Friday, January 12, 2018

*بِسْمِ اللّٰهِ الرَّحْمَٰنِ الرَّحِيمْ*

*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*..... 1⃣1⃣
📚📚📚📚📚📚📚📚📚📚

            📙 *ನಾಲ್ಕನೇ ಹಂತ*: *ಎರಡನೇ ಶತಮಾನದ ಮದ್ಯಕ್ಕಿಂತ ಮೊದಲೇ ಹದೀಸ್ ಜ್ಞಾನಕ್ಕೆ ಒಂದು ಸ್ಥಿರವಾದ ಸಾರ್ವತ್ರಿಕ ಸ್ವರೂಪ ಲಭಿಸಿತ್ತು. ವಿವಿಧ ಕೇಂದ್ರಗಳಲ್ಲಿ ನೂರಾರು ವಿದ್ಯಾರ್ಥಿಗಳು ನಿರಂತರ ಹದೀಸ್ ಅಧ್ಯಯನದಲ್ಲಿ ಏರ್ಪಟ್ಟಿದ್ದರು. ಈ ಹಂತದಲ್ಲಿ ಹದೀಸ್ ಗಳ ಜೊತೆಗೆ ಅದನ್ನು ಉಲ್ಲೇಖಿಸಿದವರ ಹೆಸರುಗಳನ್ನು ಕೂಡಾ ಸಂಗ್ರಹಿಸಿಡುವುದು ಅನಿವಾರ್ಯವಾಯಿತು.  ಇದಕ್ಕಾಗಿ ಹದೀಸ್ ಬರೆದಿಡುವುದು ಅತ್ಯಂತ ಅಪೇಕ್ಷಣೀಯವೆನಿಸಿತು. ಇಮಾಂ ಅಬ್ದುಲ್ ಮಾಲಿಕ್ ಬಿನ್ ಅಬ್ದುಲ್ ಅಝೀಝ್ ಬಿನ್ ಜುರೈಜ (ಇಬ್ನ್ ಜನೈದ್)ರ ಸಮಾಹಾರವು ಈ ಕಾಲಾವಧಿಯ ಗಮನಾರ್ಹ ಗ್ರಂಥವಾಗಿದೆ. ಜುರೈಜ್ ಮಕ್ಕಾದಲ್ಲಿ ಜೀವಿಸಿದರೆ, ಇತರ ಗ್ರಂಥಕರ್ತರಾದ ಮಾಲಿಕ್ ಬಿನ್ ಅನಸ್ (ರ.ಅ) ಸುಫ್ಯಾನ್ ಬಿನ್ ವಹ್ಬ್(ರ.ಅ) ಈಜಿಪ್ಟ್, ಸುಫ್ಯಾನ್ ಬಿನ್ ಸೌರಿ(ರ.ಅ) ಮುಹಮ್ಮದ್ ಬಿನ್ ಫುಳೈಲ್ ಕೂಫಾ, ಮಱ್ಮರ್ , ಅಬ್ದುರ್ರಝ್ಝಾಕ್ ಯಮನ್, ಹಮ್ಮಾದ್ ಬಿನ್ ಸಲ್ಮ, ರೌಅಬ್ ಬಿನ್ ಉಬಾದ ಬಸ್ರಾ, ಅಬ್ದುಲ್ಲಾ ಬಿನ್ ಮುಬಾರಕ್ ಖುರಾಸಾನ್ನಲ್ಲಿ ಜೀವಿಸಿದರು. ಇವರ ಗ್ರಂಥಗಳ ಪೈಕಿ ಇಮಾಂ ಮಾಲಿಕ್(ರ.ಅ)ರವರ ಮುವತ್ತಾ ಅತ್ಯಂತ ಪ್ರಸಿದ್ಧವಾಗಿದೆ.  ಪ್ರಸ್ತುತ ಗ್ರಂಥವು ಮುಸ್ಲಿಮರ ದೈನಂದಿನ ಜೀವನಕ್ಕೆ ಸಂಬಂಧಪಟ್ಟ ಹದೀಸ್ ಗಳ ಸಮಾಹಾರ ಎಂಬ ನೆಲೆಯಲ್ಲಿ ರಚಿಸಲ್ಪಟ್ಟಿದೆ. ಎಲ್ಲಾ ಹದೀಸ್ ಗಳ ಸಮಾಹಾರವೆಂಬ ನೆಲೆಯಲ್ಲಿ ಏಕೈಕ ಗ್ರಂಥದ ರಚನೆ ಅಸಾಧ್ಯವಾಗಿತ್ತು. ಹದೀಸ್ ಗಳ ವೈಶಾಲ್ಯತೆಯೇ ಇದಕ್ಕೆ ಕಾರಣ*.
                         
*ಮುಂದುವರಿಯುವುದು*.....

📚📚📚📚📚📚📚📚📚📚

No comments:

Post a Comment