*ಖುರ್' ಆನ್ ಪ್ರಾಯೋಗಿಕ ಜೀವನದಲ್ಲಿ*
ಭಾಗ --5
_______________________________
📝 ಮುನೀರ್ ಸಖಾಫಿ , ಸಾಲೆತ್ತೂರು.
*ಉಪಯೋಗಗಳು*
1.ನಮಾಝಿನ ನಂತರ ಆಯತುಲ್ ಕುರ್ಸಿ ಪಾರಾಯಣ ಮಾಡುವುದರಿಂದ ಅಲ್ಲಾಹನೊಂದಿಗೆ ಕೃತಜ್ಞತೆಯಿರುವವನಾಗುತ್ತಾನೆ ಮತ್ತು ಅಂಬಿಯಾಗಳ ಸಹವರ್ತಿಯಾಗುತ್ತಾನೆ.(ಅತ್ತಿದ್ಸ್'ಕಾರ್)
2.ದುಖಃ ದ ವೇಳೆ ಪಾರಾಯಣ ನಡೆಸುವುದರಿಂದ ದುಖಃ ನೀಗುವವು.
3.ಪಿಶಾಚಿಯನ್ನು ದೂರವಿರಿಸಲು ಆಯತುಲ್ ಕುರ್ಸಿ ಬಹಳ ಪ್ರಯೋಜನಕಾರಿಯಾಗಿರುತ್ತದೆ.
4.ಹೆರಿಗೆ ನೋವು ಕಾಣಿಸಿಕೊಂಡಲ್ಲಿ ಆಯತುಲ್ ಕುರ್ಸಿ ಮತ್ತು ಅಹ್'ರಾಫ್ ಸೂರತ್ತಿನ 54 ನೇ ಆಯತ್, ಮುಅವ್ವಿಝತೈನಿ ಸೂರತ್ ಪಾರಾಯಣ ಮಾಡಲು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಿರ್ದೇಶಿಸಿದ್ದಾರೆ.(ಅಮಲುಲ್ ಯೌಮಿ ವಲ್ಲೈಲ 179)
5.ಮಲಗುವ ವೇಳೆ ಆಯತುಲ್ ಕುರ್ಸಿ ಓದಿದ್ದಲ್ಲಿ ಪಿಶಾಚಿ ಸಮೀಪಿಸಲಾರದು ಎಂದು ಹದೀಸಿನಲ್ಲಿದೆ.(ಬುಖಾರಿ)
6.ಆಯತುಲ್ ಕುರ್ಸಿ ,ಸೂರತುಲ್ ಗಾಫಿರ್ ನ مصير ತನಕ
(3 ಆಯತ್ ) ಬೆಳಿಗ್ಗೆ ಮತ್ತು ರಾತ್ರಿ ಪಾರಾಯಣ ಮಾಡಿದ್ದಲ್ಲಿ ಎಲ್ಲಾ ವಿಪತ್ತುಗಳಿಂದ ರಕ್ಷಿಸಲ್ಪಡಲಾಗುತ್ತದೆ.(ತುರ್ಮುದ್ಸೀ 2879)
7.ನಮಾಝಿನ ನಂತರ ಆಯತುಲ್ ಕುರ್ಸಿ ಓದಿದ ಬಳಿಕ ಅಲ್ ಬಕರದ 257 ನೇ ಆಯತ್ ಓದಿದ್ದಲ್ಲಿ ವಸ್'ವಾಸ್ ನೀಗುತ್ತದೆ.
8.ಮನೆಗೆ ಪ್ರವೇಶಿಸುವಾಗ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಆಯತುಲ್ ಕುರ್ಸಿ ಪಾರಾಯಣ ಮಾಡುವುದರಿಂದ ಆರ್ಥಿಕ ಅಡಚೆಣೆಯಿಂದ ಪಾರಾಗುವನು ಹಾಗೂ ದರೋಡೆಕೋರರಿಂದ ರಕ್ಷೆ ಹೊಂದುವನು.
