Friday, October 27, 2017

🍂🍂🍂🍂🍂🍂🍂🍂🍂🍂🍂🍂🍂   *ದಿನಕ್ಕೊಂದು ಹದೀಸ್*   🍂🍂🍂🍂🍂🍂🍂🍂🍂🍂🍂🍂🍂
*📝ಮುನೀರ್ ಸಖಾಫಿ , ಸಾಲೆತ್ತೂರು.*

*﷽*

*ಭಾಗ---0⃣1⃣*
وعن ابي هريرة رضي الله عنه عن
 النبي صلي الله عليه وسلم : قال (من كان  يؤمن بالله واليوم الاخر فليقل خيرا او ليصمت) متفق عليه
ಅಬೂ ಹುರೈರ ರಳಿಯಲ್ಲಾಹು ಅನ್ಹು ವರದಿ;ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಹೇಳಿದರು;ಅಲ್ಲಾಹನ ಮೇಲೆ ಮತ್ತು ಅಂತ್ಯ ದಿನದಲ್ಲಿ ವಿಶ್ವಾಸವಿರಿಸುವವನು ಒಳಿತನ್ನು ಮಾತ್ರ ನುಡಿಯಲಿ.ಅಥವಾ ಮೌನವಹಿಸಲಿ(ಬುಖಾರಿ , ಮುಸ್ಲಿಂ)
ಮನುಷ್ಯನನ್ನು  ಇತರ ಪ್ರಾಣಿಗಳಿಗಿಂತ ವ್ಯತ್ಯಸ್ಥವಾದ ರೀತಿಯಲ್ಲಿ ಅಲ್ಲಾಹನು ಸೃಷ್ಟಿಸಿದ್ದಾನೆ.
ಮನುಷ್ಯನಿಗೆ ಅಲ್ಲಾಹನು ಕರುಣಿಸಿದ ಅನುಗ್ರಹಗಳ ಪೈಕಿ ಅತ್ಯನ್ನತ ಅನುಗ್ರಹವಾಗಿದೆ "ಮಾತಾಡುವ ಶಕ್ತಿ".
ಇತರ ಪ್ರಾಣಿಗಳನ್ನು ಮೂಕ ಜೀವಿಯಾಗಿ ಸೃಷ್ಟಿಸಿದರ ಹಿಂದೆ ಹಲವಾರು ರಹಸ್ಯಗಳಿವೆ.
ಮನುಷ್ಯನು ನಾಲಗೆಯ ಮೂಲಕ ಅವನ ಅಂತರಾಳದಲ್ಲಿರುವ ಭಾವನೆಗಳನ್ನು ಹೊರ ಹಾಕುತ್ತಾನೆ.
ಮನುಷ್ಯನ ಬಾಯಿಂದ ಬರುವ ಎಲ್ಲಾ ಮಾತುಗಳು ಅಲ್ಲಾಹನ ನಿರೀಕ್ಷಣೆಯಲ್ಲಾಗಿದೆ.ಬಾಯಿಯ ಮೂಲಕ ಮಾತಾಡುವ ಶಬ್ದಗಳು ಅಲ್ಲಾಹನಿಗೆ ತೃಪ್ತಿಕರವಾದರೆ ಅದಕ್ಕೆ ಝಿಕ್ರ್ ನ ಪ್ರತಿಫಲವನ್ನೂ ಕೆಟ್ಟ ಪದವಾದರೆ ಅದಕ್ಕೆ ತಕ್ಕ ಶಿಕ್ಷೆಯನ್ನೂ ಅನುಭವಿಸಬೇಕು.
ಬಾಯಿ ಮಾತಿನಿಂದ ಉಂಟಾದ ತಪ್ಪಿನಿಂದ ಹಲವಾರು ಜನರು ನರಕ ಪ್ರವೇಶಿಸಿದ್ದಾರೆ ಎಂದು ಪ್ರವಾದಿ ಸಲ್ಲಲ್ಲಾಹುಅಲೈಹಿ ವಸಲ್ಲಮರು ಹೇಳಿದ ನುಡಿಯೂ ಹದೀಸ್ ಗ್ರಂಥದಲ್ಲಿವೆ.
ನಮ್ಮ ಮಾತು ಒಮ್ಮೆಯೂ ಕೂಡಾ ಅನ್ಯರ ಗೀಬತ್, ಫಸಾದ್ , ಇತರರ ಅವಹೇಳನ,ನಿಂದನೆ,ಸುಳ್ಳು , ವಂಚನೆಯಿಂದ ಕೂಡಿರಬಾರದು.
ನಾಲಗೆಯಿಂದ ಉಂಟಾಗುವ ವಿಪತ್ತನ್ನು ಇಮಾಂ ಗಝ್ಝಾಲಿ ಯವರ ಇಹ್ಯಾ ಉಲೂಮಿದ್ದೀನ್ ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ.
ನಮ್ಮ ಇಹಪರ ವಿಜಯಕ್ಕಾಗಿ ಒಳ್ಳೆಯದನ್ನೇ ನುಡಿ, ಇಲ್ಲದಿದ್ದರೆ ಮೌನವಹಿಸು ಎಂಬ ಪ್ರವಾದಿ
ನುಡಿಯು ಗಮನಾರ್ಹವಾಗಿದೆ.

*📝ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖

No comments:

Post a Comment