Sunday, October 22, 2017

ಅಲೆಮಾರಿ ಮೈತ್ರಿಕೂಟದ ಡೊಂಕು ಪ್ರಶ್ನೆ ಗಳ ಪೋಸ್ಟ್ ಮಾರ್ಟಮ್.!!!
————————————

ಎಪಿ ಅಬುಬಕರ್ ಮುಸ್ಲಿಯಾರ್ ರವರ ವಿವಾದೀತ ಕಾರ್ಯ ಚಟುವಟಿಕೆಗಳನ್ನು ವಿಮರ್ಷಿಸುವುದು ಮತ್ತು ಅದರಿಂದ  ಸಮುದಾಯ ಮತ್ತು ಸಮಾಜದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಕುರಿತು ಖೇದ ಪ್ರಕಟಿಸುವ ಮೊದಲು....!
 ಸಾಮಾನ್ಯ ಮುಸಲ್ಮಾನನೊಬ್ಬನ ಈ ಕೆಳಗಿನ ಜಿಜ್ಞಾಸೆ ಗಳಿಗೆ ಸ್ಪಂದಿಸಬೇಕಾಗಿ ವಿನಂತಿ...!!

✅ಒಂದೇ ಆದರ್ಷದಲ್ಲಿದ್ದ ಸಮುದಾಯವನ್ನು ತೊರೆದು ನವೊತ್ಥಾನ ಎಪಿ ವಿಬಾಗ ಎಂಬ ಅನೈತಿಕ ಸಂಘವನ್ನು ಉಂಟು ಮಾಡಿದ್ದು ಸರಿಯಾ....?

➡ಸರಿ ಮಾತ್ರವಲ್ಲ  ಅದು ಅತ್ಯುತ್ತಮವಾದ ನಿರ್ಧಾರವಾಗಿತ್ತು ಎಂಬುದಕ್ಕೆ ಕಳೆದ ಒಂದು ವಾರದಲ್ಲಿ ಮೂರು ಮೊಲ್ಲಾಗಳು ಮೂರು ರೀತಿಯ ಅಭಿಪ್ರಾಯಗಳನ್ನು ರಾಜಕೀಯಕ್ಕೆ ಬೇಕಾಗಿ ಹೇಳಿದ್ದೇ ದಾರಾಳ ಸಾಕು!
ಒಬ್ಬ ಮರಿ ಮುಲ್ಲಾ ಇಸ್ಲಾಮಿನ  ಸತ್ಯ ನಿಯಮವನ್ನು ಬಹಿರಂಗವಾಗಿ ಹೇಳಿ ನಂತರ ಪುನ ಯಾರನ್ನೋ ತೃಪ್ತಿಪಡಿಸಲಿಕ್ಕಾಗಿ ಆ ನಿಯಮವನ್ನು ಜೂದಾಯಿಸಂ ನಂತೆ ತಿರುಚಿ ಮಕಾಡೆ ಮಲಗಿದ್ದನ್ನು ನಾವು ಕಂಡೆವು.
ಆದರ್ಶ ಒಂದೇ ಎಂಬ ಲೇಬಲ್ ನಲ್ಲಿ ದೀನನ್ನು ರಾಜಕೀಯಕ್ಕೆ ಬೇಕಾಗಿ ಮಾರುವ
ಇಂತಹ ಮೊಲ್ಲಾಗಳಿಂದ ವಿಮೋಚನೆ ಬೇಕಾಗಿತ್ತು.
ಸುನ್ನತ್ ಜಮಾತನ್ನು ಅದರ ನಿಷ್ಕಳಂಕತೆಯೊಂದಿಗೆ ಕಾಪಾಡಬೇಕಿತ್ತು
ಸುನ್ನೀ ಹೇಳಲು ಸ್ಥಾಪಿಸಿದ ಸಮಸ್ತವನ್ನು ರಾಜಕೀಯ ಹಟ್ಟಿಯಿಂದ ಬಿಡುಗಡೆ ಮಾಡಬೇಕಿತ್ತು.
ಯಾವುದೇ ರಾಜಕೀಯ ಪುಡಾರಿಯ ಲುಂಗಿಯಲ್ಲಿ ನೇತಾಡುವ ಸನ್ನಿವೇಶ ಇಲ್ಲದೆ ಸ್ವತಂತ್ರವಾಗಿ ಸುನ್ನತ್ ಜಮಾತ್ ಪಸರಿಸುವ ಒಳ್ಳೆಯ ವಾತಾವರಣ ಸೃಷ್ಟಿಯಾಗಬೇಕಿತ್ತು!
ಆದ್ದರಿಂದಲೇ ಎಪಿ ಉಸ್ತಾದ್ ದಿಟ್ಟ ತೀರ್ಮಾನ ಮಾಡಿ ಕ್ರಾಂತಿ ಮಾಡಿಯೇ ಬಿಟ್ಟರು!
ನೀವು ಅದಕ್ಕೆ ಅನೈತಿಕ ಸಂಘ ಅಥವಾ ನೈತಿಕ ಸಂಘ ಏನೇ ಕರೆದರೂ ಆ ಸಂಘದ ಮೂಲಕ ಯಾರದೇ ಹಂಗಿಲ್ಲದೆ ಸುನ್ನತ್ ಜಮಾತನ್ನು ಯಾರ ಮುಂದೆಯೂ ಧೈರ್ಯದಿಂದ ಹೇಳಲು ಸಾಧ್ಯವಾಗಿದೆ.
ಇದಕ್ಕಿಂತ ಮಿಗಿಲಾದ ಬೆನಿಫಿಟ್ ಬೇಕೇ..?