10.ಯಾತ್ರೆಯಲ್ಲಿ ಅಥವಾ ಭಯಾನಕ ಸ್ಥಳಕ್ಕೆ ತಲುಪಿ ಹೆದರಿದಲ್ಲಿ ಒಂದು ವೃತ್ತಾಕಾರದಲ್ಲಿ ಗೆರೆ ಹಾಕಿ ಅದರೊಳಗೆ ಫಾತಿಹ,ಆಯತುಲ್ ಕುರ್ಸಿ,ಇಕ್ಲಾಸ್,ಮುಅವ್ವಿಝತೈನಿ ,ತೌಬ ಸೂರತಿನ 51 ನೇ ಆಯತ್ ಪಾರಾಯಣ ಮಾಡಿದಲ್ಲಿ ಎಲ್ಲಾ ವಿಪತ್ತುಗಳಿಂದ ರಕ್ಷೆ ಹೊಂದುವನು.(ಅದ್ದುರರುನ್ನಳೀಮ್)
10.ಲೈಲತುಲ್ ಖದರಿನ ರಾತ್ರಿ ಆಯತುಲ್ ಕುರ್ಸಿ ಪಾರಾಯಣ ಮಾಡುವುದು ಪುಣ್ಯದಾಯಕಾವಾಗಿದೆ.
11.ಒಂದು ಕಾರ್ಯಕ್ಕೆ ಹೊರಡುವಾಗ ಆಯತುಲ್ ಕುರ್ಸಿ ಓದಿ ಬಲ ಕಾಲು ಇಟ್ಟು ಹೊರಟಲ್ಲಿ ಅದರಲ್ಲಿ ವಿಜಯ ಹೊಂದುವನು.
12.ಯಾತ್ರೆ ಹೊರಡಲು ಉದ್ದೇಶಿಸಿದವನು ಆಯತುಲ್ ಕುರ್ಸಿ ಓದುವುದು ಉದ್ದೇಶ ಈಡೇರಿಕೆಗೂ ಮಲಕುಗಳ ಪ್ರಾರ್ಥನೆಗೂ ಕಾರಣವಾಗಿದೆ.
13.ಆಹಾರದಲ್ಲಿ ಆಯತುಲ್ ಕುರ್ಸಿ ಓದಿ ಮಂತ್ರಿಸುವುದು ಬರಕತ್ ಲಭಿಸಲು ಕಾರಣವಾಗಿದೆ.
14.ಅಝಾನ್ ನ ನಂತರ ಆಯತುಲ್ ಕುರ್ಸಿ ಓದುವುದು ಪುಣ್ಯದಾಯಕವಾಗಿದೆ.
15.ಆಯತುಲ್ ಕುರ್ಸಿ ಮತ್ತು ಇಕ್ಲಾಸ್ ಸೂರತ್ ನಮಾಝಿನ ನಂತರ ಪಾರಾಯಣ ಮಾಡುವುದರಿಂದ ಸ್ವರ್ಗ ಪ್ರವೇಶವು ಸುಲಭವಾಗಿದೆ.
16.ಅಲ್ ಬಕರ ಸೂರತಿನ ಕೊನೆಯ 3 ಆಯತ್ ಗಳು ಪಾರಾಯಣ ಮಾಡುವುದರಿಂದ ಮನೆಗೆ ಪಿಶಾಚಿಯ ಉಪಟಳವನ್ನು ತಡೆಯಲು ಸಾಧ್ಯವಾಗುತ್ತದೆ.(ಮುಸ್ನದ್ ಅಹ್ಮದ್ 2/274)
ನಂ:17.
آمن الرسول
ಕೊನೆಯ ತನಕ ಪಾರಾಯಣ ಮಾಡುವುದರಿಂದ ರಾತ್ರಿ ಸಂಪೂರ್ಣ ನಮಾಝ್ ಮಾಡಿದ ಪುಣ್ಯ ಲಭಿಸುವುದು.(ಸುನನುದ್ದಾರಿಮಿ 2/450)
18.ಚಿಕಿತ್ಸೆಯ ವೇಳೆ ಆಯತುಲ್ ಕುರ್ಸಿ ಪಾರಾಯಣ ಮಾಡುವುದರಿಂದ ಬಹಳ ಬೇಗನೆ ರೋಗ ವಾಸಿಯಾಗಲು ಸಹಕಾರಿಯಾಗುತ್ತದೆ.(ಜಾಮಿಉಲ್ ಕಬೀರ್ 7/337)
ಇವಿಷ್ಟು ಅಲ್ ಬಕರ ಸೂರತ್ ಮತ್ತು ಅದರ ಕೆಲವು ಆಯತ್ ಗಳ ಮಹತ್ವವಾಗಿದೆ.
_________
_____________________
_ಬಾಕಿ ಮುಂದಿನ ಭಾಗದಲ್ಲಿ...._
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
No comments:
Post a Comment