*ನಿಮ್ಮ ಮನೆಯಲ್ಲಿ ಸಂತೋಷ ಬೇಕೆ?*
*40 ಸೂತ್ರಗಳು ಪಾಲಿಸಿ*
••••••••••••••••••••••••••••••••••••••••••
ಭಾಗ --19
📝 _ಮುನೀರ್ ಸಖಾಫಿ ಸಾಲೆತ್ತೂರು_
_*ಸೂತ್ರ 18:*_
*ಮನೆಯ ಸ್ಥಳ ಉತ್ತಮವಾಗಿರಲಿ*
ಒಂದು ಮನೆ ಕಟ್ಟಿದರೆ ಜೀವನ ಪರ್ಯಂತ ಅದರ ಸುಖ ಅನುಭವಿಸಿಬೇಕಾದರೆ ಬಹಳ ಮುಖ್ಯವಾಗಿ ಗಮನಿಸಬೇಕಾ ಒಂದು ಅಂಶವಾಗಿದೆ ಮನೆ ಕಟ್ಟುವ ಸ್ಥಳ.
ಮನೆ ಕಟ್ಟುವಾಗ ಪ್ರಮುಖವಾಗಿ ಮಸೀದಿ ಸಮೀಪವಿದೆಯೇ ಎಂದು ಆಲೋಚಿಸಬೇಕು.
ಶಾಲೆ,ಅಂಗಡಿಮುಂಗಟ್ಟುಗಳು,ಆಸ್ಪತ್ರೆ ಎಲ್ಲವೂ ಮುಖ್ಯವೇ ಆಗಿದೆ.ಇತ್ತೀಚಿಗೆ ಒಂದು ಮನೆಯ ಜಾಹಿರಾತು ನೋಡಿದೆ.ಮನೆಯಿಂದ ಏರ್ಪೋರ್ಟ್'ಗೆ ಕೇಲವ 30 ಕಿಲೋಮೀಟರ್ ಅಂತ.
ಮನೆಗೆ ದಿನಾಲು ಫ್ಲೈಟಲ್ಲಿ ಬರುವವರಿದ್ದರೆ ಅಂತಹಾ ಮನೆ ಆಯ್ಕೆ ಮಾಡಬಹುದು.
ಪ್ರಮುಖವಾಗಿ ಗಮನಿಸಬೇಕಾದ ಹಲವನ್ನು ಕೆಲವರು ಗಮನಿಸುತ್ತಿಲ್ಲ.
ಮುಸ್ಲಿಮನ ಮನೆ ಸಮೀಪ ಮಸೀದಿಯಿದ್ದರೆ ಅಝಾನ್ ಚೆನ್ನಾಗಿ ಕೇಳಬಹುದು.ಸ್ವಲಾತ್,ದ್ಸಿಕ್ರ್ ಎಲ್ಲವೂ ಆಲಿಸಬಹುದು.
5 ವಕ್ತ್ ಜಮಾಅತ್ ನಮಾಝ್ ಗೆ ಸುಲಭವಾಗಿ ಹೋಗಬಹುದು.
ಮಹಿಳೆಯರಿಗೆ ಮಸೀದಿಯಿಂದ ಕೇಳುವ ಪ್ರವಚನಗಳನ್ನು ಆಲಿಸಬಹುದು.
ಮಸೀದಿಗೆ ತಾಗಿಕೊಂಡು ಮದ್ರಸ ಎಲ್ಲಾ ಕಡೆ ಇರುವುದರಿಂದ ಪುಟ್ಟ ಮಕ್ಕಳಿಗೆ ಮದ್ರಸಕ್ಕೆ ಹೋಗಲೂ ಸುಲಭವಾದೀತು.
