*ಅಹ್ಲು ಸ್ಸುನ್ನ - 1*
➖➖➖➖➖➖➖➖
*ಸಲಫಿಸಂನ ಅಪಾಯದ ಬಗ್ಗೆ ಅಂದೇ ಅವರು ಎಚ್ಚರಿಸಿದ್ದರು*
ಹದೀಸ್ ನಂ - 1
ಇಮಾಂ ಬುಖಾರಿ(ರ)ರವರಿಂದ ವರದಿ : ಅಬೂ ಸಯೀದಿನ್ ಖುದ್‌ರಿ(ರ) ಹೇಳುತ್ತಾರೆ. ಪ್ರವಾದಿ ﷺ ರವರು ಒಂದು ಯುದ್ಧ ಮುಗಿಸಿ ಮರಳಿ ಬಂದ ನಂತರ ಯುದ್ಧಾರ್ಜಿತ ಸ್ವತ್ತುಗಳನ್ನು (ಗನೀಮತ್) ಸ್ವಹಾಬಿಗಳಿಗೆ ಹಂಚುತ್ತಿದ್ದರು. ಆ ಸಂದರ್ಭದಲ್ಲಿ ಬನೂ ತಮೀಮ್ ವಂಶಕ್ಕೆ ಸೇರಿದ ದ್ಸುಲ್ ಖುವೈಸಿರತುಲ್ ತಮೀಮ್ ಎಂಬ ವ್ಯಕ್ತಿ ಪ್ರವಾದಿ ﷺ ರವರ ಮುಖ ನೋಡುತ್ತಾ ಓ ಮುಹಮ್ಮದ್ ನೀನು ನ್ಯಾಯ ಪಾಲಿಸು
ಆಗ ಪ್ರವಾದಿ ﷺ ರವರು ಹೇಳಿದರು.
ನಾನು ನ್ಯಾಯ ಪಾಲಿಸುವುದಿದ್ದರೆ ಮತ್ಯಾರು ನ್ಯಾಯ ಪಾಲಿಸುವುದು ?
ಪ್ರವಾದಿ ﷺ ರವರನ್ನು ನಿಂದಿಸಿದ ದ್ಸುಲ್ ಖುವೈಸಿರತ್‌ನ ವಿರುದ್ಧ ಸ್ವಹಾಬಿಗಳು ತಿರುಗಿ ನಿಂತಾಗ.
*ಪ್ರವಾದಿ ﷺ ರವರು ಹೇಳಿದರು. ಆತನಿಗೆ ಏನು ಮಾಡಬೇಡಿ. ಆತನನ್ನು ಬಿಟ್ಟುಬಿಡಿ, ಅವನ ಅನುಯಾಯಿಗಲು ಮುಂದೆ ಬರಲಿದ್ದಾರೆ. ಅವರ ಮುಂದೆ ನಿಮ್ಮ ನಮಾಝ್ , ಉಪವಾಸ ಏನೂ ಅಲ್ಲ. ಅವರು ಖುರ್‌ಆನ್ ಓದುವರು. ಆದರೆ ಬಿಲ್ಲಿನಿಂದ ಬಾಣ ಹಾರಿದಂತೆ ಅವರು ಇಸ್ಲಾಮಿನಿಂದ ಹೊರ ಹೋಗುವರು. (ಬುಖಾರಿ - 3610 )*
ಹದೀಸ್ : 2.
ಇಬ್ನು ಉಮರ್ (ರ) ಹೇಳುತ್ತಾರೆ.
ಪ್ರವಾದಿ ﷺ ಹೇಳಿದರು, ಅಲ್ಲಾಹನೇ ನಮ್ಮ ಯಮನಿಗೂ, ಶಾಮಿಗೂ ಬರಕತ್ ನೀಡು.
ಆಗ ಕೆಲವು ಸ್ವಹಾಬಿಗಳ ಹೇಳಿದರು. ಪ್ರವಾದಿಗಳೇ ನಮ್ಮ ನಜ್‌ದ್‌ಗಾಗಿ ಪ್ರಾರ್ಥಿಸಿ. ಪ್ರವಾದಿ ﷺ ಪುನಃ ಪ್ರಾರ್ಥಿಸಿದ್ದರು . ಅಲ್ಲಾಹನೇ ನಮ್ಮ ಯಮನಿಗೂ, ಶಾಮಿಗೂ ಬರಕತ್ ನೀಡು.
ಸ್ವಹಾಬಿಗಳು ಪುನಃ ನಜ್‌ದ್‌ಗಾಗಿ ಪ್ರಾರ್ಥಿಸುವಂತೆ ಕೇಳಿದರು.
ಪ್ರವಾದಿ ﷺ ರವರು ಮೂರನೇ ಬಾರಿಯೂ ಯಮನಿಗೂ, ಶಾಮಿಗೂ ಪ್ರಾರ್ಥಿಸಿದರೇ ಹೊರತು ನಜದ್‌ಗಾಗಿ ಪ್ರಾರ್ಥಿಸಲಿಲ್ಲ.
