ಸೌದಿಅರೇಬಿಯದಲ್ಲಿ ಬಿಗಿ ಹಿಡಿತವಿರುವ ಇಸ್ಲಾಹೀ(ಸಳಪಿ) ಮೌಲವಿಗಳಿಗಳನ್ನು ಕೂಡಾ ಮೂಗಿನಮೇಲೆ ಬೆರಳಿಟ್ಟು ನಿಬ್ಬೆರಗಾಗುವಂತೆ ಮಾಡಿದೆ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರರ ಸೌದಿಸಂಬಂಧ!
ಸಹಜವಾಗಿಯೇ ಸಳಪಿ ಮೌಲವಿಗಳಿಗೆ ಹೊಟ್ಟಯುರಿ, ತುರಿಕೆ ಜಾಸ್ತಿಯಾಗಿದೆ.
ಸೌದಿ ರೋಯಲ್ ಫ್ಯಾಮಿಲಿಯೊಂದಿಗೆ ಮಾತುಕತೆ ನಡೆಸುತ್ತಾರೆ, ಅಮೀರರೊಂದಿಗೆ ನಿಕಟ ಸಂಪರ್ಕವಿದೆ, ಶುಕ್ರವಾರ ಜುಮುಅ ಖುತುಬಾಕ್ಕೆ ನೇತ್ರತ್ವ ಕೊಡುತ್ತಾರೆ, ಸಂಘಟನಾ ಚಟುವಟಿಕೆ ಮಾಡುತ್ತಾರೆ,ಗೌರವಾರ್ಪಣೆ ಸ್ವೀಕರಿಸಿ ಸಮಾರಂಭದಲ್ಲಿ ಪ್ರಭಾಷಣ ಮಾಡುತ್ತಾರೆ,
ಹೀಗೆ ಕೈಗೆಟುಕದ ರೀತಿಯಲ್ಲಿ ಎಪಿ ಅಬೂಬಕರ್ ಮುಸ್ಲಿಯಾರ್ ಉನ್ನತಿಯ ಶಿಖರ ಏರುವುದನ್ನು ದರ್ಶಿಸಲಾಗದೆ ಪಿತ್ತ ನೆತ್ತಿಗೇರಿದ ಸಳಪಿಗಳು ಉಸ್ತಾದರ ವಿರುದ್ಧ ಷಡ್ಯಂತರ ಹೂಡಿ ಅವರ ಉನ್ನತಿಗೆ ತಡೆ ಹಾಕಲು ಹಲವಾರು ವರ್ಷಗಳಿಂದ ಪಿತೂರಿ ನಡೆಸುತ್ತಾ ಇದ್ದಾರೆ.
ಅದರ ಒಂದು ಭಾಗವಾಗಿದೆ ಹಜ್ಜ್ ಕರ್ಮದ ಚಟುವಟಿಕೆ ನಿಮಿತ್ತ ಸೌದಿ ಸರಕಾರ ಹೊರಡಿಸಿದ ಸರ್ಕ್ಯೂಲರ್ ಪೇಪರ್ ನಲ್ಲಿ ಕೃತಕ ಕೈ ಚಳಕ ಮಾಡಲು ಸಳಪಿಗೆ ಹೇತುವಾದದ್ದು!
ಈ ನಕಲಿ ವಾರ್ತೆಯ ಪ್ರಥಮ ಬಾಂಬ್ ಸಿಡಿಸಿದ್ದು ಮೌದೂದಿ ಚಾನೆಲ್
ಮೀಡಿಯ ಒನ್ ಆಗಿದೆ.
ಗಲ್ಫ್ ಘಟಕದ ಎಕ್ಸ್'ಕ್ಯೂಟಿವ್ ಚಾನೆಲ್ ತಾನಾಗಬೇಕೆಂಬ ತವಕದಲ್ಲಿ
'ಮೀಡಿಯ ಒನ್' ಈ ಮುಂಚೆಯೂ ಹಲವಾರು ಎಡವಟ್ಟು ಮಾಡಿ ಅತ್ಯಂತ ಹೀನಾಯ ಮತ್ತು ಕೀಳುಮಟ್ಟದ ವಾರ್ತೆಗೆ ಹೆಸರುವಾಸಿಯಾಗಿದೆ.
ಅದೇ ರೀತಿ ವಾರ್ತೆಯ ನಿಜಾಂಶ ಪರಿಶೋಧಿಸದೆ ಕೇವಲ ಸಂಘಟನಾ ವಿರೋಧದಿಂದ ಪರಿಹಾಸ್ಯ ಪೋಸ್ಟರ್ ರವಾನಿಸುವ ಸುನ್ನಿಗಳು ಕೂಡಾ ಸತ್ಯ ಏನೆಂದು ತಿಳಿಯಬೇಕಿತ್ತು!
ಕಾಂತಪುರದೊಂದಿಗೆ ನಮಗೆ ಸಂಘಟನಾ ವೈಷಮ್ಯ ವಿರೋಧ ಇರಬಹುದು ಆದರೆ ಆದರ್ಶದಲ್ಲಿ ನಾವೆಲ್ಲಾ ಒಂದೇ ತಾನೇ.?
ಅದ್ಯಾಗಿದ್ದು...
