Wednesday, February 14, 2018

*PFI ಸಮುದಾಯದ ವಿಷಯ  ಮಾತನಾಡುವ ಮುನ್ನ.......*

ಸುರತ್ಕಲ್ ಪರಿಸರ ದವರೇ , ಚಿಂತಿಸಿ.

👉 ಪಿ ಎಫ್ ಐ ಕಾರ್ಯಕರ್ತ ಖುರೈಶಿಯ ಮೇಲೆ ಅಮಾನವೀಯ ಹಲ್ಲೆಯಾದಾಗ ಬೀದಿಗಿಳಿದು ಪ್ರತಿಭಟನೆ ಮಾಡಿದ PFI ಯವರು *ಕಾಟಿಪಳ್ಳ ಸಫ್ವಾನ್ ಹತ್ಯೆ ಯಾದಾಗ ಬೀದಿಗಿಳಿದು ಪ್ರತಿಭಟಿಸಲಿಲ್ಲ.ಸಫ್ವಾನ್ ನನ್ನು ಸಮುದಾಯದ ಹೊರಗಿಟ್ಟ  PFI ಯವರಿಗೆ ಸಮುದಾಯ ದ ಬಗ್ಗೆ ಮಾತನಾಡಲು ಅರ್ಹತೆ ಇದೆಯೇ ?*

👉 ಪಿ ಎಫ್ ಐ ಯ ಅಶ್ರಫ್ ಕೊಲೆ ಯಾದಾಗ  ಪ್ರತಿಭಟನೆ ಮಾಡಿದ PFI ಉಳ್ಳಾಲ ಮುಕ್ಕಚ್ಚೇರಿ *ಝುಬೈರ್ ಕೊಲೆ ಯಾದಾಗ ಪ್ರತಿಭಟನೆ ಮಾಡಲಿಲ್ಲ ಯಾಕೆ ?* ಝುಭೈರ್ ರನ್ನು ಸಮುದಾಯದವರು ಅಲ್ಲವೆಂದು ಬಗೆದ PFI ಗೆ ಸಮುದಾಯ ದ ಬಗ್ಗೆ ಮಾತನಾಡಲು ಯಾವ ಯೋಗ್ಯತೆ ಇದೆ ?

👉  PFI  ಯ ಜಿಲ್ಲಾ ನಾಯಕನನ್ನು ಬಂಧಿಸಿದಾಗ ಜಿಲ್ಲಾಧಿಕಾರಿ ಕಛೇರಿ ಮುಂದೆ ಹೋರಾಟ ಮಾಡಿದವರು ಕಾಂಗ್ರೆಸ್ ನ ಜಲೀಲ್ ಕರೋಪಾಡಿ ಕೊಲೆಯ ಬಗ್ಗೆ ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ಕೂರಲು ಸಮಯ ಸಿಗಲಿಲ್ಲ ಎಂದಾದರೆ  PFI ಗೆ ಸಮುದಾಯ ಬಗ್ಗೆ ಮಾತನಾಡುವ ಹಕ್ಕು ಇದೆಯೇ ?

👉 PFI ಯ ಕಾರ್ಯಕರ್ತ ರಿಗೆ ಅನ್ಯಾಯ ವಾದಾಗ ಮಾತ್ರ ಪ್ರತಿಭಟನೆ ಮಾಡುವ PFI ಯವರಿಗೆ ಸಮುದಾಯದ ಹೆಸರು ಉಚ್ಚರಿಸುವ ಯೋಗ್ಯತೆ ಉಂಟೇ ?