✅ಮುಸ್ಲಿಮರು ಪರಸ್ಪರ ಬೇಟಿಯಾದಾಗ ಸಲಾಂ ಹೇಳಲು ಕಲಿಸಿಕೊಟ್ಟ ಪ್ರವಾದಿ ಸ.ಅ ರವರ ಹದೀಸ್ ವಚನಗಳಿಗೆ ತದ್ವಿರುದ್ದವಾಗಿ ಇತರ ಮುಸ್ಲಿಂ ಆದರ್ಷ ಸಂಘಟನೆಗಳನ್ನು ಹೀನಾಯವಾಗಿ ತೆಗಳಿ ಅವರಿಗೆ ಸಲಾಂ ಹೇಳಬಾರದೆಂದು ಪತ್ವಾ ನೀಡಿದ್ದು ಪ್ರವಾದಿ ನಿಂದನೆ ಅಲ್ಲವೇ...?

➡ ಮುಸ್ಲಿಮನಾದರೆ ಮಾತ್ರ ಸಾಕಾ?
ಅವನು ಬಾತ್'ರೂಮ್ ನಿಂದ ಹೊರಗೆ ಬಾರದೇ ಇದ್ದಲ್ಲಿ ಅವನಿಗೆ ಸಲಾಮ್ ಹೇಳುವುದಾದರು ಹೇಗೆ..❓

✅ಸಾಮಾನ್ಯ ಮುಸ್ಲಿಮರನ್ನು  ಸುನ್ನಿ, ಸಲಫಿ ,ಜಮಾತ್, ತಬ್ಲೀಗ್ ಎಂದು ವಿಂಗಡಿಸಿ ಸಮುದಾಯವನ್ನು ವಿಭಾಜಿಸಿದವರೂ ನೀವಲ್ಲವೇ

➡ ಮುಸ್ಲಿಮರನ್ನು ಮುಶ್ರಿಕ್ ಎಂದು ಆರೋಪಿಸಿ ಬೇರೆ ಬೇರೆ ಹೆಸರಿಟ್ಟು ಅವರೇ ಸುನ್ನತ್ ಜಮಾತಿನಿಂದ ಹೊರಗೆ ಹೋದದಕ್ಕೆ ಎಪಿ ವಿಭಾಗವನ್ನು ವಿಮರ್ಶಿಸಿ ಏನು ಪ್ರಯೋಜನ❓

