Friday, January 12, 2018

*ಡಾ:ಅಬ್ದುಲ್ ಹಕೀಮ್ ಅಝ್ಹರಿ ಉಸ್ತಾದರ ಭಾಷಣ.10-02-2017@markaz Dubai*

ಹಲಾಲಾದ ಆಹಾರಗಳನ್ನು ಮಾತ್ರ ಸೇವಿಸಿರುವ
ದ್ಸಬಹ್ ಮಾಡುವಾಗ ಹಲಾಲ್ ಆಗಿರಲು ಶ್ರಧ್ದೆಯಿರಲಿ
ಆಹಾರದಲ್ಲಿ ನಜಸ್ ಸಲ್ಲದು
ಹಾನಿಕರವಾದ ಆಹಾರ ಸಲ್ಲದು
ಉಪವಾಸ ಹಿಡಿಯಿರಿ ಆರೋಗ್ಯ ಹೆಚ್ಚಬಹುದು
ಫ್ರೈ(ಕಾಯಿಸಿದ) ಕಡಿಮೆ ಮಾಡಿರಿ
ಆಹಾರ ಕಡಿಮೆ ಮಾಡಿ...ಹೊಟ್ಟೆಯ ಮೂರನೇ ಒಂದು ಭಾಗ ಮಾತ್ರ ತಿನ್ನಿರಿ
ಕೊಬ್ಬು(ಚರ್ಬಿ) ವಿಷವಾಗಿದೆ...ಬುರ್ದಾದಲ್ಲಿ ಹೇಳುತ್ತದೆ..
ಸ್ವಲ್ಪ ತಿಂದರೆ ಆರೋಗ್ಯ ಹೆಚ್ಚಬಹುದು.
ರಕ್ತಕ್ಕೆ ಗ್ಲುಕೋಸ್ ಸೇರಿದರೆ ಹಸಿವು ನೀಗಬಹುದು.

ಬಾಯಿಯಲ್ಲಿರುವ ಆಹಾರವನ್ನು ನುಂಗಿದ ನಂತರವೇ ಬೇರೆ ಆಹಾರವನ್ನು ತೆಗೆಯಬೇಕು..

ಆಹಾರ ತಿನ್ನುವಾಗ ಮಾತನಾಡಬಹುದು.
ಆಹಾರ ಬಾಯಿಯಲ್ಲಿ ಇರುವಾಗ ಮಾತನಾಡಬಾರದು..

ಜಗಿದು ಜಗಿದು ತಿನ್ನಬೇಕು

ಖರ್ಜೂರ ಹಾಗೂ ಕಕ್ಕಿರಿಯನ್ನು ನೆಬಿ(ಸ)ಒಟ್ಟಿಗೆ ತಿನ್ನತ್ತಿದ್ದರು...

  ಅಲ್ಲಾಹು ನಮಗೆ ಭಕ್ಷಣದಲ್ಲಿ ಬರ್ಕತ್ ನೀಡಲಿ...

ಹಾಲು ಒಳ್ಳೆಯ ಔಷಧವಾಗಿದೆ

ಕೆಳಗೆ ಕುಳಿತು ಊಟ ಮಾಡಬೇಕು

ಊಟ ಮಾಡುವಾಗ ಅಂಗೈಗೆ ಮಾಡಬಾರದು..
ಊಟ ಮಾಡಿದ ನಂತರ ಅಲ್ ಹಮ್ದುಲಿಲ್ಲಾಹ್ ಮೆಲ್ಲಗೆ ಹೇಳಬೇಕು
(ಇಬ್ನು ಹಜರ್ ತುಹ್ಫದಲ್ಲಿ ಹೇಳಿದರು....)

ಕುಳಿತ ನಂತರ ಊಟ ಬಡಿಸಬೇಕು

ಪಾತ್ರೆಗಳನ್ನು  ಕೊಂಡು ಹೋದ ನಂತರ ಮಾತ್ರವೇ ಏಳಬೇಕು..

ಊಟ ಮಾಡುವ ಮುನ್ನ ಮಕ್ಕಳು ಮೊದಲು ಕೈ ತೊಳೆಯಬೇಕು..

ಊಟ ಮಾಡಿದ ನಂತರ ದೊಡ್ಡವರು ಮೊದಲು ಕೈ ತೊಳೆಯಬೇಕು...

ಹಸಿವಾಗದೆ ಊಟ ಮಾಡಬಾರದು

ಜ್ವರ ಬಂದರೆ ಎದೆಗೆ ನೀರು ಸುರಿಸಿ(ಅಲ್ಲದಿದ್ದರೆ ಬೆಳಿಗ್ಗೆ ಸ್ನಾನ ಮಾಡಿ)ಕಡಲಿನಲ್ಲಿ ಅಲೆಗಳಿಗೆ ವಿರುದ್ಧ ಕುಳಿತುಕೊಳ್ಳಿ ಮೂರು ದಿವಸದಲ್ಲಿ  ಜ್ವರ ವಾಸಿಯಾಗಬಹುದು...