👉 ಮದೀನಾ ಹಸಿರು ಕುಬ್ಬ ದ್ವಂಸ ಮಾಡುತ್ತೇವೆ ಎಂದಾಗ, ಬಾಬಾ ಬುಡನ್ ಗಿರಿಯ ದರ್ಗಾ ಮುಸ್ಲಿಮರ ಕೇಂದ್ರ ವಲ್ಲ ಎಂದಾಗ, ಕೊಡಗಿನ ಎಮ್ಮೆಮಾಡು ದರ್ಗಾ ಅನಿಸ್ಲಾಮಿಕ ಕೇಂದ್ರ ಅದು ಅನ್ಯ ಧರ್ಮಿಯರಿಗೆ ಬಿಟ್ಟು ಕೊಡಬೇಕೆಂದು ಸಲಪಿಗಳು ಅರಚಿದಾಗ ಖಂಡನೆ ಯನ್ನು ನೀಡಲು ಸಾಧ್ಯವಾಗದ  PFI ಗೆ ಸಮುದಾಯ ದ ಹೆಸರು ಹೇಳುವ ಅರ್ಹತೆ ಇದೆಯೇ ?

👉 ಆರೆಸ್ಸೆಸ್ಸಿನ ದನಂಜಯ ಕುಮಾರ್ ಗೆ ಓಟು ಹಾಕಲು ಹೇಳಿದ PFI ಯ ನಾಯಕರಿಗೆ ಸಮುದಾಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ?

👉 ಪ್ರತೀ ಎಲೆಕ್ಷಣ್ ನಲ್ಲಿಯೂ ಮುಸ್ಲಿಂ ಅಭ್ಯರ್ಥಿಗಳ ವಿರುದ್ಧ ಚುನಾವಣೆ ನಿಂತು ಕೋಮು ವಾದಿಗಳ ಗೆಲುವಿಗೆ ಕಾರಣ ರಾಗುವ PFI ಯವರಿಗೆ ಸಮುದಾಯ ಎನ್ನಲು ಅಲ್ಪವಾದರು ನಾಚಿಕೆ ಇಲ್ಲವೇ ?

👉 ಪ್ರವಾದಿ ವರ್ಯರ ತೀರ್ಮಾನ ತಪ್ಪೆಂದು ಬರೆದ PFI ಯವರಿಗೆ ಆ ಪ್ರವಾದಿ ಉಮ್ಮತಿಗಳ ಬಗ್ಗೆ ಮಾತನಾಡಲು ಯಾವ ಯೋಗ್ಯತೆ ಇದೆ ?

👉 ಸಮುದಾಯ ರಕ್ಷಣೆಗೆ ಒಂದು ಶಾಲೆ, ಮದ್ರಸ ನಿರ್ಮಿಸದ PFI ಯವರಿಗೆ ಸಮುದಾಯ ದ ಬಗ್ಗೆ ಮಾತನಾಡಲು ಯಾವ ಅರ್ಹತೆ ಇದೆ ?

👉 ಐಕ್ಯತೆ ಯಿಂದ ಇದ್ದ ಅಂಗರಗುಡ್ಡೆ ಊರಲ್ಲಿ ಭಿನ್ನತೆ ಮಾಡಿ ಮಸೀದಿಯ ಒಳಗೆ ರಕ್ತ ಕಾಳಗ ನಡೆಸಿದ PFI ಗೆ ಸಮುದಾಯ ದ ಬಗ್ಗೆ  ಮಾತನಾಡಲು ನೈತಿಕತೆ ಉಳಿದಿದೆಯೇ ?

👉 ಶರೀಅತ್ ನಿಯಮ ದಿಕ್ಕರಿಸಿ, ಇಲ್ಲಿಯ ಉಲಮಾ ಗಳ ಆಜ್ಞೆ ವಿರೋಧಿ ಸಿ ಸಂಘಟನೆ ಗೆ ಝಕಾತ್ ಹಾಗೂ ಕುರ್ಬಾನಿ ಚರ್ಮ ಪಡೆದು ಕೊಳ್ಳವ PFI ಗೆ  ಹೆಸರೆತ್ತುವ ಯೋಗ್ಯತೆ ಇದೆಯೇ ?

ಇದಕ್ಕೆ ಉತ್ತರ ಬೇಕೆಂದಿಲ್ಲ.ಇದು PFI ಯ ಹಗಲು ವಂಚನೆಯ ಭಾಗವಷ್ಟೆ. ಬುದ್ಧಿ ವಂತ ಸಮಾಜಕ್ಕಾಗಿ ಅನಾವರಣ ಮಾಡಲಾಯಿತಷ್ಟೇ.

No comments:

Post a Comment