*#ಪುತ್ತೂರಿನ ಕರ್ನಾಟಕ ಮುಸ್ಲಿಂ ಜಮಾಅತ್ ಸಭೆಯಲ್ಲಿ ಶಾಫಿ ಸಅದಿ ಮಂಡಿಸಿದ ಅಧ್ಬುತ ಅನಿಸಿಕೆಗಳು....!*
ಎಲ್ಲರೂ ಒಂದಾವರ್ತಿ ಓದಿರಿ...
✍ ಅಬೂಶಝ
ಕರ್ನಾಟಕ ಮುಸ್ಲಿಂ ಜಮಾಅತ್ ಎಂಬುದು ರಾಜಕೀಯ ಲಾಭಕ್ಕಾಗಿ ಅಥವಾ ರಾಜಕೀಯ ಪಕ್ಷವಾಗಿ ಮೂಡಿಬರಲಿರುವ ಸಂಘಟನೆ ಅಲ್ಲ.
ಇಲ್ಲಿ ಸೇರಿದ ನೀವೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಚರಿಸಿ ಅನುಭವವಿರುವ ಪ್ರಮುಖರು. ಪುತ್ತೂರಿನ ಮುಸ್ಲಿಂ ಸಮುದಾಯ ಆರ್ಥಿಕ ಶೈಕ್ಷಣಿಕ ಧಾರ್ಮಿಕ ರಂಗಗಳಲ್ಲಿ ಸಬಲೀಕರಣವಾಗುವಂತೆ ಒಟ್ಟಾಗಿ ಕಾರ್ಯಚರಿಸಲು ಮುಸ್ಲಿಂ ಜಮಾಅತ್ ವೇದಿಕೆಯೊಂದನ್ನು ನಿಮಗೆ ಒದಗಿಸಿದೆ.
ಈ ಕಾರ್ಯಚರಣೆಯಲ್ಲಿ ಯಾವುದೇ ಐಹಿಕ ಉದ್ದೇಶ ಇರಬಾರದು. ಅದೇ ರೀತಿ ಸಮರ್ಪಣಾ ಮನೋಭಾವ ಇರಬೇಕು. ಪರಲೋಕದಲ್ಲಿ ತನ್ನ ಜವಾಬ್ದಾರಿ ಪೂರ್ತಿಗೊಳಿಸಿದ ಧನ್ಯತೆಯಿಂದ ಹೋಗುವ ಇರಾದೆ ಇರಬೇಕು.
ಸಮುದಾಯದ ಕಷ್ಟ ಕಾರ್ಪಣ್ಯ ನಮ್ಮ ಕಷ್ಟವಾಗಿ ಕಾಣಬೇಕು.
ಸಮುದಾಯದ ನೋವು ನಮ್ಮ ನೋವಾಗಿರಬೇಕು.
ಸಮುದಾಯದ ಸಮಸ್ಯೆ ನಮ್ಮ ಸಮಸ್ಯೆಯಾಗಿರಬೇಕು.
ಗ್ರೂಪಿಸಂ ನಿಮಿತ್ತ ಬೇಸತ್ತ ನಾವು ಕನಿಷ್ಠ ಕರ್ನಾಟಕದಲ್ಲಾದರೂ ಸಮುದಾಯ ವಿಷಯದಲ್ಲಿ ಒಟ್ಟಾಗೋಣ.ಸಮುದಾಯಕ್ಕೆ ಶಕ್ತಿ ತುಂಬೋಣ.
ನೀವು ಮುಸ್ಲಿಂ ಸಮುದಾಯದ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಜನಸಂಖ್ಯೆ ಸರ್ವೆಯನ್ನು ನೆಟ್ ಮೂಲಕ ಪರಿಶೀಲಿಸಿ ನೋಡಿ. ಆವಾಗ ನಿಮಗೆ ಮುಸ್ಲಿಮರ ದಯನೀಯ ಸರ್ವೆ ಸಿಗುತ್ತದೆ.
ಸರಕಾರಿ ಇಲಾಖೆಯಲ್ಲಿ ಬರೇ 4 ಶೇಖಡಾ ಮಾತ್ರ ಸಾನಿಧ್ಯವಿದೆ!