✅ನೂತನ ವಾದಿಗಳೊಂದಿಗೆ ವ್ಯವಹರಿಸಬಾರದೆಂದು ಧಾರ್ಮಿಕ ಪತ್ವಾ ನೀಡಿದ ನಿಮ್ಮ ನಾಯಕ  ಶೈಖ್ ಅಬೂಬಕರ್ ಮುಸ್ಲಿಯಾರ್ ವಿದೇಶ ರಾಜ್ಯಗಳಿಗೆ ತೆರಳಿ ಅಲ್ಲಿನ ಇತರ ಆದರ್ಶ ಪ್ರಸ್ಥಾನದ ಮುಸ್ಲಿಂ ನಾಯಕರೊಂದಿಗೆ ವೇದಿಕೆ ಹಂಚಿಕೊಂಡು, ಔತನ ಕೂಟಗಳಲ್ಲಿ ಭಾಗವಹಿಸುವುದು ಮಹಾ ವಂಚನೆಯಲ್ಲವೇ....?

➡ ಪಾಪ ಈ ಭೂಪನ ಪ್ರಕಾರ ಸೌದಿಯಲ್ಲಿ ಇರುವವರೆಲ್ಲಾ ನೂತನವಾದಿಗಳೆಂದು ಹಾಗೆ ಎಪಿ ಉಸ್ತಾದ್ ವ್ಯವಹರಿಸುವ ,ಔತನಕೂಟದಲ್ಲಿ ಭಾಗವಹಿಸುವ ಎಲ್ಲರೂ ನೂತನವಾದಿಯಾಗಿ ಚಿತ್ರೀಕರಿಸುವ ಈ ಪೆದ್ದ ಮಂಡೂಕನಿಗೆ ನೂತನವಾದಿ ಯಾರು ನೂತನ ವಾದ ಏನು ಎಂಬುದರ ಬಗ್ಗೆ ಬಾಲಪಾಠ ಕೂಡಾ ಇಲ್ಲ ಎಂದು ಮನದಟ್ಟಾಗುತ್ತೆ.

✅ಅನ್ಯೋನ್ಯತೆ ಯಿಂದಿರುವ ಮಹಲ್ಲ್ ಗಳಲ್ಲಿ ಮದ್ರಸಾ ಪಠ್ಯ ಪುಸ್ತಕಗಳ ಹೆಸರಲ್ಲಿ ವಿವಾದ ವನ್ನುಂಟುಮಾಡಿ ಪರಸ್ಪರ ಕಚ್ಚಾಡಿಸುವುದು ತಪ್ಪಲ್ಲವೇ....?

➡ ಎಪಿ ವಿಭಾಗ ಎಲ್ಲಿಯೂ ಕಚ್ಚಾಡಿಸಿದ ಘಟನೆ ಇಲ್ಲ ಆಯಾ ಊರಿನವರು ಅವರಿಗೆ ಇಷ್ಟ ಬಂದ ಸಿಲಬೆಸ್ ಅಳವಡಿಸುತ್ತಾರೆ.
ಅದರ ವಿರುದ್ಧವಾಗಿ ಕೆಲವರು ನಡೆಯುವಾಗ ಸಂಘರ್ಷ ಉಂಟಾಗುತ್ತೆ.
ಇದೀಗ ಸದ್ಯ ಐದು ಮದರಸಗಳ ವಿಷಯ ಕೂಡಾ ಅದೇ
ಅಲ್ಲೆಲ್ಲಾ ಮೊದಲು ಎಪಿ ವಿಭಾಗದ ಪಠ್ಯ ಕಲಿಸಲಾಗುತ್ತಿತ್ತು ಅದಕ್ಕೆ ಬದಲಾವಣೆ ತಂದು ಗಲಭೆ ಸೃಷ್ಟಿಸಿ ನಂತರ ಪುನಃ ಗಲಭೆ ಸೃಷ್ಟಿಸಿದವರು ಎಪಿ ಗಳು ಎಂದು ಆರೋಪಿಸುವವನ್ನು ಕಂಕನಾಡಿಯಲ್ಲಿ ಎಡ್ಮಿಟ್ ಮಾಡಿದರೂ ಅವನಿಗೆ ಸೌಖ್ಯ ಸಿಗಬಹುದೆಂಬ ಭರವಸೆ ನನಗಿಲ್ಲ
ಕಾರಣ ಅವನ ರೋಗ ಅಷ್ಡೊಂದು ಮಾರಕ!

