*ಖುರ್' ಆನ್ ಪ್ರಾಯೋಗಿಕ ಜೀವನದಲ್ಲಿ*
ಭಾಗ --4
_______________________________
📝 ಮುನೀರ್ ಸಖಾಫಿ , ಸಾಲೆತ್ತೂರು.
*ಪಾರಾಯಣ ರೀತಿ*
ನಂ 1: ಅಲ್ ಬಖರ ಸಂಪೂರ್ಣ ಪಾರಾಯಣ ಮಾಡುವುದರ ಕುರಿತು ಮುಂಚೆ ವಿವರಿಸಲಾಗಿದೆ.
ನಂ 2: الم
ನಿಂದ مفلحون
ತನಕ ಪಾರಾಯಣ ಮಾಡುವುದು ಮತ್ತು ಬರೆದು ನೀರು ಕುಡಿಯುವುದು ಹಾಗೂ ರೂಡಿ ಮಾಡುವುದು ಹಿಫ್'ಳ್(ಸಂರಕ್ಷಣೆ),
ತಖ್ವನ್ನಫ್ಸ್(ಆತ್ಮೀಯ ಕವಚ),ಇಲ್ಮ್(ಜ್ಞಾನ ),
ಮಹ್'ರಿಫತ್(ಆಂತರಿಕ ಜ್ಞಾನ)ಮುಂತಾದವುಗಳ ವರ್ಧನೆಯುಂಟಾಗುತ್ತದೆ.
ನಂ 3:
ಅಲ್ ಬಖರದ 16 ರಿಂದ 19 ರ ತನಕವಿರುವ ಆಯತ್ ಗಳನ್ನು ರೂಡಿ ಮಾಡುವವರಿಗೆ ಶತ್ರುಗಳ ಕಾಟ ಇರಲಾರದು.
ನಂ 4: ಅಲ್ ಬಖರದ ಮೊದಲನೇ 4 ಆಯತ್ ಮತ್ತು ಆಯತುಲ್ ಕುರ್ಸಿ ಹಾಗೂ ಅದರ ನಂತರ ದ 2 ಆಯತ್ ಗಳು ಮತ್ತು ಅಲ್ ಬಕರದ ಕೊನೆಯ ಆಯತ್ ( لله ما في السماوات ) ಪಾರಾಯಣ ಮಾಡುವುದರಿಂದ ಪಿಶಾಚಿಯ ಉಪದ್ರವ ಇರಲಾರದು ಮತ್ತು ಆಪತ್ತುಗಳು ಬರಲಾರದು.(ಸುನನ್ನುದ್ದಾರಿಮಿ 2/448)
ನಂ 5:ಅಲ್ ಬಕರದ 25 ನೇ ಆಯತ್ ( وبشر )ದಿನ ನಿತ್ಯ ಓದುವವರಿಗೆ ಮತ್ತು ಬರೆದು ಕಟ್ಟುವರಿಗೆ ಕೃಷಿಯಲ್ಲಿ ಬರಕತ್ ಲಭಿಸುತ್ತದೆ.
ನಂ 6: ಅಲ್ ಬಕರದ 30 ನೇ ಆಯತ್ ನಿಂದ 32 ರ ತನಕದ 3 ಆಯತ್ ಗಳು ಪಾರಾಯಣ ಮಾಡುವುದು ಇಲ್ಮ್ ಲಭಿಸಲು ಕಾರಣವಾಗಿರುತ್ತದೆ.
ನಂ 7: ಅಲ್ ಬಕರದ 125 ನೇ ಆಯತ್ ಮಲಗುವ ವೇಳೆ ಓದಿದ್ದಲ್ಲಿ ಉದ್ದೇಶಿಸುವ ಸಮಯದಲ್ಲಿ ನಿದ್ರೆಯಿಂದ ಎಚ್ಚರವಾಗುತ್ತದೆ.
ನಂ 8: ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲಮರಿಂದ ಅಬೂಹುರೈರ (ರ) ರಿಪೋರ್ಟ್ ಮಾಡಿದ ಹದೀಸಿನಲ್ಲಿ ಅಲ್ ಬಕರ ಸೂರತ್ ಮಲಗುವ ವೇಳೆ ಓದುವವರಿಗೆ ಸ್ವರ್ಗದಲ್ಲಿ ಕಿರೀಟ ತೊಡಿಸಲ್ಪಡಲಾಗುವುದು ಎಂದಿದೆ.
(ಜಾಮಿಉಲ್ ಕಬೀರ್7/336)
*ಆಯತುಲ್ ಕುರ್ಸಿ*
ಅಲ್ ಬಕರ ಸೂರತ್ ನ ಪ್ರಧಾನ ಭಾಗವಾಗಿದೆ ಆಯತುಲ್ ಕುರ್ಸಿ.ಹಲವು ಹೆಸರುಗಳಿಂದ ತಿಳಿಯಲ್ಪಡುವ ಪ್ರಸ್ತುತ ಆಯತ್ ಅದರ ಹೆಸರುಗಳಿಂದಲೇ ಅದರ ಮಹತ್ವ ವನ್ನು ತಿಳಿಯ ಬಹುದಾಗಿದೆ.
*ಆಯತುಲ್ ಕುರ್ಸಿಯ ಹೆಸರುಗಳು*
1.ಆಯತುಲ್ ಕುರ್ಸಿ(ಬುಖಾರಿ)
2.ಅಹ್'ಳಮುಲ್ ಆಯತ್.(ಮುಸ್ಲಿಂ)
3.ಸಯ್ಯಿದು ಆಯಿಲ್ ಖುರ್'ಆನ್
(ಜಾಮಿಉಲ್ ಕಬೀರ್)
4.ಅಹ್'ಳಮು ಆಯಿಲ್ ಖುರ್'ಆನ್
(ದುರರುಲ್ ಮನ್ಸೂರ್)
5.ಅಶ್'ರಫು ಆಯಿಲ್ ಖುರ್'ಆನ್(ಖುರ್ತುಬಿ)
6.ದಿರ್'ವತು ಆಯಿಲ್ ಖುರ್'ಆನ್(ಕಿತಾಬುತ್ತಯ್ಸೀರ್)
7.ಆಯತುಲ್ ಫತ್'ಹ್(ಖಝೀನತುಲ್ ಅಸ್ರಾರ್)
8.ಆಯತುಲ್ ಬರಕ(ದುರರುಲ್ ಮನ್ಸೂರ್)
ಈ ರೀತಿ 40 ಕ್ಕೂ ಹೆಸರುಗಳು ಆಯತುಲ್ ಕುರ್ಸಿಗೆ ಕಾರಣಗಳು ಸಹಿತ ಇಮಾಮರು ಸ್ಪಷ್ಟಪಡಿಸಿದ್ದಾರೆ.(ಖಝೀನತುಲ್ ಅಸ್ರಾರ್ ನೋಡಿರಿ)
_________
_____________________
_ಬಾಕಿ ಮುಂದಿನ ಭಾಗದಲ್ಲಿ...._
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment