Monday, November 13, 2017

*ಅಹ್ಲುಸ್ಸುನ್ನತ್ ವಲ್ ಜಮಾಅತ್*
*••••••••••••••••••••••••••••••••••••*
*✍ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°*
   

*ವಿಷಯ 1:*

 *ಮೀಲಾದುನ್ನಬೀ.*
*----------------------*
*ಭಾಗ --- 0⃣6⃣.*
○○○○○○○○○

*ಮೌಲಿದ್ ಕಿತಾಬ್ ಬರೆದ ಅಗ್ರೇಸರಾದ ಉಲಮಾ ಶಿರೋಮಣಿಗಳು.*

5.  _ಅಲ್ ಮೌರಿದುಲ್ ಹನಿಯ್ಯ್ ಫಿಲ್ ಮೌಲಿದಿಸ್ಸನಿಯ್ಯ್._
 _المورد الهني في المولد السني_

ಹಾಫಿಲುಲ್ ಇರಾಖೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಅಬ್ದುರ್ರಹ್'ಮಾನ್ ಅಲ್ ಮಿಸ್ರಿ (ರ)
ಹಿಜರಿ: 725--808.
----------------------------------------------------
6.  _ಅಲ್ ಫಖ್ರುಲ್ ಉಲ್'ವೀ ಫಿಲ್ ಮೌಲಿದಿನ್ನಬವೀ_
_الفخر العلوي في المولد النبوي_


 ಹಾಫಿಲು ಸ್ಸಖಾವೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಮುಹಮ್ಮದ್ ಅಬ್ದುರ್ರಹ್'ಮಾನ್ ಅಲ್ ಖಾಹಿರಿ.
ಹಿಜರಿ: 831
----------------------------------------------------
7.  _ಅಲ್ ಮೌರಿದುರ್ರವಿಯ್ಯಿ ಫಿಲ್ ಮೌಲಿದಿನ್ನಬವಿಯ್ಯಿ_
_المورد الروي في المولد النبوي_

ಹನಫೀ ಮದ್ಸ್'ಹಬ್ ನ ಪ್ರಸಿದ್ಧ ಉಲಮಾಗಳಲೊಬ್ಬರಾದ  ಮುಲ್ಲಾ ಅಲಿಯ್ಯುಲ್ ಖಾರೀ (ರ) ಇದರ ರಚನೆಗಾರ.
ಹಿಜರಿ: 1014.
----------------------------------------------------
8.  _ಶರ್ರಫಲ್ ಅನಾಂ_
_شرف الانام_

ಅಲ್ಲಾಮಾ ಅಹ್ಮದ್ ಬಿನ್ ಖಾಸಿಂ ಅಲ್ ಹರೀರೀ (ರ)
ಹಿಜರಿ: 824.

ಇಮಾಮ್ ಇಬ್ನುಲ್ ಜೌಝೀ (ರ) ಬರೆದವುವೆಂದು ಅಭಿಪ್ರಾಯವಿದೆ.
ಹಲವಾರು ವ್ಯಾಖ್ಯಾನ ಗ್ರಂಥಗಳು ಈ ಮೌಲಿದ್ ಗೆ ಬರೆಯಲಾಗಿದ್ದು ದೇಶ- ವಿದೇಶಗಳಲ್ಲಿ ಈ ಮೌಲಿದ್ ಪ್ರಸಿದ್ಧಿ ಪಡೆದುಕೊಂಡಿದೆ.
---------------------------------------------------
9.  _ಮೌಲಿದ್ ಇಬ್ನ್ ಕಸೀರ್_
 _مولد ابن كثير_

ಇಬ್ನ್ ಕಸೀರ್ ಎಂಬ ಹೆಸರಿನಿಂದಲೇ ತಿಳಿಯಲ್ಪಡುವ ಹಾಫಿಲ್ ಇಮಾದುದ್ದೀನ್ ಇಸ್ಮಾಯೀಲ್ ಇಬ್ನ್ ಕಸೀರ್ ಇದರ ರಚನೆಗಾರ.
ಹಿಜರಿ: 774.
----------------------------------------------
10.  _ಸುಬ್'ಹಾನ ಮೌಲಿದ್._
 _سبحان مولد_

