Friday, October 27, 2017

*ಸಮುದಾಯ ಪ್ರೇಮವೆಂಬ ನಾಟಕ ಕಂಪೆನಿಯಿಂದ ಚರಿತ್ರೆಯ ದುರ್ವ್ಯಾಖ್ಯಾನ*

ಆಯಿಷಾ ಬೀವಿ (ರ) ಜಮಲ್ ಯುದ್ಧದಲ್ಲಿ ಭಾಗವಹಿಸಿದ್ದಾರೆ. ಅದರಿಂದ್ದ ನೀವು ಕೂಡಾ ಬೀದಿಗಿಳಿಯಬೇಕು, ವೇದಿಕೆಗೆ ಹತ್ತಬೇಕು, ಚುನಾವಣೆಗೆ ನಿಲ್ಲಬೇಕು ಎಂದೆಲ್ಲಾ ಹೇಳಿ, ಸಮುದಾಯ ಪ್ರೇಮವೆಂಬ ನಾಟಕ ಕಂಪೆನಿಯರು, ಮುಸ್ಲಿಂ ರಾಜಕೀಯ ಪಾರ್ಟಿಯವರು ಮತ್ತು ನೂತನವಾದಿಗಳು ಮುಸ್ಲಿಂಗಳ ಸಬಲೀಕರಣ ಎಂದು ಪ್ರಚಾರ ಮಾಡಿ ಮಹಿಳೆಯರು  ಸಾರ್ವಜನಿಕ ರಂಗಕ್ಕೆ ಇಳಿಯಲು ಪ್ರೇರೇಪಿಸುವ ಇವರು ವಾಸ್ತವದಲ್ಲಿ ಆಯಿಷ (ರ) ರವರ ಚರಿತ್ರೆಯನ್ನು ದುರ್ವ್ಯಾಖ್ಯಾನ ಮಾಡಿರುವವರಾಗಿದ್ದಾರೆ.

ಆಯಿಷಾ (ರ) ಜಮಲ್ ಒಮ್ಮೆಯೂ ಯುದ್ದಕ್ಕಾಗಿ ಹೋಗಲಿಲ್ಲ.
ಉಸ್ಮಾನ್ (ರ) ರವರ ಹಂತಕರನ್ನು ಬಂಧಿಸಲಿಕ್ಕಾಗಿ ಅಲಿ(ರ)ರವರೊಂದಿಗೆ ವಿನಂತಿ ಮಾಡಲಿಕ್ಕೋಸ್ಕರ ಆಯಿಷಾ‌ ಬೀವಿ (ರ)ಯು ಒಂಟೆಯ ಮೇಲೇರಿದಾಗ ಕೆಲವು ವಂಚಕರು ಮಹದಿಯವರನ್ನು ಯುದ್ಧ ಸ್ಥಳಕ್ಕೆ ಕೊಂಡೊಗಿರುದಾಗಿದೆ.
 ಈ ಚರಿತ್ರೆ ವಿಶಾಲವಾಗಿದೆ.

ಈ ಒಂದು ತಪ್ಪು ಧೋರಣೆಯಲ್ಲಿ ಬಂಧಿಯಾಗಿ, ನೂತನವಾದಿಗಳ ದುರ್ವಾಖ್ಯಾನವನ್ನು ಸತ್ಯವೆಂದು ನಂಬಿಕೊಂಡು  ನಮ್ಮ ತಂಗಿಯಂದಿರನ್ನು, ತಾಯಂದಿರನ್ನು, ಪತ್ನಿಯರನ್ನು, ಹಾಗೂ ಮಗಳನ್ನು ಬೀದಿ ನಾಟಕಗಳಲ್ಲಿ ಭಾಗವಹಿಸಲು ಕಳುಹಿಸದಿರಿ.
ಇಸ್ಲಾಮಿಕ್ ಚರಿತ್ರೆ ಓದಿ/ಕೇಳಿ ಕಲಿತರೆ ವ್ಯಕ್ತವಾಗಿ ತಿಳಿಯಬಹುದೆಂದು ನೆನಪಿಸುತ್ತೇನೆ.

ಇಸ್ಲಾಮಿಕ್ ಚರಿತ್ರೆಗಳನ್ನು ಕಲಿಯಲು, ಸಮುದಾಯಕ್ಕಾಗಿ ಒಳ್ಳೆಯ ಕಾರ್ಯಗಳನ್ನು  ಮಾಡಲು, ಜೀವನದಲ್ಲಿ ಅಳವಡಿಸಲು ಅಲ್ಲಾಹು ನಮಗೆ ತೌಫೀಕ್ ನೀಡಲಿ. ಆಮೀನ್

✍ GB
🖌🖌🖌🖌🖌🖌🖌🖌🖌

No comments:

Post a Comment