✅ಎಪಿ ಬಳಗದ ನೌಶಾದ್ ಅಹ್ಸನಿ ಯಂತಹ ಸಘಾಫಿ ಗಳು ಸಾರ್ವಜನಿಕ ಸಭೆಗಳಲ್ಲಿ "ಎಪಿ ತಿಳಿಯದೆ ಯಾವುದೇ ಕಾರ್ಯವನ್ನೂ ಅಲ್ಲಾಹನು ತೀರ್ಮಾನಿಸುವುದಿಲ್ಲ " ಎಂಬ ದೈವ ದಿಕ್ಕಾರದ ಪ್ರಬಾಷಣಗಳನ್ನು ನಡಸಿಯೂ ಅವನ ವಿರುದ್ದ ಸೊಳ್ಳೆತ್ತಲು ಮುಂದಾಗದ ಎಪಿ ವಿಬಾಗ ವ್ಯಕ್ತಿ ಪೂಜೆಯನ್ನು ಪ್ರೋತ್ಸಾಹಿಸುತ್ತಿದೆಯಾ.....?

➡ ಇಂತಹ ಆರೋಪಗಳಿಗೆ ಅವರೇ ಉತ್ತರಿಸಿದ್ದಾರೆ ಯ್ಯೂ ಟ್ಯೂಬ್ ನಲ್ಲಿ ಲಭ್ಯ.
ಮಾತಿನ ಕಸರತ್ತು ಹಿಡಿದು ಎಪಿ ವಿಭಾಗವನ್ನು ಬಗ್ಗು ಬಡಿಯಬಹುದೆಂಬ ಆಗ್ರಹ ಇದ್ದರೆ ಸದ್ಯ ಅದು ಅಲ್ಲೇ ಇರಲಿ.

✅ಸಂವಾದ ದ ಹೆಸರಲ್ಲಿ ಪ್ರವಾದಿ ಸ.ಅ ರವರ ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ವಿಮರ್ಷಿಸಲು ವೇದಿಕೆಯೊದಗಿಸಿದ್ದು ನಿಮ್ಮದೇ ತಂಡದ ಸಖಾಫಿಗಳಲ್ಲವೇ
 ಮುಸ್ಲಿಂ ಸಮೂಹಕ್ಕೆ ಪ್ರವಾದಿ ಸ.ಅ ರವರ ಮೇಲೆ ಇರುವ ಆತ್ಮೀಯ ಸಂಬಂಧವನ್ನು ಕುಚೋದಿಸುವ ಕೀಲುಮಟ್ಟಕ್ಕಿಳಿಸಿದವರೂ ನೀವಲ್ಲವೇ

➡ ಬಹಿರಂಗ ಸಂವಾದಗಳಿಂದಾಗಿ ಇದೀಗ ಸಲಪಿಗಳ ಸೊಕ್ಕು ಮುರಿದಿದೆ.
ಅವರು ಎಂಟು ಪಾರ್ಟಿಗಳಾಗಿ ಛಿದ್ರ ಛಿದ್ರವಾಗಿದ್ದಾರೆ.
ಅದರ ಕ್ರೆಡಿಟ್ ನಿಜವಾಗಿಯೂ ಸಖಾಪಿಗಳಿಗೆ ಸಲ್ಲುತ್ತದೆ.
ಮೈತ್ರಿಕೂಟದ ಪರಾಜಯ ನಿನ್ನನ್ನು ಹುಚ್ಚನಾಗಿ ಮಾರ್ಪಡಿಸಿದಕ್ಕೆ ನಾವೇನು ಮಾಡುವಂತಿಲ್ಲ.!