ಬೇಗ ನಡೆದರೆ ಸುಸ್ತು ನೀಗಬಹುದು..

ಮೂರು ಕಾರ್ಯಗಳು ಆರೋಗ್ಯವನ್ನು ನಾಶ ಮಾಡಬಹುದು
*ದಿವಸವೂ ಮದ್ದು ಸೇವಿಸುವುದು
*ಎಲ್ಲಾ ದಿವಸವೂ ಲೈಂಗಿಕ ಸಂಬಂಧ..
ಲೈಂಗಿಕ ಸಂಬಂಧದಲ್ಲಿ ಏರ್ಪಡುವುದು  ಸುಬುಹಿನ ಮುಂಚೆ ಆಗಬೇಕು ಹಾಗಾದರೆ ಜನಿಸುವ ಮಗುವಿನ ಬುಧ್ದಿ ವರ್ಧಿಸಬಹುದು..

ಯುವಕರು ಆರು ಗಂಟೆ ಮಾತ್ರ ನಿದ್ದೆ ಮಾಡಬೇಕು
ವಯಸ್ಸಾದರೆ 4 ಗಂಟೆ ಸಾಕಾಗಬಹುದು..

ಮಲಗುವ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಊಟವೋ ನೀರೋ ಇರಬಾರದು....

ಊಟ ಮಾಡಿದ ನಂತರ ಎರಡು ಗಂಟೆ ಕಳೆದ ಮೇಲೆಯೇ ಮಲಗಬೇಕು...

ಸುಬುಹಿನ ನಂತರ ಮಲಗಬಾರದು....

 ಸೂರ್ಯ ಉದಯಿಸಿದ ಮೇಲೆ  ಮಲಗಬಹುದು...

ತರ್ತೀಲಾಗಿ(ಕುರುಆನ್) ಓದಿದರೆ ಆರೋಗ್ಯ ಹೆಚ್ಚಾಗಬಹುದು..

ಎರಡು ಕೈಗಳನ್ನು ತೊಳೆದೇ ಊಟ ಮಾಡಬೇಕು...

ಊಟದ ಮಧ್ಯದಲ್ಲಿ ನೀರು ಕುಡಿಯಬಾರದು..

ಊಟ ಮಾಡಿದ ಕೂಡಲೇ ನೀರು ಕುಡಿಯಬಾರದು...

ಊಟ ಮಾಡುವಾಗ ಉಪ್ಪಿನಿಂದ ಪ್ರಾರಂಭಿಸಿ ಉಪ್ಪಿನಲ್ಲಿಯೇ ಕೊನೆಗೊಳಿಸುವುದು ಒಳ್ಲೆಯದಾಗಿದೆ..ಅಲಿ (ರ)

ಬಿಸಿ ಆರಿದ ನಂತರವೇ ಊಟ ಮಾಡಬೇಕು

ಬೆಳಿಗ್ಗೆ  7 ಖರ್ಜೂರ ಹಾಗೂ ನೀರು ಕುಡಿದರೆ ಸಾಕು...

ಬಿಸಿ ನೀರು ಮತ್ತು ತಂಪು ನೀರು ಒಟ್ಟಿಗೆ ಕುಡಿಯಬಾರದು...

ರಾತ್ರಿ ಮೊಸರು ಉಪಯೋಗಿಸಬಾರದು...

ಮೀನು ಮತ್ತು ನೀರು ಒಟ್ಟಿಗೆ ತಿನ್ನಬಾರದು...ಅರಬಿ ಗಾದೆ ಮಾತು

ರಾತ್ರಿ ಊಟ ಮಾಡಿದ ನಂತರ ಸ್ವಲ್ಪ ನಡೆಯಬೇಕು...

ಮಧ್ಯಾಹ್ನ ಊಟ ಮಾಡಿದರೆ ಸ್ವಲ್ಪ ನಿದ್ರೆ ಮಾಡಬೇಕು...

ಹಂದಿ ಮಾಂಸ ಉಪಯೋಗಿಸುವ ಹೋಟೆಲಿನಲ್ಲಿ ಊಟ ಮಾಡಬಾರದು...

ಎಡಂಜಿ ಮೀನು ತಿನ್ನುವುದು ಕರಾಹತ್ ಆಗಿದೆ..
ಇಟ್ಟಿ ಕರಾಹತ್ ಅಲ್ಲ...
  **ಕನ್ನಡಕ್ಕೆ ಅನುವಾದ
✍🏻 ಖಾದರ್ ಹಿಮಮಿ**

No comments:

Post a Comment