ಆದರೆ ಇನ್ನಿತರ ಹಿಂದುಳಿದ ಕುರುಬ ಸಮುದಾಯ, ಪೂಜಾರಿ ಸಮುದಾಯದವರು 22 ಶೇಖಡಾ ಕರ್ನಾಟಕ ರಾಜ್ಯ ಸರಕಾರಿ ಇಲಾಖೆಯಲ್ಲಿ ನೌಕರಿಗಿಟ್ಟಿಸಿಕೊಂಡಿದ್ದಾರೆ!
(ಅವರು ಅವರ ಸಾಮರ್ಥ್ಯವನ್ನು ತೋರಿಸಿದ್ದಾರೆ ಸಂತೋಷವಿದೆ)
ಆದರೆ ನಮ್ಮ ಅವಸ್ಥೆಯೇನು?
IAS IPS ಬೆರಳೆಣಿಕೆಯಷ್ಟು ಮಾತ್ರ, ಪೋಲಿಸ್ ಇಲಾಖೆಯಲ್ಲೂ ನಮ್ಮ ಸಾನಿಧ್ಯ ಅತೀ ವಿರಳ!
ಕಳೆದ ಎರಡು ವರ್ಷಗಳಿಂದ ಕರ್ನಾಟಕದ ಯಾವುದೇ ಜಿಲ್ಲೆಗಳಲ್ಲೂ ಜಿಲ್ಲಾ ಕಮೀಷನರ್ (ಡಿಸಿ) ಮುಸಲ್ಮಾನರನ್ನು ನೇಮಕ ಮಾಡಿಲ್ಲ. ನಾವು ಕುಮಾರ ಸ್ವಾಮಿಯವರಿಗೆ ಒತ್ತಡ ತಂದುದರ ನಿಮಿತ್ತ ಹಾಸನ ಜಿಲ್ಲೆಗೆ ಅಕ್ರಂ ಪಾಷಾರನ್ನು ನೇಮಕ ಮಾಡಲಾಯಿತು. ಖೇದದೊಂದಿಗೆ ಹೇಳುತ್ತಿದ್ದೇನೆ ನೇಮಕ ಮಾಡಿದ ಅದೇ ಸ್ಪೀಡಲ್ಲಿ ಈಗ ವಜಾಗೊಳಿಸಿ ಬೇರೆ ತಸ್ತಿಗೆಗೆ ವರ್ಗಾವಣೆ ಮಾಡಲಾಗಿದೆ.
ಜಿಲ್ಲಾಡಳಿತ ಎಂಬುದು ಒಬ್ಬ 'ಡಿಸಿ' ಯ ಕೈಯಲ್ಲಿರುತ್ತದೆ.MP, MLA ಗೆ ಆ ಅಧಿಕಾರ ಇಲ್ಲ. ಅಷ್ಟೊಂದು ಮಹತ್ವದ ಹುದ್ದೆಯಲ್ಲಿ 80 ಲಕ್ಷ ಮುಸ್ಲಿಮರಲ್ಲಿ ಯಾರೂ ಇಲ್ಲ ಎಂಬುದನ್ನು ನಾವು ಮನಗಾಣಬೇಕು.
ರಾಜಕೀಯ ಸ್ವಾವಲಂಬನೆ ನಮಗಿಲ್ಲ. ಮುಸ್ಲಿಮರ ಜನಸಂಖ್ಯೆ ಅನುಸಾರ ನಮಗೆ 34 MLA ಬೇಕು ಆದರೆ ನಮಗಿರುವುದು ಕೇವಲ 7 MLA!
ಅದೇ ಸಮಯ ಲಿಂಗಾಯುತರ ಜನಸಂಖ್ಯೆ ಹತ್ತು ಶೇಖಡಾ ಮಾತ್ರ ಅಂದರೆ ಕೇವಲ 60 ಲಕ್ಷ ಪೋಪಿಲೇಷನ್ ಇರುವ ಲಿಂಗಾಯುತ ಸಮುದಾಯಕ್ಕೆ 58 MLA ಗಳಿದ್ದಾರೆ! (38 ಬಿಜೆಪಿ,16 ಕಾಂಗ್ರೆಸ್ ಬಾಕಿ ಇತರ ಪಕ್ಷ)
48 ಲಕ್ಷವಿರುವ ಒಕ್ಕಲಿಗ ಸಮುದಾಯಕ್ಕೆ 42 MLA ಗಳಿದ್ದಾರೆ! ಒಂದೊಂದು ಲಕ್ಷಕ್ಕೆ ಒಂದೊಂದು ಪ್ರತಿನಿಧಿಗಳಂತೆ.
