Wednesday, February 14, 2018

🏵 *ಪ್ರವಾದಿ ಸಂದೇಶ*🏵
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀

*بِسْمِ اللّٰهِ الرَّحْمَانِ الرَّحِيمْ*

*ಸಂಚಿಕೆ -5⃣* *(ಕೊನೇಯ ಸಂಚಿಕೆ )*

*ಜಗತ್ತನ್ನೊಮ್ಮೆ ನೀವು ಗಮನಿಸಿ ನೋಡಿ. ಇಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳು ಪರಸ್ಪರ ಡಿಕ್ಕಿಯಾದದ್ದಿದೆಯೇ.? ಭೂಮಿಯನ್ನು ಸುತ್ತುವರಿದಿರುವ ಸಾಗರದ ನೀರು ಭೂಮಿಯನ್ನು ಮುಳುಗಿಸಿದೆಯೇ.? ಗೋಳಗಳು ಪರಸ್ಪರ ಮುಖಾಮುಖಿಯಾಗಿ ಭೂಮಿ ಅಗ್ನಿಗೆರೆಯಾಗುತ್ತಿದೆಯೇ.? ಆಗಾಗ ಸೂರ್ಯನೇ ಇಲ್ಲವಾಗಿ ಭೂಮಿಯಿಡೀ ಕತ್ತಲಾವರಿಸುವುದುಂಟೇ.? ಇಲ್ಲಿ ಜನಿಸುವ ಮನುಷ್ಯ ಮಕ್ಕಳು ಪರಸ್ಪರ ಗುರುತು ಹಿಡಿಯಲಾಗದ ರೀತಿಯಲ್ಲಿ ಸಮಾನರಾಗುವುದುಂಟೇ.? ಉತ್ತರ ಇಲ್ಲ ಎಂದಾದರೆ ಇಷ್ಟು ಕರಾರುವಕ್ಕಾಗಿ ಇದನ್ನು ನಿಯಂತ್ರಿಸುವುದಾದರೂ ಯಾರು.? ಇವೆಲ್ಲವನ್ನೂ ಬೇಕಾದ ಹಾಗೆ ಪರಿಪಾಲಿಸುವ ಒಬ್ಬ ಸೃಷ್ಟಿಕರ್ತನಿದ್ದಾನೆ ಎನ್ನುವ ಸತ್ಯಕ್ಕೆ ತಲುಪಲು ಇನ್ನು ಹೆಚ್ಚು ಚಿಂತಿಸಬೇಕಿದೆಯೇ.? ನಿಜವಾದ ಬುದ್ಧಿ ಉಪಯೋಗಿಸಿದರೆ ಈ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಆದ್ದರಿಂದಲೇ ಮುಹಮ್ಮದ್ ಅಸದ್, ಮೋರಿಸ್ ಬುಕೇ, ಅಲಕ್ಸಾಂಡರ್ ರಝತ್ ವೆಬ್, ಮಾವಿಸ್ ಬಿಜೋಳಿ, ಲಾಡ್ ಹೆಡ್ಲಿ ಇವರ ಪಟ್ಟಿ ಇನ್ನೂ ಮುಂದುವರಿಯುತ್ತದೆ. ಇವರೆಲ್ಲರೂ ಏಕದೇವ ಸಿದ್ಧಾಂತದತ್ತ ಹಾದು ಬಂದವರು. ನಿರಂತರವಾದ ಸತ್ಯಾನ್ವೇಷಣೆಗೆ ಮತ್ತು ಆಳವೇರಿದ ಅಧ್ಯಯನವೂ ಅವರನ್ನು ಬೆಳಕಿನೆಡೆಗೆ ಕೊಂಡೊಯ್ಯಿತು. ಮನುಷ್ಯ, ಪ್ರತಿಮೆ, ವಿಗ್ರಹಗಳ ಆರಾಧನೆಯಿಂದ ನಿಜವಾದ ಸೃಷ್ಟಿಕರ್ತನತ್ತ ಮುಖ ಮಾಡಲು ಅವರಿಗೆ ಸಾಧ್ಯವಾಯಿತು.*

