Thursday, January 11, 2018

*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*..... 🔟
📚📚📚📚📚📚📚📚📚📚

             *ಉಮಯ್ಯದ್ ವಂಶದ ರಾಜರಾದ ಉಮರ್ ಬಿನ್ ಅಬ್ದುಲ್ ಅಝೀಝ್, ಹದೀಸ್ ಗಳನ್ನು ಲಿಖಿತವಾಗಿ ಸಂಗ್ರಹಿಸಿಡಬೇಕೆಂದು ಆದೇಶ ಹೊರಡಿಸಿದ ಮೊದಲ ಆಡಳಿತಗಾರರಾಗಿದ್ದರು. ಅವರು ಅಬೂಬಕ್ಕರ್ ಬಿನ್ ಹಸ್ಮ್ ರವರಿಗೆ ಹೀಗೆ ಬರೆದರು. ನಾನು ಜ್ಞಾನದ ನಷ್ಟ ಹಾಗೂ ವಿದ್ವಾಂಸರ ಮರಣವನ್ನು ಭಯಪಡುತ್ತೇನೆ. ಆದುದರಿಂದ ನೀವು ಹದೀಸ್ ಗಳನ್ನು ಹುಡುಕಿ ದಾಖಲಿಸಿಡಬೇಕು. ಅಧಿಕೃತ ಹದೀಸ್ ಗಳನ್ನು ಮಾತ್ರ ಸ್ವೀಕರಿಸಿರಿ*.

               *ಅಬೂಬಕರ್ ಬಿನ್ ಹಸ್ಮ್ ಉಮರ್ ಬಿನ್ ಅಬ್ದುಲ್ ಅಝೀಝ್ ರವರ ಮದೀನಾದ ರಾಜಪಾಲರಾಗಿದ್ದರು. ಅವರು ಇಂತಹ ಪತ್ರಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ನೇಮಿಸಿದ್ದ ರಾಜಪಾಲರಿಗೂ ರವಾನಿಸಿದ್ದರು. ಆದರೆ ಎರಡೂವರೆ ವರ್ಷದ ಆಳ್ವಿಕೆಯ ನಂತರ ಉಮರ್ ಬಿನ್ ಅಬ್ದುಲ್ ಅಝೀಝ್ (ಇವರು ದ್ವಿತೀಯ ಉಮರ್ ಎಂದು ಕರೆಯಲ್ಪಡುತ್ತಿದ್ದರು) ಮರಣ ಹೊಂದಿದ ಕಾರಣ, ಇವರ ಅನಂತರ ಆಡಳಿತಕ್ಕೇರಿದವರು ಹದೀಸ್ ವಿಚಾರದಲ್ಲಿ ಅಷ್ಟೊಂದು ಆಸಕ್ತಿ ವಹಿಸಲಿಲ್ಲ. ಮುಂದಿನ ಒಂದು ಶತಮಾನಗಳ ಕಾಲ ಹದೀಸ್ ಸಂಗ್ರಹ ಪ್ರಕ್ರಿಯೆಯು ಆಡಳಿತದ ನೆರವಿಲ್ಲದೆ ಸ್ವತಂತ್ರವಾಗಿ ನಡೆಯಿತು. ಹೀಗೆ ಹದೀಸ್ ಸಂಗ್ರಹವು ನಾಲ್ಕನೇ ಹಂತಕ್ಕೆ ಪ್ರವೇಶಿಸುತ್ತದೆ*.
         
*ಮುಂದುವರಿಯುವುದು*.....

📚📚📚📚📚📚📚📚📚📚

No comments:

Post a Comment