Friday, October 27, 2017

#ವಿಶ್ವ_ವಿಖ್ಯಾತ_ಕಾರಂದೂರು_ಮರ್ಕಝ್_ವಿದ್ಯಾ_ಸಮುಚ್ಛಯದ_ಬೆಳವಣಿಗೆಯ_ಕುರಿತು_ಸಣ್ಣ_ಇಣುಕು_ನೋಟ..*
===================
✍ ಗಫೂರ್ ಬಾಯಾರ್
-----------------------
ಕೇರಳದ ಕಲ್ಲಿಕೋಟೆ ಜಿಲ್ಲೆಯ ಮಾವೂರು ರಸ್ತೆಯ ಬದಿಯಲ್ಲಿ ಪಾಳು ಬಿದ್ದ ಸ್ವಲ್ಪ ಭೂಮಿಯನ್ನು ಕಾರಂದೂರ್ ಮರ್ಕಝ್'ಗೆ ಒಂದು ವರಮಾನವಾಗಲಿ ಎಂಬ ನಿಟ್ಟಿನಲ್ಲಿ ಸಮುದಾಯದ ಜನರಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಲಕ್ಷ್ಯವಿಟ್ಟು  ಆ ಸ್ಥಳವನ್ನು ಬೆಲೆ ಕೊಟ್ಟು ಖರೀದಿಸಿದ ಕಾಂತಪುರಂ ಎ.ಪಿ ಉಸ್ತಾದರ ನಡವಳಿಕೆಯ ವಿರುದ್ಧವಾಗಿ ಅಂದು ಮುಸ್ಲಿಂ ಲೀಗ್, ಚೇಳಾರಿ ವಿಭಾಗದ ಸುನ್ನಿಗಳು ಹಾಗೂ ಇನ್ನು ಕೆಲವು ಸಂಘಟನೆಗಳ  ನಾಯಕರು ಹೇಳಿದ ಕೆಲವೊಂದು ಮಾನಕೆಟ್ಟ ಮಾತಿನ ಪ್ರಯೋಗಗಳು ತಮಗೆಲ್ಲರಿಗೂ ನೆನಪಿರಬಹುದು ತಾನೇ..!!??

ಲೀಗ್'ನ ದೊಡ್ಡ ನೇತಾರರು ಹಾಗೂ ಅವರ ಕೆಲವು ಪಂಡಿತರು ವೇದಿಕೆ ಹತ್ತಿ ಎ. ಪಿ. ಉಸ್ತಾದರ ವಿರುದ್ದವಾಗಿ ಆರೋಪ ಹಾಗೂ ಅಪಪ್ರಚಾರ ನಡೆಸಿದ್ದರು..!!

*ಅನಾಥ(ಯತೀಂ) ಮಕ್ಕಳ ಹಣದಿಂದ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದ ಸ್ಥಳವನ್ನು ಖರೀದಿಸಿದರು ಎಂಬಿತ್ಯಾದಿ  ವಾರ್ತೆಗಳನ್ನು ಮಲಯಾಳ ಚಂದ್ರಿಕ ದಿನ ಪತ್ರಿಕೆಯಲ್ಲಿ ದೊಡ್ಡ ತಲೆ ಬರಹಗಳ ಮೂಲಕ ಪ್ರಕಟಿಸುತ್ತಿರುವುದು ಕಾಣುತ್ತಿತ್ತು....*

ಸುಮಾರು 30 ವರ್ಷಗಳು ಕಳೆದು ಇದೀಗ ಅದೇ ವಿರೋಧಿ ಸಂಘಟನೆಯವರು ಹೇಳುತ್ತಾರೆ. "ಮರ್ಕಝ್'ನ ಅನಾಥ ಮಕ್ಕಳನ್ನು ಪರಿಪಾಲನೆ ಮಾಡಲು ಮರ್ಕಝ್ ಕಾಂಪ್ಲೆಕ್ಸ್'ನಿಂದ ಲಭಿಸುವ ಒಂದು ದಿನದ ವರಮಾನ ಮಾತ್ರ ಸಾಕು ಎಂದು.

 "ಕಾಲವು ಓಡುತ್ತಿರುವ ಓಟವನ್ನೊಮ್ಮೆ ನೋಡಿ" 😁🙄

*'ಕೆಲವೊಂದು ಪಾಠಗಳು ಕಾಲವು ಕಲಿಸಿ ಕೊಡುತ್ತದೆ.. ಕಲಿಯಲು ಕೆಲವೊಮ್ಮೆ ನಾವು ಬಾಕಿ ಇರಬೇಕೆಂದಿಲ್ಲ'..*

💪 ಮರ್ಕಝ್ ಮುಂದಿಟ್ಟಿರುವ ಪ್ರತಿಯೊಂದು ಹೆಜ್ಜೆಯೂ  ಅತೀ ದೊಡ್ಡ ಅಭಿವೃದ್ಧಿಯಾಗಿ ಮಾರ್ಪಾಡು ಹೊಂದಿದೆ ಮಾತ್ರವಲ್ಲ ಇಂದು ದೇಶ ವಿದೇಶಗಳಲ್ಲೂ ಪ್ರಖ್ಯಾತಿಯನ್ನು ಪಡೆದಿದೆ.
ಕಳೆದ ಕೆಲವು ಕಾಲದಲ್ಲಿ ನೋಡಿದರಲ್ಲಿ ಅತೀ ಹೆಚ್ಚು ಪ್ರಮುಖವಾದ *"ನೋಲೆಡ್ಜ್ ಸಿಟಿ"*ಯ ಕೆಲಸ ಕಾರ್ಯಗಳು ಅತೀ ತ್ವರಿತಗತಿಯಲ್ಲಿ ಸಾಗುತ್ತಿರುವಾಗ ಮರ್ಕಝ್'ನ ಚರಿತ್ರೆಯಲ್ಲಿ ಇನ್ನೊಂದು ಮಹತ್ತರವಾದ ದೃಷ್ಟಾಂತಗಳಲ್ಲಿ ಇದೂ ಕೂಡಾ ಸೇರ್ಪಡೆಗೊಳ್ಳುವುದಂತೂ ಖಚಿತ..!!
(ಇನ್ ಷಾ ಅಲ್ಲಾಹ್)