✅ಕೇಶವಿವಾದವನ್ನು ಮುಂದಿಟ್ಟು ಕೊಂಡು ಅನ್ಯಸಮುದಾಯದ ರಾಜಕೀಯ ವ್ಯಕ್ತಿ ಪಿಣರಾಯಿ ವಿಜಯನ್ ನಂತಹ ನಾಸ್ತಿಕರಿಗೆ ಪ್ರವಾದಿ ಸ.ಅ ರವರ ಪವಿತ್ರ ಕೇಶವನ್ನು ಅಪಹಾಸ್ಯ ಮಾಡಲು ವೇದಿಕೆ ಯೊದಗಿಸಿದವರು ನೀವಲ್ಲವೇ?

➡ ಅಲ್ಲ, ಅಲ್ಲವೇ ಅಲ್ಲ ಬದಲಾಗಿ ಅದನ್ನು 'ಬೋಡಿ ವೇಸ್ಟ್' ಎಂದು ಗೀಚಲು ಅನುವು ಮಾಡಿಕೊಟ್ಟ ಮೈತ್ರಿಕೂಟದ ಪತ್ರಿಕೆ ತೇಜಸ್ಸ್!
ಅದಕ್ಕೆ ಸಾಥ್ ಕೊಟ್ಟ ಮೈತ್ರಿಕೂಟದ ಜಮ ಮುಜ ತಬ್ಲೀಗಾದಿ ಎಸ್ಕೆ!

✅ ನಂತರ ತಾನೇ ಪೇರೋಡ್ ಸಘಾಫಿ ಬೆಲೂನ್ ಸಖಾಪಿ ಯಾಗಿ ಅಪಹಾಸ್ಯಕ್ಕೆ ಒಳಗಾದದ್ದು ಮತ್ತು ನಿಮ್ಮ ಶೈಖ್ ಅಂತರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಾಲಿಗೀಡಾಗುತ್ತಿರುವುದು
ಇದು ನಿಮಗೆ ಪ್ರವಾದಿ ನಿಂದನೆಗೆ ದೊರೆತ ಲೌಕಿಕವಾದ ದುಷ್ಪರಿಣಾಮ ವಲ್ಲವೇ

➡ ಹೌದು ಕ್ರೈಮ್ ಬ್ರಾಂಚ್ ಗೆ ಕೇಸು ಹಸ್ತಾಂತರವಾದಾಗ ಸುಳ್ಳು ಅಪಹಾಸ್ಯದಿಂದ ಊದಿ ಹಾರಿಸಿದ ಶತ್ರುಗಳ ಬೆಲೂನ್ ಪಟಕ್ಕನೆ ಹರಿದು ಚಿಂದಿ ಚಿಂದಿಯಾಯಿತು!
ಸತ್ಯ ಹಾದಿಯಲ್ಲಿದ್ದ ಪೇರೋಡ್ ಉಸ್ತಾದರಿಗೆ ಜಯ ಸಿಕ್ಕಿತು.!
ಅದೇ ರೀತಿ ಎಪಿ ಉಸ್ತಾದರ ಇಮೇಜನ್ನು ಕುಂದಿಸಲು ಹರಸಾಹಸ ಪಟ್ಟು ಫಿತ್ನ ಮಾಡಿದ ಎಲ್ಲಾ ಮೈತ್ರಿ ಕೂಟಕ್ಕೆ ಛಾಟಿಯೇಟು ಬೀಸುತ್ತಾ ಸೌದಿಯ ಮುಖ್ಯ ಪತ್ರ ಉಸ್ತಾದರ ಅಭಿಮುಖ ಪ್ರಕಟಿಸಿ ಎಲ್ಲಾ ಫಿತ್ನ ಸಂಘದ ಮುಖಕ್ಕೆ ಕ್ಯಾಕರಿಸಿ ಉಗಿಯಿತು!

