Monday, January 8, 2018

*بِسْمِ اللّٰهِ الرَّحْمَانِ الرَّحِيمْ*

*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*..... 6⃣
📚📚📚📚📚📚📚📚📚📚

*ಈ ಹಂತದಲ್ಲಿ ಪ್ರವಾದಿ ಸ)ರವರ ಪತ್ನಿಯಾಗಿದ್ದ ಆಯಿಷಾ(ರ.ಅ)ರವರು ಕೂಡಾ ತಮ್ಮದೇ ಆದ ಪಾತ್ರ ನಿರ್ವಹಿಸಿದರು. ಅವರ ಸ್ಮರಣಶಕ್ತಿ ಹಾಗೂ ವಿವೇಕವು ಅದ್ಭುತವಾಗಿತ್ತು. ಅವರು ತಮಗೆ ಮನವರಿಕೆಯಾಗದ ವಿಷಯಗಳನ್ನು ಪ್ರವಾದಿﷺರವರೊಂದಿಗೆ ಸ್ಪಷ್ಟನೆ ಕೇಳಿ ಖಚಿತಪಡಿಸಿಕೊಳ್ಳುತ್ತಿದ್ದರು. ಅಬ್ದುಲ್ಲಾಹಿಬ್ನು ಅಮ್ರ್ (ರ.ಅ) ಮತ್ತು ಅಬ್ದುಲ್ ಬಿನ್ ಅಬ್ಬಾಸ್(ರ.ಅ) ಅವರು ಕೂಡಾ ಹದೀಸ್ ಸಂಗ್ರಹಕಾರರಲ್ಲಿ ಮುಖ್ಯರಾಗಿದ್ದರು. ಹದೀಸ್ ಸಂಗ್ರಹಿಸಲು ಬರಹವನ್ನು ಉಪಯೋಗಿಸಿದವರಲ್ಲಿ ಅಬ್ದುಲ್ಲಾಬಿನ್ ಅಮ್ರ್(ರ.ಅ)ರವರೂ ಒಳಪಡುತ್ತಾರೆ. ಕೆಲವೊಮ್ಮೆ ಅವರಿಗೆ ಪ್ರವಾದಿﷺರ ಸನ್ನಿಧಿಯಲ್ಲಿ ಉಪಸ್ಥಿತರಾಗಲು ಅಸಾಧ್ಯವಾದಾಗ ನೆರೆಹೊರೆಯವರೊಂದಿಗೆ ಪ್ರವಾದಿﷺರವರನ್ನು ಅನುಗಮಿಸಲು ಒಪ್ಪಂದ ಮಾಡಿಕೊಂಡ ಸಂಭವಗಳೂ ಇವೆ. ಹೀಗೆ ಮೊದಲ ಹಂತದಲ್ಲಿ ಹದೀಸ್ ಗಳನ್ನು ಖುದ್ದಾಗಿ ಪ್ರವಾದಿﷺರವರಿಂದಲೇ ಆಲಿಸಲಾಗುತ್ತಿತ್ತು*.
           
*ಮುಂದುವರಿಯುವುದು*.....

📚📚📚📚📚📚📚📚📚📚

No comments:

Post a Comment