ಲೋಕ ಚರಿತ್ರೆಯಲ್ಲಿ ಮರ್ಕಝ್ ಯೋಜನೆಯು ಭಾರತದ ಯಶಸ್ಸನ್ನು ಬಾನೆತ್ತರಕ್ಕೆ ಕೊಂಡೊಯ್ಯುತ್ತಿದೆ..

ವಿಶ್ವ ಅರಿವಿನ ತೀರಕ್ಕೆ ಒಂದು ಹೆಬ್ಬಾಗಿಲಾಗಿ ಈ ಸಣ್ಣ ಕೇರಳದಲ್ಲಿ ಮರ್ಕಝ್ *"ನೋಲೆಡ್ಜ್ ಸಿಟಿ"* ಹೊಸ ಇತಿಹಾಸ ಪುಟವನ್ನು ತೆರೆಯಲಿದೆ.!

ಇದು ಕೋಟಿಗಳ ಆಸ್ತಿ ಇರುವ ಒಂದು ಇಸ್ಲಾಮಿಕ ವಿದ್ಯಾಭ್ಯಾಸ ಸ್ಥಾಪನೆಯಾಗಿ ಬದಲಾದಾಗ.., ಹಣ ದೋಚುದೆಂದೂ, ವ್ಯಾಪಾರವಾಗಿದೆಯೆಂದು, ಆರೋಪಿಸುವ ಅಸೂಯೆಗಾರರಿಗೆ ಇಂತಹ ಹಲವಾರು ಯೋಜನೆಗಳ ಮೂಲಕ ಉತ್ತರವಾಗಿ ಕೊಡುದಾಗಿದೆ ಇದು.

ವಿರೋಧಿಗಳು ಮರ್ಕಝ್ ಸಂಕೀರ್ಣಕ್ಕಿಂತಲೂ  ಅಧಿಕ ಕೋಟಿಗಳು ಸಂಗ್ರಹಿಸಿಯೂ, ಮರ್ಕಝ್'ನ ನೂರರಲ್ಲಿ ಒಂದು ಶೇಖಡವು ಕೂಡಾ ಸಮುದಾಯದ ಉನ್ನತಿಗೆ ಬೇಕಾಗಿ ಕಾರ್ಯಾಚರಿಸಲೊ, ಖರ್ಚು ಮಾಡಲೋ ಸಾಧ್ಯವಾಗದೆ ಅಸೂಯೆಗಾರರಾದ ಇವರುಗಳಿಗೆ ಮರ್ಕಝ್ ವಿರುದ್ದ ವಿಮರ್ಶನೆ ಮಾಡಲು ಯಾವ ಅರ್ಹತೆ ಇದೆ...!?

ವಿಮರ್ಶಕರಿಗೆಲ್ಲಾ ಮಧುರವಾದ ರೀತಿಯಲ್ಲಿ ಉತ್ತರ ಹೇಳುವ ಇದರ ಮೇಲುಸ್ತುವಾರಿ ನಾಯಕರ ಮಾತಿನ ರೂಪದಲ್ಲಿ ಹೇಳುವುದಾದರೆ *"ಓ ವಿರೋಧಿಗಳೇ ನಮಗೆ ಸಮಯವಿಲ್ಲ ನಿಮ್ಮೊಂದಿಗೆ ತರ್ಕಿಸಲು..!*
*"ನಮಗೆ ಇಲ್ಲಿ ಮಾಡಿ ಮುಗಿಸಲು ಹಲವಾರು ಕೆಲಸಗಳು ಬಾಕಿ ಇದೆ..!"*

ಈ ಎಲ್ಲಾ ಸಲ್ಕರ್ಮಗಳು
 ಅಲ್ಲಾಹು ಸ್ವೀಕರಿಸಲಿ ಆಮೀನ್

ಮುಂದುವರಿದ ಭಾಗ ಶೀಘ್ರದಲ್ಲಿ.

👉🏻 *ವೈಜ್ಞಾನಿಕ ಉತ್ಕೃಷ್ಟತೆಯ ಅನ್ವೇಷನೆ.*

*ಮರ್ಕಝುಸ್ಸಖಾಫತಿ ಸುನ್ನೀಯ್ಯಾ ಇದರ 40'ನೇ ವಾರ್ಷಿಕ ರೂಬಿ ಜ್ಯುಬಿಲಿ ಐತಿಹಾಸಿಕ ಮಹಾ ಸಮ್ಮೇಳನ.*
*( 2018 ಜನವರಿ 05' 06' 07 )*
*🛣ಮರ್ಕಝ್ ನಗರ-ಕಾರಂದೂರ್, ಕಲ್ಲಿಕೋಟೆ ಕೇರಳ.*

ಅನುವಾದ
✍ ಗಫೂರ್ ಬಾಯಾರ್
      Gafoor Bayar
✳✳✳✳✳✳✳✳✳

No comments:

Post a Comment