*ಆದರ್ಶ ಸೂಫಿವರ್ಯ ಮರ್ಹೂಂ ಮಂಜನಾಡಿಉಸ್ತಾದ್*
ಮರ್ಹೂಂ ಶೈಖುನಾ ಮಂಜನಾಡಿ
ಉಸ್ತಾದ್ ನಮ್ಮನ್ನು ಅಗಲಿ ಆರು ವರ್ಷ ಕಳೆದರೂ ಅವರು ಇನ್ನೂ ನಮ್ಮೊಂದಿಗಿದ್ದಾರೆನಿಸುತ್ತಿದೆ.ಇವರ ನಿಜ ಹೆಸರು ಸಿ.ಪಿ.ಮುಹಮ್ಮದ್ ಕುಞಿಮುಸ್ಲಿಯಾರ್.ಅವರ ವಿದ್ವತ್, ಪ್ರಬೋದನೆ,ಆರಾಧನೆ,ಬದುಕು,ಸರಳತೆ ಮತ್ತು ವಿನಯತೆ ಎಲ್ಲರಿಗೂ ಮಾದರಿ. ಹಿಜರಾ 1337ರಲ್ಲಿ ಕಾಞಂಗಾಡ್ ಸಮೀಪದ ಪುಂಞಾವಿ ಎಂಬಲ್ಲಿ ಮಾಮು ಮುಸ್ಲಿಯಾರ್ ಮತ್ತು ಆಯಿಷಾ ದಂಪತಿಗಳ ಪುತ್ರನಾಗಿ ಜನಿಸಿದರು. ಮಲಪ್ಪುರಂ ಜಿಲ್ಲೆಯ ಹರಪ್ಪನಂಗಾಡಿ ಯಲ್ಲಿ ಪ್ರಧಾನ ಅಧ್ಯಯನ. ಸೂಫಿ ವರ್ಯರಾದ ಕೋಮು ಮುಸ್ಲಿಯಾರ್ ಇವರ ಮುಖ್ಯ ಗುರುಗಳು.
ಎಳವೆಯಲ್ಲೇ ಕಲಿತ ವಿದ್ಯೆಯಂತೆಯೇ ಪೂರ್ವಿಕ ಸಾತ್ವಿಕ ಪುರುಷರ ಜೀವನ ಶೈಲಿಯಲ್ಲೇ ಬೆಳೆದು ಬಂದರು.ಜೊತೆಗೆ ತಮ್ಮ ಗುರುವರ್ಯರ,ಸಾದತುಗಳ ಹಾಗೂ ಕುಟುಂಬದ ಹಿರಿಯರ ಆಶೀರ್ವಾದವೂ ಬೇರೆಯಿತ್ತು.ಅಧ್ಯಾಪನ ರಂಗಕ್ಕಿಳಿದ ಉಸ್ತಾದರು ಪುಂಞಾವಿ,ಕಾಞಂಗಾಡ್ ಆರಂಙಾಡಿ,ಕಣ್ಣೂರಿನ ಶ್ರೀ ಕಂಠಪುರ ಮುಂತಾದೆಡೆ ಮುದರ್ರಿಸರಾಗಿ ಸೇವೆ ಸಲ್ಲಿಸಿದರು. ಬಳಿಕ ಅವರು ತಲುಪಿದ್ದು ಸಯ್ಯಿದ್ ಇಸ್ಮಾಯಿಲ್ ಬುಖಾರಿ(ರ)ಯವರ ಸಾನಿಧ್ಯವಿರುವ ಮಂಜನಾಡಿಗೆ .ಇಲ್ಲಿ ಯೂ ಒಂದು ದೊಡ್ಡ ದರ್ಸ್ ತಲೆಯೆತ್ತಿತು.27ವರ್ಷಗಳ ಕಾಲ ಇಲ್ಲಿ ಇವರ ಸೇವೆ ಮುಂದುವರೆಯಿತು. ಇದುವೇ ಇವರಿಗೆ "ಮಂಜನಾಡಿ ಉಸ್ತಾದ್" ಎಂಬ ಪ್ರಸಿದ್ದಿಯನ್ನು ತಂದುಕೊಟ್ಟಿತು. ಇಲ್ಲಿ ಉರೂಸ್ ಪ್ರಾರಂಭಗೊಂಡದ್ದೂ ಇವರ ಕಾಲದಲ್ಲಿ.