ಮದೀನಾ ನಿವಾಸಗಳ ಪೈಕಿ ಕೆಲವರು ಮಸೀದಿಗೆ ದೂರದಲ್ಲಿರುವ ಮನೆಗಳನ್ನು ಮಸೀದಿಯ ಸಮೀಪ ಕಟ್ಟಲು ಉದ್ದೇಶಿಸಿದ ಬಗ್ಗೆ ಪ್ರವಾದೀವರ್ಯರಿಗೆ ತಿಳಿದಾಗ ನಿಮ್ಮ ಮನೆ ಅಲ್ಲೇ ಇರಲಿ.ನೀವು ದೂರದ ಸ್ಥಳಗಳಿಂದ ಜಮಾಅತ್ ನಮಾಝ್ ಗೆ ಮಸೀದಿಗೆ ಬಂದರೆ ನಿಮ್ಮ ಒಂದೊಂದು ಹೆಜ್ಜೆಗೂ ಹಲವಾರು ಪ್ರತಿಫಲವಿದೆಯೆಂದು ಆ ಸ್ವಹಾಬಿಗಳಲ್ಲಿ ಹೇಳಿದಾಗ ಅವರು ಆ ತೀರ್ಮಾನದಿಂದ ಹಿಂದೆ ಸರಿದ ಬಗ್ಗೆ ಹದೀಸ್ ನಲ್ಲಿದೆ.
ಮಸೀದಿ ಸಮೀಪವಿದ್ದರೆ ಮಾತ್ರ ನಾವು ಮಸೀದಿಗೆ ಹೋಗುವೆವು.ದೂರದಲ್ಲಾದರೆ ಮನೆಯಲ್ಲೇ ನಮಾಝ್ ಮಾಡುವೆವು.
ಸ್ವಹಾಬತ್ ನಂತೆ ಈಮಾನ್ ನಮ್ಮಲ್ಲಿ ಇಲ್ಲದಿರುವುದರಿಂದ ನಮ್ಮ ಮನೆ ಮಸೀದಿ ಬಳಿಯೇ ಇದ್ದರೆ ಚೆನ್ನ ಎಂದು ನಾನು ಹೇಳಿದ್ದೇನೆ.
ದೂರದ ಸ್ಥಳದಿಂದ ಜಮಾಅತ್ ನಮಾಝ್'ಗೆ ಬಂದಲ್ಲಿ ಹಲವಾರು ಪ್ರತಿಫಲವಿದೆಯೆಂದು ನಾವು ತಿಳಿದಿರಬೇಕು.
ಪಿತ್ನ ಫಸಾದ್ ಕೋರರಿಂದ ನಮ್ಮ ಮನೆ ಮುಕ್ತವಾದಲ್ಲಿ ಮಾತ್ರ ನಮ್ಮ ಮನೆಯಲ್ಲಿ ಸಂತೋಷವಿರಬಹುದು.
(ನೆರೆಕರೆ ಹೇಗಿರಬೇಕೆಂದು 7 ನೇ ಭಾಗದಲ್ಲಿ ವಿವರಿಸಿದ್ದೇನೆ)
ಮನೆಯ ಒಳಗೆ ಮತ್ತು ಹೊರಗೆ ಬಹಳ ಮುಖ್ಯವಾಗಿ ಶುಚಿತ್ವ ಕಾಪಾಡಬೇಕು.
ಮೊರೋಕೋ ರಾಷ್ಟದಲ್ಲಿ ಮರಾಕಿಶ್ ಎಂಬ ಪಟ್ಟಣದ ಜನರಿಗೆ ರೋಗ ಬರುವುದು ಬಹಳ ಕಡಿಮೆಯಂತೆ.ಅಲ್ಲಿನ ಜನರಿಗೆ ಆ ಊರಿನಲ್ಲಿ ಆಸ್ಪತ್ರೆ ಎಲ್ಲಿ ಅಂತ ತಿಳಿದಿರುವುದು ಕಡಿಮೆ.ಕಾರಣ ಅವರ ಮನೆಯ ಒಳ ಮತ್ತು ಹೊರಗೆ ಅಷ್ಟು ಶುಚಿತ್ವವನ್ನು ಕಾಪಾಡುತ್ತಾರೆ.ಮಾರ್ಗದ ಬದಿಯಲ್ಲಿ ಒಂದೇ ಒಂದು ಹುಲ್ಲು ಕಡ್ಡಿ ಅಲ್ಲಿ ಕಾಣಲು ಸಾಧ್ಯವಿಲ್ಲ.