✅ತಮ್ಮದು ಮಾತ್ರ ಸ್ವರ್ಗವಗಾಶಿಗಳೆಂದು ಡಂಗುರ ಸಾರುವ ಎಪಿ ಬಳಗ ಧರ್ಮವನ್ನೇ ವಿಕ್ರಿತವಾಗಿ ದುರುಪಯೋಗ ಪಡಿಸುತ್ತಿದೆಯಲ್ಲವೇ.?

➡ ಫಿತ್ನವನ್ನೇ ಅಜೆಂಡವನ್ನಾಗಿ ಮಾಡಿಸಿದ ಅಬೂಜಹಲ್ ನ ಅನುಯಾಯಿಗಳಿಗೆ ಅದೆಲ್ಲವೂ ದುರುಪಯೋಗದಂತೆ ಕಂಡರೆ ಅದರಲ್ಲಿ ಆಶ್ಚರ್ಯವಿಲ್ಲ!

✅ಇಲ್ಲ ಎಂದಾದರೆ ಮುಸ್ಲಿಮರು ರಾಜಕೀಯ ವಾಗಿ ಬಲಿಷ್ಟರಾಗ ಬೇಕಿದ್ದ ಕಾಲದಲ್ಲಿ ಮುಸ್ಲಿಂ ಸಂಘಟನೆಗಳ ರಾಜಕೀಯ ನಡೆಯನ್ನು ವಿಮರ್ಷಿಸಿ ಅದರ ವಿರುದ್ದ ಫತ್ವಾ ಹೊರಡಿಸಿದ ನಿಮ್ಮ ಸಂಘಟನೆಗಳು ಹಿಂಬಾಗಿಲ ಮೂಲಕ ಬಿಜೆಪಿ ಮಾರ್ಕಿಷ್ಟ್ ಪಕ್ಷಗಳನ್ನು ಬೆಂಬಲಿಸುತ್ತಿರುವುದು ತಪ್ಪಲ್ಲವೇ?

➡ ರಾಜಕೀಯವನ್ನು ಎಪಿ ವಿಭಾಗ ಎಂದೂ ವಿರೋಧಿಸಲ್ಲ ಆದರೆ ಸಮುದಾಯದ ಹೆಸರೇಳಿ ಮೊಸಳೆ ಕಣ್ಣೀರು ಸುರಿಸುತ್ತಾ ರಾಜಕೀಯಕ್ಕೆ ಬೇಕಾಗಿ ಇಸ್ಲಾಮ್ ಹರಾಂ ಮಾಡಿದ್ದನ್ನು ಹಲಾಲ್ ಮಾಡಿದ್ದನ್ನು ಮಾತ್ರ ವಿರೋಧಿಸಿದ್ದು.
ಇನ್ಶಾ ಅಲ್ಲಾ ಹಾಗೆ ಯಾರನ್ನೂ ಭಯಪಡದೆ ವಿರೋಧಿಸಲು ಅರ್ಹತೆ ಇರುವ ಒಂದೇ ಒಂದು ವಿಭಾಗ ಅದು ಎಪಿ ವಿಭಾಗ ಮಾತ್ರ !
ಬಾಕಿ ಪಂಡಿತ ಸಭೆ ಹೆಸರಿಗೆ ಮಾತ್ರ ಅದನ್ನು ರಾಜಕೀಯ ಪಾರ್ಟಿಯ ಗೂಟಕ್ಕೆ ಕಟ್ಟಿ ಹಾಕಲಾಗಿದೆ.

✅ಕರ್ಣಾಟಕದ ಮಡಿಕೇರಿಯಲ್ಲಿಯೂ ಎಸ್ ಎಸ್ ಎಪ್ ಬಿಜೆಪಿಯನ್ನು ಬೆಂಬಲಿಸಲಿಲ್ಲವೇ?

