*ಖುರ್' ಆನ್ ಪ್ರಾಯೋಗಿಕ ಜೀವನದಲ್ಲಿ*
ಭಾಗ --1
_______________________________
📝 ಮುನೀರ್ ಸಖಾಫಿ , ಸಾಲೆತ್ತೂರು.
*1. ಅಲ್ ಫಾತಿಹ*
*ಸೂಕ್ತಗಳು 7.*
ಹೆಸರು ಸೂಚಿಸುವಂತೆ ವಿಶ್ವಾಸಿಗಳು ದೈನಂದಿನ ವಿವಿಧ ವಿಷಯಗಳಿಗೆ ಮತ್ತು ಉದ್ದೇಶ ಈಡೇರಿಕೆಗಾಗಿ ಪ್ರಾರ್ಥಿಸುವ ಮುಂಚೆ ಓದುವ ಸೂರತಾಗಿದೆ ಸೂರತುಲ್ ಫಾತಿಹ.
ಫಾತಿಹಾ ಸೂರತ್'ನ ಅವತೀರ್ಣದ ಬಗ್ಗೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ ;
"ಆಕಾಶದಿಂದ ಒಂದು ಮಲಕ್ ಇಳಿದು ಬಂದು ನನ್ನಲ್ಲಿ ಹೇಳಿತು,"ಓ ಪ್ರವಾದಿ ವರ್ಯರೇ!ಪೂರ್ವೀಕ ಪ್ರವಾದಿಗಳಿಗೆ ಯಾರಿಗೂ ನೀಡದ ಎರಡು ಪ್ರಕಾಶಗಳ ಬಗ್ಗೆ ತಾವು ಸಂತೋಷಪಡಿರಿ.
ಒಂದು : ಸೂರತುಲ್ ಫಾತಿಹ
ಎರಡು:ಅಲ್ ಬಖರ ಸೂರತ್ ನ ಕೊನೆಯ ಸೂಕ್ತ.ಅವೆರಡರ ಒಂದೊಂದು ಅಕ್ಷರಗಳಿಗೂ ಅತಿಯಾದ ಪ್ರತಿಫಲವಿದೆ".
(ಮುಸ್ಲಿಂ ಹದೀಸ್ ನಂಬ್ರ806)
ಸೃಷ್ಠಿಗಳಿಗೆ ಅಲ್ಲಾಹನಿಂದ ಅನುಗ್ರಹ ಲಭಿಸಲು ಅತೀ ಹೆಚ್ಚು ಕಾರಣವಾದ ಹಾಗೂ ಹಲವಾರು ಪ್ರಯೋಜನಗಳು ದಾಸನಿಗೆ ನೀಡಲ್ಪಟ್ಟ ಈ ಸೂಕ್ತವು ಪಿಶಾಚಿಗೆ ಮತ್ತು ಆತನ ಅನುಯಾಯಿಗಳಿಗೆ ಅಸಹ್ಯವಾಗಿದೆ.(ಅತ್ತಿದ್ಸ್'ಕಾರ್ 228)
ಇಬ್ಲೀಸನು ಅತೀ ಹೆಚ್ಚು ದುಖಪಟ್ಟ 5 ಸಂದರ್ಭಗಳಲ್ಲಿ ಒಂದಾಗಿದೆ ಫಾತಿಹ ಸೂರತ್ ನ ಅವತೀರ್ಣ.
(ಅಲ್ ಬಿದಾಯ 2/133)
ಖುರ್'ಆನಿನ ಸೂಕ್ತಗಳ ಪೈಕಿ ಅತೀ ಹೆಚ್ಚು ಹೆಸರು ಇರುವ ಸೂರತ್ ಫಾತಿಹ ಎನ್ನುವಾಗ ಫಾತಿಹ ಸೂರತ್ ನ ಮಹತ್ವ ಹೆಚ್ಚಾಗಿ ವಿವರಿಸದೆಯೇ ತಿಳಿದುಕೊಳ್ಳಬಹುದಾಗಿದೆ.
*ಫಾತಿಹ ಸೂರತ್ ನ ಕೆಲವು ಹೆಸರುಗಳು.*
1.ಸೂರತುಲ್ ಫಾತಿಹ
2.ಉಮ್ಮುಲ್ ಖುರ್'ಆನ್
3.ಸೂರತುಲ್ ಹಂದ್
4.ಸಬ್'ಉಲ್ ಮಸಾನಿ
5.ಅಲ್ ವಾಫಿಯ
6.ಅಲ್ ಕಾಫಿಯ
7.ಅಸಾಸ್
8.ಶಿಫಾಹ್
9.ಸ್ವಲಾತ್
10.ಸುಆಲ್
11.ತಹ್'ಲೀಮುಲ್ ಮಸ್'ಅಲ.
12.ಸೂರತುಶ್ಶುಕ್'ರ್
13.ಸೂರತುದ್ದುಆಹ್
14.ಸೂರತು ರ್ರುಖ್'ಯ
15.ಉಮ್ಮುಲ್ ಕಿತಾಬ್
16.ಅಲ್ ವಾಖಿಯ
17.ಅಲ್ ಕಂಝ್
18.ಅನ್ನೂರ್
19.ಶಾಫಿಯ
20.ತ್ವಲಬ್
21.ಮುನಾಜಾತ್
22.ತಫ್'ವೀಳ್
23.ಮುಕಾಫಅ
24.ಅಹ್'ಳಮುಸ್ಸುವರ್
25.ಅಲ್ ಮಿನ್ನತ್
26.ಮುಜ್'ಝಿಯ
27.ಮುಂಜಿಯ
28.ಸಕಲೈನ್
29.ಮಜ್'ಮವುಲ್ ಅಸ್ಮಾಹ್
30.ಅದ್ದಾಲ್ಲತ್
_______________________________
_ಬಾಕಿ ಮುಂದಿನ ಭಾಗದಲ್ಲಿ...._
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment