*PFI ಯ ತ್ರಿವರ್ಣ ಪತಾಕೆ ಬಾನಿಗೇರಿಸಿ ಸೆಲ್ಯೂಟ್ ಹೊಡೆಯುವ ಮುಂಚೆ ಒಂದು ಮಾತು!*
👉ಪ್ರೀತಿಯ ಮೊಹಲ್ಲ ಖತೀಬ್, ನಾಯಕರು ಮತ್ತು ಬಾಂಧವರೇ....
14 ಶತಮಾನಗಳಿಂದ ಪರಂಪರಾಗತವಾಗಿ ಇಸ್ಲಾಮಿನ ಅಧಿಕ್ರತ ಪುರಾವೆಗಳಾದ
ಕುರ್-ಆನ್, ಸುನ್ನತ್, ಇಜ್-ಮಾಅ್, ಕಿಯಾಸ್ ಮೂಲಕ ಮುಸ್ಲಿಮ್ ಸಮುದಾಯ ನಂಬಿಕೊಂಡು ಬಂದದ್ದು
*ನಮ್ಮ ಪ್ರೀತಿಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸಾಮಾನ್ಯ ಮನುಷ್ಯರಲ್ಲ. ಅವರು ನಮ್ಮಂತೆ ಅಲ್ಲ. ಅವರನ್ನು ತಪ್ಪು ಸಂಭವಿಸುವಂತಹ ಕಾರ್ಯಗಳಿಂದ ಅಲ್ಲಾಹು ರಕ್ಷಿಸಿದ್ದಾನೆ. ಆದುದರಿಂದ ಅವರು ಯಾವುದೇ ಒಂದುಸಣ್ಣ ತಪ್ಪು ಕೂಡಾಮಾಡಿಲ್ಲ* ಎಂದಲ್ಲವೇ.
ಆದರೆ ಈ ನಂಬಿಕೆಗೆ ಕೊಡಲಿಯೇಟು ಕೊಟ್ಟು ನುಚ್ಚು ನೂರು ಮಾಡಲು ಪ್ರಯತ್ನಿಸಿದ್ದು ಇಲ್ಲಿನ ಸಲಪಿ, ಜಮಾತೇ ಇಸ್ಲಾಮೀ, ತಬ್ಲೀಗಾದಿ ನೂತನ ವಾದಿಗಳಾದರೆ ಖಂಡಿತವಾಗಿಯೂ ಅವರ ಅದೇ ಹಾದಿಯನ್ನು ಅಕ್ಷರಸ ಈ ಪಿಎಫ್ಐ ಯೂ ಅನುಸರಿಸಿದೆ.
*ಸಮುದಾಯ ರಕ್ಷಣೆಯ ಮುಖವಾಡ ಹೊತ್ತ ಇವರ ಹಲವು ಪುಸ್ತಕ, ಮಾದ್ಯಮಗಳಲ್ಲಿ ಇವರ ನೈಜ ಮುಖದ ಪರಿಪೂರ್ಣ ಚಿತ್ರಣ ವಿದೆ.*
(ಸಫಲ ಜೀವನ, ಜ್ಞಾನ ದೀಪ, ಇಸ್ಲಾಮ್- ಪ್ರಶ್ನೋತ್ತರಗಳು, ಪ್ರಸ್ತುತ ಮುಂತಾದವುಗಳಲ್ಲಿ)
ಸಲಪಿ, ಜಮಾತೇ ಇಸ್ಲಾಮೀ, ತಬ್ಲೀಗ್ ನವರ ಕಾರ್ಯಕ್ರಮವು ತಮ್ಮ ಮೊಹಲ್ಲದಲ್ಲಿ ನಡೆಯುವುದಾದರೆ ತಾವು ಹೇಗೆ ಅದರಿಂದ ದೂರ ಸರಿಯುತ್ತೀರೋ ಅದೇರೀತಿ ಈ ಸಂಘಟನೆಯಿಂದಲೂ ದೂರ ಸರಿಯಬೇಕಾದ ಅಗತ್ಯ ನೈಜ ವಿಶ್ವಾಸಿಗಳಿಗಿದೆ.