(JDS 23 BJP 8 ಕಾಂಗ್ರೆಸ್ 11)
ಶೇಖಡಾ 14 ಇರುವ ಬ್ರಾಹ್ಮಣ ಸಮುದಾಯದಲ್ಲಿ 14 MLA ಗಳಿದ್ದಾರೆ.ಅವರಲ್ಲಿ ಮುಖ್ಯಮಂತ್ರಿಗಳ ಪಟ್ಟಿ ಕೂಡಾ ಇದೆ.
ಆದರೆ 80 ಲಕ್ಷವಿರುವ ಮುಸ್ಲಿಂ ಸಮುದಾಯದಲ್ಲಿ ಕೇವಲ 7 mla ಗಳು ಮಾತ್ರ!
ಒಬ್ಬನೇ ಒಬ್ಬ ಮುಖ್ಯಮಂತ್ರಿ ಈವರೆಗೆ ನೇಮಕ ಮಾಡಲು ಸಾದ್ಯವಾಗಲಿಲ್ಲ.
ನಮ್ಮ ಉಚ್ಚ ನ್ಯಾಯಾಲಯದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಮುಖ್ಯ ನ್ಯಾಯಾಧೀಶನು ಇಲ್ಲ.
ಹದಿನೇಳು ವರ್ಷಗಳ ಮುಂಚೆ ಒಬ್ಬ ಮುಖ್ಯ ನ್ಯಾಯಮೂರ್ತಿ ಮುಸ್ಲಿಂ ಇದ್ದುದನ್ನು ಬಿಟ್ಟರೆ ಈ ತನಕ ಒಬ್ಬನೇ ಒಬ್ಭನನ್ನು ನೇಮಕ ಮಾಡಲಿಲ್ಲ.
ನಮ್ಮ ಪುತ್ತೂರಿನ ನವಾಝ್'ರವರು ಹುಬ್ಬಳ್ಳಿ ನ್ಯಾಪೀಠದಲ್ಲಿ ನ್ಯಾಯಾಧೀಶರಾಗಿದ್ದಾರೆಯೇ ಹೊರತು ಮುಖ್ಯ ನ್ಯಾಯಾಧೀಶರಲ್ಲ.
ಕರ್ನಾಟಕದಲ್ಲಿ ಎರಡು ಲಕ್ಷಕ್ಕಿಂತಲೂ ಮಿಕ್ಕ ವಕೀಲರಿದ್ದು ಅದರಲ್ಲಿ ಮುಸ್ಲಿಂ ವಕೀಲರ ಸಂಖ್ಯೆ ಬರೇ ಏಳು ಸಾವಿರ ಮಾತ್ರ!
ಪುತ್ತೂರಿನಲ್ಲಿರುವ ವಕೀಲರಲ್ಲಿ ನೀವು ಕೇಳಿ ನೋಡಿ ಅಕ್ರಮ್ ಪಾಷರನ್ನು ಹೊರತು ಪಡಿಸಿ ಹೈಕೋರ್ಟ್'ನ ಸೀನಿಯರ್ ಕೌನ್ಸಿಲ್'ನಲ್ಲಿ ವಾದಿಸಲು ನೇಮಕ ಗೊಂಡಿರುವ ಒಬ್ಬನೇ ಒಬ್ಬ ವಕೀಲ ನಮ್ಮ ಮುಸ್ಲಿಮರಿಲ್ಲ.
ಇನ್ಸ್ಪೆಕ್ಟರ್, ಹೆಡ್ 'ಕಾನ್'ಸ್ಟೇಬಲ್ ಸಹಿತ ಪೋಲಿಸ್ ಇಲಾಖೆಯಲ್ಲೂ ಮುಸ್ಲಿಮರ ಪ್ರಾತಿನಿಧ್ಯ ವಿರಳವಾಗಿದೆ.