ಕೆಲವು ಸ್ವಹಾಬಿಗಳು ನಜದ್‌ಗಾಗಿ ಪ್ರಾರ್ಥಿಸಲು ಮನವಿ ಮಾಡಿದಾಗ ಕೊನೆಗೆ
ಪ್ರವಾದಿ ﷺ ಹೇಳಿದರು.
*ಸ್ವಹಾಬಿಗಳೇ ಅಲ್ಲಿ ಮಹಾ ಕಂಪನಗಳು ಉಂಟಾಗುತ್ತದೆ. ಅಲ್ಲಿಯೇ ಶೈತಾನಿನ ಕೊಂಬು ಉದಿಸಲಿದೆ. ಬುಖಾರಿ 7084*.
*ಇಬ್ನು ಉಮರ್(ರ) ಹೇಳುತ್ತಾರೆ. ಪ್ರವಾದಿ ﷺ ಪಶ್ಚಿಮ ಭಾಗಕ್ಕೆ ತಿರುಗಿ ತಿಳಿಯಿರಿ ಫಿತ್ನ್ ಇಲ್ಲಿಂದಲೇ ಆರಂಭಗೊಳ್ಳಲಿದೆ ಎಂದರು. (ಮದೀನಾದ ಪಶ್ಚಿಮ ದಿಕ್ಕಿನಲ್ಲಿ ನಜ್‌ದ್ ಇದೆ.) .ಬುಖಾರಿ 6680*
ಈ ಎರಡು ಹದೀಸ್‌ಗಳಿಂದ ಸ್ಪಷ್ಟ. ಪ್ರವಾದಿ ﷺ ರವರ ಆದೇಶಗಳನ್ನು ಧಿಕ್ಕರಿಸುವ, ಇಸ್ಲಾಮಿನ ಪರಂಪರೆಯನ್ನು ತಿರಸ್ಕರಿಸುವ ಪಂಥವು ದ್ಸುಲ್ ಖುವೈಸಿರತ್ತಿನ ಪರಂಪರೆಯಲ್ಲಿ ನಜ್‌ದ್‌ನಿಂದ ಹೊರ ಬರಲಿದೆ.
*ಪರಂಪರಾಗತ ಇಸ್ಲಾಮನ್ನು ಧಿಕ್ಕರಿಸಿ, ಮಹಾತ್ಮರನ್ನು, ಉಲಮಾಗಳನ್ನು ತಿರಸ್ಕರಿಸಿ ಪಾಶ್ಚಾತ್ಯ, ಆಧುನಿಕ ಶೈಲಿಯ ಇಸ್ಲಾಮಿನ ಪ್ರಚಾರಕನಾಗಿ ಮುಹಮ್ಮದ್ ಇಬ್ನು ಅಬ್ದುಲ್ ವಹ್ಹಾಬ್ ಎಂಬವ ದ್ಸುಲ್ ಖುವೈಸಿರತ್ತಿನ 16 ನೇ ಪೌತ್ರನಾಗಿ ನಜ್‌ದ್‌ನಲ್ಲಿ ಆಗಮಿಸುವುದರೊಂದಿಗೆ ಪ್ರವಾದಿ ﷺ ರವರ ಭವಿಷ್ಯವಾಣಿ ಸಾಕ್ಷಾತ್ಕಾರ ವಾಯಿತು*.
(ವಹಾಬಿ ಮುಖಂಡ ಅಲ್ ಬುತಾಮಿ ಬರೆದ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್ ಎಂಬ ಗ್ರಂಥದ 15 ನೇ ಪುಟದಲ್ಲಿ ಈ ಪರಂಪರೆ ಕಾಣಬಹುದು)
ಎಲ್ಲಾ ನೂತನವಾದಿಗಳಿಗೆ ಖವರಿಜ್‌ಗಳೇ ನಾಯಕರು. ಖವಾರಿಜ್‌ಗಳಿಗೆ ದ್ಸುಲ್ ಖುವೈಸಿರತ್ ನಾಯಕನೆಂದು ಸಲಫಿಗಳೇ ಅಂಗೀಕರಿಸುವ ಇಬ್ನು ತೀಮಿಯ್ಯರೇ ಹೇಳಿದ್ದಾರೆ.
ಐಕ್ಯರಾಗಿ, ಶಾಂತಿಯಿಂದ ಜೀವನ ನಡೆಸುತ್ತಿದ್ದ ಮುಸ್ಲಿಮರನ್ನು ಛಿನ್ನ ಭಿನ್ನ ಮಾಡಿ ಅಶಾಂತಿ ಸೃಷ್ಟಿಸಲು ವಹಾಬಿಸಂನ ರಥ ಯಾತ್ರೆ ನಜ್‌ದ್‌ನಲ್ಲಿ ಪ್ರಾರಂಭವಾಯಿತು.
*ಅಬೂ ರಾಝೀ*
No comments:
Post a Comment