ್) ಗೆ ಸೇರಿದವಳು. ಅವರು ನನಗೆ “ಜುಆಲ್” ಎಂದು ಹೆಸರಿಟ್ಟಿದ್ದಾರೆ. ಮತ್ತು ಅವರು ನನಗೆ ಕುರ್‌ಆನಿನ ಯಾವುದೇ ಒಂದು ಭಾಗವನ್ನೂ ಕಲಿಸಲಿಲ್ಲ.
ಇದನ್ನು ಕೇಳಿ, ಖಲೀಫಾ ಉಮರ್ ಆ ತಂದೆಯ ಕಡೆಗೆ ತಿರುಗಿ ಹೇಳಿದರು: “ನಿನ್ನ ಮಗನು ನಿನಗೆ ಅವಿಧೇಯನಾಗಿರುವುದರ ಬಗ್ಗೆ ದೂರು ನೀಡಲು ನೀನು ನನ್ನ ಬಳಿಗೆ ಬಂದಿದ್ದರೂ ಕೂಡ, ಅದಕ್ಕೂ ಮುಂಚೆ ನೀನು ನಿನ್ನ ಮಗನಿಗೆ ಅನ್ಯಾಯ ಮಾಡಿರುವೆ.” ಎಂದು ಹೇಳಿದರು.
ಅಬುಲ್-ಅಸ್ವದ್ ಅದ್ದುಆಲೀ ಯವರು ಒಮ್ಮೆ ತಮ್ಮ ಮಕ್ಕಳನ್ನು ಕರೆದು ಹೀಗೆ ಹೇಳುತ್ತಾರೆ: “ನೀವು ಮಕ್ಕಳಾಗಿದ್ದಾಗ ಮತ್ತು ನೀವು ಬೆಳೆಯುತ್ತಿರುವಾಗ ಮತ್ತು ನೀವು ಹುಟ್ಟುವ ಮೊದಲು, ನಾನು ನಿಮಗೆ ಒಬ್ಬ ಉತ್ತಮ ತಂದೆಯಾಗಿದ್ದೆ ಎಂಬ ವಿಷಯದಲ್ಲಿ ನನಗೆ ಹೆಮ್ಮೆ ಇದೆ.” ಇದನ್ನು ಕೇಳಿದ ಮಕ್ಕಳು ತಮ್ಮ ತಂದೆಯೊಡನೆ ಹೀಗೆ ಕೇಳಿದರು: “ನಾವು ಹುಟ್ಟುವುದಕ್ಕಿಂತ ಮುಂಚೆ ನೀವು ನಮಗೆ ಉತ್ತಮ ತಂದೆಯಾಗಿರಲು ಹೇಗೆ ಸಾಧ್ಯ?” ತಂದೆ ಹೇಳಿದರು; “ನಾನು ನಿಮಗೆ ಉತ್ತಮಳಾದ ತಾಯಿಯನ್ನು ಆರಿಸಿದರುವೆನು.”
👉 ಇನ್ನು ಎರಡನೇಯದಾಗಿ ಒಬ್ಬ ಮಹಿಳೆಯೂ ಕೂಡ ತನಗೆ ಉತ್ತಮ ಗಂಡನನ್ನು ಬಯಸುತ್ತಾಳೆ ಎಂಬ ವಿಷಯವಾಗಿದೆ;
ಒಬ್ಬ ಗಂಡು ನೀತಿವಂತ ಹೆಂಡತಿಗಾಗಿ ಹುಡುಕಾಡಿದಂತೆ ಬೇಕಾದಂತೆಯೇ, ಒಬ್ಬ ಹೆಣ್ಣಿಗೂ ತನಗಾಗಿ ಒಬ್ಬ ನೀತಿವಂತ ಗಂಡನನ್ನು ಆರಿಸಿಕೊಳ್ಳವ ಹಕ್ಕಿದೆ.
ಅಬೂ ಹುರೈರಾ(ರ) ಹೇಳಿದ್ದಾರೆ; ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಧರ್ಮವು ಅತ್ಯುತ್ತಮವಾಗಿದ್ದು ನೀವು ತೃಪ್ತಿಪಟ್ಟಿದ್ದಲ್ಲಿ ಅಂತಹ ವ್ಯಕ್ತಿಯ ಸಂಬಂಧ ನಿಮ್ಮ ಮಗಳಿಗೆ ಬಂದಾಗ ನೀವು ನಿಮ್ಮ ಮಗಳನ್ನು ಆ ವ್ಯಕ್ತಿಗೆ ವಿವಾಹ ನಿಶ್ಚಯಮಾಡಿ ಕೊಡುವುದಾಗಿದೆ ಉತ್ತಮ. ನೀವು ಹಾಗೆ ಮಾಡದಿದ್ದಲ್ಲಿ ಭೂಮಿಯಲ್ಲಿ ಕ್ಷೋಭೆ ಉಂಟಾಗಲು ಅದೇ ಕಾರಣವಾಗಬಹುದು. ಇಬ್ನ್ ಮಾಜಃ (1967)
ಧರ್ಮದಲ್ಲಿ ನೂತನವಾದವನ್ನು ಸೇರಿಸಿ ಆಚರಿಸುವ ಒಬ್ಬ ನೂತನವಾದಿಯೊಂದಿಗೆ ತಂದೆಯು ತನ್ನ ಮಗಳ ವಿವಾಹ ನಡೆಸಬಾರದೆಂಬ ನಿಯಮವೂ ಇದೆ. ಆ ರೀತಿ ಆದಲ್ಲಿ ತಂದೆಯು ತನ್ನ ಮಗಳೊಂದಿಗೆ ಸಂಬಂಧ ಕಡಿದುಕೊಂಡಂತೆ ಎಂದು ಫುದೈಲ್ ಇಬ್ನ್ ಇಯಾದ್ ರಹಿಮಹುಲ್ಲಾಹ್ ಅಭಿಪ್ರಾಯ ಪಟ್ಟಿದ್ದಾರೆ.
ಮದುವೆಯ ಮೊದಲ ರಾತ್ರಿಯಂದು ವರನು ತನ್ನ ವಧುವಿನ ತಲೆಯ ಮೇಲೆ ಕೈ ಇಟ್ಟು ಈ ರೀತಿ ಪ್ರಾರ್ಥಿಸಬೇಕು,
اللَّهُمَّ إِنِّي أَسْأَلُكَ خَيْرَهَا ، وَخَيْرَ مَا جَبَلْتَهَا عَلَيْهِ ، وَأَعُوذُ بِكَ مِنْ شَرِّهَا ، وَشَرِّ مَا جَبَلْتَهَا عَلَيْهِ
ಓ… ಅಲ್ಲಾಹ್! ಇವಳೊಳಗಿರುವ ಒಳ್ಳೆಯತನಕ್ಕಾಗಿ ನಾನು ನಿನ್ನನ್ನು ಬೇಡುತ್ತಿದ್ದೇನೆ. ಮತ್ತು ಇವಳೊಳಗಿರುವ ದುಷ್ಟತನದಿಂದ ನಾನು ನಿನ್ನಲ್ಲಿ ರಕ್ಷೆ ಬೇಡುವೆನು.
ಸಂಗ್ರಹಣೆ:- *ಮುಹಮ್ಮದ್* *ಇರ್ಷಾದ್* *ಅಕ್ಕರಂಗಡಿ*
No comments:
Post a Comment