ಅವಕಾಶಗಳಿದ್ದು ನಮ್ಮ ಜನಪ್ರತಿನಿಧಿಗಳು ಅದಕ್ಕಾಗಿ ಶ್ರಮಿಸಲಿಲ್ಲವೆಂಬುದು ಸಮುದಾಯದ ದುರಂತವೇ ಸರಿ.
ಕರ್ನಾಟಕ ಮುಸ್ಲಿಂ ಜಮಾಅತ್ 10 ಲಕ್ಷ ಸದಸ್ಯರನ್ನು ಒಳಗೊಂಡು ಬಲಿಷ್ಠವಾಗಿಸಿ, ಯಾವುದೇ ಸರ್ಕಾರ ಬಂದರೂ ಅದರ ಗಟ್ಟಿ ಧ್ವನಿ ತಲುಪಿಸಿ ಸಮುದಾಯ ಸಬಲೀಕರಣ ಮಾಡುವ ಉದ್ದೇಶವಿದೆ.
ವಾಲ್ಮೀಕಿ ಸ್ವಾಮಿ ನೇತೃತ್ವದಲ್ಲಿ ಏಳುವರೆ ಶೇಖಡ ಅನುದಾನವನ್ನು ಹದಿನಾಲ್ಕು ಶೇಖಡಾ ಮಾಡಬೇಕೆಂಬ ಕೂಗಿನೊಂದಿಗೆ ಪ್ರತಿಭಟನೆ ಮಾಡಲು ಹೊರಟಾಗ ರಾಜ್ಯದ ಮುಖ್ಯಮಂತ್ರಿಯೇ ಸ್ವಾಮೀಜಿಯ ಆಶ್ರಮಕ್ಕೆ ತೆರಳಿ ಅನುದಾನ ನೀಡುವ ಭರವಸೆ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಬೇಡಿಕೊಂಡದ್ದು ನಾವು ಕಂಡಿದ್ದೇವೆ.
ನಮಗೆ ಯಾಕೆ ಅದು ಸಾದ್ಯವಾಗುವುದಿಲ್ಲ.
ನಮ್ಮಲ್ಲಿ ಗ್ರೂಪಿಸಂ ಅಧಿಕವಾದುದರಿಂದ ಪರಸ್ಪರ ನಾಯಕತ್ವವನ್ನು ಅಂಗೀಕರಿಸಲು ಯಾರೂ ಒಪ್ಪುವುದಿಲ್ಲ. ಜತೆಯಾಗಿ ವೇದಿಕೆ ಹಂಚಲು ಹಿಂಜರಿಯುವುದನ್ನು ನಾವು ಕಾಣುತ್ತೇವೆ.
ಇನ್ಶಾಅಲ್ಲಾ ಮುಂದಿನ ದಿನಗಳಲ್ಲಿ ಅದೆಲ್ಲಾ ಸರಿಯಾಗಬಹುದೆಂದು ಆಶಿಸೋಣ. ಅಹ್ಲುಸ್ಸುನ್ನದ ತತ್ವಾದರ್ಶದಲ್ಲಿ ಕಾರ್ಯಚರಿಸುವ ಉಭಯ ಬಣಗಳು ಒಟ್ಟಾಗುವ. ಒಂದು ಬಣ ಮಾತ್ರ ಮನಸ್ಸು ಮಾಡಿದರೆ ಇದೆಲ್ಲಾ ಸಾದ್ಯವಾಗುವುದಿಲ್ಲ. ಸಮುದಾಯ ಸಬಲೀಕರಣದ ಈ ವಿಷಯದಲ್ಲಿ ಗ್ರೂಪಿಸಂಗೆ ಅತೀತವಾಗಿ ನಾವು ಒಗ್ಗಟ್ಟಾಗುವ.
ಸರಕಾರ ಮಂಡಿಸಿದ 2 ಲಕ್ಷ ಕೋಟಿ ಬಜೆಟ್'ನಲ್ಲಿ ಮುಸ್ಲಿಮರ ಜನಸಂಖ್ಯೆ ಅನುಪಾತದಲ್ಲಿ ಸರಾಸರಿ 28 ಸಾವಿರ ಕೋಟಿ ಸಿಗಬೇಕು. ಆದರೆ ಸಿದ್ದರಾಮಯ್ಯ ಸರಕಾರ ಕಾಲದಲ್ಲಿ ನೀಡಿದ ಅತೀ ಹೆಚ್ಚು ಅನುದಾನವೆಂದರೆ 2000 ಸಾವಿರ ಕೋಟಿ! ಅದಕ್ಕಿಂತ ಮುಂಚೆ ಅದು ಕೂಡಾ ಮುಸ್ಲಿಂ ಸಮುದಾಯದ ಪಾಲಿಗೆ ದಕ್ಕಿರಲಿಲ್ಲ.