ದೂಳು ಮಣ್ಣುಗಳಿಲ್ಲ.
ಶುಚಿತ್ವ ಕಾಪಾಡಿದ್ದಲ್ಲಿ ಯಾವುದೇ ರೋಗಗಳು ಬರದು.
"ಮನೆಯ ಒಳಗೆ ಮತ್ತು ಹೊರಗೆ ಶುಚಿತ್ವ ಕಾಪಾಡಿ" ಎಂಬ ಒಂದು ಸೂತ್ರ ನಂತರದ ಭಾಗದಲ್ಲಿ ಬರಲಿದೆ.
ನಮ್ಮ ಮನೆ ತೆರೆದ ಮನೆಯಾಗಬಾರದು.
ಕಿಟಕಿಗಳಿಗೆ ಬಾಗಿಲುಗಳಿರಬೇಕು.
ಗ್ಲಾಸ್ ನಿಂದ ಕೂಡಿದ ಬಾಗಿಲುಗಳಾದಲ್ಲಿ ಅದಕ್ಕೆ ಪರದೆ ಹಾಕಬೇಕು.
ರೂಮಿನ ಲೈಟ್ ಹಾಕಿದ್ದಲ್ಲಿ ಹೊರಗಿನಿಂದ ರೂಮಿನೊಳಗಿರುವವರನ್ನು ಕಾಣದಂತೆ ಭದ್ರಗೊಳಿಸಬೇಕು.
ಕೆಲವು ಮನೆಯ ಹೊರಗೆ ನಿಂತರೆ ಒಳಗಿನ ಅಡುಗೆ ಕೋಣೆ ಸಹಿತ
ಎಲ್ಲವೂ ಕಾಣುತ್ತದೆ.
ಹಾಗಿದ್ದರೆ ಇದ್ದವರಿಗೂ ಬಂದವರಿಗೂ ತೊಂದರೆ.
ಆದುದರಿಂದ ಮನೆ ನಿರ್ಮಿಸುವಾಗ ಬಾಗಿಲುಗಳನ್ನು ಆಚೀಚೆ ಮಾಡಿ ಒಳಕೋಣೆ ಕಾಣದಂತೆ ಇಡುವುದು ಉತ್ತಮವಾಗಿದೆ.
ಹಾಗೆ ಮಾಡಿ ಆಗಿದ್ದಲ್ಲಿ ಬಾಗಿಲುಗಳ ಮೂಲಕ ಒಳಕೋಣೆಗಳು ಕಾಣದಂತೆ ಪರದೆ ಹಾಕುವುದು ಉತ್ತಮವಾಗಿದೆ.
ಪರದೆ ಇದ್ದರೂ ಕೆಲವು ಮನೆಗಳಲ್ಲಿ ಅದನ್ನು ಸುರುಟಿ ಎತ್ತಿ ಕಟ್ಟಿ ಹಾಕಿರುತ್ತಾರೆ.ಇದೂ ಕೂಡಾ ಸಲ್ಲದು.
ಮನೆಯ ಒಳಗೆ ಯಾವಾಗಲೂ ಪ್ರೈವಸಿ ಬೇಕು.
ವಿಶೇಷವಾಗಿಯೂ ಮಹಿಳೆಯರಿರುವ ಮನೆ.
ಅದಕ್ಕಾಗಿ ಒಳಗಿನ ಗುಟ್ಟನ್ನು ರಟ್ಟು ಮಾಡಬಾರದು.
*ಎಲ್ಲರಿಗೂ ಶೇರ್ ಮಾಡಿ*
ತಪ್ಪಿದ್ದರೆ ನನ್ನ ಗಮನಕ್ಕೆ ತನ್ನಿ.
+919902623313
( ವಾಟ್ಸಪ್ ಮಾತ್ರ)
ಮುಂದುವರಿಯುವುದು........
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Subscribe to:
Post Comments (Atom)
No comments:
Post a Comment