ಅಲಿಯರಾದ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಸಾರಥ್ಯನೀಡುವ
ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಸಂಸ್ಥೆಯ ನಿರ್ದೇಶನ ನೀಡುವವರಾಗಿದ್ದರು .
ಸುಮಾರು ಐವತ್ತು ವರ್ಷ ದರ್ಸ್ ನಡೆಸಿದ ಈ ಅನುಗ್ರಹೀತ ಪುರುಷರ ಶಿಷ್ಯ ಸಂಪತ್ತು ಧಾರಳ .ಪಟ್ಟಿಕ್ಕಾಡ್ ಜಾಮಿಯ ನೂರಿಯಾದ ಅಧ್ಯಾಪಕರಾಗಿದ್ದ ಮರ್ಹೂಂ ಯೂಸುಫ್ ಹಾಜಿ,ಮರ್ಹೂಂ ಆಲಂಪಾಡಿ ಉಸ್ತಾದ್, ಮರ್ಹೂಂ ಸುರಿಬೈಲ್ ಉಸ್ತಾದ್, ಸಯ್ಯಿದ್ ಜಮಾಲುದ್ದೀನ್ ತಂಙಳ್ ಅಂದ್ರೋತ್,ಆದೂರು ಪೂಕುಞಿ ತಂಙಳ್,ಮಂಚಪ್ಪಾಡಿ ಉಸ್ತಾದ್, ವಾಲೆಮಂಡೇವು ಮಹ್ಮೂದುಲ್ ಫೈಝಿ ಇವರ ಪ್ರಧಾನ ಶಿಷ್ಯರಲ್ಲಿ ಕೆಲವರು. ದರ್ಸ್ ಸೇವೆಯನ್ನು ನಿಲ್ಲಿಸಿದರೂ ಅಲ್ ಮದೀನಾ ಸಂಸ್ಥೆಯಲ್ಲಿ ಪ್ರತಿ ಬುಧವಾರ ವಿದ್ವಾಂಸರಿಗಾಗಿ "ಇಹ್ಯಾ ಉಲೂಮುದ್ದೀನ್'" ಬೋಧನೆಗಾಗಿ ಬರುತ್ತಿದ್ದ ರು ಇದರ ಕರ್ತೃ ದಾರ್ಶನಿಕ ರಾದ ಇಮಾಮ್ ಗಝ್ಝಾಲಿ(ರ) ರವರ ಮೇಲೆ ವಿಶೇಷ ಆದರಾಭಿಮಾನ ಹೊಂದಿದ್ದರು. ಇಹ್ಯಾ ಓದುವುದಾದರೆ ಸಿ.ಪಿ.ಉಸ್ತಾದರ ಬಳಿ ಓದಬೇಕೆಂದು ಕೇರಳದ ವಿದ್ವಾಂಸ ಕೋಟುಮಲೆ ಉಸ್ತಾದ್ ಒಮ್ಮೆ ಹೇಳಿದ್ದಾರಂತೆ .
ಆರಾಧನೆಗಳಲ್ಲಿ ಸದಾ ಮಗ್ನರಾಗುತ್ತಿದ್ದ ಉಸ್ತಾದರು ಮಿತ ಭಾಷಿಯಾಗಿದ್ದರು.ಪ್ರಭಾಷಣಕ್ಕೆ ನಿಂತರೆ ಉತಮುಸ್ಲಿಯಾರ್ಯೆನಿಸುತ್ತಿದ್ದರು. ಅದ್ಬುತ ಉಪದೇಶಗಳು ಅವರಿಂದ ಹೊರಹೊಮ್ಮುತ್ತಿತ್ತು .ಇವರನ್ನು ಹತ್ತಿರದಿಂದ ಬಲ್ಲ ಅನೇಕರಿಗೆ ಇವರ ಮಹಾತ್ಮೆ, ಆಧ್ಯಾತ್ಮಿಕ ಶಕ್ತಿಯ ಅನುಭವಗಳಾಗಿವೆ.