ಅರ್ಹವಾಗಿ 28 ಸಾವಿರ ಕೋಟಿ ಅನುದಾನ ಸಿಗಬೇಕಾದ ಮುಸ್ಲಿಂ ಸಮುದಾಯಕ್ಕೆ ಸಿಕ್ಕಿದ್ದು ಅತೀ ಹೆಚ್ಚೆಂದರೆ 2 ಸಾವಿರ ಕೋಟಿ ಮಾತ್ರ!
4 ಲಕ್ಷ ಮತದಾರರು ದ.ಕ. ಜಿಲ್ಲೆಯಲ್ಲಿ ಇದ್ದಾರೆ ಆದರೆ ಅದರಲ್ಲಿ ಒಂದು ಲಕ್ಷ ವಿದೇಶಗಳಲ್ಲಿದ್ದಾರೆ. 50 ಸಾವಿರ ಮಂದಿ ವ್ಯಾಪಾರ ನಿಮಿತ್ತ ವಿವಿಧ ರಾಜ್ಯಗಳಲ್ಲಿರುತ್ತಾರೆ. ಕೆಲವರ ಹೆಸರು ಮತದಾನ ಪಟ್ಟಿಗೆಯಲ್ಲಿ ಇರುವುದಿಲ್ಲ ಅಂತೂ ಇಂತೂ ಕೇವಲ ಮಂದಿಯಿಂದ ಮಾತ್ರ ಮತದಾನ ನಡೆಯುತ್ತದೆ ಇದಕ್ಕೆಲ್ಲ ಪರಿಹಾರ ಕಾಣುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಈಗಾಗಲೇ ಟೀಂ ವರ್ಕ್ ಆರಂಭಿಸಿಯಾಗಿದೆ.
ಉತ್ತರ ಕರ್ನಾಟಕದ ದಾವಣಗೆರೆಯ ಮುಸ್ಲಿಂ ಜಮಾಅತ್ ಸಮಿತಿ ಲಾ ಕಾಲೇಜೊಂದನ್ನು ತೆರೆಯುವ ಯೋಜನೆ ಹಾಕಿಕೊಂಡಿದೆ.
ಇನ್ನೊಂದು ಹತ್ತು ವರ್ಷದಲ್ಲಿ ಸಮುದಾಯದಲ್ಲಿ IPS IAS ಸಹಿತ ಉನ್ನತ ಶ್ರೇಷ್ಠ ದರ್ಜೆಯ ಹುದ್ದೆಗಾರರನ್ನು ಸ್ರಷ್ಟಿಸುವ ದೊಡ್ಡ ಗುರಿಯೊಂದಿಗೆ ಮತ್ತು ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ಸಿಕ್ಕಿ ಸಬಲೀಕರಣವಾಗುವಂತೆ ಮಾಡಲು *#ಕರ್ನಾಟಕ_ಮುಸ್ಲಿಂ_ಜಮಾತ್* ಕಟ್ಟಿಬದ್ದವಾಗಿದೆ.
ಇದಕ್ಕಾಗಿ ಎಲ್ಲರೂ ನಮ್ಮೊಂದಿಗೆ ಸಹಕರಿಸಬೇಕಾಗಿದೆ.
ನಾವು ಒಗ್ಗಟ್ಟಾಗೋಣ. ಗ್ರೂಪಿಸಂಗೆ ಅಂಕಿತ ಹಾಕೋಣ ಆ ಮುಲಕ ಸಮುದಾಯ ಸಬಲೀಕರಣಕ್ಕೆ ಪ್ರಯತ್ನಿಸೋಣ.
ಅಲ್ಲಾಹು ತೌಫೀಕ್ ನೀಡಲಿ ಆಮೀನ್.
1/10/2019
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Tuesday, October 1, 2019
Subscribe to:
Post Comments (Atom)
No comments:
Post a Comment