Thursday, January 11, 2018

*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*..... 9⃣
📚📚📚📚📚📚📚📚📚📚

📗 *ತೃತೀಯ ಹಂತ* :
*ಪ್ರವಾದಿﷺರವರನ್ನು ಖುದ್ದಾಗಿ ಕಂಡು ಅವರಿಂದ ಆಲಿಸಿದವರ ಪೀಳಿಗೆ ಕೊನೆಗೊಂಡ ನಂತರ ಹದೀಸ್ ಸಂಗ್ರಹದ 3 ನೇ ಹಂತವು ಪ್ರಾರಂಭವಾಗುತ್ತದೆ. ಈ ಕಾಲದಲ್ಲಿ ಹದೀಸ್ ಗಳಿಗಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಬೋಧನೆ ಮಾಡುತ್ತಿದ್ದ ವಿದ್ವಾಂಸರನ್ನು ಆಶ್ರಯಿಸಲಾಗುತ್ತಿತ್ತು. ಆದರೆ ಯಾವುದಾದರೂ ಒಂದು ಕೇಂದ್ರದಲ್ಲಿ ಸಮಗ್ರ ಹದೀಸ್ ಗಳು ಲಭ್ಯವಿರಲಿಲ್ಲ. ಹದೀಸ್ ವಿದ್ವಾಂಸರು ಲೋಕದ ವಿವಿಧ ಪ್ರದೇಶಗಳಲ್ಲಿ ಪಸರಿಸಿದ್ದುದೇ ಇದಕ್ಕೆ ಕಾರಣವಾಗಿತ್ತು. ಈ ಹಂತದಲ್ಲಿ ಹದೀಸ್ ಸಂರಕ್ಷಣೆಗೆ ಬರಹವು ಒಂದು ಸಾರ್ವತ್ರಿಕ ಉಪಾಧಿಯಾಗಿ ಸ್ವೀಕರಿಸಲ್ಪಟ್ಟಿತು. ಈ ಕಾಲಾವಧಿಯಲ್ಲಿ ಬರಹದ ಸಾಂಕೇತಿಕ ಅನುಕೂಲತೆಗಳು ಕೂಡಾ ಅಭಿವೃದ್ಧಿಗೊಂಡಿತ್ತು. ಮಾತ್ರವಲ್ಲದೆ, ಹದೀಸ್ ಮತ್ತು ಖುರ್ಆನ್ ಪರಸ್ವರ ಬೆರೆಯುವುದು ಎಂಬ ಭೀತಿಯೂ ದೂರವಾಗಿತ್ತು. ಆರಂಭದಲ್ಲಿ ಬರಹವು ನೆನಪಿಟ್ಟುಕೊಳ್ಳುವ ಹದೀಸ್ ಗೆ ಪೂರಕವೆಂಬ ನೆಲೆಯಲ್ಲಿ  ಉಪಯೋಗಿಸಲ್ಪಡುತ್ತಿತ್ತು. ಒಂದು ಹದೀಸ್ ನ ಅಧಿಕೃತತೆಗೆ ಅದು ಕೈಬರಹದಲ್ಲಿ ಲಭ್ಯವಿದೆ ಎಂಬುದು ಮಾನದಂಡವಾಗಿರಲಿಲ್ಲ. ಬದಲಾಗಿ, ಅದರ ಅಧಿಕೃತತೆಗೆ ವಿಶ್ವಾಸನೀಯರಾದ ವರದಿಗಾರರನ್ನು ಅವಲಂಬಿಸಬೇಕಾಗಿತ್ತು*.
         
           
*ಮುಂದುವರಿಯುವುದು*.....

📚📚📚📚📚📚📚📚📚📚

No comments:

Post a Comment