➡ ಎಪಿ ವಿಭಾಗಕ್ಕೆ ಎಲ್ಲಾ ರಾಜಕೀಯ ಪಾರ್ಟಿಯೊಂದಿಗೆ ಸಮದೂರ ವೀಕ್ಷಣೆ.
ಯಾರು ಸುನ್ನತ್ ಜಮಾತ್ ಗೆ ಸಹಾಯ ಮಾಡುತ್ತಾರೆ ಅವರಿಗೆ ಓಟ್
ಯಾರು ಇಸ್ಲಾಮಿಗೆ, ಶಾಂತಿ ಸಮಾಧಾನ ವಾತವರಣಕ್ಕೆ ಮಾರಕವಾಗುತ್ತಾರೆ ಅವರನ್ನು ದೂರ ಮಾಡುತ್ತೇವೆ ಅಷ್ಟೇ.

✅ರಾಜಕೀಯ ಅನಿಸ್ಲಾಮಿಕ ಎಂದು ಕೊಸರಾಡಿದ ನೀವೀಗ ಮುಸ್ಲಿಂ ಜಮಾತ್ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿ ಮುಸ್ಲಿಮರ ರಾಜಕೀಯ ಬೆಳವಣಿಗೆಯನ್ನು ತಡೆಯಲು ಷಡ್ಯಂತ್ರ ನಡೆಸುತ್ತಿರುವುದು ನಿಮ್ಮ ಸ್ವಾರ್ಥ ಹಿತಾಸಕ್ತಿಯಲ್ಲವೇ
ಇದರ ಹಿಂದೆ ಜಾಗತಿಕ ಮುಸ್ಲಿಂ ವಿರುದ್ದ ಶಕ್ತಿಗಳ ಕೈವಾಡ ಇರಬಹುದೇ...?
ಇಲ್ಲ ಎಂದಾದರೆ ಎಸ್ ಎಸ್ ಎಪ್ ನ ಹೊರತಾಗಿ ಮುಸ್ಲಿಂ ಜಮಾತ್ ಎಂಬ ರಾಜಕೀಯ ಪಕ್ಷದ ಔಚಿತ್ಯ ವೇನು...?
ಹರಾಮಾದ ರಾಜಕೀಯ ನಿಮಗೆ ಈವಾಗ ಹಲಾಲ್ ಹಾಗಿರುವುದಾದರೂ,ಯಾತಕ್ಕೆ...?

➡ ರಾಜಕೀಯ ವನ್ನು ಎಸ್ಸೆಸ್ಸೆಫ್ ಎಂದೂ ಹರಾಮ್ ಎಂದು ಹೇಳಿಲ್ಲ. ಅದೆಲ್ಲಾ ಶುಧ್ದ ಸುಳ್ಳು. ಆದರೆ ರಾಜಕೀಯ ಹೆಸರಲ್ಲಿ ಇಸ್ಲಾಮನ್ನು ದುರುಪಯೋಗ ಪಡಿಸುವುದನ್ನು ವಿರೋಧಿಸುತ್ತದೆ
ರಾಜಕೀಯ ಪಾರ್ಟಿಗಳ ಅತಿರೇಕಗಳಿಗೆ ಇನ್ಶಾ ಅಲ್ಲಾ ಇನ್ನು ಮುಂದೆ ಮುಸ್ಲಿಮ್ ಜಮಾತ್ ಲಗಾಮು ಹಾಕುವುದರಲ್ಲಿ ಸಂಶಯವಿಲ್ಲ.
ಹಾಗಾಗಿಯೇ ಕೆಲವರಿಗೆ ಮುಸ್ಲಿಮ್ ಜಮಾತ್ ನ ಹುಟ್ಡು ನುಂಗಲಾರದ ತುತ್ತಾಗಿದೆ.!

