Friday, October 27, 2017

*ನಾನೆಸಿದಂತೆ ನಿಜವಾಗಿಯೂ ಸಿಟಿ ಬಜಾರ್ ಹಸನಾಜಿ ಮಹಾ ಭಾಗ್ಯವಂತರು ಕಾರಣ ಕೇಳಿ....*
_______________________

ತನ್ನ ಕರುಳುಕುಡಿ ತನ್ನೆದುರು ನಿಶ್ಚಲವಾಗಿ ಮಯ್ಯತ್ತಾಗಿ ಅಂಗಾತ ಮಲಗಿದ್ದಾಳೆ.
ಆ ಕರಳುಕುಡಿಯು ತನ್ನಿಂದ ಶಾಸ್ವತವಾಗಿ ಬೇರ್ಪಟ್ಟು ಅಲ್ಲಾಹನೆಡೆಗೆ ಮುಖ ಮಾಡಿ ಕಫನ್ ವಸ್ತ್ರಗಳಿಂದ ಅಲಂಕೃತಗೊಂಡು ಯಾತ್ರೆಗೆ ಸಜ್ಜಾಗಿ ನಿಂತಿದ್ದಾಳೆ!

ಕುಟುಂಬಿಕರ ದುಖದ ಕಟ್ಟೆಯೊಡದು,ಅವರೆಲ್ಲಾ ದುಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ!

ಆದರೆ ಸಿಟಿ ಬಜಾರ್ ಹಸನಾಜಿ ತನ್ನ ದುಖವನ್ನು ಸಾದ್ಯವಾದಷ್ಟು ಅದುಮಿಟ್ಪು ಬಪ್ಪಳಿಗೆ ಇಕ್ಬಾಲ್ ರವರಿಗೆ ಹೇಳುತ್ತಾರೆ.

*"ಇಕ್ಬಾಲ್, ನನ್ನ ಪ್ರಿಯ ಪುತ್ರಿಯ ಮರಣ ವಾರ್ತೆಯನ್ನು 'ಮರ್ಕಝ್' ಗೆ ತಿಳಿಸು"*
ನೋಡಿ ಆ ತಂದೆಯ ಮನೋಸ್ಥೈರ್ಯ!

ತನ್ನ ಮಗುವನ್ನು ಅವಳು ಬದುಕಿರುವಷ್ಟು ಕಾಲ ಉನ್ನತ ವಿದ್ಯಾಬ್ಯಾಸ ನೀಡಿ ಬೆಳಸಿದ ಹಸನಾಜಿ, ತನ್ನ ಕರುಳು ಕುಡಿಯ ಇಹಲೋಕ ಬದುಕು ಅಂತ್ಯವಾಯಿತೆಂದು ಕಂಡಾಗ ಇನ್ನು ಅವಳ ಪರಲೋಕ ಜೀವನ ಅಲ್ಲಾಹನ ವಿಶೇಷ ಉದಾರತೆಯಿಂದ ಸ್ವರ್ಗೋದ್ಯಯನವಾಗಲಿಯೆಂಬ ನಿಟ್ಟಿನಲ್ಲಿ ಮರ್ಕ‌ಝ್ ಸಹಿತ ವಿವಿಧ ಸಂಸ್ಥೆಗಳಿಗೆ ಮರಣ ವಾರ್ತೆ ರವಾನಿಸುವ ಮೂಲಕ
ಮಗಳ ಪಾರತ್ರಿಕ ಮೋಕ್ಷದ ಬಗ್ಗೆ ಆ ತಂದೆ ಚಿಂತಿಸುತ್ತಿದ್ದರು!!

ಸಹಜವಾಗಿಯೇ ಆ ತಂದೆ ತನ್ನ ಮಗಳಿಗಾಗಿ ಝಿಕ್ರ್ ತಹ್ಲೀಲ್ ಹೇಳಿ ಅವಳ ಪರಲೋಕ ವಿಜಯಕ್ಕಾಗಿ ಪ್ರಾರ್ಥಿಸುವ ವಿಶ್ವಾಸಿಗಳ ತಲಾಶೆಯಲ್ಲಿದ್ದಾರೆಂದು ಮನಗಂಡ ಪುತ್ತೂರು ಡಿವಿಶನ್ SSF ಅದ್ಯಕ್ಷರಾದ ಶಾಕಿರ್ ಹಾಜಿ ಮತ್ತು ಬಪ್ಪಳಿಗೆ ಇಕ್ಬಾಲ್ ಪರಸ್ಪರ ಸಮಾಲೋಚಿಸಿ, ಪುತ್ತೂರು SSF ಡಿವಿಶನ್ ವತಿಯಿಂದ ಪುತ್ತೂರು SSF ದ‌ಅವಾ ವಿಂಗ್ ನ ಸಹಕಾರದೊಂದಿಗೆ ತಹ್ಲೀಲ್ ಮಜ್ಲಿಸ್ ಸಂಘಟಿಸಲು ತೀರ್ಮಾನಿಸಿ,ವಿಷಯ ಸಿಟಿ ಹಸನಾಜಿಗೆ ತಿಳಿಸಿದಾಗ ಅವರು ಅತ್ಯಂತ ಸಂತೋಷದಿಂದ ಒಪ್ಪಿಕೊಂಡರು.
ಆ ಮಗಳ ಭಾಗ್ಯ
ಸುನ್ನೀ ಸಂಘಕುಟುಂಬದ ಕಾರ್ಯಕರ್ತರು ಹರಿದು ಬಂದರು!