ಸಳಪಿಗಳು ಸೌದಿ ಮಂತ್ರಾಲಯದ ಹೆಸರಿನಲ್ಲಿ ಕಾಂತಪುರಂ ವಿರುದ್ಧ ಹರಿಯಬಿಟ್ಟ ಅರೋಪವೇನು❓
ಶೈಖ್ ಅಬೂಬಕರ್ ಅವುಲಿಯಾಗಳನ್ನು ಸೂಫಿ ಸಾದಾತ್'ಗಳನ್ನು ಡೀಪಾಗಿ ಗೌರವಿಸುವವರಾಗಿದ್ದಾರೆ.ತವಸ್ಸುಲ್ ಮಾಡುವವರಾಗಿದ್ದಾರೆ.ಇಬ್ನು ಅಬ್ದುಲ್ ವಹ್ಜಾಬರನ್ನು ಅಂಗೀಕರಿಸದವರಾಗಿದ್ದು ಬರೇಲ್ವಿ
(ಉತ್ತರ ಭಾರತದ ಸುನ್ನಿಗಳ ಹೆಸರು)ಗಳ ಆಧ್ಯಾತ್ಮಿಕ ಗುರು.... ಇಷ್ಟೇ ತಾನೇ?
ಸೌದಿಅರೇಬಿಯಾದ ಆಡಳಿತಕ್ಕೆ ಇದರಿಂದ ವ್ಯತಿರಿಕ್ತವಾದ ನಿಲುವು ಇರಬಹುದು ಇನ್ನು ಎಲ್ಲಿಯಾದರೂ ಕೆಲವೊಂದು ಕಾರ್ಯಕ್ರಮಕ್ಕೆ ಅಲ್ಲಿನ ಆಡಳಿತ ನಿಷೇಧ ಹೇರಿದರೆ ಅದೇನು ಅಸ್ವಾಭಾವಿಕ ವಿಷಯವೇನು ಅಲ್ಲ.
ಅದನ್ನು ಅದ್ಭುತವಾದ ಏನೋ ಒಂದು ಘಟನೆ ನಡೆದಂತೆ ಇಷ್ಟೊಂದು ವಿಜೃಂಭಣೆಯಿಂದ ಕೊಂಡಾಡುವ ಅಗತ್ಯವಾದರೂ ಏನು❓
ವಿರೋಧ ಏನೇ ಇದ್ದರು ವಿಶ್ವಾಸದ ದಾರಿಯಲ್ಲಿ ಜೊತೆಯಾಗುದಲ್ಲವೇ ಬುದ್ದಿ.
ಮುತ್ತು ನೆಬಿಯವರಿಗೆ ಜನ್ಮ ನೀಡಿದ ನಾಡಲ್ಲಿ ಮಾಲೆ ಮೌಲೂದ್ ನೆಬಿದಿನ ಇಲ್ಲವೆಂದು ಸಳಪಿಗಳು ದಿನಕ್ಕೆ ಸಾವಿರ ಬಾರಿ ಡಂಗುರ ಸಾರಿದರೂ ನಾವೇನು ಅದರಿಂದ ಹಿಂಜರಿಯದೆ ಈಗಲೂ ಅಪ್ಪಿ ಹಿಡಿದು ಕೊಂಡಾಡುವುದಿಲ್ಲವೇ.❓
ಅವುಲಿಯಾ,ಸಾದಾತ್'ಗಳನ್ನು ಕಾಂತಪುರಮ್ ಗೌರವಿಸಿದ್ದು ತಪ್ಪಾಗಿ ಕಾಣದೆ ಇಝ್ಝತ್'ನ ಭಾಗವಾಗಿ ಕಾಣುವಲ್ಲಿ ನಾವು ಹಿಂಜರಿಯುವುದು ಏಕೆ❓
ಸುನ್ನೀ ಆಚಾರ ಆದರ್ಶ ಅಪ್ಪಿ ಹಿಡಿದಕ್ಕಾಗಿ ಒಬ್ಬರನ್ನು ಬೇಟೆಯಾಡುವಾಗ ಆನಂದ ಪಡುವುದರ ಅರ್ಥವಾದರೂ ಏನು❓
ಅದರ ಹಿಂದಿನ ರಹಸ್ಯವೇನು❓
ಅದೇನೆ ಇರಲಿ
ಒಂದರಿಂದ ಎಂಟಾಗಿ ಎಂಟರಿಂದ ಹನ್ನೆರಡಾಗಿ ದಿನದಿಂದ ದಿನಕ್ಕೆ ಹರಿಹಂಚಾಗಿ ಛಿದ್ರವಾಗುತ್ತಿರುವ ಸಳಪಿ ಮೂಮೆಂಟ್ ನಲ್ಲಿ ನನಗೆ ಹೇಳಲಿಕ್ಕಿರುವುದು ಇಷ್ಟೇ.
ನೀವು ಸುಮ್ಮನೆ ಎಪಿ ಕಾಂತಪುರಮ್ ಮುಸ್ಲಿಯಾರರ ಹಿಂದೆ ಓಡಾಡಿ ಏನು ಪ್ರಯೋಜನ ಇಲ್ಲ.
ನೀವು ನಿಮ್ಮ ಅಸ್ತಿತ್ವಕ್ಕಾಗಿ ಬೇರೆ ಏನಾದರೊಂದು ದಾರಿ ಹುಡುಕುವುದು ಒಳಿತೆಂದು ವಿನಯಪೂರ್ವಕವಾಗಿ ನೆನಪಿಸುತ್ತಿದ್ದೇನೆ.
ಕೃಪೆ
(ಫೈಝಿ ಬಿರುದುಧಾರಿ ಮತ್ತು ಮುಸ್ಲಿಮ್ ಲೀಗ್ ಕಾರ್ಯಕರ್ತನಾದ ಲತೀಫ್ ನೆಲ್ಲಿಚ್ಚೋಡ್'ರವರ fb ಪೋಸ್ಟಿನಿಂದ)
Third Eye 👀 Reporters Media 📡
No comments:
Post a Comment