✅ಪರದೂಷಣೆಯನ್ನೇ ಪಾಂಡಿತ್ಯ ವೆಂದು ಸ್ವಯಂತಿಳಿದು ಕೊಂಡ ತೋಕೇ ಸಘಾಫಿ ಎಂಬವನ ಸುನ್ನಿ ವಾಣಿ ಎಂಬ ಕೊಳಕು ಪತ್ರಿಕೆಯ ಮುಖಪುಟದಲ್ಲೇ
ಇತರ ಮುಸ್ಲಿಮರನ್ನು, ಅದರಲ್ಲೂ ಖಾಜಿ ಸ್ಥಾನದಲ್ಲಿರುವ ವಿದ್ವಾಂಸರನ್ನು ಅಶ್ಲೀಲವಾಗಿ ನಿಂದಿಸುವ ವರದಿಯನ್ನು ಪ್ರಕಟಿಸುವುದು ತಪ್ಪಲ್ಲವೇ..?

➡ ತೋಕೆ ಉಸ್ತಾದರು ಯಾವ ವ್ಯಕ್ತಿಯನ್ನು ವೈಯುಕ್ತವಾಗಿ ನಿಂದಿಸಲ್ಲ
ಆದರೆ ಕೆಲವೊಂದು ಆಶಯ ದಾರಿದ್ರ್ಯದ ಪೋಸ್ಟ್'ಮಾರ್ಟಮ್ ಮಾಡುವಾಗ ವ್ಯಕ್ತಿಗಳ ಹೆಸರು ಹೇಳಬೇಕಾಗುತ್ತೆ ಅಷ್ಟೇ.
ಅದರಲ್ಲಿ ಕೆಲವೊಮ್ಮೆ ಅಸತ್ಯವನ್ನು ಬೆಂಬಲಿಸಿದ ಖಾಝಿಗೂ ಇದು ಅನ್ವಯವಾಗುತ್ತೆ.

✅ಒಟ್ಟಿನಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲು ಮತ್ತು ಅವರ ವಿರುದ್ದ ವ್ಯಾಪಕವಾಗಿ ಆಕ್ರಮವನ್ನು ಹರಿದು ಬಿಡಲು ಎಪಿ ಬಳಗದ ಗ್ರೂಪಿಸಂ ಮತ್ತು ಒಣಪ್ರತಿಷ್ಠೆಯ ಕಾದಾಡಗಳೇ ಮುಖ್ಯ ಕಾರಣಗಳಲ್ಲವೇ
ಅಲ್ಲ ಎಂದು ಸಮರ್ಥಿಸಲು ನಿಮ್ಮಲ್ಲಿ ಯಾವ ಸಕಾರಣಗಳಿವೆ?

➡ ಎಲ್ಲಾ ಕಾರಣಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿ ಆಗಿದೆ.
ಅರ್ಥವಾಗುವವರಿಗೆ ಅದು ದಾರಾಳ!
ಹಠಮಾರಿತನ ಅಪಹಾಸ್ಯವನ್ನೇ ಬಂಡವಾಳ ಮಾಡಿದವರ ಹೊರತು ಪಡಿಸಿ!

✅ಇದು ಗ್ರೂಪಿಸಂಗಾಗಿ ಬರೆದ ಬರಹವಲ್ಲ
ಗ್ರೂಪಿಸಂ ದುಷ್ಟ ಶಕ್ತಿಗಳ ವಿರುದ್ದ ಮುಂದುವರಿಯಲಿರುವ ಆಂದೋಳನ

➡ ಆದರೆ ಮೊತ್ತ ಬರಹದಲ್ಲಿ ಗ್ರೂಫಿಸಮ್ ನ ಗಬ್ಬು ವಾಸನೆ ಬಡಿಯುತ್ತಾ ಇದೆ. ಆದರೆ
ಮೂಗೆ ಇಲ್ಲದ ನಿನ್ನಲ್ಲಿ ಅದೆಲ್ಲಾ ಹೇಳಿ ಏನು ಪ್ರಯೋಜನ❓

Third Eye 👀 Reporter's Media 📡

No comments:

Post a Comment