ಇವರು ಹೊರತಂದ ಪುಸ್ತಕಗಳಲ್ಲಿ
*👉ಅಲ್ಲಾಹನ ಹೊರತು ಬೇರೆ ಯಾರಲ್ಲೂ ಬೇಡಬಾರದು* ಎಂಬ ಇಸ್ತಿಗಾಸ, ತವಸ್ಸುಲ್ ವಿರೋಧ ವಿಷಯವಿದೆ.
*👉4 ಮದ್ಹಬ್ ಗಳ ಮದ್ಯೆ ಭಿನ್ನತೆ ಇದೆ* ಎಂಬ ಚಿತ್ರೀಕರಣವಿದೆ.
*👉ಮಹಿಳೆಯರ ಮುಖ ಔರತ್-ಗೌಪ್ಯಭಾಗವಲ್ಲ. ಮನೆಯಿಂದ ಹೊರಗಿಳಿಯುವಾಗ ಅವಳು ಅದನ್ನು ಮುಚ್ಚಬೇಕೆಂದಿಲ್ಲ.* ಎಂಬ ಫತ್ವಾ ಇದೆ.
*👉ಸುಗಂಧ ದ್ರವ್ಯ ಹಚ್ಚದೆ ನಮಾಜಿಗಾಗಿ ಮಹಿಳೆ ಮಸೀದಿಗೆ ಹೋಗಬಹುದು* ಎಂಬ ರೀತಿಯ ಮಾತು ಇದೆ.
*👉ಸ್ವಹಾಬಿವರ್ಯರೊಬ್ಬರ ಮೇಲೆ ಅವರ ಘನತೆಗೆ ತಕ್ಕದ ಗಂಭೀರ ಆರೋಪವಿದೆ*
*ಹೇಳಿ, ಹೀಗಿರುವಾಗ ನಿಮ್ಮ ಆತ್ಮ ಸಾಕ್ಷಿಗೆ ವಿರುಧ್ಧವಾಗಿ, ನಿಮ್ಮ ಪರಂಪರಾಗತ ಪರಮ, ಅಚಲ ನಂಬಿಕೆಗೆ ಎದುರಾಗಿ ಆ ಪತಾಕೆಗೆ ನೀವು ಹೇಗೆ ಸೆಲ್ಯೂಟ್ ಹೊಡೆಯುವಿರಿ!?*
👉ಕೊನೆಗೆ ಒಂದು ಮಾತು,
ಪಿಎಫ್ಐ ಯ ಅಂತರಾಳ ಸಮರ್ಪಕವಾಗಿ ತಿಳಿಯದ ನಿಮ್ಮ ಜಮಾಅತಿನವರೇ ಆದ ಕೆಲವು ಮುಗ್ಧ ಯುವಕರು ಬಂದು ನಿಮ್ಮನ್ನು ಆಹ್ವಾನಿಸಿದ ಮಾತ್ರಕ್ಕೆ ನೀವು ಹೋಗಿ ಆ ಪತಾಕೆ ಬಾನಿಗೇರಿಸಿ ಸೆಲ್ಯೂಟ್ ಹೊಡೆಯುವುದಾದರೆ,
*ಆ ಪತಾಕೆ ನಿಮ್ಮನ್ನೇ ಅಣಕಿಸಿ, ನಿಮ್ಮ ಕೈಯ್ಯಿಂದಲೇ ನಿಮ್ಮ ನಂಬಿಕೆ, ಆದರ್ಶ ವನ್ನು ದಫನ ಮಾಡಿದ ಸಂತೋಷದ ಕಿರುನಗೆ ನಿಮ್ಮೆಡೆಗೆ ನೋಡಿ ಬೀರುತ್ತದೆ*
ಎಂಬುದನ್ನು ಮರೆಯಬೇಡಿ.
*ಇತೀ- ಸಮುದಾಯ ಪ್ರೇಮಿ*
No comments:
Post a Comment