ದುಖದ ಮಡುವಿನಲ್ಲಿರುವವರನ್ನು ಸಂತೈಸಿದರೆ, ಇಡೀ ದುನಿಯಾದ ಬೆಲೆ ಕಟ್ಟಿದರೂ,ಸಿಗದಂತಹ ಅಮುಲ್ಯವಾದ ಎರಡು ಸ್ವರ್ಗದ ವಸ್ತ್ರಗಳನ್ನು ಧರಿಸಲಾಗುವುದೆಂಬ ತ್ವಬ್ರಾನಿಯ ಹದೀಸ್ ಕಲಿತ ಸುನ್ನೀ ಕಾರ್ಯಕರ್ತರು ಆ ಕರಳು ಕುಡಿಯ ಪರಲೋಕ ಮೋಕ್ಷಕ್ಕಾಗಿ ಪ್ರಾರ್ಥಿಸುವ ಮೂಲಕ ಹಸನಾಜಿಯನ್ನು ಸಂತೈಸಿದರು.
ಆ ಕರುಳಕುಡಿಯ ಭಾಗ್ಯವೆಂದೇ ಹೇಳಬೇಕು,
ಸಾವಿರಾರು ತಹ್ಲೀಲ್ ಆ ಪ್ರಿಯ ಮಗಳ ಕಬರಿಗೆ ಸಿಕ್ಕಿತು.
ತುಂಬಿತುಳುಕಿದ ವಿಶ್ವಾಸಿಗಳ ಆಮೀನ್ ಗಳು ಮತ್ತು ಕೆಮ್ಮಾಯಿ ಉಸ್ತಾದರ ದುಆ ಕರುಳಕುಡಿಯ ಪರಲೋಕ ಮೋಕ್ಷಕ್ಕೆ ನಿಮಿತ್ತವಾಗಲಿ.

ಮಜ್ಲಿಸ್ ಮುಗಿದ ನಂತರ ಹಸನಾಜಿಯ ಸಮೀಪ ನಾನು ಹೋದಾಗ ನನ್ನನ್ನು ಅವರು ಬಿಗಿದಪ್ಪಿ ಗಟ್ಟಿಯಾಗಿ ಆಲಿಂಗನ ಮಾಡಿ ಕಂಬನಿ ಮಿಡಿದರು.
ಎಲ್ಲಾ ಕಾರ್ಯಕರ್ತರಿಗೂ ಹಸ್ತದಾನ ಮಾಡಿ ಮಗಳಿಗಾಗಿ ದುಆ ಮಾಡಲು ಹೇಳುತ್ತಿದ್ದರು.

ಕೂರ್ನಡ್ಕ ಮಸೀದಿ ಉಪಾಧ್ಯಕ್ಷ ರಾದ KH ಖಾಸಿಂ ರವರು ತನ್ನ ಮನೆಯನ್ನು ಕಾರ್ಯಕರ್ತರಿಗಾಗಿ ತೆರೆದುಕೊಟ್ಟು ಸ್ಥಳಸೌಕರ್ಯ‌ ಒದಗಿಸಿಕೊಟ್ಟರು.
ಕೊನೆಯಲ್ಲಿ ತಬರ್ರುಕಿಗಾಗಿ ಸಮೂಸ ಮತ್ತು ಕುಡಿಯಲಿಕ್ಕೆ ಲಿಂಬೆ ಶರಬತ್ತು ವಿತರಿಸಲಾಯಿತು.

ಮಾಷಾಅಲ್ಲಾಹ್
ಪುತ್ತೂರು ಡಿವಿಷನ್ SSF ,ದ‌ಅವಾ ವಿಂಗ್ ಪುತ್ತೂರು ಸಹಿತ ಸುನ್ನೀ ಸಂಘಕುಟುಂಬದ ಕಾರ್ಯಕರ್ತರು ಕೇವಲ ತಹ್ಲೀಲ್ ಮಜ್ಲಿಸ್ ಗೆ ಮಾತ್ರ ಸೀಮಿತವಲ್ಲ, ಸಾಂತ್ವನದ ಪ್ರತಿಯೊಂದು ಮಜಲುಗಳಲ್ಲಿ ಅವರು ಸಕ್ರಿಯರಾಗಿದ್ದಾರೆ.
ನಿಮ್ಮೆಲ್ಲರ ಸೇವೆಗೆ ಸದಾ ಅವರು ತಯ್ಯಾರಾಗಿದ್ದಾರೆ.
ಆಹ್ವಾನವಿತ್ತವರ ಕರೆಗೆ ಅವರು ಓಗೊಡುತ್ತಾರೆ.
ದಯಮಾಡಿ ಪ್ರತಿಯೊಂದು ಉತ್ತಮ ಕಾರ್ಯಕ್ರಮಗಳನ್ನು ಗ್ರೂಫಿಸಂ ಕಣ್ಣಲ್ಲಿ ಕಾಣದೆ ದುಖ ದುಮ್ಮನದಲ್ಲಿರುವವರನ್ನು ನಿಮ್ಮಿಂದಾಗುವ ರೀತಿಯಲ್ಲಿ ಸಂತೈಸಲು ತಯ್ಯಾರಾಗಿರಿ.

ಪ್ರತಿಯೊಂದು ಉತ್ತಮ ಚರ್ಯೆಗಳನ್ನು ಗ್ರೂಫಿಸಂ ಕಣ್ಣಲ್ಲಿ ವಿಮರ್ಶಿಸುವವರ ಫಿತ್ನ ಫಸಾದ್ ಗಳಿಂದ ಈ ಸಮುದಾಯವನ್ನು ಅಲ್ಲಾಹು ರಕ್ಷಿಸಲಿ ಆಮೀನ್.

---ಅಬೂಶಝ

No comments:

Post a Comment