   *ಸೃಷ್ಟಿಯಾದ ಮನುಷ್ಯನನ್ನು ದೇವನೆಂದು ನಂಬುವವರಿದ್ದಾರೆ. ಯಾರನ್ನೂ ಇಲ್ಲಿ ಆಕ್ಷೇಪಿಸುತ್ತಿಲ್ಲ. ಬದಲು ಇದು ಸತ್ಯಾನ್ವೇಷಣೆಗೆ ಒಂದು ಪ್ರೇರಣೆಯಷ್ಟೆ. ಬುದ್ಧಿಯನ್ನು ಸರಿಯಾದ ದಿಕ್ಕಿನಲ್ಲಿ ತಿರುಗಿಸಲೊಂದು ಆಹ್ವಾನವಷ್ಟೆ. ಪ್ರಕೃತಿಯ ಸೀಮೆಗಳಿಗೂ, ನಿಯಂತ್ರಣಗಳಿಗೂ ವಿಧೇಯವಾಗಿ ಒಂದು ದಿನ ಸತ್ತು ಹೋಗುವ ಒಂದು ಜೀವಿ ತಾನೇ ಮನುಷ್ಯ. ಸ್ವತಃ ತನ್ನ ತಲೆಯ ಕೂದಲು ನೆರೆತರೆ, ತನ್ನ ಕಪೋಲದ ಚರ್ಮ ಸುಕ್ಕು ಗಟ್ಟಿದರೆ, ದೃಷ್ಟಿ ಶಕ್ತಿ, ಶ್ರವಣ ಶಕ್ತಿ ದುರ್ಬಲವಾದರೆ, ಹಲ್ಲುಗಳು ಉದುರಿ ಹೋದರೆ ಅದನ್ನು ಸರಿ ಮಾಡಲಾಗದ ದಿನಕ್ಕೆ ಹಲವು ಬಾರಿ ಬಾತ್ ರೂಂ ಟಾಯ್ಲೇಟ್ ಗಳಿಗೆ ಹೋಗುವ, ಅನ್ನ ಪಾನೀಯ ತೊರೆದರೆ ಶಕ್ತಿ ಕುಂದುವ, ಮೂರ್ನಾಲ್ಕು ದಿನ ಸ್ನಾನ ಮಾಡದಿದ್ದರೆ ವಾಸನೆ ಬೀರುವ ಒಬ್ಬ ಮನುಷ್ಯನನ್ನು ಹೇಗೆ ತಾನೇ ದೇವನೆಂದು ನಂಬಲು ಸಾಧ್ಯವಾಗುವುದು. ತನ್ನ ಎಲ್ಲಾ ಗೌರವಾಧರಗಳನ್ನು ಅವನಿಗೆ ಸಮರ್ಪಿಸಿ ಅವನ ಮುಂದೆ ತಲೆ ಬಾಗುವುದಾದರೂ ಹೇಗೆ.? ಎಂದೋ ತೀರಿ ಹೋದವರ ಪ್ರತಿಮೆಗಳನ್ನಿಟ್ಟು ಆರಾಧಿಸುವುದರಲ್ಲಿ ಅರ್ಥವೇನಿದೆ.? ಯಾವುದೋ ಮರಕ್ಕೆ, ಗಿಡಕ್ಕೆ, ಕಲ್ಲಿಗೆ ನಮಿಸುವುದರಲ್ಲಿ ಏನು ಪ್ರಯೋಜನ.? ಆದ್ದರಿಂದ ಸತ್ಯಾನ್ವೇಷಣೆ ಮುಂದುವರಿಯಲಿ. ಆಕಾಶ ಭೂಮಿಗಳನ್ನು ಸೃಷ್ಟಿಸಿದ ಅನಾಧಿಯಾದ ಅನಶ್ವರನಾದ ಇಡೀ ಪ್ರಪಂಚವನ್ನೇ ನಿಯಂತ್ರಿಸುವ ಒಂದು ಮಹಾ ಶಕ್ತಿಯಲ್ಲಿ ವಿಶ್ವಾಸ ದೃಡವಾಗಲಿ. ಎಲ್ಲಾ ಧರ್ಮದ ಅಧಿಕೃತ ವೇದಗ್ರಂಥಗಳು ಇದೇ ಪಾಠವನ್ನು ಸಾರಿದೆ. ಮುಸ್ಲಿಮರು ಅವನನ್ನೇ 'ಅಲ್ಲಾಹು' ಎಂದು ಕರೆಯುತ್ತಾರೆ. ಇದು ಯಾರನ್ನೂ ನಿಂದಿಸಿದ್ದಲ್ಲ.*

*🍃ಚಿಂತಿಸುವವರಿಗೆ ಪಾಠವಿದೆ.🍃*
   
   *(ಮುಗಿಯಿತು)*

No comments:

Post a Comment