ಸರ್ವ ಆದರಣೀಯರಾಗಿದ್ದ ಉಸ್ತಾದರು ಉಲಮಾಗಳಿಗೂ ಸಾದತ್ ಗಳಿಗೂ ಜನ ಸಾಮನ್ಯರಿಗೂ ಅಚ್ಚುಮೆಚ್ಚಿನವರಾಗಿದ್ದರು ದೂರ ದೂರದಿಂದ ಅಭಿಮಾನಿಗಳು ದಿನವೂ ಅವರ ಸಂದರ್ಶನ ಅರಸಿ ಬರುತ್ತಿದ್ದರು. ಯಾವುದೇ ರೀತಿಯ ಕಾಯಿಲೆಯಿಂದ ಮುಕ್ತರಾಗಿದ್ದ ಅವರ ಆರೋಗ್ಯ ಚೆನ್ನಾಗಿಯೇ ಇತ್ತು. ವಫಾತಿನ ಸಮೀಪದ ಅನಾರೋಗ್ಯವನ್ನು ಬಿಟ್ಟರೆ, ಇಳಿ ವಯಸ್ಸಿನ ತನಕವೂ ಅವರಿಗಿದ್ದ ಸದೃಢ ಆರೋಗ್ಯ ಅಲ್ಲಾಹನ ವಿಶೇಷ ಅನುಗ್ರಹವೆನ್ನಬೇಕು.ಐದು ಹೊತ್ತು ನಮಾಝನ್ನೂ ನಿಂತುಕೊಂಡೇ ನಿರ್ವಹಿಸುತ್ತಿದ್ದರು.ಪ್ರಾಯದಲ್ಲೂ ರಮಝಾನಿಡೀ ಮಸ್ಜಿದ್ ಗೆ ತೆರಳಿಯೇ ತರಾವೀಹ್ ನಮಾಜನ್ನು ನಿರ್ವಹಿಸುತ್ತಿದ್ದರು ಅವರ ಭಕ್ತಿಯ ಆಳವನ್ನು ಸೂಚಿಸುತ್ತದೆ.
ಪತ್ನಿ ಮತ್ತು ಮಕ್ಕಳ ತುಂಬು ಸಂಸಾರದ ಉಸ್ತಾದರ ಸರಿ ಸುಮಾರು ಒಂದು ಶತಮಾನ ಧನ್ಯ ಪೂರ್ಣವಾಗಿ ಬಾಳಿ ಬೆಳೆಗಿದರು _2012 ಜನವರಿ 7 ರಂದು ಅಲ್ಲಾಹನ ಕರೆಗೆ ಓಗೊಟ್ಟರು.
*ಅಲ್ಲಾಹು ಇವರಿಗೆ ಸ್ವರ್ಗೀಯ ಆನಂದ ದಯಪಾಲಿಸಲಿ.ಇವರ ಬರ್ಕತ್ತಿನಿಂದ ನಮ್ಮ ಇಹವೂ ಪರವೂ ಯಶಸ್ವಿಯಾಗಲಿ - ಆಮೀನ್.*
🔺🔻🔺🔻🔺🔻
*ನೌಫಲ್ ಮಲಾರ್*
*ವಿಧ್ಯಾರ್ಥಿ ಅಲ್-ಮದೀನಾ*
🌹🌹🌹🌹🌹🌹
*ಪ್ರತೀ ವರ್ಷ ನಡೆಸಿಕೊಂಡು ಬರುವ ಜಲಾಲಿಯ್ಯ ರಾತೀಬ್ ಅವರ ಸ್ವ ಗೃಹದಲ್ಲಿ ಕಾಂಙಗಾಡ್ ಪಝಕಡಪ್ಪುರಂ ನಲ್ಲಿ ಕಾರ್ಯಕ್ರಮ ಜರುಗಲಿದೆ*
*51ನೇ ರಾತೀಬ್ 6ನೇ ಉರೂಸ್ 2017 ಜನವರಿ 12 ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ.ಸಯ್ಯಿದ್ ಬಾಯರ್ ತಂಙಳ್ ನೇತೃತ್ವ ನೀಡಲಿರುವರು.ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿರುವರು*
No comments:
Post a Comment