ಇಮಾಮ್ ಗಝ್ಝಾಲಿ (ರ) ಅಥವಾ ಶೈಖ್ ಖತೀಬ್ ಮುಹಮ್ಮದುಲ್ ಮದನೀ (ರ) ಬರೆದ ಮೌಲಿದೆಂದು  ಅಭಿಪ್ರಾಯವಿದೆ.
ಇಮಾಮ್ ಗಝ್ಝಾಲೀ (ರ) ಬರೆದದ್ದೆಂಬುವುದಕ್ಕೆ ಆ ಮೌಲಿದ್ ನ ಕೊನೆಯಲ್ಲಿರುವ
واصفح ومن بجمع شمل واغفرن لمحمد بن محمد بن محمد
ಎಂಬ
 ಪ್ರಯೋಗ ಪುಷ್ಠಿ ನೀಡುತ್ತಿದೆ.
ಕಾರಣ, ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಮುಹಮ್ಮದ್ ಎಂಬ ಹೆಸರಲ್ಲಿ ಪ್ರಚಾರದಲ್ಲಿರುವುದು ಇಮಾಮ್ ಗಝ್ಝಾಲಿಯ ಹೆಸರಾಗಿದೆ.
----------------------------------------------
11.  _ಮಂಕೂಸ್ ಮೌಲಿದ್_
_منقوص مولد_

500 ವರ್ಷಗಳ ಮುಂಚೆ ಪೊನ್ನಾಣಿ ಝೈನುದ್ದೀನ್ ಮಖ್ದೂಂ (ರ) ರಚಿಸಿದ ಮೌಲಿದಾಗಿದೆ ಇದು.
ಹಿಜರಿ: 872--928.

ಇಮಾಮ್ ಗಝ್ಝಾಲೀ (ರ) ರಚಿಸಿದ ಸುಬ್'ಹಾನ ಮೌಲಿದನ್ನು ಸಂಕ್ಷಿಪ್ತಗೊಳಿಸಿದ ಮೌಲಿದಾಗಿದೆ ಇದು.
ಆದುದರಿಂದಲೇ ಇದನ್ನು ಮಂಖೂಸ್ (ಸಂಕ್ಷಿಪ್ತಗೊಳಿಸಲ್ಪಟ್ಟದ್ದು) ಎಂಬ ಹೆಸರಿನಿಂದ ಕರೆಯಲ್ಪಡಲಾಯಿತು.
ಸ್ವಹಾಬಾ ಕಿರಾಮ್ ನ ಕಾಲದ ನಂತರ ಕೇರಳದಲ್ಲಿ  ಇಸ್ಲಾಮ್ ಅಳಿದು ಹೋದ ಸಂದರ್ಭದಲ್ಲಿ ಇಸ್ಲಾಮ್ ಪ್ರಚುರಪಡಿಸಿದ ಮಖ್ದೂಂ ಕುಟುಂಬದವರೇ ಈ ಮೌಲಿದನ್ನು ರಚಿಸಿರುವಾಗ ಅವರು ಅದರಲ್ಲಿ ಶಿರ್ಕ್ - ಬಿದ್ ಅತ್ ಕಾಣಲಿಲ್ಲ.
ಇಸ್ಲಾಮನ್ನು ಬೇಕಾದಂತೆ ಅವರು ಕಲಿತಿರುವುದರಿಂದ ಅವರಿಗೆ ಅದರಲ್ಲಿ ಸಂಶಯಗಳಿರಲಿಲ್ಲ. ಇಸ್ಲಾಮಿನ ಪ್ರಾಥಮಿಕ ಜ್ಞಾನ ಕೂಡಾ ಇಲ್ಲದ ವಹ್ಹಾಬೀ ಪಾದ್ರಿಗಳಿಗೆ ಅದರಲ್ಲಿ ಶಿರ್ಕ್ - ಬಿದ್'ಅತ್ ಕಂಡದ್ದು ಅದ್ಭುತವೇ ಸರಿ.
-----------------------------------------------
12.  _ಅಲ್ ಕವ್'ಕಬುಲ್ ಅನ್'ವರ್ ಅಲಾ ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
_الكوكب الأنور على عقد الجوهر في مولد النبي الأزهر_

ಸಯ್ಯಿದ್ ಜ'ಅಫರ್ ಬಿನ್ ಇಸ್ಮಾಯೀಲ್ ಬಿನ್ ಝೈನುಲ್ ಆಬಿದೀನ್ (ರ)
ಹಿಜರಿ: 1317.

----------------------------------------------
13.  _ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
 _عقد الجوهر في مولد النبي الأزهر_

ಸಯ್ಯಿದ್ ಜ'ಅಫರ್ ಬಿನ್ ಹಸನ್ ಬಿನ್ ಅಬ್ದುಲ್ ಕರೀಂ ಅಲ್ ಬಿರ್'ಝಂಜೀ (ರ)
ಹಿಜರಿ: 1177.
-----------------------------------------------


*ಮುಂದುವರಿಯುವುದು.............*

*✍ಮುನೀರ್ ಸಖಾಫಿ, ಸಾಲೆತ್ತೂರು*
12/11/2017

No comments:

Post a Comment